ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

PM Modi Srilanka Visit: ಪ್ರಧಾನಿ ಮೋದಿ ಶ್ರೀಲಂಕಾ ಭೇಟಿ- ಕುತಂತ್ರಿ ಚೀನಾಗೆ ತಲೆನೋವು ಶುರು

PM Modi Srilanka Visit: ನೆರೆಹೊರೆಯ ರಾಷ್ಟ್ರಗಳ ಮೇಲೆ ಚೀನಾದ ಹೆಚ್ಚುತ್ತಿರುವ ಪ್ರಭಾವದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಶನಿವಾರ ಮಾತನಾಡಿದ ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸ್ಸಾನಾಯಕೆ ಅವರು, ಭಾರತದ ಭದ್ರತಾ ಹಿತಾಸಕ್ತಿಗಳಿಗೆ ವಿರುದ್ಧವಾಗಿ ತನ್ನ ಪ್ರದೇಶವನ್ನು ಯಾರಿಗೂ ಬಳಸಲು ದೇಶವು ಅನುಮತಿಸುವುದಿಲ್ಲ ಎಂದು ಭರವಸೆ ನೀಡಿದರು.

ಚೀನಾದ ಪ್ರಭಾವಕ್ಕೆ ಕಳವಳ ವ್ಯಕ್ತಪಡಿಸಿರುವ ಭಾರತಕ್ಕೆ ಶ್ರೀಲಂಕಾ ಭರವಸೆ

ಕೊಲಂಬೊ: ಭದ್ರತಾ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಯಾರಿಗೂ ತನ್ನ ಪ್ರದೇಶವನ್ನು ಬಳಸಲು ಬಿಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ(PM Modi Srilanka Visit) ಅವರಿಗೆ ಶ್ರೀಲಂಕಾ ಸರ್ಕಾರ ಭರವಸೆ ನೀಡಿದೆ. ಶ್ರೀಲಂಕಾದಲ್ಲಿ ಚೀನಾದ ಪ್ರಭಾವ ಹೆಚ್ಚುತ್ತಿರುವ ಬಗ್ಗೆ ಭಾರತದ ಆತಂಕವನ್ನು ದೂರ ಮಾಡುವ ಸಲುವಾಗಿ ಶ್ರೀಲಂಕಾ ಈ ಹೇಳಿಕೆ ನೀಡಿದೆ. ನೆರೆಹೊರೆಯ ರಾಷ್ಟ್ರಗಳ ಮೇಲೆ ಚೀನಾದ ಹೆಚ್ಚುತ್ತಿರುವ ಪ್ರಭಾವದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಶನಿವಾರ ಮಾತನಾಡಿದ ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸ್ಸಾನಾಯಕೆ(Anura Kumara Dissanayake) ಅವರು, ಭಾರತದ ಭದ್ರತಾ ಹಿತಾಸಕ್ತಿಗಳಿಗೆ ವಿರುದ್ಧವಾಗಿ ತನ್ನ ಪ್ರದೇಶವನ್ನು ಯಾರಿಗೂ ಬಳಸಲು ದೇಶವು ಅನುಮತಿಸುವುದಿಲ್ಲ ಎಂದು ಭರವಸೆ ನೀಡಿದರು.

ಶ್ರೀಲಂಕಾದಲ್ಲಿ ತನ್ನ ಆರ್ಥಿಕತೆಯನ್ನು ಅಭಿವೃದ್ಧಿಪಡಿಸಲು ಚೀನಾದ ಹೂಡಿಕೆಗಳು ಮತ್ತು ಮೂಲಸೌಕರ್ಯ ಯೋಜನೆಗಳು ನೆರೆಹೊರೆಯ ರಾಷ್ಟ್ರಗಳಿಗೆ ಭದ್ರತಾ ಸಮಸ್ಯೆ ಬಗ್ಗೆ ಆತಂಕ ಹೆಚ್ಚಿಸಿವೆ. ಶ್ರೀಲಂಕಾ ಅಧ್ಯಕ್ಷ ದಿಸ್ಸಾನಾಯಕೆ ಅವರಿಂದ 'ಮಿತ್ರ ವಿಭೂಷಣ' ಪ್ರಶಸ್ತಿಯನ್ನು ಪಡೆದ ಪ್ರಧಾನಿ ಮೋದಿ, 2019 ರ ಭಯೋತ್ಪಾದಕ ದಾಳಿ, ಕೋವಿಡ್ ಸಾಂಕ್ರಾಮಿಕ ಮತ್ತು ಇತ್ತೀಚಿನ ಆರ್ಥಿಕ ಬಿಕ್ಕಟ್ಟನ್ನು ಉಲ್ಲೇಖಿಸಿ ಭಾರತವು ಪ್ರತಿಯೊಂದು ಕಠಿಣ ಪರಿಸ್ಥಿತಿಯಲ್ಲೂ ಶ್ರೀಲಂಕಾದೊಂದಿಗೆ ನಿಂತಿರುತ್ತದೆ ಎಂದು ಹೇಳಿದರು.



ಪ್ರಮುಖ ರಕ್ಷಣಾ ಒಪ್ಪಂದಕ್ಕೆ ಸಹಿ

ಪ್ರಧಾನಿ ನರೇಂದ್ರ ಮೋದಿ ಮತ್ತು ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸ್ಸಾನಾಯಕೆ ಅವರ ನಡುವಿನ ಮಾತುಕತೆ ಬಳಿಕ ಭಾರತ ಮತ್ತು ಶ್ರೀಲಂಕಾ ಶನಿವಾರ ಮೊದಲ ಬಾರಿಗೆ ಒಂದು ಮಹತ್ವದ ರಕ್ಷಣಾ ಸಹಕಾರ ಒಪ್ಪಂದಕ್ಕೆ ಸಹಿ ಹಾಕಿದವು. ರಕ್ಷಣಾ ಒಪ್ಪಂದದ ಜೊತೆಗೆ ಎರಡೂ ದೇಶಗಳು ತ್ರಿಕೋನಮಿಯನ್ನು ಇಂಧನ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಒಪ್ಪಿಕೊಂಡವು. ಶ್ರೀಲಂಕಾದ ಪೂರ್ವ ಪ್ರದೇಶಕ್ಕೆ ಅನುದಾನ ಸಹಾಯ ನೀಡಲು ಮತ್ತೊಂದು ಒಪ್ಪಂದಕ್ಕೆ ಸಹಿ ಹಾಕಿದವು.

ಇದನ್ನೂ ಓದಿ: PM Modi: ಶ್ರೀಲಂಕಾಕ್ಕೆ ಬಂದಿಳಿದ ಪ್ರಧಾನಿ ಮೋದಿ; ಭಾರೀ ಮಳೆಯ ನಡುವೆಯೇ ಭರ್ಜರಿ ಸ್ವಾಗತ

ಸಂಪೂರ್ ಸೌರ ವಿದ್ಯುತ್ ಯೋಜನೆಗೆ ಚಾಲನೆ

ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ದಿಸ್ಸನಾಯಕೆ ಅವರು ಸಂಪೂರ್ ಸೌರ ವಿದ್ಯುತ್ ಯೋಜನೆಯನ್ನು ವರ್ಚುವಲ್ ಆಗಿ ಉದ್ಘಾಟಿಸಿದರು. ಇದು ಶ್ರೀಲಂಕಾದ ಬೆಳೆಯುತ್ತಿರುವ ಇಂಧನ ಪಾಲುದಾರಿಕೆಯಲ್ಲಿ ಮಹತ್ವದ ಹೆಜ್ಜೆಯಾಗಿದೆ. ಉಭಯ ನಾಯಕರ ನಡುವಿನ ಮಾತುಕತೆಯ ಸಮಯದಲ್ಲಿ ಹಲವಾರು ಇತರ ಒಪ್ಪಂದಗಳನ್ನು ಅಂತಿಮಗೊಳಿಸಲಾಯಿತು.