ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ವಿಮಾನ ದುರಂತದಲ್ಲಿ ಮಡಿದ ಫ್ಲೈಟ್ ಲೆಫ್ಟಿನೆಂಟ್‌ ಪಾರ್ಥೀವ ಶರೀರದ ಬಳಿ ಭಾವಿ ಪತ್ನಿಯ ಆಕ್ರಂದನ- ವಿಡಿಯೊ ಫುಲ್‌ ವೈರಲ್‌

ಏಪ್ರಿಲ್ 2 ರಂದು ಗುಜರಾತ್‍ನ ಜಾಮ್‍ನಗರದಲ್ಲಿ ನಡೆದ ಜಾಗ್ವಾರ್ ಫೈಟರ್ ಜೆಟ್ ಅಪಘಾತದಲ್ಲಿ ಫ್ಲೈಟ್ ಲೆಫ್ಟಿನೆಂಟ್ ಸಿದ್ಧಾರ್ಥ್ ಯಾದವ್ ದುರಂತವಾಗಿ ಸಾವಿಗೀಡಾಗಿದ್ದು, ಅವರ ಅಂತಿಮ ವಿದಾಯದ ವೇಳೆ ಅವರ ಭಾವಿ ಪತ್ನಿಯಾಗಬೇಕಾಗಿದ್ದ ಸೋನಿಯಾ ಅವರ ಶವಪೆಟ್ಟಿಗೆಯ ಬಳಿ ಕುಳಿತು ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ. ಈ ಹೃದಯ ವಿದ್ರಾವಕ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ಫ್ಲೈಟ್ ಲೆಫ್ಟಿನೆಂಟ್‌ ಪಾರ್ಥೀವ ಶರೀರದ ಬಳಿ ಭಾವಿ ಪತ್ನಿಯ ಆಕ್ರಂದನ

Profile pavithra Apr 5, 2025 11:40 AM

ಗಾಂಧಿನಗರ: ಏಪ್ರಿಲ್ 2 ರಂದು ಗುಜರಾತ್‍ನ ಜಾಮ್‍ನಗರದಲ್ಲಿ ನಡೆದ ಜಾಗ್ವಾರ್ ಫೈಟರ್ ಜೆಟ್ ಅಪಘಾತದಲ್ಲಿ ಭಾರತೀಯ ವಾಯುಪಡೆಯ (ಐಎಎಫ್) ಫ್ಲೈಟ್ ಲೆಫ್ಟಿನೆಂಟ್ ಸಿದ್ಧಾರ್ಥ್ ಯಾದವ್ ದುರಂತವಾಗಿ ಸಾವಿಗೀಡಾಗಿದ್ದು, ಅವರ ಅಂತ್ಯಕ್ರಿಯೆ ಶುಕ್ರವಾರ(ಏಪ್ರಿಲ್ 4) ಹರಿಯಾಣದ ಮಜ್ರಾ ಭಾಲ್ಖಿಯಲ್ಲಿರುವ ಅವರ ಸ್ವಗ್ರಾಮದಲ್ಲಿ ಸಂಪೂರ್ಣ ಮಿಲಿಟರಿ ಗೌರವಗಳೊಂದಿಗೆ ನೆರವೇರಿತು. ತ್ರಿವರ್ಣ ಧ್ವಜದಿಂದ ಹೊದಿಸಲ್ಪಟ್ಟ ಅವರ ಶವಪೆಟ್ಟಿಗೆಯ ಎದುರು ಅವರ ಕುಟುಂಬ ಮತ್ತು ಪ್ರೀತಿಪಾತ್ರರು ಸುತ್ತುವರೆದು ಯುವ ಅಧಿಕಾರಿಗೆ ಅಂತಿಮ ವಿದಾಯ ಹೇಳಿದ್ದಾರೆ. ಆ ವೇಳೆ ಸಿದ್ಧಾರ್ಥ್ ಅವರ ಭಾವಿ ಪತ್ನಿ ಅವರ ಶವಪೆಟ್ಟಿಗೆಯ ಬಳಿ ಕುಳಿತು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಈ ಹೃದಯ ವಿದ್ರಾವಕ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ಸಿದ್ಧಾರ್ಥ್ ಅವರ ಅಂತಿಮ ವಿದಾಯದ ಸಮಯ ಅವರ ಭಾವಿ ಪತ್ನಿಯಾಗಬೇಕಾಗಿದ್ದ ಸೋನಿಯಾ ಯಾದವ್ ಕೂಡ ಘಟನಾ ಸ್ಥಳದಲ್ಲಿ ಹಾಜರಿದ್ದರು. ಆಕೆ ಅವರ ಶವಪೆಟ್ಟಿಗೆಯ ಬಳಿ ನಿಂತು, ತಮ್ಮ ಪ್ರೀತಿಯ ಸಂಗಾತಿಯನ್ನು ನೆನೆದು ರೋಧಿಸಿದರು. ತಮ್ಮ ಜೊತೆ ಸುಖ ಸಂಸಾರ ನಡೆಸಬೇಕಾಗಿದ್ದ ಅವರು ತನ್ನನ್ನು ಒಂಟಿಯಾಗಿ ಬಿಟ್ಟು ಹೋಗಿದ್ದಕ್ಕೆ ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ. ಇವರಿಬ್ಬರ ನಿಶ್ಚಿತಾರ್ಥ ಮಾರ್ಚ್ 31ರಂದು ನೆರವೇರಿತ್ತು. ನವೆಂಬರ್2 ರಂದು ಮದುವೆ ನಿಗದಿಯಾಗಿತ್ತು ಎಂದು ವರದಿಯಾಗಿದೆ. ಕನಸುಗಳಿಂದ ತೇಲಾಡುತ್ತಿದ್ದ ಅವರ ಭವಿಷ್ಯವು ಈಗ ನೋವಿನಿಂದ ತುಂಬಿಕೊಂಡಿದೆ.

ಸಿದ್ಧಾರ್ಥ್ ಶವಪೆಟ್ಟಿಗೆಯ ಎದುರು ಭಾವಿ ಪತ್ನಿ ರೋಧಿಸುತ್ತಿರುವ ವಿಡಿಯೊ ಇಲ್ಲಿದೆ ನೋಡಿ...



ಗ್ರಾಮಸ್ಥರು, ಸ್ನೇಹಿತರು ಮತ್ತು ಗಣ್ಯರು ಸೇರಿದಂತೆ ಅನೇಕರು ಯುವ ಯೋಧನಿಗೆ ಕಣ್ಣೀರಿನ ಅಂತಿಮ ವಿದಾಯ ಸಲ್ಲಿಸಿದ್ದಾರೆ. ಸಿದ್ದಾರ್ಥ್ ಅವರ ತಂದೆ, ಸ್ವತಃ ಭಾರತೀಯ ವಾಯುಪಡೆಯ ನಿವೃತ್ತ ಸಿಬ್ಬಂದಿ ಸುಶೀಲ್ ಯಾದವ್ ವೀರ ಯೋಧನ ಚಿತೆಗೆ ಅಗ್ನಿ ಸ್ಪರ್ಶ ಮಾಡಿದ್ದಾರೆ. ಬವಾಲ್ ಶಾಸಕ ಕೃಷ್ಣ ಕುಮಾರ್ ಮತ್ತು ಮಾಜಿ ಸಚಿವ ಬನ್ವಾರಿ ಲಾಲ್ ಕೂಡ ಗೌರವ ಸಲ್ಲಿಸಿದ್ದಾರೆ

ವರದಿಗಳ ಪ್ರಕಾರ, ಸಿದ್ಧಾರ್ಥ್ ಅವರು ಏಪ್ರಿಲ್ 2ರಂದು ಗುಜರಾತ್‍ನ ಜಾಮ್‍ನಗರ್ ಬಳಿಯ ತರಬೇತಿಯ ಸಮಯದಲ್ಲಿ ಜಾಗ್ವಾರ್ ಫೈಟರ್ ಜೆಟ್ ಅಪಘಾತದಲ್ಲಿ ದುರಂತವಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಐಎಎಫ್‍ನ ಸ್ಟ್ರೈಕ್ ಫ್ಲೀಟ್‍ನ ಭಾಗವಾಗಿರುವ ಜಾಗ್ವಾರ್ ಫೈಟರ್ ಜೆಟ್ ಜಾಮ್‍ನಗರ್ ವಾಯುಪಡೆ ನಿಲ್ದಾಣದಿಂದ ಕಾರ್ಯಾಚರಣೆಗಾಗಿ ಹೊರಟಿತ್ತು. ಆದರೆ, ಜಾಮ್‌ನಗರದಿಂದ 12 ಕಿಲೋಮೀಟರ್ ದೂರದಲ್ಲಿರುವ ಸುವರ್ಡಾ ಗ್ರಾಮದ ಬಳಿ ರಾತ್ರಿ 9:30 ರ ಸುಮಾರಿಗೆ ವಿಮಾನ ಅಪಘಾತಕ್ಕೀಡಾಗಿದೆ. ಈ ಘಟನೆಯಲ್ಲಿ ಪೈಲಟ್ ಒಬ್ಬರು ಸುರಕ್ಷಿತವಾಗಿ ಪಾರಾಗಿದ್ದಾರೆ.ಆದರೆ ಸಿದ್ಧಾರ್ಥ್ ಮಾತ್ರ ದುರಂತವಾಗಿ ಸಾವನ್ನಪ್ಪಿದ್ದಾರೆ. ದೊಡ್ಡ ಸ್ಫೋಟದ ನಂತರ ಸ್ಥಳೀಯರು ಸಿದ್ಧಾರ್ಥ್ ಅವರ ಶವವನ್ನು ಸ್ಥಳದಲ್ಲಿ ಪತ್ತೆಮಾಡಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ:‌Viral Video: ವೆಡ್ಡಿಂಗ್‌ ಆನಿವರ್ಸರಿ ಪಾರ್ಟಿಯಲ್ಲಿ ಕುಣಿದು ಕುಪ್ಪಳಿಸುತ್ತಿದ್ದ ವ್ಯಕ್ತಿ ಹಠಾಟ್‌ ಕುಸಿದು ಬಿದ್ದು ದಾರುಣ ಸಾವು-ವಿಡಿಯೊ ವೈರಲ್!

ಈ ಅಪಘಾತದ ಬಗ್ಗೆ ಐಎಎಫ್ ವಿಚಾರಣೆಯನ್ನು ಶುರುಮಾಡಿದೆ. ಪ್ರಾಥಮಿಕ ವರದಿಗಳು ತಾಂತ್ರಿಕ ಅಸಮರ್ಪಕ ಕಾರ್ಯನಿರ್ವಹಣೆಯಿಂದ ಈ ಅಪ‍ಘಾತ ಸಂಭವಿಸಿದೆ ಎಂಬುದಾಗಿ ಸೂಚಿಸಿದೆ. ಆದರೆ ಅಧಿಕೃತ ದೃಢೀಕರಣಕ್ಕಾಗಿ ಇನ್ನೂ ಕಾಯಲಾಗುತ್ತಿದೆ.