DC vs CSK: ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಡೆಲ್ಲಿ ಕ್ಯಾಪಿಟಲ್ಸ್!
DC vs CSK: ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಇದೀಗ ನಡೆಯುತ್ತಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 17ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ನಾಯಕ ಅಕ್ಷರ್ ಪಟೇಲ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಆ ಮೂಲಕ ದೊಡ್ಡ ಮೊತ್ತದ ಗುರಿಯನ್ನು ಸಿಎಸ್‌ಕೆ ನೀಡಲು ಡಿಸಿ ಎದುರು ನೋಡುತ್ತಿದೆ.

ಚೆನ್ನೈ vs ಡೆಲ್ಲಿ

ಚೆನ್ನೈ: ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಇದೀಗ ನಡೆಯುತ್ತಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ 17ನೇ ಪಂದ್ಯದಲ್ಲಿ (DC vs CSK) ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ನಾಯಕ ಅಕ್ಷರ್ ಪಟೇಲ್ (Axar Patel) ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಆ ಮೂಲಕ ಎದುರಾಳಿ ಸಿಎಸ್‌ಕೆಗೆ ದೊಡ್ಡ ಮೊತ್ತದ ಗುರಿಯನ್ನು ನೀಡಲು ಎದುರು ನೋಡುತ್ತಿದೆ.
ಡೆಲ್ಲಿ ಕ್ಯಾಪಿಲ್ಸ್ ತಂಡದ ಪ್ಲೇಯಿಂಗ್ XIನಲ್ಲಿ ಒಂದು ಬದಲಾವಣೆ ತರಲಾಗಿದೆ ಎಂದು ನಾಯಕ ಅಕ್ಷರ್ ಪಟೇಲ್ ಟಾಸ್ ವೇಳೆ ಮಾಹಿತಿ ನೀಡಿದ್ದಾರೆ. ಅತ್ಯುತ್ತಮ ಫಾರ್ಮ್‌ನಲ್ಲಿರುವ ಫಾಫ್ ಡು ಪ್ಲೆಸಿಸ್ ಅವರು ಸಂಪೂರ್ಣ ಫಿಟ್ ಇಲ್ಲದ ಕಾರಣ, ಅವರ ಬದಲು ಸಮೀರ್ ರಿಝ್ವಿ ಆಡುತ್ತಿದ್ದಾರೆ. ಈ ಪಂದ್ಯದಲ್ಲಿ ಮೂವರು ಫಾಸ್ಟ್ ಬೌಲರ್‌ಗಳು ಹಾಗೂ ಮೂವರು ಸ್ಪಿನ್ನರ್‌ಗಳು ಆಡುತ್ತಿದ್ದಾರೆಂದು ಡಿಸಿ ನಾಯಕ ತಿಳಿಸಿದ್ದಾರೆ.
IPL 2025: ಡಗೌಟ್‌ನಲ್ಲೇ ಕೋಚ್ ಜತೆ ವಾಗ್ವಾದ ನಡೆಸಿದ ಸೂರ್ಯಕುಮಾರ್
ಇನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ಲೇಯಿಂಗ್ XIನಲ್ಲಿ ಎರಡು ಬದಲಾವಣೆ ತರಲಾಗಿದೆ ಎಂದು ಸಿಎಸ್‌ಕೆ ನಾಯಕ ಋತುರಾಜ್ ಗಾಯಕ್ವಾಡ್ ಮಾಹಿತಿ ನೀಡಿದ್ದಾರೆ. ಜೇಮಿ ಓವರ್ಟನ್ ಗಾಯದ ಕಾರಣ ಅವರ ಬದಲು ಡೆವೋನ್ ಕಾನ್ವೆ ಹಾಗೂ ರಾಹುಲ್ ತ್ರಿಪಾಠಿ ಬದಲು ಮುಖೇಶ್ ಚೌಧರಿ ಆಡುತ್ತಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡ ಆಡಿದ ಎರಡೂ ಪಂದ್ಯಗಳನ್ನು ಗೆಲ್ಲುವ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ ಎರಡನೇ ಸ್ಥಾನವನ್ನು ಅಲಂಕರಿಸಿದೆ. ಮೊದಲನೇ ಪಂದ್ಯದಲ್ಲಿ ಲಖನೌ ಸೂಪರ್ ಜಯಂಟ್ಸ್ ವಿರುದ್ಧ ಒಂದು ವಿಕೆಟ್‌ನಿಂದ ಗೆದ್ದಿದ್ದ ಡಿಸಿ, ನಂತರ ಎರಡನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 7 ವಿಕೆಟ್‌ಗಳಿಂದ ಗೆಲುವು ಪಡೆದಿತ್ತು. ಇನ್ನು ಋತುರಾಜ್ ಗಾಯಕ್ವಾಡ್ ನಾಯಕತ್ವದ ಸಿಎಸ್‌ಕೆ ತಂಡ, ಆಡಿದ ಮೂರು ಪಂದ್ಯಗಳಿಂದ ಒಂದೇ ಒಂದು ಪಂದ್ಯವನ್ನು ಗೆದ್ದು ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ.
Match 17. DC XI: J. Fraser-McGurk, K. L. Rahul (wk), A. Porel, A. Patel (c), T. Stubbs, S. Rizvi, A. Sharma, V. Nigam, M. Starc, K. Yadav, M. Sharma. https://t.co/5jtlxucq9j #CSKvDC #TATAIPL #IPL2025
— IndianPremierLeague (@IPL) April 5, 2025
ಇತ್ತಂಡಗಳ ಪ್ಲೇಯಿಂಗ್ XI
ಡೆಲ್ಲಿ ಕ್ಯಾಪಿಟಲ್ಸ್: ಜೇಕ್ ಮೆಗರ್ಕ್, ಕೆಎಲ್ ರಾಹುಲ್ (ವಿ.ಕೀ), ಅಭಿಷೇಕ್ ಪೊರೆಲ್, ಟ್ರಿಸ್ಟನ್ ಸ್ಟಬ್ಸ್, ಸಮೀರ್ ರಿಝ್ವಿ, ಅಕ್ಷರ್ ಪಟೇಲ್ (ನಾಯಕ), ಆಶುತೋಷ್ ಶರ್ಮಾ, ವಿಪ್ರಾಜ್ ನಿಗಮ್, ಮಿಚೆಲ್ ಸ್ಟಾರ್ಕ್, ಕುಲ್ದೀಪ್ ಯಾದವ್, ಮೋಹಿತ್ ಶರ್ಮಾ
Match 17. DC XI: J. Fraser-McGurk, K. L. Rahul (wk), A. Porel, A. Patel (c), T. Stubbs, S. Rizvi, A. Sharma, V. Nigam, M. Starc, K. Yadav, M. Sharma. https://t.co/5jtlxucq9j #CSKvDC #TATAIPL #IPL2025
— IndianPremierLeague (@IPL) April 5, 2025
ಚೆನ್ನೈ ಸೂಪರ್ ಕಿಂಗ್ಸ್: ರಚಿನ್ ರವೀಂದ್ರ, ಡೆವೋನ್ ಕಾನ್ವೇ, ಋತುರಾಜ್ ಗಾಯಕ್ವಾಡ್ (ನಾಯಕ), ವಿಜಯ್ ಶಂಕರ್, ರವೀಂದ್ರ ಜಡೇಜಾ, ಎಂಎಸ್ ಧೋನಿ (ವಿ.ಕೀ), ಆರ್ ಅಶ್ವಿನ್, ನೂರ್ ಅಹ್ಮದ್, ಮುಖೇಶ್ ಚೌಧರಿ, ಖಲೀಲ್ ಅಹ್ಮದ್, ಮತೀಶ ಪತಿರಣ