Viral Video: ದೇಹದ ದುರ್ಗಂಧ ವಿಚಾರವಾಗಿ ಜಗಳ! ವಿಮಾನದಲ್ಲಿ ಸಿಬ್ಬಂದಿಯನ್ನು ಕಚ್ಚಿದ ಮಹಿಳೆ
ದೇಹದ ದುರ್ನಾತ ವಿಚಾರವಾಗಿ ಪ್ರಯಾಣಿಕರಿಬ್ಬರು ಜಗಳ ಮಾಡಿಕೊಂಡಿದ್ದು, ಸಮಾಧಾನ ಮಾಡಲು ಬಂದ ಫ್ಲೈಟ್ ಸಿಬ್ಬಂದಿಯನ್ನು ಕಚ್ಚಿ ಗಾಯಗೊಳಿಸಲಾಗಿದೆ. ಈ ಘಟನೆ ಚಿನಾದ ಶೆನ್ಜೆನ್ ಏರ್ಲೈನ್ಸ್ನಲ್ಲಿ ನಡೆದಿದೆ. ಈ ಕಾರಣದಿಂದ ವಿಮಾನ 2 ಗಂಟೆ ವಿಳಂಬವಾಗಿದೆ.

Unruly Passenger bites flight attendant's arm in mid air

ಬೀಜಿಂಗ್: ಸಾಮಾನ್ಯವಾಗಿ ಪ್ರಯಾಣಿಕರು ಬಸ್, ಟ್ರೈನ್, ಮೆಟ್ರೋ ಸೀಟಿಗಾಗಿ ಜಗಳವಾಡಿದ್ದ ದೃಶ್ಯವನ್ನು ನಾವು ನೋಡಿದ್ದೇವೆ. ಆದರೆ ಇದೀಗ ದೇಹದ ದುರ್ಗಂಧ ವಿಚಾರವಾಗಿ ಪ್ರಯಾಣಿಕರಿಬ್ಬರು ಜಗಳ ಮಾಡಿಕೊಂಡಿದ್ದು ಸಮಾಧಾನ ಮಾಡಲು ಬಂದ ಫ್ಲೈಟ್ ಸಿಬ್ಬಂದಿಯನ್ನು ಕಚ್ಚಿ ಗಾಯಗೊಳಿಸಿರುವ ಘಟನೆ ಶೆನ್ಜೆನ್ ಏರ್ಲೈನ್ಸ್ನಲ್ಲಿ ನಡೆದಿದೆ. ಈ ಕಾರಣ ದಿಂದ ವಿಮಾನ ಹೊರಡಲು 2 ಗಂಟೆಗಳ ಕಾಲ ವಿಳಂಬವಾಗಿದ್ದು ಜಗಳ ನಡೆಯುತ್ತಿದ್ದ ದೃಶ್ಯವನ್ನು ಮೊಬೈಲ್ನಲ್ಲಿ ರೆಕಾರ್ಡ್ ಮಾಡಲಾಗಿದ್ದು ಈ ವಿಡಿಯೊ ಇದೀಗ ಸೋಶಿಯಲ್ ಮೀಡಿಯಾದಲ್ಲಿ (Viral Video) ಬಹಳಷ್ಟು ವೈರಲ್ ಆಗುತ್ತಿದೆ.
ಏ. 1ರಂದು ದಕ್ಷಿಣ ಚೀನಾದ ಶೆನ್ಜೆನ್‌ನಿಂದ ಶಾಂಘೈಗೆ ಹೊರಡಲು ನಿಗದಿಯಾಗಿದ್ದ ವಿಮಾನವು ಟೇಕ್ ಆಫ್ ಆಗುವ ಸಂದರ್ಭ ಈ ಘಟನೆ ನಡೆದಿದೆ. ಅಕ್ಕಪಕ್ಕದಲ್ಲಿ ಕುಳಿತಿದ್ದ ಇಬ್ಬರು ಮಹಿಳಾ ಪ್ರಯಾಣಿಕರ ನಡುವೆ ಈ ಘರ್ಷಣೆ ನಡೆದಿದೆ. ಒಬ್ಬಳು ಇನ್ನೊಬ್ಬಳ ದೇಹದ ಬೆವರು ದುರ್ನಾತ ವಿಚಾರವಾಗಿ ದೂರು ನೀಡಿದೆ ಇನ್ನೊಬ್ಬಳು ಸಹ ಪ್ರಯಾಣಿಕರ ಅತಿಯಾದ ಫರ್ಪ್ಯೂಮ್ ಬಳಕೆ ಬಗ್ಗೆ ಜಗಳ ಮಾಡಿದ್ದಾಳೆ. ಈ ಜಗಳವು ಎಷ್ಟರ ಮಟ್ಟಿಗೆ ಉಲ್ಬಣಗೊಂಡಿತೆಂದರೆ ಅದು ಪರಸ್ಪರ ಹೊಡೆದಾಡುವ ಹಂತಕ್ಕೂ ತಲುಪಿತು. ಈ ಸಂದರ್ಭದಲ್ಲಿ ಇಬ್ಬರು ಮಹಿಳಾ ವಿಮಾನ ಸಿಬ್ಬಂದಿ ಮತ್ತು ಇಬ್ಬರು ಪುರುಷ ಸಹೋದ್ಯೋಗಿಗಳು ಮಧ್ಯಪ್ರವೇಶಿಸಿ ಜಗಳವನ್ನು ತಡೆಯಲು ಪ್ರಯತ್ನಿಸಿದ್ದಾರೆ.
Passenger ‘bites’ flight attendant during mid-air brawl pic.twitter.com/g7hAjhk5Zh
— The Sun (@TheSun) April 3, 2025
ಈ ಸಂದರ್ಭ ಸಮಾಧಾನ ಮಾಡಲು ಬಂದ ವಿಮಾನ ಸಿಬ್ಬಂದಿಯನ್ನು ಮಹಿಳೆಯು ಬಲವಾಗಿ ಕಚ್ಚಿ ದೈಹಿಕ ಸಂಘರ್ಷಕ್ಕೂ ಮುಂದಾಗಿದ್ದಾಳೆ. ವೈರಲ್ ಆಗಿರುವ ವಿಡಿಯೊದಲ್ಲಿ ವಿಮಾನ ಸಿಬ್ಬಂದಿ ಜತೆ ಮಹಿಳೆ ಜಗಳವಾಡುತ್ತಿರುವ ದೃಶ್ಯವನ್ನು ಕಾಣಬಹುದು. ಸಿಬ್ಬಂದಿಗೆ ಸಣ್ಣ ಗಾಯವಾಗಿದ್ದು ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಹಾಗೆಯೇ ಈ ಘರ್ಷಣೆಯಲ್ಲಿ ಭಾಗಿಯಾದ ಇಬ್ಬರು ಮಹಿಳಾ ಪ್ರಯಾಣಿಕರನ್ನು ಪೊಲೀಸರು ಬಂಧಿಸಿದ್ದಾರೆ. ಈ ಕಾರಣದಿಂದಾಗಿಯೇ ವಿಮಾನ ಹಾರಾಟ ಸುಮಾರು 2 ಗಂಟೆಗಳ ಕಾಲ ವಿಳಂಬವಾಗಿತ್ತು.
ಈ ವಿಡಿಯೊ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗಿದ್ದು ಅಧಿಕ ವೀಕ್ಷಣೆಗಳನ್ನು ಗಳಿಸಿದೆ. ಈ ಬಗ್ಗೆ ನೆಟ್ಟಿಗರು ನಾನಾ ಬಗೆಯ ಕಮೆಂಟ್ ಮಾಡಿದ್ದು ಬಳಕೆದಾರ ರೊಬ್ಬರು ಇಂತಹ ಮಹಿಳೆಯರಿಗೆ ಇನ್ಮುಂದೆ ಪ್ರಯಾಣಕ್ಕೆ ಅವಕಾಶ ನೀಡಲೇಬಾರದು ಎಂಬ ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಇವರಿಬ್ಬರ ಜಗಳದ ಕಾರಣವೇ ವಿಶೇಷವಾಗಿದೆ ಎಂದು ಹೇಳಿದ್ದಾರೆ.