ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಅನಾಥಾಶ್ರಮಕ್ಕೆ ಹೋಗಲೊಪ್ಪದ ಅತ್ತೆ- ಪಾಪಿ ಸೊಸೆ ಮಾಡಿದ್ದೇನು ಗೊತ್ತಾ? ಶಾಕಿಂಗ್‌ ವಿಡಿಯೊ ವೈರಲ್‌

ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ವೃದ್ಧಾಶ್ರಮಕ್ಕೆ ಹೋಗಲು ನಿರಾಕರಿಸಿದ ಅತ್ತೆಗೆ ಸೊಸೆ ಹಾಗೂ ಆಕೆಯ ಕುಟುಂಬದವರು ಸೇರಿಕೊಂಡು ಕ್ರೂರವಾಗಿ ಥಳಿಸಿ, ನೆಲದ ಮೇಲೆ ಬೀಳಿಸಿ, ಎಳೆದಾಡಿ ತಲೆಯನ್ನು ಗೋಡೆಗೆ ಹೊಡೆದಿದ್ದಾರೆ. ಜೊತೆಗೆ ಆಕೆಯ ಮಗನ ಮೇಲೂ ಹಲ್ಲೆ ಮಾಡಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ಅತ್ತೆಗೆ ಹಿಗ್ಗಾಮುಗ್ಗಾ ಥಳಿಸಿದ ಪಾಪಿ ಸೊಸೆ- ವಿಡಿಯೊ ಇಲ್ಲಿದೆ

Profile pavithra Apr 5, 2025 2:06 PM

ಭೋಪಾಲ್: ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಸೊಸೆ ಹಾಗೂ ಆಕೆಯ ಕುಟುಂಬದವರು ಅತ್ತೆಯ ಮೇಲೆ ಕ್ರೂರವಾಗಿ ಹಲ್ಲೆ ಮಾಡಿದ ಘಟನೆಯೊಂದು ವರದಿಯಾಗಿದೆ. ವೃದ್ಧಾಶ್ರಮಕ್ಕೆ ಹೋಗಲು ನಿರಾಕರಿಸಿದ್ದಕ್ಕಾಗಿ ಅತ್ತೆಯನ್ನು ಆಕೆಯ ಸೊಸೆಯ ಕುಟುಂಬದವರು ಕ್ರೂರವಾಗಿ ಥಳಿಸಿ, ನೆಲದ ಮೇಲೆ ಬೀಳಿಸಿ, ಎಳೆದಾಡಿ ತಲೆಯನ್ನು ಗೋಡೆಗೆ ಹೊಡೆದಿದ್ದಾರೆ. ಈ ದೃಶ್ಯ ಮನೆಯಲ್ಲಿ ಅಳವಡಿಸಲಾದ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಅದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ವೈರಲ್ ವಿಡಿಯೊದಲ್ಲಿ ಸೊಸೆಯ ಕುಟುಂಬದವರು ಅತ್ತೆಯ ಮೇಲೆ ಹಲ್ಲೆ ಮಾಡುವುದು ಸೆರೆಯಾಗಿದೆ. ಸೊಸೆ ತನ್ನ ಅತ್ತೆಯ ಜೊತೆಗೆ ತನ್ನ ಗಂಡನಿಗೂ ಕೂಡ ಥಳಿಸಿದ್ದಾಳೆ.

ಸಂತ್ರಸ್ತೆ 70 ವರ್ಷದ ಸರಳಾ ಬಾತ್ರಾ ಎಂದು ಗುರುತಿಸಲಾಗಿದ್ದು, ಅವಳು ತನ್ನ ಮಗ ವಿಶಾಲ್, ಸೊಸೆ ನೀಲಿಕಾ ಮತ್ತು ಮೊಮ್ಮಕ್ಕಳೊಂದಿಗೆ ವಾಸಿಸುತ್ತಿದ್ದಳಂತೆ. ಆದರೆ ಆಕೆಯ ಸೊಸೆ ಕುಟುಂಬದ ಆಸ್ತಿಯನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳಲು ಬಯಸಿದ್ದಳು ಮತ್ತು ಅತ್ತೆಯನ್ನು ವೃದ್ಧಾಶ್ರಮಕ್ಕೆ ಕಳುಹಿಸಲು ಪ್ರಯತ್ನಿಸಿದ್ದಾಳಂತೆ. ಇದಕ್ಕೆ ಒಪ್ಪದ ಅತ್ತೆಯ ಮೇಲೆ ಹಲ್ಲೆ ಮಾಡಿದ್ದಾಳಂತೆ.

ಅತ್ತೆಗೆ ಹಿಗ್ಗಾಮುಗ್ಗಾ ಥಳಿಸಿದ ಸೊಸೆಯ ವಿಡಿಯೊ ನೋಡಿ...



ವರದಿ ಪ್ರಕಾರ, ಘಟನೆ ನಡೆದ ದಿನ, ಸೊಸೆ ಕ್ಷುಲಕ ಕಾರಣಕ್ಕೆ ಅತ್ತೆಯನ್ನು ನಿಂದಿಸಿದ್ದಾಳಂತೆ. ತಾಯಿಗೆ ಬೈದಿದ್ದಕ್ಕೆ ಮಗ ವಿರೋಧ ವ್ಯಕ್ತ ಪಡಿಸಿದ್ದಕ್ಕೆ ಕೋಪಗೊಂಡ ಸೊಸೆ ತವರು ಮನೆಯವರನ್ನು ಸಹಾಯಕ್ಕಾಗಿ ಕರೆದಿದ್ದಾಳಂತೆ. ಸೊಸೆಯ ಮನೆಯವರು ಬಂದು ಅತ್ತೆ ಹಾಗೂ ಗಂಡನಿಗೆ ಸರಿಯಾಗಿ ಥಳಿಸಿದ್ದಾರೆ. ದೂರು ನೀಡಿದರೆ ಕೊಲ್ಲುವುದಾಗಿ ಆರೋಪಿಗಳು ಬೆದರಿಕೆ ಸಹ ಹಾಕಿದ್ದಾರಂತೆ.

ಈ ಸುದ್ದಿಯನ್ನೂ ಓದಿ:Viral Video: ದೇಹದ ದುರ್ಗಂಧ ವಿಚಾರವಾಗಿ ಜಗಳ! ವಿಮಾನದಲ್ಲಿ ಸಿಬ್ಬಂದಿಯನ್ನು ಕಚ್ಚಿದ ಮಹಿಳೆ

ಈ ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತರು ಆರೋಪಿಗಳ ವಿರುದ್ಧ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ. ಶುರುವಿನಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು ತೋರಿಸಿದರೂ ಪೊಲೀಸರು ಆರೋಪಿಗಳ ಪ್ರಭಾವದಿಂದ ಅವರ ಮೇಲೆ ಪ್ರಕರಣ ದಾಖಲಿಸಲಿಲ್ಲ ಎಂದು ವರದಿಯಾಗಿದೆ. ನಂತರ, ಅವರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿ ವಿಚಾರ ತಿಳಿಸಿದ್ದಾಗ ಅಂತಿಮವಾಗಿ ಪೊಲೀಸರು ಹಿರಿಯ ಅಧಿಕಾರಿಗಳ ಒತ್ತಡಕ್ಕೆ ಮಣಿದು ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ ಎನ್ನಲಾಗಿದೆ.

ಅತ್ತೆ-ಮಾವನಿಗೆ ಥಳಿಸಿದ ಡಾಕ್ಟರ್‌ ಸೊಸೆ!

ಬೆಂಗಳೂರಿನಲ್ಲಿ ಇತ್ತೀಚೆಗೆ, ವೃದ್ಧ ಹಾಗೂ ಕಾಯಿಲೆಪೀಡಿತ ಅತ್ತೆ ಮತ್ತು ಮಾವನ ಮೇಲೆ ಲೇಡಿ ಡಾಕ್ಟರ್ ಆಗಿರುವ ಸೊಸೆಯೊಬ್ಬಳು ಮಾರಣಾಂತಿಕವಾಗಿ ಹಲ್ಲೆ ಮಾಡಿದ ಘಟನೆ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.ಹಲ್ಲೆ ಮಾಡಿರುವ ಸೊಸೆ ಪ್ರಿಯದರ್ಶಿನಿ ವಿಕ್ಟೋರಿಯ ಆಸ್ಪತ್ರೆಯ ವೈದ್ಯೆ ಆಗಿದ್ದಾಳೆ ಎಂದು ತಿಳಿದುಬಂದಿದೆ. ಕಳೆದ 10 ವರ್ಷದಿಂದ ಈಕೆ ಅತ್ತೆ ಮತ್ತು ಮಾವನಿಗೆ ಕಿರುಕುಳ ನೀಡುತ್ತಿದ್ದಾಳೆ. ಕಿರುಕುಳ ತಾಳದೆ ಅತ್ತೆ ಹಾಗೂ ಮಾವ ಬೇರೆ ಬಾಡಿಗೆ ಮನೆಯಲ್ಲಿ ವಾಸವಿದ್ದರಂತೆ. ಈಕೆ ವೃದ್ಧ ಅತ್ತೆ ಮಾವನ ಬಾಡಿಗೆ ಮನೆಗೆ ಹೋಗಿ ಹಲ್ಲೆ ನಡೆಸಿದ್ದಾಳೆ. ವೃದ್ಧ ಅತ್ತೆ-ಮಾವನ ಮೇಲೆ ಹಲ್ಲೆ ಮಾಡಿದ ವೈದ್ಯೆ ಪ್ರಿಯದರ್ಶಿನಿ ಹಾಗೂ ಆಕೆ ಇಬ್ಬರು ಮಕ್ಕಳ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.