ಆಕಾಶ್ ಎಜುಕೇಶನಲ್ ಸರ್ವೀಸಸ್ ಲಿಮಿಟೆಡ್‍ನಿಂದ ಆಕಾಶ್ ಇನ್‍ವಿಕ್ಟಸ್ ಆರಂಭ
ಆಕಾಶ್ ಇನ್ವಿಕ್ಟಸ್ ಸುಮಾರು 500 ಅತ್ಯುತ್ತಮ ಜೆಇಇ ಅಧ್ಯಾಪಕರನ್ನು ಹೊಂದಿದ್ದು, ಒಂದು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಐಐಟಿಗಳಿಗೆ ಮಾರ್ಗದರ್ಶನ ಮಾಡಲಿದ್ದಾರೆ. ಈ ಕಾರ್ಯ ಕ್ರಮದ ಪಠ್ಯಕ್ರಮವು ಅತ್ಯಾಧುನಿಕವಾಗಿದೆ ಹಾಗೂ ಉನ್ನತ ಐಐಟಿ ಶ್ರೇಣಿಗಳನ್ನು ಪಡೆಯುವ ಗುರಿಯನ್ನು ಹೊಂದಿರುವ ಮಹತ್ವಾಕಾಂಕ್ಷೆಯ ವಿದ್ಯಾರ್ಥಿಗಳಿಗೆ ಸೂಕ್ಷ್ಮವಾಗಿ ವಿನ್ಯಾಸಗೊಳಿಸ ಲಾಗಿದೆ


ಎಂಜಿನಿಯರಿಂಗ್ ಕೋರ್ಸ್‍ಗೆ ಸೇರುವ ಆಕಾಂಕ್ಷಿ ವಿದ್ಯಾರ್ಥಿಗಳಿಗೆ ರೂಪಿಸಿರುವ ಕಾರ್ಯಕ್ರಮ •ಕೋರ್ಸ್‍ವೇರ್‍ನಲ್ಲಿ ಅತ್ಯುತ್ಕøಷ್ಠವಾದುದು •ಒಂದೇ ಸೂರಿನಡಿ ದೇಶದ ಅತ್ಯುತ್ತಮ ಜೆಇಇ ಬೋಧಕ ಸಿಬ್ಬಂದಿ- 40+ ನಗರಗಳಲ್ಲಿ 500ಕ್ಕೂ ಹೆಚ್ಚು ಉಪನ್ಯಾಸಕರು ಒಂದು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಐಐಟಿ ಗುರಿ ಸಾಧಿಸಲು ನೆರವಾಗುತ್ತಿದ್ದಾರೆ •ತಂತ್ರಜ್ಞಾನ ಮತ್ತು ಎಐ ಬೆಂಬಲಿತ ಪ್ಲಾಟ್‍ಫಾರ್ಮ್‍ನಿಂದ ಉನ್ನತೀಕರಿಸಿದ ವೈಯಕ್ತಿಕ ಕಲಿಕಾ ಅನುಭವ •ಆಕಾಶ್ ಬೆಂಬಲಿತ ಪ್ರಕ್ರಿಯೆಗಳು ಮತ್ತು ವ್ಯವಸ್ಥೆಗಳು 25 ಕ್ಕೂ ಹೆಚ್ಚು ಸ್ಥಳಗಳಲ್ಲಿ ಅತ್ಯುತ್ತಮ ಗುಣಮಟ್ಟವನ್ನು ಖಚಿತಪಡಿಸುತ್ತವೆ •ಹೆಚ್ಚಿನ ಮಾಹಿತಿಗಾಗಿ ಪೋಷಕರು ಮತ್ತು ವಿದ್ಯಾರ್ಥಿಗಳು 7303759494 ಅಥವಾ ಇಮೇಲ್ support.invictus@aesl.in ನಲ್ಲಿ ಸಂಪರ್ಕಿಸ ಬಹುದು.
ಬೆಂಗಳೂರು: ರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ವೃತ್ತಿಪರ ಕೋರ್ಸ್‍ಗಳ ಪೂರ್ವ ಸಿದ್ಧತಾ ಪರೀಕ್ಷೆಗಳಲ್ಲಿ ಮುಂಚೂಣಿಯಲ್ಲಿರುವ ಆಕಾಶ್ ಎಜುಕೇಶನಲ್ ಸರ್ವೀಸಸ್ ಲಿಮಿಟೆಡ್ (ಎಇಎಸ್‍ಎಲ್) ಆಕಾಶ್ ಇನ್‍ವಿಕ್ಟಸ್ ಅನ್ನು ಆರಂಭಿಸಿದೆ. ಉತ್ತಮ ಮತ್ತು ಅತ್ಯುತ್ತಮ ಎಂಜಿನಿಯರಿಂಗ್ ಆಕಾಂಕ್ಷಿಗಳಿಗಾಗಿ ಜೆಇಇ ಪೂರ್ವಸಿದ್ಧತೆ ಮಾಡಲು ಅನು ಕೂಲವಾಗುವ ಅಡ್ವಾನ್ಸ್ಡ್ ಪ್ರೋಗ್ರಾಂ ಇದಾಗಿದೆ. ಇಂತಹ ಕಾರ್ಯಕ್ರಮ ಇದೇ ಮೊದಲನೆ ಯದ್ದಾಗಿದ್ದು, ಪ್ರತಿಭಾನ್ವಿತ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಪೂರಕವಾಗಿದೆ. ಈ ಕಾರ್ಯಕ್ರಮವು ವೈಯಕ್ತಿಕಗೊಳಿಸಿದ, ಕೃತಕ ಬುದ್ಧಿಮತ್ತೆ(ಎಐ) ಚಾಲಿತ ಮತ್ತು ಫಲಿತಾಂಶ ಆಧಾರಿತ ಉಪಕ್ರಮವಾಗಿದ್ದು, ವಿದ್ಯಾರ್ಥಿಗಳು ನಿರ್ದಿಷ್ಟವಾಗಿ ಐಐಟಿಗಳು ಅಥವಾ ವಿದೇಶಗಳಲ್ಲಿರುವ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಿಗೆ ಪ್ರವೇಶ ಪಡೆಯಲು ಸೂಕ್ತ ಸಿದ್ಧತೆ ನಡೆಸಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ವಿನ್ಯಾಸಗೊಳಿಸಲಾಗಿದೆ.
ಇದನ್ನೂ ಓದಿ: Bangalore Palace Land Bill: ಬೆಂಗಳೂರು ಅರಮನೆ ವಿಧೇಯಕಕ್ಕೆ ರಾಜ್ಯಪಾಲರ ಅಂಕಿತ; ಗೆಜೆಟ್ ಅಧಿಸೂಚನೆ ಪ್ರಕಟ
ಆಕಾಶ್ ಇನ್ವಿಕ್ಟಸ್ ಸುಮಾರು 500 ಅತ್ಯುತ್ತಮ ಜೆಇಇ ಅಧ್ಯಾಪಕರನ್ನು ಹೊಂದಿದ್ದು, ಒಂದು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಐಐಟಿಗಳಿಗೆ ಮಾರ್ಗದರ್ಶನ ಮಾಡಲಿದ್ದಾರೆ. ಈ ಕಾರ್ಯಕ್ರಮದ ಪಠ್ಯಕ್ರಮವು ಅತ್ಯಾಧುನಿಕವಾಗಿದೆ ಹಾಗೂ ಉನ್ನತ ಐಐಟಿ ಶ್ರೇಣಿಗಳನ್ನು ಪಡೆಯುವ ಗುರಿಯನ್ನು ಹೊಂದಿರುವ ಮಹತ್ವಾಕಾಂಕ್ಷೆಯ ವಿದ್ಯಾರ್ಥಿಗಳಿಗೆ ಸೂಕ್ಷ್ಮವಾಗಿ ವಿನ್ಯಾಸಗೊಳಿಸಲಾಗಿದೆ. ಈ ಕಾರ್ಯಕ್ರಮವು ಸಂಯೋಜಿತ ಭೌತಿಕ ಕಲಿಕೆ ಮತ್ತು ವಿಶೇಷ ಅಧ್ಯಯನದ ಸಂಪನ್ಮೂಲಗಳನ್ನು ಒಳಗೊಂಡಿದ್ದು, ನಿಖರತೆ-ಕೇಂದ್ರಿತ, ಎಐ- ಸಕ್ರಿಯ ಗೊಳಿಸಿದ ಮತ್ತು ಜೆಇಇ ಅಡ್ವಾನ್ಸ್‍ಗೆ ಹೊಂದಿಕೊಳ್ಳುವ ಸಿದ್ಧತೆಯನ್ನು ಖಚಿತಪಡಿಸುತ್ತದೆ.
ಈ ಕಠಿಣವಾದ ಕಾರ್ಯಕ್ರಮವು ಜೆಇಇ (ಅಡ್ವಾನ್ಸ್ಡ್) ಪರೀಕ್ಷೆಯ ಮೊದಲು ಅಂತಿಮ ಹಂತಗಳಲ್ಲಿನ ಉದ್ದೇಶಿತ ಸಿದ್ಧತೆಗೆ ಮತ್ತು ಒತ್ತು ನೀಡುವ ಸಮಗ್ರವಾದ ಪರಿಷ್ಕರಣೆ ಹಾಗೂ ಪರೀಕ್ಷಾ ಮಾಡ್ಯೂಲ್ ಅನ್ನು ಒಳಗೊಂಡಿರುತ್ತದೆ. ವಿದ್ಯಾರ್ಥಿಗಳು ವಿಶೇಷ ಪಠ್ಯಕ್ರಮ, ಅನುಮಾನ ನಿವಾರಣಾ ಅವಧಿಗಳು ಮತ್ತು ಅವರ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಸೂಕ್ಷ್ಮವಾಗಿ ರಚಿಸಲಾಗಿರುವ ಪರೀಕ್ಷಾ ಸರಣಿ ಯಿಂದ ಪ್ರಯೋಜನವನ್ನು ಪಡೆದುಕೊಳ್ಳುತ್ತಾರೆ.
ಆಕಾಶ್ ಇನ್ವಿಕ್ಟಸ್ ವಿದ್ಯಾರ್ಥಿಗಳಿಗೆ ಹೆಚ್ಚು ವೈಯಕ್ತಿಕಗೊಳಿಸಿದ ಸಮನವನ್ನು ನೀಡಲು ಸಣ್ಣ ಸಣ್ಣ ಬ್ಯಾಚ್‍ಗಳನ್ನು ಹೊಂದಿರುತ್ತದೆ. ಇದರಿಂದ ಅವರಿಗೆ ಕಲಿಕೆ ಸುಲಭವಾಗುತ್ತದೆ. ಈ ಹೊಸ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಆಕಾಶ್ ಎಜುಕೇಶನಲ್ ಸರ್ವೀಸಸ್ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ & ಮುಖ್ಯಕಾರ್ಯನಿರ್ವಹಣಾಧಿಕಾರಿ ದೀಪಕ್ ಮೆಹ್ರೋತ್ರ ಅವರು, ``ಆಕಾಶ್ ಇನ್ವಿಕ್ಟಸ್ ಕೇವಲ ತರಬೇತಿ ಕಾರ್ಯಕ್ರಮವಲ್ಲ. ಇದು ಉನ್ನತ ಐಐಟಿ ಶ್ರೇಯಾಂಕಗಳನ್ನು ಪಡೆಯುವ ಗುರಿಯನ್ನು ಹೊಂದಿರುವ ವಿದ್ಯಾರ್ಥಿ ಗಳಿಗೆ ಒಂದು ಪರಿವರ್ತನೆಯನ್ನು ಉಂಟು ಮಾಡುವ ಕಾರ್ಯಕ್ರಮವಾಗಿದೆ. ಈ ಕಾರ್ಯ ಕ್ರಮವು ದಶಕಗಳ ಅನುಭವ, ಅತ್ಯಾಧುನಿಕ ಬೋಧನಾ ವಿಧಾನಗಳು ಮತ್ತು ವೈಯಕ್ತೀಕ ರಣಗೊಳಿಸಿದ ಎಐ ಮತ್ತು ತಂತ್ರಜ್ಞಾನ-ಚಾಲಿತ ಕಲಿಕೆಯೊಂದಿಗೆ ಉನ್ನತ ದರ್ಜೆಯ ಅಧ್ಯಾಪಕರನ್ನು ಒಳಗೊಂಡಿದೆ. ಹಲವು ವರ್ಷಗಳಿಂದ ನಮ್ಮ ಶಿಕ್ಷಕರು ಐಐಟಿಗಳಲ್ಲಿ ಪ್ರವೇಸವನ್ನು ಪಡೆಯಲು ಬಯಸುವ ಲಕ್ಷಾಂತರ ವಿದ್ಯಾರ್ಥಿಗಳಿಗೆ ಯಶಸ್ವಿಯಾಗಿ ಮಾರ್ಗದರ್ಶನ ನೀಡಿದ್ದಾರೆ. ಅಧ್ಯಯನ ಸಾಮಗ್ರಿಯನ್ನು ಸಂಪೂರ್ಣವಾಗಿ ಪರಿಷ್ಕರಿಸ ಲಾಗಿದ್ದು, ಸಂಪೂರ್ಣವಾದ ಪಠ್ಯಕ್ರಮವನ್ನು ಒಳಗೊಂಡಿದೆ ಹಾಗೂ ಉದ್ಯಮದ ಕೆಲವು ಅತ್ಯುತ್ತಮ ತಜ್ಞರು ಈ ಕಾರ್ಯಕ್ರಮವನ್ನು ಅಭಿವೃದ್ಧಿಪಡಿಸಿದ್ದಾರೆ.
ಇದು ಅತ್ಯುತ್ತಮವಾದದ್ದು ಎಂದು ನಾವು ದೃಢವಾಗಿ ನಂಬುತ್ತೇವೆ. ನೀವು ಉತ್ತಮ ವಿಷಯವನ್ನು ರಚನೆ ಮಾಡಲು ಸಾಧ್ಯವಾದರೆ ನಿಮಗೆ ನಾವು ಪ್ರಶಸ್ತಿಯನ್ನು ನೀಡುತ್ತೇವೆ ಮತ್ತು ನಮ್ಮ ತಂಡಕ್ಕೆ ನಿಮ್ಮನ್ನು ಸ್ವಾಗತಿಸುತ್ತೇವೆ’’ ಎಂದು ತಿಳಿಸಿದರು. ``ಕೆಲವು ತಿಂಗಳ ಹಿಂದೆ ಆರಂಭವಾಗಿರುವ ಈ ಕಾರ್ಯಕ್ರಮವು ಈಗಾಗಲೇ 2500+ ಉನ್ನತ ವಿದ್ಯಾರ್ಥಿ ಗಳನ್ನು ಸಜ್ಜುಗೊಳಿಸಿದೆ.
ನವೀನ ಶಿಕ್ಷಣಶಾಸ್ತ್ರ ಮತ್ತು ಕೋರ್ಸ್‍ವೇರ್, ತಜ್ಞ ಅಧ್ಯಾಪಕರು ಮತ್ತು ಸುಧಾರಿತ ಎಐ ಪರಿಕರಗಳು ಆಧಾರದಲ್ಲಿ ಸಿದ್ಧಪಡಿಸಲಾಗಿರುವ ಆಕಾಶ್ ಇನ್ವಿಕ್ಟರ್ ಜೆಇಇ ತಯಾರಿಕೆ ಯಲ್ಲಿ ಹೊಸ ಮಾನದಂಡಗಳನ್ನು ಹೊಂದಿಸುತ್ತದೆ. ಈ ಎಲ್ಲಾ ಹೊಸ ವೈಶಿಷ್ಟ್ಯತೆಗಳು ಆಕಾಶ್‍ನ ವಿಶ್ವಾಸಾರ್ಹತೆ ಮತ್ತು ತಾಂತ್ರಿಕ ಪರಿಣತಿಯಿಂದ ಬೆಂಬಲಿತವಾಗಿದೆ’’ ಎಂದೂ ಅವರು ಹೇಳಿದರು. ಈ ಕಾರ್ಯಕ್ರಮದ ಗಮನಾರ್ಹವಾದ ಅಂಶವೆಂದರೆ, ಅಧ್ಯಯನ ಸಂಪನ್ಮೂಲಗಳಲ್ಲಿರುವ ನಾವೀನ್ಯತೆಯ ಮೇಲೆ ಗಮನಹರಿಸುವುದಾಗಿದೆ.
ಅಂದರೆ, ವಿದ್ಯಾರ್ಥಿಗಳು ವಿವರವಾದ ಪರಿಹಾರಗಳು ಮತ್ತು ಹಂತಹಂತದ ಗುರುತು ಯೋಜನೆಗಳನ್ನು ಒದಗಿಸುವ ಕ್ಯೂಆರ್ ಕೋಡ್‍ಗಳೊಂದಿಗೆ ಎಂಬೆಡ್ ಮಾಡಲಾದ ಅಧ್ಯಾಯವಾರು ಅಭ್ಯಾಸದ ವರ್ಕ್‍ಶೀಟ್‍ಗಳನ್ನು ಸ್ವೀಕರಿಸುತ್ತಾರೆ. ಇದು ಜೆಇಇ ತಯಾರಿ ಯ ಜೊತೆಗೆ ಶಾಲೆ ಮತ್ತು ಬೋರ್ಡ್ ಪರೀಕ್ಷೆಗಳಲ್ಲಿ ಅವರು ಶ್ರೇಷ್ಠರಾಗುವುದನ್ನು ಖಚಿತಪಡಿಸುತ್ತದೆ. ಹೆಚ್ಚುವರಿಯಾಗಿ ಸ್ಪರ್ಧಾತ್ಮಕ ಒಲಿಂಪಿಯಾಡ್‍ಗಳಿಗೆಂದೇ ಕಾರ್ಯಾ ಗಾರಗಳು, ಅಧ್ಯಾಯವಾರು ವಿಭಜನೆಗಳು ಮತ್ತು ಪರಿಹಾರಗಳೊಂದಿಗೆ ಹಿಂದಿನ ಜೆಇಇ ಪ್ರಶ್ನೆ ಪತ್ರಿಕೆಗಳ ವ್ಯಾಪಕ ಆರ್ಕೈವ್‍ಗೆ ಪ್ರವೇಶ ಪಡೆಯಲು ಮತ್ತು ಅವರ ತಂತ್ರಗಳನ್ನು ಪರಿಷ್ಕರಣೆ ಮಾಡಲು ವಿವರವಾದ ಒಳನೋಟಗಳು, ಅಭ್ಯಾಸದ ಪ್ರಶ್ನೆಗಳು ಮತ್ತು ವಿಶ್ಲೇಷಣೆಯನ್ನು ನೀಡುವ ಜೆಇಇ ಚಾಲೆಂಜರ್ ಸಂಪನ್ಮೂಲಗಳು ಸೇರಿವೆ.
ಇದರ ಜೊತೆಗೆ, ಈ ಕಾರ್ಯಕ್ರಮವು ಭೌತಿಕ ಅಧ್ಯಯನ ಸಾಮಗ್ರಿಗಳನ್ನು ಸಂಯೋಜನೆ ಮಾಡುತ್ತದೆ. ಸಂಕೀರ್ಣ ಸಮಸ್ಯೆಗಳನ್ನು ಸರಳಗೊಳಿಸಲು ಭೌತಿಕ ಮತ್ತು ಡಿಜಿಟಲ್ ಸಂಪನ್ಮೂಲಗಳ ಸಾಮಥ್ರ್ಯಗಳನ್ನು ಸಂಯೋಜನೆ ಮಾಡುವುದು ಮತ್ತು ಹೊಂದಿ ಕೊಳ್ಳುವ ಬೇಡಿಕೆಯ ಮೇರೆಗೆ ಕಲಿಕೆಗಾಗಿ ತಜ್ಞ ಅಧ್ಯಾಪಕರಿಂದ ರೆಕಾರ್ಡ್ ಮಾಡಲಾದ ವೀಡಿಯೊ ಉಪನ್ಯಾಸಗಳನ್ನು ಒದಗಿಸುತ್ತದೆ. ಆಕಾಶ್ ಇನ್ವಿಕ್ಟಸ್ ಪ್ರವೇಶವು ಅತ್ಯಂತ ಆಯ್ದ ಕಾರ್ಯಕ್ರಮವಾಗಿದ್ದು, ವಿಶೇಷ ಪ್ರವೇಶ ಪರೀಕ್ಷೆಯ ಮೂಲಕ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಇದರಿಂದಾಗಿ ಅತ್ಯಂತ ಪ್ರಕಾಶಮಾನವಾದ ಮತ್ತು ಬದ್ಧ ಮನಸುಗಳು ಮಾತ್ರ ಈ ಕಾರ್ಯಕ್ರಮಕ್ಕೆ ಸೇರುತ್ತವೆ. 11 ನೇ ತರಗತಿಗೆ ಸೇರುವ ವಿದ್ಯಾರ್ಥಿಗಳಿಗೆ ಎರಡುವ ವರ್ಷಗಳ ಕಾರ್ಯಕ್ರಮ ಅಥವಾ 10 ನೇ ತರಗತಿಗೆ ಸೇರುವ ವಿದ್ಯಾರ್ಥಿಗಳಿಗೆ ಮೂರು ವರ್ಷಗಳ ಕಾರ್ಯಕ್ರಮವಾಗಿ ವಿನ್ಯಾಸಗೊಳಿಸಲಾಗಿರುವ ಈ ಆಕಾಶ್ ಇನ್ವಿಕ್ಟಸ್ ದೇಶಾದ್ಯಂತ 40+ ನಗರಗಳಲ್ಲಿ ಲಭ್ಯವಿದೆ. ಪ್ರಮುಖವಾಗಿ ದೆಹಲಿ ಎನ್‍ಸಿಆರ್, ಚಂಡೀಗಢ, ಲಕ್ನೋ, ಮೀರತ್, ಪ್ರಯಾಗ್‍ರಾಜ್, ಕಾನ್ಪುರ, ವಾರಣಾಸಿ, ಜೈಪುರ, ಕೋಟಾ, ಪಾಟ್ನಾ, ರಾಂಚಿ, ಬೊಕಾರೊ, ಕೋಲ್ಕತ್ತಾ, ದುರ್ಗಾಪು, ಭುವನೇಶ್ವರ್, ಮುಂಬೈ, ಪುಣೆ, ನಾಗ್ಪುರ, ಅಹಮದಾಬಾದ್, ವಡೋದರ, ಇಂದೋರ್, ಭೋಪಾಲ್, ಹೈದ್ರಾಬಾದ್, ಚೆನ್ನೈ, ಬೆಂಗಳೂರು, ಡೆಹ್ರಾಡೂನ್ ಮತ್ತು ಮಧುರೈ ಸೇರಿದಂತೆ ಇನ್ನೂ ಅನೇಕ ನಗರಗಳಲ್ಲಿ ಲಭ್ಯವಿದೆ.
ಸಂಶೋಧಕರ ಸಮರ್ಪಿತವಾದ ತಂಡವು ಅತ್ಯುನ್ನತ ಶೈಕ್ಷಣಿಕ ಮಾನದಂಡಗಳು ಮತ್ತು ವಿಕಸಿತಗೊಳ್ಳುತ್ತಿರುವ ಪರೀಕ್ಷಾ ಮಾದರಿಗಳಿಗೆ ಅನುಗುಣವಾಗಿ ಕೋರ್ಸನ್ನು ಅಭಿವೃದ್ಧಿ ಪಡಿಸಲಾಗಿದೆ. ಈ ಮೂಲಕ ಇದು ಆಕಾಂಕ್ಷಿಗಳಿಗೆ ಪರಿವರ್ತಕವಾದ ಶೈಕ್ಷಣಿಕ ಅನುಭವ ವನ್ನು ಖಚಿತಪಡಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ಪೋಷಕರು ಮತ್ತು ವಿದ್ಯಾರ್ಥಿಗಳು 7303759494 ಅಥವಾ ಇಮೇಲ್ support.invictus@aesl.in ನಲ್ಲಿ ಸಂಪರ್ಕಿಸಬಹುದು.