ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ಡಗೌಟ್‌ನಲ್ಲೇ ಕೋಚ್‌ ಜತೆ ವಾಗ್ವಾದ ನಡೆಸಿದ ಸೂರ್ಯಕುಮಾರ್‌

ತಿಲಕ್‌ ವರ್ಮಾ ರಿಟೈರ್ಡ್‌ ಹರ್ಟ್‌ ಬಗ್ಗೆ ಸ್ಪಷ್ಟನೆ ನೀಡಿದ ಮುಂಬೈ ಇಂಡಿಯನ್ಸ್ ಕೋಚ್ ಮಹೇಲಾ ಜಯವರ್ಧನೆ, ತಿಲಕ್ ವರ್ಮಾ ರನ್ ಗಳಿಸಲು ಕಷ್ಟಪಡುತ್ತಿದ್ದರು. ಹೀಗಾಗಿ ಅವರನ್ನು ನಿವೃತ್ತಿ ಮಾಡುವ ನಿರ್ಧಾರ ಮಾಡಲಾಯಿತು ಎಂದು ಹೇಳಿದ್ದಾರೆ.

ಡಗೌಟ್‌ನಲ್ಲೇ ಕೋಚ್‌ ಜತೆ ವಾಗ್ವಾದ ನಡೆಸಿದ ಸೂರ್ಯಕುಮಾರ್‌

Profile Abhilash BC Apr 5, 2025 1:47 PM

ಲಕ್ನೋ: ಪಂದ್ಯ ಮುಕ್ತಾಯಕ್ಕೆ ಒಂದು ಓವರ್‌ ಬಾಕಿ ಇರುವಾಗ ತಿಲಕ್‌ ವರ್ಮಾ(Tilak Varma) ಅವರನ್ನು ದಿಢೀರ್‌ ರಿಟೈರ್ಡ್‌ ಹರ್ಟ್‌ ಎಂದು ಘೋಷಿಸಿ ಪೆವಿಲಿಯನ್‌ಗೆ ಕರೆಸಿದ ತಂಡದ ನಿರ್ಧಾರಕ್ಕೆ ಸೂರ್ಯಕುಮಾರ್‌ ಯಾದವ್‌(Suryakumar Yadav) ಡಗೌಟ್‌ನಲ್ಲೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೋಚ್ ಮಹೇಲಾ ಜಯವರ್ಧನೆ(Mahela Jayawardene) ಜತೆ ವಾಗ್ವಾದ ನಡೆಸಿದ್ದಾರೆ. ಈ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ನೆಟ್ಟಿಗರು ಕೂಡ ತಂಡದ ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದು ಇದು ಆಟಗಾರರನೊಬ್ಬನಿಗೆ ಮಾಡಿದ ಅವಮಾನ ಎಂದು ಹೇಳಿದ್ದಾರೆ.

ನಿರ್ಧಾರ ಸಮರ್ಥಿಸಿಕೊಂಡ ಕೋಚ್‌

ತಿಲಕ್‌ ವರ್ಮಾ ರಿಟೈರ್ಡ್‌ ಹರ್ಟ್‌ ಬಗ್ಗೆ ಸ್ಪಷ್ಟನೆ ನೀಡಿದ ಮುಂಬೈ ಇಂಡಿಯನ್ಸ್ ಕೋಚ್ ಮಹೇಲಾ ಜಯವರ್ಧನೆ, ತಿಲಕ್ ವರ್ಮಾ ರನ್ ಗಳಿಸಲು ಕಷ್ಟಪಡುತ್ತಿದ್ದರು. ಹೀಗಾಗಿ ಅವರನ್ನು ನಿವೃತ್ತಿ ಮಾಡುವ ನಿರ್ಧಾರ ಮಾಡಲಾಯಿತು ಎಂದು ಹೇಳಿದ್ದಾರೆ.

ಇಂಪ್ಯಾಕ್ಟ್‌ ಆಟಗಾರನಾಗಿ ಕಣಕ್ಕಿಳಿದ ತಿಲಕ್‌ ಅವರು ಆರಂಭದಲ್ಲಿ ನಿಧಾನಗತಿಯ ಬ್ಯಾಟಿಂಗ್‌ ನಡೆಸಿದರೂ ಕೊನೆಯ ಹಂತದಲ್ಲಿ ಸಿಡಿಯಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಅವರಿಗೆ ಲಯ ಕಂಡುಕೊಳ್ಳಲು ಸಾಧ್ಯವೇ ಆಗಲಿಲ್ಲ. ಸ್ಟ್ರೈಕ್‌ ಬದಲಾವಣೆ ಮಾಡಲು ಕೂಡ ಆಗದ ಸ್ಥಿತಿಯಲ್ಲಿದ್ದ ಕಾರಣ ತಕ್ಷಣ, ಈ ಬದಲವಣೆ ಮಾಡಲು ಮುಂದಾದೆವು ಎಂದು ಜಯವರ್ಧನೆ ಹೇಳಿದರು.



ತಂಡದ ಗೆಲುವಿಗೆ 7 ಎಸೆತಗಳಲ್ಲಿ 24 ರನ್‌ ಬೇಕಿದ್ದಾಗ ರಿಟರ್ಡ್‌ ಹರ್ಟ್‌ ಆಗಿ ಪೆವಿಲಿಯನ್‌ ಸೇರಿಕೊಂಡರು. ಬಳಿಕ ಕ್ರೀಸ್‌ಗೆ ಬಂದ ಮಿಚೆಲ್‌ ಸ್ಯಾಂಟ್ನರ್‌ ಮತ್ತು ಹಾರ್ದಿಕ್‌ ಪಾಂಡ್ಯ ಸೇರಿ 9 ರನ್ ಗಳಿಸಲಷ್ಟೇ ಶಕ್ತರಾದರು. ನಿಧಾನಗತಿಯ ಬ್ಯಾಟಿಂಗ್‌ ನಡೆಸಿದ ತಿಲಕ್‌, 23 ಎಸೆತಗಳಲ್ಲಿ 25 ರನ್ ಗಳಿಸಿದರು.

ಇದನ್ನೂ ಓದಿ IPL 2025: ತಲೆಬುಡ ಇಲ್ಲದ ಪಾಂಡ್ಯ ನಿರ್ಧಾರಕ್ಕೆ ರೊಚ್ಚಿಗೆದ್ದ ಆಕಾಶ್ ಅಂಬಾನಿ

ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್‌ ನಡೆಸಿದ ಸೂರ್ಯಕುಮಾರ್‌ ಯಾದವ್‌ 43 ಎಸೆತಗಳಿಂದ 67 ರನ್‌ ಬಾರಿಸಿದರು. ಆದರೆ ಪಂದ್ಯ ಸೋತ ಕಾರಣ ಇವರ ಈ ಬ್ಯಾಟಿಂಗ್‌ ಪ್ರದರ್ಶನ ವ್ಯರ್ಥವಾಯಿತು. ಈ ಬ್ಯಾಟಿಂಗ್‌ ಇನಿಂಗ್ಸ್‌ ವೇಳೆ 9 ಬೌಂಡರಿ ಮತ್ತು ಒಂದು ಸಿಕ್ಸರ್‌ ಸಿಡಿಯಿತು.