CSBL: ʼCSBL ಸೀಸನ್ 1ʼ ಟ್ರೋಫಿ, ಲೋಗೊ ಅನಾವರಣ
CSBL: STellar studio & event management ಸಂಸ್ಥೆ, PRK AUDIO ಸಂಸ್ಥೆಯ ಸಹಯೋಗದೊಂದಿಗೆ ಚೇತನ್ ಸೂರ್ಯ, ಅರ್ಜುನ್ ಹಾಗೂ ಪಾರಿತೋಷ್ ಅವರು ಆಯೋಜಿಸುತ್ತಿರುವ ʼCSBLʼ ʼಸೆಲೆಬ್ರಿಟಿ ಶಟಲ್ ಬ್ಯಾಡ್ಮಿಂಟನ್ ಲೀಗ್ ಸೀಸನ್ 1ʼ ಉದ್ಘಾಟನಾ ಹಾಗೂ ಲೋಗೊ ಲಾಂಚ್ ಸಮಾರಂಭ ನಗರದ ಖಾಸಗಿ ಹೋಟೆಲ್‌ನಲ್ಲಿ ಅದ್ದೂರಿಯಾಗಿ ನೆರವೇರಿತು. ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಭಾರತದ ಖ್ಯಾತ ಶಟಲ್ ಬ್ಯಾಡ್ಮಿಂಟನ್ ಆಟಗಾರ ಶ್ರೀಕಾಂತ್ ಕಿಡಂಬಿ ʼCSBLʼ ಸೀಸನ್ 1 ಲೋಗೊ ಹಾಗೂ ಟ್ರೋಫಿ ಅನಾವರಣಗೊಳಿಸಿದರು.


ಬೆಂಗಳೂರು: STellar studio & event management ಸಂಸ್ಥೆ, PRK AUDIO ಸಂಸ್ಥೆಯ ಸಹಯೋಗದೊಂದಿಗೆ ಚೇತನ್ ಸೂರ್ಯ, ಅರ್ಜುನ್ ಹಾಗೂ ಪಾರಿತೋಷ್ ಆಯೋಜಿಸುತ್ತಿರುವ ʼCSBLʼ ʼಸೆಲೆಬ್ರಿಟಿ ಶಟಲ್ ಬ್ಯಾಡ್ಮಿಂಟನ್ ಲೀಗ್ ಸೀಸನ್ 1ʼ ಉದ್ಘಾಟನೆ ಹಾಗೂ ಲೋಗೊ ಲಾಂಚ್ ಸಮಾರಂಭ ನಗರದ ಖಾಸಗಿ ಹೋಟೆಲ್‌ನಲ್ಲಿ ಅದ್ದೂರಿಯಾಗಿ ನೆರವೇರಿತು. ಅಶ್ವಿನಿ ಪುನೀತ್ ರಾಜ್‌ಕುಮಾರ್ ಹಾಗೂ ಭಾರತದ ಖ್ಯಾತ ಶಟಲ್ ಬ್ಯಾಡ್ಮಿಂಟನ್ ಆಟಗಾರ ಶ್ರೀಕಾಂತ್ ಕಿಡಂಬಿ ʼCSBLʼ ಸೀಸನ್ 1 ಲೋಗೊ ಹಾಗೂ ಟ್ರೋಫಿ ಅನಾವರಣ ಮಾಡಿದರು.
ಪುನೀತ್ ರಾಜಕುಮಾರ್ ಅವರ 50ನೇ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು. ವಿಧಾನ ಪರಿಷತ್ ಸದಸ್ಯರಾದ ಗೋವಿಂದರಾಜು, ಶರವಣ, ನಟ ಅನಿರುದ್ಧ್ ಜತ್ಕರ್, ನಟಿ ರಾಗಿಣಿ ದ್ವಿವೇದಿ, ಸಾ.ರಾ. ಗೋವಿಂದು, ಪತ್ರಕರ್ತ ಸದಾಶಿವ ಶೆಣೈ ಮತ್ತಿತರರು ʼCSBLʼ ಯಶಸ್ವಿಯಾಗಲೆಂದು ಹಾರೈಸಿದರು. ವರ್ಣರಂಜಿತ ವೇದಿಕೆಯಲ್ಲಿ ಪುನೀತ್ ರಾಜಕುಮಾರ್ ಚಿತ್ರದ ಹಾಡುಗಳಿಗೆ ಹೆಸರಾಂತ ನೃತ್ಯ ತಂಡದವರು ಹೆಜ್ಜೆ ಹಾಕಿದರು.
ʼCSBLʼ ಕುರಿತು ಮಾಹಿತಿ ನೀಡಿದ ಆಯೋಜಕರಲ್ಲಿ ಒಬ್ಬರಾದ ಚೇತನ್ ಸೂರ್ಯ, ನಾವು ಎರಡು ವರ್ಷಗಳ ಕಾಲ ʼಅಪ್ಪು ಕಪ್ʼ ಎಂಬ ಹೆಸರಲ್ಲಿ ಶಟಲ್ ಬ್ಯಾಡ್ಮಿಂಟನ್ ಟೂರ್ನಿ ಆಯೋಜಿಸುತ್ತಾ ಬಂದಿದ್ದೇವೆ. ಆಗಿನಿಂದಲೂ ಅಶ್ವಿನಿ ಪುನೀತ್ ರಾಜಕುಮಾರ್ ಅವರು ನಮಗೆ ಬೆಂಬಲ ನೀಡುತ್ತಾ ಬರುತ್ತಿದ್ದಾರೆ. ಶರವಣ ಅವರ ಸಹಕಾರವೂ ಆಗಿನಿಂದಲೂ ಇದೆ. ಇನ್ನು ಈ ಬಾರಿ ಇಂಟರ್ ಸ್ಟೇಟ್ ಸೆಲೆಬ್ರಿಟಿ ಶಟಲ್ ಬ್ಯಾಡ್ಮಿಂಟನ್ ಲೀಗ್ ಆಯೋಜಿಸಲಾಗಿದೆ. ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ ಹಾಗೂ ಕೇರಳ ನಾಲ್ಕು ರಾಜ್ಯಗಳ ಸೆಲೆಬ್ರಿಟಿಗಳು ಈ ಲೀಗ್‌ನಲ್ಲಿ ಆಡಲಿದ್ದಾರೆ. ಮುಂದಿನ ಬಾರಿ ಇನ್ನೂ ಹೆಚ್ಚಿನ ರಾಜ್ಯಗಳು ಸೇರ್ಪಡೆಯಾಗಲಿದೆ. ʼಕರ್ನಾಟಕ ವಾರಿಯರ್ಸ್ʼ, ʼಚೆನೈ ಸೂಪರ್ ಸ್ಟಾರ್ಸ್ʼ, ʼಕೇರಳ ರಾಕರ್ಸ್ʼ ಹಾಗೂ ʼತೆಲುಗು ಫೈಟರ್ಸ್ʼ ಎಂಬ ನಾಲ್ಕು ತಂಡಗಳಿವೆ. ನನ್ನ ಜತೆಗೆ ಅರ್ಜುನ್ ಹಾಗೂ ಪಾರಿತೋಷ್ ಅವರು ಈ ಬಾರಿ ಕೈಜೋಡಿಸಿದ್ದು, ಜೂನ್‌ನಲ್ಲಿ ಅದ್ದೂರಿಯಾಗಿ ʼCSBLʼ ನಡೆಯಲಿದೆ ಎಂದರು.
ಈ ಸುದ್ದಿಯನ್ನೂ ಓದಿ | BOB Recruitment 2025: ಬ್ಯಾಂಕ್ ಆಫ್ ಬರೋಡಾದಲ್ಲಿದೆ 146 ಹುದ್ದೆ; ಹೀಗೆ ಅಪ್ಲೈ ಮಾಡಿ
ʼಕರ್ನಾಟಕ ವಾರಿಯರ್ಸ್ʼ ತಂಡದ ನಟರಾದ ಪ್ರಮೋದ್ ಶೆಟ್ಟಿ, ರವಿ ಚೇತನ್, ಮನೋರಂಜನ್ ರವಿಚಂದ್ರನ್ ಹಾಗೂ ವಿಕ್ರಮ್ ರವಿಚಂದ್ರನ್, ʼಚೆನೈ ಸೂಪರ್ ಸ್ಟಾರ್ಸ್ʼ ತಂಡದ ಶಿವಕುಮಾರ್ (ಕೌಂಟಿ ಕ್ರಿಕೇಟರ್), ವಿಕ್ರಾಂತ್ (ನಟ ಹಾಗೂ ಸಿ.ಸಿ.ಎಲ್ ಕ್ಯಾಪ್ಟನ್), ಭರತ್ (ನಟ), ಬಿ.ಆರ್. ಕೃಷ್ಣ (ಹಿನ್ನೆಲೆ ಗಾಯಕ), ʼತೆಲುಗು ಫೈಟರ್ಸ್ʼ ತಂಡದ ಶರತ್, ನಿತೀಶ್ ಹಾಗೂ ʼಕೇರಳ ರಾಕರ್ಸ್ʼ ತಂಡದ ಮಂಜುನಾಥ್ (ನಿರ್ಮಾಪಕ), ನಟರಾದ ಸಂತೋಷ್ ಹಾಗೂ ರಾಜೀವ್ ಪಿಳ್ಳೈ ಮುಂತಾದ ಸೆಲೆಬ್ರಿಟಿ ಆಟಗಾರರು ʼCSBLʼ ಲೋಗೊ ಹಾಗೂ ಟ್ರೋಫಿ ಅನಾವರಣದಲ್ಲಿ ಉಪಸ್ಥಿತರಿದ್ದರು.