ಏ.6ರಂದು ಬೆಂಗಳೂರಿನಲ್ಲಿ ಛಂದ ಪುಸ್ತಕ ಬಹುಮಾನ ಪ್ರದಾನ ಸಮಾರಂಭ
Chanda Pusthaka Award Ceremony: ಛಂದ ಪುಸ್ತಕ ವತಿಯಿಂದ ಏ.6 ರಂದು ಭಾನುವಾರ ಬೆಳಗ್ಗೆ 10.30ಕ್ಕೆ ಬೆಂಗಳೂರು ನಗರದ ಬಸವನಗುಡಿಯ ವಾಡಿಯಾ ರಸ್ತೆಯಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನಲ್ಲಿ ಛಂದ ಪುಸ್ತಕ ಬಹುಮಾನ ಪ್ರದಾನ ಸಮಾರಂಭ ಏರ್ಪಡಿಸಲಾಗಿದೆ. ಈ ಕುರಿತ ವಿವರ ಇಲ್ಲಿದೆ.


ಬೆಂಗಳೂರು: ಛಂದ ಪುಸ್ತಕ ವತಿಯಿಂದ ಏ.6 ರಂದು ಭಾನುವಾರ ಬೆಳಗ್ಗೆ 10.30ಕ್ಕೆ ನಗರದ ಬಸವನಗುಡಿಯ ವಾಡಿಯಾ ರಸ್ತೆಯಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನಲ್ಲಿ ಛಂದ ಪುಸ್ತಕ ಬಹುಮಾನ ಪ್ರದಾನ ಸಮಾರಂಭ (Chanda pusthaka Award Ceremony) ಏರ್ಪಡಿಸಲಾಗಿದೆ. ಕಾರ್ಯಕ್ರಮದಲ್ಲಿ ಡಾ. ಬಸವರಾಜ ಕಲ್ಗುಡಿ ಅವರು ಬಹುಮಾನ ಪ್ರಕಟಣೆ ಮತ್ತು ಪ್ರದಾನ ಮಾಡುವರು. ಡಾ.ಸಿ. ಮೃಣಾಳಿನಿ (ತೆಲುಗು), ಡಾ.ಚಿದಾನಂದ ಸಾಲಿ (ಕನ್ನಡ), ಮನು ಭಟ್ಟ ತಿರಿ (ಇಂಗ್ಲೀಷ್) ಅವರು ʼನಮ್ಮ ಭಾಷೆ, ನಮ್ಮ ಕತೆʼ ಮೂರು ವಿಶೇಷ ಉಪನ್ಯಾಸ ನೀಡುವರು.
ಛಂದ ಪುಸ್ತಕ ಬಹುಮಾನ ಪ್ರದಾನ ಸಮಾರಂಭದಲ್ಲಿ ವಿಜೇತರಿಗೆ 40 ಸಾವಿರ ರೂ. ಬಹುಮಾನ, ಪುಸ್ತಕ ಪ್ರಕಟಣೆ ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು. ಫ್ರೋತ್ಸಾಹಕರ ಬಹುಮಾನ ಪಡೆದ ಐವರಿಗೆ 2 ಸಾವಿರ ರೂ. ಮತ್ತು ಮೆಚ್ಚುಗೆ ಪತ್ರ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಈ ಸುದ್ದಿಯನ್ನೂ ಓದಿ | Karnataka Weather: ಆರೆಂಜ್ ಅಲರ್ಟ್; ಇಂದು, ನಾಳೆ ರಾಜ್ಯದ ಉತ್ತರ ಒಳನಾಡಿನಲ್ಲಿ ಗುಡುಗು, ಬಿರುಗಾಳಿ ಸಹಿತ ಭಾರಿ ಮಳೆ!