ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

IVF Center: ಶೀಘ್ರವೇ ರಾಜ್ಯದಲ್ಲಿ ಸರ್ಕಾರಿ ಸ್ವಾಮ್ಯದ ಪ್ರಥಮ ಐವಿಎಫ್‌ ಕೇಂದ್ರ

ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆ ( ಕೆಎಂಸಿ-ಆರ್ ಐ)ನಲ್ಲಿ ಕೃತಕ ಗರ್ಭಧಾರಣಾ ಕೇಂದ್ರ ಶೀಘ್ರವೇ ಆರಂಭವಾಗಲಿದೆ. ಇದು ರಾಜ್ಯದಲ್ಲಿಯೇ ಸರ್ಕಾರಿ ಸ್ವಾಮ್ಯದ ಪ್ರಥಮ ಐವಿಎಫ್ ಕೇಂದ್ರ ಆಗಿದೆ. ಹುಬ್ಬಳ್ಳಿಯ ಕೆ ಎಂ ಸಿ ಆರ್ ಐನ ಸ್ತ್ರೀ ರೋಗ ಹಾಗೂ ಪ್ರಸೂತಿ ವಿಭಾಗದ 2ನೇ ಮಹಡಿಯಲ್ಲಿ ಐವಿಎಫ್ ಕೇಂದ್ರದ ಕಾಮಗಾರಿ ಮುಕ್ತಾಯದ ಹಂತಕ್ಕೆ ಬಂದಿದೆ.

ಶೀಘ್ರವೇ ರಾಜ್ಯದಲ್ಲಿ ಸರ್ಕಾರಿ ಸ್ವಾಮ್ಯದ ಪ್ರಥಮ ಐವಿಎಫ್‌ ಕೇಂದ್ರ

ಕೆಎಂಸಿಆರ್‌ಐ ಹುಬ್ಬಳ್ಳಿ

ಹರೀಶ್‌ ಕೇರ ಹರೀಶ್‌ ಕೇರ Feb 24, 2025 6:35 AM

ಹುಬ್ಬಳ್ಳಿ: ಮಕ್ಕಳನ್ನು ಪಡೆಯಬೇಕು ಎಂಬುದು ಅನೇಕರ ಕನಸು. ಇದಕ್ಕಾಗಿ ಖಾಸಗಿ ಐವಿಎಫ್ ಕೇಂದ್ರಗಳ (IVF Center) ಮೊರೆ ಹೋಗುವವರ ಸಂಖ್ಯೆಯೂ ಹೆಚ್ಚಿದೆ. ಇಂತಹ ರಾಜ್ಯದ ಜನತೆಗೆ ಗುಡ್ ನ್ಯೂಸ್ (good news) ಎನ್ನುವಂತೆ ಶೀಘ್ರವೇ ರಾಜ್ಯದಲ್ಲಿ ಸರ್ಕಾರಿ ಸ್ವಾಮ್ಯದ ಪ್ರಥಮ ಐವಿಎಫ್ ಕೇಂದ್ರ ಹುಬ್ಬಳ್ಳಿಯ (Hubballi news) ಕೆಎಂಸಿ-ಆರ್‌ಐನಲ್ಲಿ (KMCRI) ಆರಂಭಗೊಳ್ಳಲಿದೆ. ಈಗಾಗಲೇ ಎಲ್ಲಾ ಕೆಲಸ ಮುಕ್ತಾಯಗೊಂಡಿದ್ದು, ಉದ್ಘಾಟನೆ ಮಾತ್ರ ಬಾಕಿ ಇದೆ.

ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆ ( ಕೆಎಂಸಿ-ಆರ್ ಐ)ನಲ್ಲಿ ಕೃತಕ ಗರ್ಭಧಾರಣಾ ಕೇಂದ್ರ ಶೀಘ್ರವೇ ಆರಂಭವಾಗಲಿದೆ. ಇದು ರಾಜ್ಯದಲ್ಲಿಯೇ ಸರ್ಕಾರಿ ಸ್ವಾಮ್ಯದ ಪ್ರಥಮ ಐವಿಎಫ್ ಕೇಂದ್ರ ಆಗಿದೆ. ಹುಬ್ಬಳ್ಳಿಯ ಕೆ ಎಂ ಸಿ ಆರ್ ಐನ ಸ್ತ್ರೀ ರೋಗ ಹಾಗೂ ಪ್ರಸೂತಿ ವಿಭಾಗದ 2ನೇ ಮಹಡಿಯಲ್ಲಿ ಐವಿಎಫ್ ಕೇಂದ್ರದ ಕಾಮಗಾರಿ ಮುಕ್ತಾಯದ ಹಂತಕ್ಕೆ ಬಂದಿದೆ. ಸಿವಿಲ್ ಕಾಮಗಾರಿ ನಡೆಸಲಾಗುತ್ತಿದ್ದು, ಶೀಘ್ರವೇ ಮುಕ್ತಾಯಗೊಂಡು ಉದ್ಘಾಟನೆಯಾಗಲಿದೆ.

ರಾಜ್ಯ ಸರ್ಕಾರಕ್ಕೆ ಕೆಎಂಸಿ-ಆರ್ ಐ ನಲ್ಲಿ 2021-22ನೇ ಸಾಲಿನಲ್ಲಿ ಐವಿಎಫ್ ಕೇಂದ್ರ ಆರಂಭಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದಕ್ಕೆ ಅನುಮೋದನೆ ಕೂಡ ದೊರೆಯಲಾಗಿತ್ತು. ಸರ್ಕಾರದ ಅನುದಾನದ ಹೊರತಾಗಿಯೂ ಇತರೆ ಮೂಲಗಳಿಂದ ಸಂಗ್ರಹಿಸಿದಂತ ಆರ್ಥಿಕ ಸಂಪನ್ಮೂಲ, ಸಿಎಸ್ ಆರ್ ದೇಣಿಗೆಯಿಂದ ಉಪಕರಣಗಳನ್ನು ಖರೀದಿಸಲಾಗಿದೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ನಿರ್ದೇಶಕ ಡಾ.ಎಸ್ಎಫ್ ಕಮ್ಮಾರ ಅವರು, ರಾಜ್ಯದಲ್ಲೇ ಮೊದಲ ಸರ್ಕಾರಿ ಆಸ್ಪತ್ರೆಯಲ್ಲಿ ತೆರೆಯಲಾಗುತ್ತಿರುವಂತ ಐವಿಎಫ್ ಕೇಂದ್ರ ಎಂಬ ಹೆಗ್ಗಳಿಕೆಗೆ ಕೆಎಂಸಿ ಆರ್ ಐ ಪಾತ್ರವಾಗುತ್ತಿದೆ. ಈ ಕೇಂದ್ರದ ಕಾಮಗಾರಿಯ ಶೇ.82 ರಿಂದ 85ರಷ್ಟು ಕೆಲಸ ಮುಗಿದಿದೆ. 15 ದಿನಗಳಿಂದ 1 ತಿಂಗಳಲ್ಲೇ ಸರ್ಕಾರಿ ಸ್ವಾಮ್ಯದ ಐವಿಎಫ್ ಕೇಂದ್ರ ಹುಬ್ಬಳ್ಳಿಯ ಕೆಎಂಸಿ ಆಸ್ಪತ್ರೆಯಲ್ಲಿ ಆರಂಭಗೊಳ್ಳಲಿದೆ ಎಂದರು.

ಇದನ್ನೂ ಓದಿ: ಐವಿಎಫ್ ವೈಫಲ್ಯಕ್ಕೆ ಪ್ರಮುಖ ಕಾರಣಗಳು