ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಜನರ ಮಧ್ಯೆ ʼಇಲ್ಯುಮಿನಾಟಿʼ ಹಾಡಿಗೆ ಕುಣಿದು ಕುಪ್ಪಳಿಸಿದ ಆನೆ; ಶಾಕ್‌ ಆದ ನೆಟ್ಟಿಗರು ಹೇಳಿದ್ದೇನು?

ಇಲ್ಲೊಂದು ಆನೆ ಹಾಡಿಗೆ ಕಾಲನೆತ್ತಿಕೊಂಡು ಕುಣಿದ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ಸಖತ್‌ ಸದ್ದು ಮಾಡುತ್ತಿದೆ. ಆದರೆ ಇದು ನಿಜವಾದ ಆನೆಯಲ್ಲ. ಜನರು ಆನೆಯ ವೇಷ ಧರಿಸಿ ಕುಣಿದಿದ್ದಾರೆ. ಆನೆಯ ವೇಷ ಧರಿಸಿದ ಜನರು ʼಇಲ್ಯುಮಿನಾಟಿʼ ಹಾಡಿಗೆ ತಕ್ಕಂತೆ ಹೆಜ್ಜೆ ಹಾಕಿದ್ದಾರೆ.

ಆನೆ ಡ್ಯಾನ್ಸ್‌ ನೋಡಿದ್ರಾ? ಅಪರೂಪದ ವಿಡಿಯೊ ವೈರಲ್‌

Profile pavithra Apr 14, 2025 1:20 PM

ಸಾಮಾನ್ಯವಾಗಿ ಹುಲಿ ಡ್ಯಾನ್ಸ್‌ ನೀವೆಲ್ಲಾ ನೋಡಿರಬಹುದು. ಆನೆ ಡ್ಯಾನ್ಸ್‌ ಮಾಡುವುದು ಎಲ್ಲಿಯಾದ್ರು ನೋಡಿದ್ರಾ? ಆದರೆ ಇಲ್ಲೊಂದು ಆನೆ ಹಾಡಿಗೆ ತಕ್ಕ ಹಾಗೇ ಕಾಲನೆತ್ತಿಕೊಂಡು ಸಖತ್‌ ಆಗಿ ಕುಣಿದಿದೆ! ಆನೆ ಡ್ಯಾನ್ಸ್‌ ಮಾಡಿದೆಯಾ ಎಂದು ನೀವು ಕೂಡ ಶಾಕ್‌ ಆದ್ರಾ? ಆದರೆ ಇದು ನಿಜವಾದ ಆನೆಯಲ್ಲವಂತೆ. ಜನರು ಆನೆಯ ವೇಷ ಧರಿಸಿಕೊಂಡು ʼಇಲ್ಯುಮಿನಾಟಿʼ ಹಾಡಿಗೆ ಕುಣಿದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ (Viral Video)ಆಗಿದೆ. ನೆಟ್ಟಿಗರು ಈ ವಿಡಿಯೊ ನೋಡಿ ಸಖತ್‌ ಥ್ರಿಲ್‌ ಆಗಿದ್ದಾರೆ.

ವೈರಲ್ ವಿಡಿಯೊದಲ್ಲಿ ಆನೆಯೊಂದರ ವೇಷ ಧರಿಸಿದ ವ್ಯಕ್ತಿಯೊಬ್ಬರು ಹಾಡಿಗೆ ತಕ್ಕ ಹಾಗೇ ಕುಣಿದಿರುವುದು ಸೆರೆಯಾಗಿದೆ. ಇದನ್ನು ನೋಡಿದವರಿಗೆ ಜನರ ಮಧ್ಯೆ ನಿಜವಾದ ಆನೆಯೇ ಕುಣಿಯುತ್ತಿದೆ ಎಂದೆನಿಸುತ್ತದೆ. ಆದರೆ ಇದು ನಿಜವಾದ ಆನೆಯಲ್ಲ, ಜನರು ಆನೆಯ ಹಾಗೇ ವೇಷ ಧರಿಸಿಕೊಂಡು ಕುಣಿದಿದ್ದು ಎಂಬ ಸತ್ಯ ಬಯಲಾಗಿದೆ.

ಆನೆಯ ಡ್ಯಾನ್ಸ್‌ ವಿಡಿಯೊ ಇಲ್ಲಿದೆ ನೋಡಿ...



ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾದ ಈ ವಿಡಿಯೊ 7,29,000ಕ್ಕೂ ಹೆಚ್ಚು ವ್ಯೂವ್ಸ್ ಗಳಿಸಿದೆ. ನೆಟ್ಟಿಗರು ಅದ್ಭುತವಾದ ಆನೆ ನೃತ್ಯವನ್ನು ಆನಂದಿಸಿದ್ದಾರೆ. ಒಬ್ಬರು "ವ್ಹಾವ್‌ ಆನೆಯ ಅದ್ಭುತ ನೃತ್ಯವು ತುಂಬಾ ಸುಂದರವಾಗಿದೆ" ಎಂದು ಹೇಳಿದ್ದಾರೆ. ಎರಡನೆಯವರು ಕಾಮೆಂಟ್ ಮಾಡಿ, "ಹಾಹಾ, ಹೌದು! ಭಾರತದಲ್ಲಿ, ಏನು ಬೇಕಾದರೂ ಸಾಧ್ಯ ಎಂದು ಅನಿಸುತ್ತದೆʼʼ ಎಂದಿದ್ದಾರೆ. "ಭಾರತವು ಅಸಾಧ್ಯವಾದುದನ್ನು ಸಾಧಿಸುವ ಭೂಮಿಯಾಗಿದೆ. ಅಲ್ಲಿ ಕನಸುಗಳು ನನಸಾಗಬಹುದು" ಎಂದು ಮೂರನೆಯವರು ಬರೆದಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಗೋವಾದ ರಸ್ತೆಯಲ್ಲಿ ಯುವಕರ ಪುಂಡಾಟ; ಸ್ಥಳೀಯರಿಂದ ಫುಲ್‌ ಕ್ಲಾಸ್‌- ವಿಡಿಯೊ ನೋಡಿ!

ಭಾರತದಲ್ಲಿ ಇಂತಹ ಚಮತ್ಕಾರಿ ಘಟನೆಗಳು ನಡೆದಿದ್ದು ಇದೇ ಮೊದಲಲ್ಲ. ಈ ಹಿಂದೆ ಮಹಿಳೆಯೊಬ್ಬಳು ಬಟ್ಟೆ ಒಗೆಯುವ ವಾಷಿಂಗ್ ಮೆಷಿನ್‍ ಅನ್ನು ಬಳಸಿಕೊಂಡ ರೀತಿ ಸೋಶಿಯಲ್ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿತ್ತು. ಅವಳು ಇಲ್ಲಿ ವಾಷಿಂಗ್ ಮೆಷಿನ್ ಅನ್ನು ಬಟ್ಟೆ ಒಗೆಯಲು ಅಲ್ಲ ಆಲೂಗಡ್ಡೆ ಸಿಪ್ಪೆ ತೆಗೆಯಲು ಬಳಸಿಕೊಂಡಿದ್ದಳು. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಬಿರುಗಾಳಿ ಎಬ್ಬಿಸಿತ್ತು. ಬಟ್ಟೆ ಒಗೆಯುವ ವಾಷಿಂಗ್ ಮೆಷಿನ್ ಅನ್ನು ಸಿಪ್ಪೆ ಸುಲಿಯುವ ಮೆಷಿನ್ ಆಗಿ ಬಳಸಬಹುದು ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದರು.