ಇಂದಿನಿಂದ ಮೂರು ದಿನಗಳ ಕಾಲ ಅದ್ಧೂರಿ ಕುಂಭಾಭಿಷೇಕ ಮಹೋತ್ಸವ ಮತ್ತು ಲೋಕಾರ್ಪಣಾ ಸಮಾರಂಭ
ಶ್ರೀ ಆದಿಚುಂಚನಗಿರಿ ವಿಜಯನಗರ ಶಾಖಾಮಠದ ಶ್ರೀ ಶ್ರೀ ಸೌಮ್ಯನಾಥ ಸ್ವಾಮೀಜಿ ಅವರು ಮಾತ ನಾಡಿ, ಏಪ್ರಿಲ್ 14ನೇ ಸೋಮವಾರ ವಿಜಯನಗರ ಮಠದಿಂದ ಆಂಜನೇಯ ಸ್ವಾಮಿ ವಿಗ್ರಹವನ್ನು ಮೆರವಣಿಗೆಯಲ್ಲಿ ಮಂಜುನಾಥ ನಗರದಿಂದ ಮೋದಿ ವೃತ್ತ ಶಂಕರ ಮಠ ವೃತ್ತಕ್ಕೆ ಆಗಮಿಸಲಿದ್ದು, ಶಂಕರಮಠ ವೃತ್ತದಿಂದ ಸುಮಾರು 500 ಮಹಿಳೆಯರು ಕಳಸ ಹೊತ್ತು ಮೆರವಣಿಗೆಯಲ್ಲಿ ಪಾಲ್ಗೊಳ್ಳ ಲಿದ್ದಾರೆ


ಬೆಂಗಳೂರು: ನಗರದ ಬಿಜಿಎಸ್ ಕ್ಯಾಂಪಸ್, ಮಹಾಲಕ್ಷ್ಮಿ ಲೇಔಟ್ ನಲ್ಲಿ ನೂತನವಾಗಿ ನಿರ್ಮಿಸ ಲಾಗಿರುವ ಶ್ರೀ ಅಭಯ ಆಂಜನೇಯ ಸ್ವಾಮಿ ಶ್ರೀ ಪ್ರಸನ್ನ ಮಹಾಗಣಪತಿ ಮತ್ತು ಶ್ರೀ ಮಾತಾ ಲಲಿತಾಂಬಿಕಾ ದೇವಿ ದೇವಾಲಯದ ಕುಂಭಾಭಿಷೇಕ ಮಹೋತ್ಸವ ಮತ್ತು ಲೋಕಾರ್ಪಣಾ ಸಮಾ ರಂಭ ಸೋಮವಾರದಿಂದ ಮೂರು ದಿನಗಳ ಕಾಲ ಅದ್ಧೂರಿಯಾಗಿ ನೆರವೇರಲಿದೆ. ಮೂರು ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮ ಕುರಿತಂತೆ ಶ್ರೀ ಆದಿಚುಂಚನಗಿರಿ ವಿಜಯ ನಗರ ಶಾಖಾಮಠದ ಶ್ರೀ ಶ್ರೀ ಸೌಮ್ಯನಾಥ ಸ್ವಾಮೀಜಿ ಹಾಗೂ ಸ್ಥಳೀಯ ಶಾಸಕ ಕೆ ಗೋಪಾಲಯ್ಯ ನವರು, ಎ ಎನ್ ನಟರಾಜ್ ಗೌಡ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ಶ್ರೀ ಆದಿಚುಂಚನಗಿರಿ ವಿಜಯನಗರ ಶಾಖಾಮಠದ ಶ್ರೀ ಶ್ರೀ ಸೌಮ್ಯನಾಥ ಸ್ವಾಮೀಜಿ ಅವರು ಮಾತನಾಡಿ, ಏಪ್ರಿಲ್ 14ನೇ ಸೋಮವಾರ ವಿಜಯನಗರ ಮಠದಿಂದ ಆಂಜನೇಯ ಸ್ವಾಮಿ ವಿಗ್ರಹವನ್ನು ಮೆರವಣಿಗೆಯಲ್ಲಿ ಮಂಜುನಾಥ ನಗರದಿಂದ ಮೋದಿ ವೃತ್ತ ಶಂಕರಮಠ ವೃತ್ತಕ್ಕೆ ಆಗಮಿಸಲಿದ್ದು, ಶಂಕರಮಠ ವೃತ್ತದಿಂದ ಸುಮಾರು 500 ಮಹಿಳೆಯರು ಕಳಸ ಹೊತ್ತು ಮೆರವಣಿಗೆ ಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಮೆರವಣಿಗೆಯಲ್ಲಿ 2000 ಜನ ಭಾಗವಹಿಸಲಿದ್ದು ನಮ್ಮ ಕ್ಷೇತ್ರದ ಎಲ್ಲಾ ಮುಖಂಡರುಗಳು ಉಪಸ್ಥಿತರಿದ್ದು ಕಾರ್ಯಕ್ರಮದ ಉಸ್ತುವಾರಿ ನೋಡಿಕೊಳ್ಳುವಂತೆ ಸಲಹೆ ಮಾಡಿದರು.
ಇದನ್ನೂ ಓದಿ: Bangalore News: ಅವಧಿಗೂ ಮುನ್ನ ಜನಿಸಿದ 830 ಗ್ರಾಂ ತೂಕದ ಶಿಶುವನ್ನು ರಕ್ಷಿಸುವಲ್ಲಿ ಯಶಸ್ವಿಯಾದ ವೈದ್ಯರು!
ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಿಂದ ಅಂದು ಸುಮಾರು 60ಕ್ಕೂ ಹೆಚ್ಚು ದೇವತೆ ಗಳನ್ನು ಕರೆ ತಂದು ಅದ್ಧೂರಿ ಉತ್ಸವ ಹಾಗೂ ಮೆರವಣಿಗೆ ನಡೆಸಲಾಗುವುದು. ಹೆಚ್ಚಿನ ಭಕ್ತಾದಿ ಗಳನ್ನು ಕರೆ ತರಬೇಕು ಈ ಅದ್ಧೂರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ವಿಜಯನಗರ ಮಠದಲ್ಲಿ ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿ ಯವರು ಇದ್ದಾಗ ಆಂಜನೇಯ ದೇವಾಲಯ ಚಿಕ್ಕದಾಗಿತ್ತು ಇದು ದೊಡ್ಡದಾಗಬೇಕು ಎಂಬುದು ಅವರ ಸಂಕಲ್ಪವಾಗಿತ್ತು ಈಗ ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ.ನಿರ್ಮಾಲಾನಂದನಾಥ ಮಹಾ ಸ್ವಾಮೀಜಿಗಳು ದೊಡ್ಡ ದೇವಾಲಯವನ್ನು ನಿರ್ಮಿಸಿದ್ದಾರೆ ಅಲ್ಲಿ ಪ್ರತಿ ಸೋಮವಾರ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ, ಹಾಗೂ ಪ್ರತಿದಿನ ಪ್ರವಚನ ,ಭಗವದ್ಗೀತೆ, ಮಹಾಭಾರತ, ರಾಮಾಯಣ ಸೇರಿದಂತೆ ಹಲವಾರು ಕಾರ್ಯಕ್ರಮಗಳು ನಡೆಯುತ್ತಿವೆ, ಹಾಗೆಯೇ ಇಲ್ಲಿಯೂ ಸಹ ಸಭಾ ಮಂದಿರದಲ್ಲಿ ಪ್ರತಿ ಶನಿವಾರ ಹರಿಕಥೆ ನಡೆಯಬೇಕು ಎಂಬುದು ಸ್ವಾಮೀಜಿಯವರ ಆಶಯ ವಾಗಿತ್ತು ಎಂದು ಮಾಹಿತಿ ನೀಡಿದರು.
ಸೋಮವಾರ ಗುರುಪ್ರಾರ್ಥನೆ, ಗ್ರಾಮ ದೇವತಾ ಪ್ರಾರ್ಥನೆ, ಮಹಾ ಗಣಪತಿ ಅನ್ನೋದಕ ಸಂಗ್ರಹ, ಯಾಗಶಾಲಾ ಪ್ರವೇಶ, 2007 (ಪುಣ್ಯಾಹ), ಮಹಾ ಸಂಕಲ, ಆಚಾರ್ಯಾದಿ ಋತ್ವಿಕ್ ವರಣ, ದೇವಾ ತಾವಾಂದಿ, ಪಂಚಗವ್ಯ ಪೂಜೆ ಹಾಗೂ ಮೇಳನ, ಅಲಯ ಮತ್ತು ಗಣಪತಿಯಾಗ, ಸೂರ್ಯ ನಮಸ್ಕಾರ, ಆರೋಣ ಹೋಮ, ಪೂಕರ್ಕಾಹುತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ.
ಸಂಜೆ : ವೇದ ಪಾರಾಯಣ, ಮಂಟಪ ಪ್ರತಿಷ್ಠೆ, ವಿಶ್ವಕ್ಷೇನಾರಾಧನೆ, ಮೃತ್ಸಂಗ್ರಹಣ, ಅಂಕುರಾ ರ್ಪಣ, ಸೋಮಕುಂಭಾರಾಧನ ವಾಸ್ತುಹೋಮ, ರಕ್ತತ್ಮಹೋಮ, ಪಂಚಾಸ್ತಹೋಮ, ದಿಕ್ಷಾಲಕ ಹೋಮ, ಪ್ರವೇಶ ಬಲಿ, ಪರ್ಯಗ್ನಿಕರಣ ಜರಗಲಿದೆ.
ಎರಡನೇ ದಿನವಾದ ಮಂಗಳವಾರ ಬೆಳಗ್ಗೆ ವೇದ ಪಾರಾಯಣ, ಸುಪ್ರಭಾತ ಸೇವೆ, ದ್ವಾರತೋರಣ ಪೂಜೆ, ಭೂಪ್ರಾರ್ಥನ ಪುರಸ್ಪರ ಕಲಶಸ್ಥಾಪನೆ, ಬಾಹ್ಯಾದಿ ವಿಧಿಪೂಜೆ, ರುದ್ಧ ಪಾರಾಯಣ, ಸರ್ವ ತೋಧದ್ರ ಮಂಡಲಾರ್ಚನೆ, ಶ್ರೀ ಚಕ್ರನವಾವರಣ ಪೂಜೆ, ಪವಮಾನ ಪಾರಾಯಣ, ಸುದರ್ಶನ ಮಂಡಲಾರ್ಚನೆ, ಸುದರ್ಶನಷ್ಟಕ ಪರನ, ಅದಿತ್ಯಾದಿ ನವಗ್ರಹ ಹೋಮ, ಮೃತ್ಯುಂಜಯ ಹೋಮ, ನಕ್ಷತ್ರ ಹೋಮ, ಸುದರ್ಶನಹೋಮ, ಅಷ್ಟದ್ರವ್ಯ ಸಹಿತ ಸಹಸ್ರ ಮೋದಕ ಮಹಾಗಣಪತಿ ಯಾಗ, ರುದ್ದ ಹೋಮ, ಚತುವಿಂಶತ್ನಕರ ರಾಮಮಂತ್ರ ಹೋಮ, ಶ್ರೀ ಮಾತಾಲಲಿತಾ ಸಹಸ್ರನಾಮ ಹೋಮ, ಪವಮಾನ ಹೋದು, ವಿಗ್ರಹಗಳಿಗೆ ಜಲಾಧಿವಾಸ, ಶ್ರೀರಾಂವಾಸ, ಧಾನ್ಯಾಧಿವಾಸ, ಪೂರ್ಣಾಹುತಿ, ಮಹಾಮಂಗಳಾರತಿ, ಶಾತ್ತುಮೊರೈಸೇವೆ, ತೀರ್ಥಪ್ರಸಾದ ವಿನಿಯೋಗ ಕಾರ್ಯ ಕ್ರಮ ನಡೆಯಲಿದೆ.
ಬೆಳಿಗ್ಗೆ 10.30ಗಂಟೆಗೆ ಧಾರ್ಮಿಕ ಸಭೆ-1 ಶ್ರೀ ಮಾತಾ ಲಲಿತ ಸಹಸ್ರನಾಮ ಪಾರಾಯಣ ಮತ್ತು ಸತ್ಸಂಗ- ಪ್ರವಚನವನ್ನು ನೇರವೇರಿಸಲಾಗುವುದು.
ಸಂಜೆ : ವೇದ ಪಾರಾಯಣ, ವೇದಿಕಾರ್ಚನೆ, ದುರ್ಗಾಸಪ್ತಪತಿ ಚಂಡಿಕಾಪಾರಾಯಣ, ದುರ್ಗಾ ಹೋಮ, ಶ್ರೀಸುಬ್ರಹ್ಮಣ್ಯ ಹೋಮ, ತ್ವರಿತ ರುಧಮಂತ್ರ ಹೋಮ, ಶ್ರೀ ಆಂಜನೇಯ ಸಹಸ್ರನಾಮ ಹೋಮ, ಶ್ರೀ ಮಾತಾಲಲಿತ ತ್ರಿಶತಿಹೋಮ, ಶ್ರೀ ಲಲಿತಾ ಖಡ್ಗಮಾಲ ಹೋಮ, ಪೂರ್ಣಾಹುತಿ, ಬಿಂಬಗಳಿಗೆ ವಸ್ತಾಧಿವಾಸ, ಚಿತ್ರಪಟಾಧಿವಾಸ, ಪುಷ್ಪಾಧಿವಾಸ, ಫಲಾಧಿವಾಸ, ತತ್ತ್ವ ನ್ಯಾಸ, ಪುರಸ್ಪರ ನಿದ್ರಾಕಲಶ ಸ್ಥಾಪನೆ. ಅಷ್ಟಾವಧಾನ ಸೇವೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ,
ಧಾರ್ಮಿಕ ಸಭೆ-2 ಶ್ರೀ ಹನುಮಾನ್ ಚಾಲೀಸ ಪಠಣ ಮತ್ತು ಶ್ರೀ ಹನಮದ್ವಿಲಾಸ ಸುಂದರಕಾಂಡ ಪ್ರವಚನ, ನಂತರ ರಾತ್ರಿ: ಪಿಂಡಿಕಾ ಸ್ಥಾಪನೆ, ಯಂತ್ರನ್ಯಾಸ, ರತ್ನನ್ಯಾಸ, ಅಷ್ಟಬಂಧನ ಸಮರ್ಪಣೆ ಅದ್ದೂರಿಯಾಗಿ ಜರುಗಲಿದೆ.
16ನೇ ತಾರೀಕು ಪ್ರತಿಷ್ಠಾಪನೆಯ ನಂತರ ಪ್ರತಿ ದಿನ 48 ದಿನಗಳ ಕಾಲ ಮಂಡಲ ಪೂಜೆ ಇರುತ್ತದೆ ಹಾಗೆಯೇ ಹರಿಕಥೆ ನಡೆಸುವುದಾಗಿ ಮಹಾಸ್ವಾಮಿಜಿಗಳು ತಿಳಿಸಿದ್ದಾರೆ ನಾವೆಲ್ಲ ಸಂಸ್ಕಾರಕ್ಕೆ ನಮ್ಮ ದೇಶದ ಸಂಸ್ಕೃತಿಗೆ ಧರ್ಮಕ್ಕೆ ಧಾರ್ಮಿಕತೆಗೆ ಹೆಚ್ಚು ಆದ್ಯತೆ ನೀಡುವಂತದ್ದು . ಮನುಷ್ಯ ಎಷ್ಟೇ ದೊಡ್ಡಮಟ್ಟದಲ್ಲಿದ್ದರೂ ಸರಳವಾದ ಬದುಕು ಜೀವನ ನಡೆಸಬೇಕಾದರೆ ದೇವರುಗಳನ್ನು ಪೂಜಿಸ ಬೇಕು ಹಾಗೆ ನಮ್ಮ ಸಂಸ್ಕೃತಿ ಸಂಸ್ಕಾರಕ್ಕೆ ಬೆಲೆ ಕೊಡಬೇಕು ಎಂದರು, ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಿ ಎಂದು ಕರೆ ನೀಡಿದರು.
16ನೇ ತಾರೀಕು ಪ್ರತಿಷ್ಠಾಪನೆಯ ನಂತರ 48 ದಿನಗಳ ಕಾಲ ಮಂಡಲ ಪೂಜೆ ನಡೆಯಲಿದೆ ಪ್ರತಿದಿನ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಎಲ್ಲರೂ ಮೂರ್ನಾಲ್ಕು ದಿನಗಳ ಕಾಲ ಎಲ್ಲಾ ತಮ್ಮ ತಮ್ಮ ಕೆಲಸ ಕಾರ್ಯಗಳನ್ನು ಗಳನ್ನು ಬದಿಗೊತ್ತಿ ಅಂದು ದೇವರ ಕೃಪೆಗೆ ಪಾತ್ರರಾಗಿ ಎಂದು ಕರೆ ನೀಡಿದರು ಮೆರವಣಿಗೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ವರ್ತಿಸಬೇಕು.