Drowned: ಕೆರೆಗೆ ಕೈಕಾಲು ತೊಳೆಯಲು ಹೋದ ಇಬ್ಬರು ಬಾಲಕರು ನೀರುಪಾಲು
ಈ ಇಬ್ಬರು ಗ್ರಾಮದ ಕಾರ್ಯಕ್ರಮವೊಂದಕ್ಕೆ ತೆರಳಿ, ಬಹಿರ್ದೆಸೆ ಮುಗಿಸಿ, ಕೆರೆಗೆ ಕೈಕಾಲು ತೊಳೆಯಲು ದೊಡ್ಡಕೆರೆಗೆ ಹೋಗಿದ್ದರು. ಈ ವೇಳೆಯಲ್ಲಿ ಕಾಲುಜಾರಿ ಕೆರೆಗೆ ಬಿದ್ದ ಒಬ್ಬನನ್ನು ರಕ್ಷಣೆ ಮಾಡಲು ಹೋಗಿ, ಇಬ್ಬರೂ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಂದರ್ಭಿಕ ಚಿತ್ರ

ಹಾವೇರಿ: ಬಹಿರ್ದೆಸೆ ಮುಗಿಸಿದ ಬಳಿಕ ಕೆರೆಗೆ (Lake) ತೆರಳಿ ಕೈಕಾಲು ತೊಳೆಯುತ್ತಿದ್ದ ವೇಳೆ ಕಾಲು ಜಾರಿ ಬಿದ್ದು (drowned) ಬಾಲಕರಿಬ್ಬರು ದಾರುಣವಾಗಿ ಸಾವನ್ನಪ್ಪಿರುವ (two boys death) ಘಟನೆ ಹಾವೇರಿಯಲ್ಲಿ (Haveri news) ನಡೆದಿದೆ. ಹಾವೇರಿಯ ಹಾನಗಲ್ ತಾಲೂಕಿನ ಕೊಪ್ಪರಸಿಕೊಪ್ಪ ಗ್ರಾಮದಲ್ಲಿ ಜಗದೀಶ್ ನಾಗೋಜಿ ಎಂಬುವರ ಪುತ್ರ ನಿಖಿಲ್ ನಾಗೋಜಿ(11) ಮತ್ತು ಪ್ರಕಾಶ್ ಚೋಳಪ್ಪನವರ್ ಎಂಬುವರ ಪುತ್ರ ಧನುಷ್ ಚೋಳಪ್ಪನವರ್ (13) ಎಂಬವರೇ ಮೃತ ಬಾಲಕರಾಗಿದ್ದಾರೆ.
ಈ ಇಬ್ಬರು ಗ್ರಾಮದ ಕಾರ್ಯಕ್ರಮವೊಂದಕ್ಕೆ ತೆರಳಿ, ಬಹಿರ್ದೆಸೆ ಮುಗಿಸಿ, ಕೆರೆಗೆ ಕೈಕಾಲು ತೊಳೆಯಲು ದೊಡ್ಡಕೆರೆಗೆ ಹೋಗಿದ್ದರು. ಈ ವೇಳೆಯಲ್ಲಿ ಕಾಲುಜಾರಿ ಕೆರೆಗೆ ಬಿದ್ದ ಒಬ್ಬನನ್ನು ರಕ್ಷಣೆ ಮಾಡಲು ಹೋಗಿ, ಇಬ್ಬರೂ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟಿದ್ದವರ ಮೇಲೆ ಹರಿದ ಬಸ್, ಇಬ್ಬರು ಬಲಿ
ಹಾಸನ: ಪಾದಯಾತ್ರೆ ಮೂಲಕ ಧರ್ಮಸ್ಥಳಕ್ಕೆ (Dharmasthala) ಹೋಗುತ್ತಿದ್ದವರ ಮೇಲೆ ಖಾಸಗಿ ಬಸ್ ಹರಿದ (Road Accident) ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹಾಸನ (Hassan news) ತಾಲೂಕಿನ ಕೆಂಚಟ್ಟಹಳ್ಳಿ ಬಳಿ ನಡೆದಿದೆ. ಮಂಡ್ಯ (Mandya news) ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಆನಗೋಳು ಗ್ರಾಮದ ಸುರೇಶ್ (60), ಕುಮಾರ್ (55) ಮೃತ ದುರ್ದೈವಿಗಳು.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ದಿನೇಶ್ ಎಂಬುವರನ್ನು ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮೂವರು ಪಾದಯಾತ್ರೆ ಮೂಲಕ ಧರ್ಮಸ್ಥಳಕ್ಕೆ ಹೋಗುತ್ತಿದ್ದರು. ದಾರಿ ಮಧ್ಯೆ ಖಾಸಗಿ ಬಸ್ ಪಾದಯಾತ್ರಿಗಳ ಮೇಲೆ ಹರಿದಿದೆ. ಶಾಂತಿಗ್ರಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಆತಂಕಗೊಂಡ ಬಸ್ ಚಾಲಕ ಬಸ್ಸನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಇದೀಗ ಬೆಂಗಳೂರು, ಮೈಸೂರು, ಮಂಡ್ಯ ಮುಂತಾದ ಕಡೆಗಳಿಂದ ಧರ್ಮಸ್ಥಳದತ್ತ ಪಾದಯಾತ್ರಿಗಳು ತೆರಳುವ ಸಮಯವಾಗಿದೆ. ಈ ಮಾರ್ಗದಲ್ಲಿ ಎಚ್ಚರದಿಂದ ನಡೆಯುವಂತೆ ಹಾಗೂ ವಾಹನ ಚಲಾಯಿಸುವಂತೆ ಪೊಲೀಸರು ಎಚ್ಚರಿಸಿದ್ದಾರೆ.
ಇದನ್ನೂ ಓದಿ: Road Accident: ಜೆಡಿಎಸ್ ಮುಖಂಡನ ಕಾರು ಅಪಘಾತ, ಮಹಿಳೆ ಸಾವು, ಇಬ್ಬರಿಗೆ ಗಾಯ