ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕೇಂದ್ರದ ನೈಯಾ ಪೈಸೆ ಯೋಜನೆಯಲ್ಲಿ ಇಲ್ಲ: ಶಾಸಕ ಯಶವಂತರಾಯಗೌಡ ಪಾಟೀಲ

ಕೇಂದ್ರದ ನೈಯಾ ಪೈಸೆ ಇಲ್ಲ. ಇದಕ್ಕೆ ದಾಖಲಾತಿ ಮಾತನಾಡುತ್ತವೆ, ಆಧಾರ ರಹಿತ ಆರೋಪಗಳು ಸರಿಯಾದ ಕ್ರಮವಲ್ಲ. ಕಾಲ ಕಾಲಂತರಗಳಿಂದ ಹಿಂದಿನ ಜನಪ್ರತಿನಿಧಿಗಳು ಅನುದಾನದ ಲಭ್ಯತೆ ಮೇಲೆ ಮಾಡಿದ್ದಾರೆ ಯಾರನ್ನೂ ಕೂಡಾ ಅಲ್ಲಗಳೆಯಬಾರದು. ಇಂದು ಈ ಕ್ಷೇತ್ರಕ್ಕೆ ಸಹಾಯ ಮಾಡಿದ ಮುಖ್ಯ ಮಂತ್ರಿಗಳನ್ನು, ಉಪಮುಖ್ಯಮಂತ್ರಿಗಳನ್ನು, ಸಚಿವರನ್ನು ಅಭಿನಂದನೆ ಸಲ್ಲಿಸುವುದು ಆದ್ಯ ಕರ್ತವ್ಯ

ಕೇಂದ್ರದ ನೈಯಾ ಪೈಸೆ ಯೋಜನೆಯಲ್ಲಿ ಇಲ್ಲ

ಶಾಸಕ ಯಶವಂತರಾಯಗೌಡ ಪಾಟೀಲ

Profile Ashok Nayak Jul 12, 2025 10:35 PM

ಇಂಡಿ: ಚಡಚಣ, ಇಂಡಿ ಭಾಗದ ರೈತರ ಬಾಳಿನ ಭಾಗ್ಯದ ಬೆಳಕು ತೆರೆದಿದೆ. 1 ಲಕ್ಷ 6ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಒದಗಿಸುವ ಕಾರ್ಯ ಜು.೧೪ರಂದು ನಾಡ ದೊರೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಉಪಮುಖ್ಯ ಮಂತ್ರಿ ಡಿ.ಕೆ ಶಿವಕುಮಾರ ಲೋಾರ್ಪಣೆ ಮಾಡಲಿದ್ದಾರೆ. ಮಾತು ಗಾಳಿಗೆ ಹೋಗುತ್ತವೆ ನನ್ನ ಕೆಲಸಗಳು ಚಿರಾಯು, ಸಣ್ಣ ವ್ಯಕ್ತಿಯಾಗಬಾರದು ಯಾರ ಬಗ್ಗೆ ಟೀಕೆ ಮಾಡುವುದಿಲ್ಲ ಎಂದು ಶಾಸಕ ಯಶವಂತರಾಯಗೌಡ ವ್ಹಿ ಪಾಟೀಲ ಹೇಳಿದರು.

ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಭಾನುವಾರ ಮುಖ್ಯಮಂತ್ರಿ ಗಳಿಂದ ಹಾಗೂ ಉಪಮುಖ್ಯಮಂತ್ರಿಗಳಿಂದ ಲೋಕಾರ್ಪಣೆ, ಶಂಕುಸ್ಥಾಪನೆ ಮಾಡುವ ಯೋಜನೆ ಗಳಲ್ಲಿ ನೈಯಾ ಪೈಸೆ ಕೇಂದ್ರದ ಅನುದಾನ ಇಲ್ಲ. ಬೇಕಾದರೆ ಇಂದು ಸಾಕಷ್ಟು ತಂತ್ರಜ್ಞಾನ ಮುಂದುವರೆದಿದೆ. ಅಡಳಿತ ಪಾರದರ್ಶಕ ಇದೆ ಮಾಹಿತಿ ಕೇಳಿ ಪಡೆಯಿರಿ. ತಪ್ಪು ನನ್ನ ಜೀವಮಾನದಲ್ಲಿ ಮಾಡುವುದಿಲ್ಲ. ವಿರೋಧ ಪಕ್ಷದವರು ಕೂಡಾ ಜನಪರ ಅಭಿವೃದ್ದಿ ಕೆಲಸ ಮಾಡಿದವರಿಗೆ ಹಾಡಿ ಹೊಗಳುತ್ತೇನೆ. ರಾಜಕೀಯ ಕೇವಲ ೧ ತಿಂಗಳು ಮಾತ್ರ ಜನರ ಸೇವೆ ಮಾಡಬೇಕು. ನೀರಾವರಿಯಿಂದ ಇಂಡಿ ಭಾಗದ ೭೯ ಹಳ್ಳಿಗಳಿಗೆ ಚಡಚಣ ೪೦ ಹಳ್ಳಿಗಳಿಗೆ ಕೃಷಿ ಕುಡಿಯುವ ನೀರಿನ ತೊಂದರೆ ಕಡಿಮೆಯಾಗುತ್ತದೆ. ಮುಳವಾಡ ಏತನೀರಾವರಿ ೩ನೇ ಹಮತ ತಿಡಗುಂದಿ ಮುಂದುವರೆದ ಕಿ.ಮೀ ೫೬ರಿಂದ ೬೬ ವರೆಗೆ ೧೦ ಕಿ.ಮೀ ಕಾಲುವೆ ಮಾಡಿ ೧೪ ಸಾವಿರ ಹೆಕ್ಟರ್ ಪ್ರದೇಶಕ್ಕೆ ನೀರು ಒದಗಿಸುತ್ತಿದೆ.

ಇದನ್ನೂ ಓದಿ: Indi (Vijayapura) News: 19 ಕೆರೆಗಳು ತುಂಬಿರುವುದರಿಂದ ರೈತರ ಮುಖದಲ್ಲಿ ಮಂದಹಾಸ: ಶಾಸಕ ಯಶವಂತರಾಯಗೌಡ ಪಾಟೀಲ

೧೯ ಗ್ರಾಮದ ರೈತರಿಗೆ ನೀರಿನ ಲಭ್ಯತೆ ಆಗುತ್ತದೆ. ೧.೬೮ ಟಿ.ಎಂನೀರು ಬಳಸಿಕೊಳ್ಳಲಾಗುತ್ತದೆ. ಬಸನಾಳ ಗ್ರಾಮದ ೫೪೪ ಹೆಕ್ಟರ್, ಕೋಟ್ನಾಳ ಗ್ರಾಮದ ೮೧೫ ಹೆಕ್ಟರ್ , ನಿಂಬಾಳ ೯೩೫ ಹೆಕ್ಟರ್, ಹಂಜಗಿ ೨೧೫೬ ಕ್ಕೆ ಒಟ್ಟು ೩೬೭೬೦ ಎಕರೆ ಪ್ರದೇಶಕ್ಕೆ ನೀರಾವರಿ ಒದಗಿಸಲಿದೆ. ಇದಕ್ಕೆ ಕೇವಲ ರಾಜ್ಯ ಸರಕಾರವಿದ್ದಾಗ ಮತ್ತು ರಾಜ್ಯ ಸರಕಾರದ ಹಣ ಮಾತ್ರ ಒದಗಿಸಿದೆ. ಕೇಂದ್ರ ನೈಯಾ ಪೈಸೆ ಇಲ್ಲ. ಇದಕ್ಕೆ ದಾಖಲಾತಿ ಮಾತನಾಡುತ್ತವೆ, ಆಧಾರ ರಹಿತ ಆರೋಪಗಳು ಸರಿಯಾದ ಕ್ರಮವಲ್ಲ. ಕಾಲ ಕಾಲಂತರಗಳಿಂದ ಹಿಂದಿನ ಜನಪ್ರತಿನಿಧಿಗಳು ಅನುದಾನದ ಲಭ್ಯತೆ ಮೇಲೆ ಮಾಡಿದ್ದಾರೆ ಯಾರನ್ನೂ ಕೂಡಾ ಅಲ್ಲಗಳೆಯಬಾರದು. ಇಂದು ಈ ಕ್ಷೇತ್ರಕ್ಕೆ ಸಹಾಯ ಮಾಡಿದ ಮುಖ್ಯ ಮಂತ್ರಿಗಳನ್ನು, ಉಪಮುಖ್ಯಮಂತ್ರಿಗಳನ್ನು, ಸಚಿವರನ್ನು ಅಭಿನಂದನೆ ಸಲ್ಲಿಸುವುದು ಆದ್ಯ ಕರ್ತವ್ಯ ಎಂದರು.

ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ ಉಪಸ್ಥಿತರಿದ್ದರು.