ANF: ನಕ್ಸಲ್ ಮುಕ್ತ ರಾಜ್ಯ: ಎಎನ್ ಎಫ್ ಮುಂದಿನ ಜವಾಬ್ದಾರಿ ಏನು ?
ನಕ್ಸಲ್ ಚಟುವಟಿಕೆ ಯನ್ನು ನಿಗ್ರಹಿಸುವ ನಿಟ್ಟಿನಲ್ಲಿ ಮತ್ತು ನಕ್ಸಲ್ ಬಾಧಿತ ಪ್ರದೇಶದ ಜನರ ಸಮಸ್ಯೆ ಯನ್ನು ಸರಕಾ ರದ ಗಮನಕ್ಕೆ ತಂದು ಪರಿಹರಿಸಲು 2005 ಮೇ 21ರಂದು ರಾಜ್ಯ ಸರಕಾರದ ಕಾರ್ಕಳ ದಲ್ಲಿ ಕೇಂದ್ರ ಸ್ಥಾನ ಸ್ಥಾಪಿಸಿ ರಾಜ್ಯದ ವಿವಿಧೆಡೆ 13 ಎಎನ್‌ಎಫ್ ತುಕಡಿಯನ್ನು ತೆರೆಯಲಾಗಿದೆ. ಕಾರ್ಕಳದ ಸ್ವರಾಜ್ ಮೈದಾನ ಬಳಿ ಎಎನ್‌ಎಫ್ ಶಿಬಿರವಿದ್ದು, ಕಳೆದ 20 ವರ್ಷಗಳಿಂದ ಕಾರ್ಯ ನಿರ್ವಹಿಸು ತ್ತಿದೆ
ರಾಮಚಂದ್ರ ಬರೆಪ್ಪಾಡಿ ಉಡುಪಿ
ರಾಜ್ಯ ಸರಕಾರ ನಿರ್ಣಯದ ಬಗ್ಗೆ ಕುತೂಹಲ
ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದಲ್ಲಿ ನ.17ರಂದು ನಕ್ಸಲ್ ನಾಯಕ ವಿಕ್ರಂ ಗೌಡ ಎನ್ಕೌಂಟರ್ ಬಳಿಕ ನಡೆದ ಬೆಳವಣಿಗೆಯಲ್ಲಿ ಸರಕಾರದ ಕರೆಗೆ ನಕ್ಸಲರು ಶರಣಾಗತಿಯಾಗುವ ಮೂಲಕ ಕರ್ನಾ ಟಕ ರಾಜ್ಯ ನಕ್ಸಲ್‌ಮುಕ್ತವೆಂಬಂತೆ ಆಗಿದೆ. ನಕ್ಸಲ್ ಮುಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ನಕ್ಸಲ್ ನಿಗ್ರಹಕ್ಕಾಗಿಯೇ ಅಸ್ತಿತ್ವಕ್ಕೆ ಬಂದಿರುವ ಎಎನ್‌ಎಫ್ (ನಕ್ಸಲ್ ನಿಗ್ರಹ ಪಡೆ)ಯ ಮುಂದಿನ ಕಾರ್ಯ ವೇನು ಎಂಬ ಬಗ್ಗೆ ಜಿಜ್ಞಾಸೆ ಮೂಡಿದೆ. ಕಾರ್ಕಳದಲ್ಲಿ ಕೇಂದ್ರ ಸ್ಥಾನ: ನಕ್ಸಲ್ ಚಟುವಟಿಕೆ ಯನ್ನು ನಿಗ್ರಹಿಸುವ ನಿಟ್ಟಿನಲ್ಲಿ ಮತ್ತು ನಕ್ಸಲ್ ಬಾಧಿತ ಪ್ರದೇಶದ ಜನರ ಸಮಸ್ಯೆಯನ್ನು ಸರಕಾ ರದ ಗಮನಕ್ಕೆ ತಂದು ಪರಿಹರಿಸಲು 2005 ಮೇ 21ರಂದು ರಾಜ್ಯ ಸರಕಾರದ ಕಾರ್ಕಳದಲ್ಲಿ ಕೇಂದ್ರ ಸ್ಥಾನ ಸ್ಥಾಪಿಸಿ ರಾಜ್ಯದ ವಿವಿಧೆಡೆ 13 ಎಎನ್‌ಎಫ್ ತುಕಡಿಯನ್ನು ತೆರೆಯಲಾಗಿದೆ. ಕಾರ್ಕಳದ ಸ್ವರಾಜ್ ಮೈದಾನ ಬಳಿ ಎಎನ್‌ಎಫ್ ಶಿಬಿರವಿದ್ದು, ಕಳೆದ 20 ವರ್ಷಗಳಿಂದ ಕಾರ್ಯ ನಿರ್ವಹಿಸು ತ್ತಿದೆ.
ಕುಕ್ಕುಂದೂರಿನಲ್ಲಿ ತರಬೇತಿ ಕೇಂದ್ರ: ಎಎನ್‌ಎಫ್ ಗೆ ಸಿಬ್ಬಂದಿಗೆ ತರಬೇತಿ ನೀಡುತ್ತಿರುವುದು ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದ ತರಬೇತಿ ಕೇಂದ್ರದಲ್ಲಿ. ಇಲ್ಲಿ ಜೇಸಿಓ ಅರಣ್ಯ ಶೋಧ ನಾ ಕಾರ್ಯಾಚರಣೆ ಹೆಸರಿನಲ್ಲಿ ತರಬೇತಿ ನೀಡಲಾಗುತ್ತಿದ್ದು ಬಳಿಕ ಅಲ್ಲಿಂದ ಘಟಕಗಳಿಗೆ ನಿಯೋ ಜನೆ ಮಾಡಲಾಗುತ್ತಿದೆ.
ಇದನ್ನೂ ಓದಿ: Udupi Boat Capsize: ಉಡುಪಿಯಲ್ಲಿ ಮೀನುಗಾರಿಕೆ ಬೋಟ್ ಮುಳುಗಡೆ; ಪ್ರಾಣಾಪಾಯದಿಂದ ಮೀನುಗಾರರು ಪಾರು
ಕಾರ್ಕಳ ತಾಲೂಕಿನ ಈದು, ಮಾಳ, ನೂರಾಲ್ಬೆಟ್ಟು, ಅಂಡಾರು, ಶಿರ್ಲಾಲು, ಕೆರ್ವಾಶೆ, ಹೆಬ್ರಿ ತಾಲೂಕಿನ ವರಂಗ, ಕಬ್ಬಿನಾಲೆ, ನಾಡ್ಪಾಲು ಗ್ರಾಮಗಳನ್ನು ನಕ್ಸಲ್ ಪೀಡಿತ ಗ್ರಾಮಗಳನ್ನಾಗಿ ಗುರುತಿಸಲಾಗಿದ್ದು 2016ರವರೆಗೆ ಅಲ್ಲೊಂದು ಇಲ್ಲೊಂದು ನಕ್ಸಲ್ ಚಟುವಟಿಕೆ ಕಂಡುಬಂದಿತ್ತು.
2003ರಲ್ಲಿ ನಕ್ಸಲ್ ಕೃತ್ಯಗಳ ಸರಣಿ: 2003ರಲ್ಲಿ ಮೊದಲ ಬಾರಿಗೆ ಕಾರ್ಕಳ ತಾಲೂಕಿನ ಈದು ಗ್ರಾಮದ ಬೊಲ್ಲೊಟ್ಟು ಎಂಬಲ್ಲಿ ನಕ್ಸಲ್ ಚಟುವಟಿಕೆ ಕಂಡುಬಂದಿತ್ತು. ಅಂದು ಪೊಲೀಸರು ಹಾಗೂ ನಕ್ಸಲ್ ತಂಡದೊಂದಿಗೆ ಗುಂಡಿನ ಚಕಮಕಿಯಾಗಿ, ನಕ್ಸಲರಾದ ಹಾಜಿಮಾ ಮತ್ತು ಪಾರ್ವತಿ ಹತರಾಗಿದ್ದರು. 2005ರಲ್ಲಿ ಹೆಬ್ರಿ ಠಾಣಾ ವ್ಯಾಪ್ತಿಯ ಮತ್ತಾವಿನಲ್ಲಿ ಪೊಲೀಸ್ ವಾಹನ ವನ್ನು ಗುರಿಯಾಗಿಸಿ ನೆಲಬಾಂಬ್ ಸ್ಪೋಟಿಸಲಾಗಿತ್ತು. ಘಟನೆಯಲ್ಲಿ ಹೆಬ್ರಿ ಠಾಣಾ ಪೊಲೀಸರು ಗಾಯಗೊಂಡಿದ್ದರು.
2008ರಂದು ಹೆಬ್ರಿಯ ಸೀತಾನದಿ ಎಂಬಲ್ಲಿ ನಕ್ಸಲರು ಭೋಜಶೆಟ್ಟಿ ಹಾಗೂ ಸುರೇಶ್ ಶೆಟ್ಟಿ ಎಂಬು ವರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದರು. 2010ರಂದು ಅಜೆಕಾರಿನ ಮೈರೋಡಿಯಲ್ಲಿ ನಕ್ಸಲರು ಮತ್ತು ಪೊಲೀಸರ ಮಧ್ಯೆ ನಡೆದ ಗುಂಡಿನ ಚಕಮಕಿಯಲ್ಲಿ ನಕ್ಸಲ್ ಕುತ್ಲೂರು ವಸಂತ ಮೃತಪಟ್ಟಿದ್ದಾನೆ. 2011ರಲ್ಲಿ ಹೆಬ್ರಿ ಬಳಿಯ ತಿಂಗಳಮಕ್ಕಿಯಲ್ಲಿ ನಕ್ಸಲರು ಸದಾಶಿವ ಎಂಬವ ರನ್ನು ಪೊಲೀಸ್ ಮಾಹಿತಿದಾರ ಎಂದು ಭಾವಿಸಿ ಹತ್ಯೆಗೈದಿದ್ದಾರೆ.
ಕಳೆದ ವರ್ಷ ವಿಕ್ರಮ್ ಗೌಡ ಬಲಿ: 2024ರ ನವೆಂಬರ್ ನಲ್ಲಿ ನಕ್ಸಲ್ ಚಟುವಟಿಕೆ ಮತ್ತೆ ಗರಿಗೆದ ರಿತ್ತು. ಹೆಬ್ರಿ ತಾಲೂಕು ಕೂಡ್ಲೂವಿನ ವಿಕ್ರಂ ಗೌಡ ತನ್ನ ತಂಡದೊಂದಿಗೆ ಪೀತಬೈಲಿನ ಮನೆ ಯೊಂದಕ್ಕೆ ಸೂರ್ಯಾಸ್ತ ಸಮಯದಲ್ಲಿ ಆಗಮಿಸಿದ್ದರು. ಈ ಕುರಿತು ಮಾಹಿತಿ ಪಡೆದಿದ್ದ ಎಎನ್ ಎಫ್ ತಂಡ ನಕ್ಸಲ್ ಆಗಮನಕ್ಕಾಗಿ ಹೊಂಚು ಹಾಕಿತ್ತು. ನಕ್ಸಲರು ಹಾಗೂ ಎಎನ್‌ಎಫ್ ತಂಡ ಮುಖಾಮುಖಿಯಾಗಿದ್ದ ವೇಳೆ ಶರಣಾಗುವಂತೆ ಪೊಲೀಸರು ಸೂಚಿಸಿದಾಗನಡೆದ ಗುಂಡಿನ ಚಕಮಕಿಯಲ್ಲಿ ವಿಕ್ರಂ ಗೌಡ ಹತನಾಗಿ, ಜೊತೆಯಲ್ಲಿದ್ದವರು ಕಾಡಿನತ್ತ ಪರಾರಿಯಾಗಿದ್ದರು.
ಶೋಧನಾ ಕಾರ್ಯಾಚರಣೆ ಸ್ಥಗಿತ
ರಾಜ್ಯದ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಎಎನ್ಎಫ್ ಘಟಕಗಳಿದ್ದು ಶೋಧನಾ ಕಾರ್ಯಾಚರಣೆ ಅವರ ದಿನಚರಿಯಾಗಿದೆ. ರಾಜ್ಯದ ವಿವಿಧೆಡೆ ಒಟ್ಟು 400 ಮಂದಿ ಎಎನ್‌ಎಫ್ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಡಿಕೇರಿಯ ಭಾಗಮಂಡಲ್, ಕುಟ್ಟ, ವಿರಾಜಪೇಟೆ, ಮೈಸೂರಿನ ಬರ್ಗಿ, ಚಿಕ್ಕಮಗಳೂರಿನ ಕಿಗ್ಗ, ದೇವಾಲಯ, ಕೊಪ್ಪ, ಕೆರೆಕಟ್ಟೆ, ಶಿವಮೊಗ್ಗದ ಆಗುಂಬೆ, ಉಡುಪಿ ಜಿಲ್ಲೆಯ ಕಾರ್ಕಳ, ಹೆಬ್ರಿ ಮತ್ತು ಜಡ್ಡಿನಗದ್ದೆಯಲ್ಲಿ ಕ್ಯಾಂಪ್ ಇದೆ.
ಕೇಂದ್ರ ಸ್ಥಾನವಾಗಿರುವ ಕಾರ್ಕಳದಲ್ಲಿ ಪ್ರಸ್ತುತ ಎಸ್‌ಪಿ, ಡಿವೈಎಸ್‌ಪಿ, ಮೂವರು ಇನ್ಸ್‌ಪೆಕ್ಟರ್, ನಾಲ್ವರು ಎಸ್‌ಐ ಸೇರಿದಂತೆ 80 ಮಂದಿ ಸಿಬ್ಬಂದಿ ಇದ್ದಾರೆ.ಸರಕಾರದ ವಿಶೇಷ ಪ್ಯಾಕೇಜ್‌ಗೆ ಪ್ರಭಾವಿ ತರಾದ ನಕ್ಸಲರು ಶರಣಾಗುವುದರೊಂದಿಗೆ ರಾಜ್ಯ ನಕ್ಸಲ್ ಚಟುವಟಿಕೆಯಿಂದ ಮುಕ್ತವಾದಂತೆ ಭಾಸವಾಗಿದ್ದು, ನಕ್ಸಲ್ ವಿರೋಧಿ ಕಾರ್ಯಾಚರಣೆ ಪ್ರಸ್ತುತ ಸ್ಥಗಿತಗೊಂಡಿದೆ.
ಪ್ರಸ್ತುತ ಎಎನ್‌ಎಫ್ ಸಿಬ್ಬಂದಿಗೆ ಸರಕಾರ ಯಾವ ಜವಾಬ್ದಾರಿ ನೀಡಲಿದೆ ಎನ್ನುವುದೇ ಕುತೂಹಲ. ಏಕೆಂದರೆ ನಕ್ಸಲ್ ಸಿಬ್ಬಂದಿಯನ್ನು ಅನ್ಯ ಕಾರ್ಯಕ್ಕೆ ಬಳಕೆ ಮಾಡಬಾರದು ಎಂಬ ನಿಯಮವಿದೆ. ಹಾಗಾಗಿ ರಾಜ್ಯ ಸರಕಾರದ ನಿಲುವು ಏನು ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.