ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Self Harming: "ದಯವಿಟ್ಟು ಪುರುಷರ ಬಗ್ಗೆ ಯೋಚಿಸಿ" ; ಪತ್ನಿ ಕಿರುಕುಳದ ಬಗ್ಗೆ ವಿಡಿಯೋ ಮಾಡಿಟ್ಟು TCS ಉದ್ಯೋಗಿ ಆತ್ಮಹತ್ಯೆ

ಉತ್ತರ ಪ್ರದೇಶದ ಆಗ್ರಾದ ಟೆಕ್ಕಿಯೊಬ್ಬರು ಈ ವಾರದ ಆರಂಭದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿ ಕಿರುಕುಳ ಹಾಗೂ ಅಕ್ರಮ ಸಂಬಂಧಕ್ಕೆ ಬೇಸತ್ತ ಪತಿ ಸಾವಿಗೆ ಶರಣಾಗಿದ್ದಾನೆ. ಸಾವಿಗೂ ಮುನ್ನ ಆತ ಒಂದು ವಿಡಿಯೋ ಮಾಡಿ ಮನವಿ ಮಾಡಿದ್ದು, ಪುರುಷರಿಗೆ ನ್ಯಾಯ ಕೊಡಿಸಿ ಎಂದು ಅವರು ಕೇಳಿಕೊಂಡಿದ್ದಾರೆ.

ಪತ್ನಿ ಕಿರುಕುಳದ ಬಗ್ಗೆ ವಿಡಿಯೋ ಮಾಡಿಟ್ಟು ಮತ್ತೊಬ್ಬ ಟೆಕ್ಕಿ ಆತ್ಮಹತ್ಯೆ

ಮೃತ ಮಾನವ್‌ ಶರ್ಮಾ ಹಾಗೂ ಪತ್ನಿ ನಿಕಿತಾ

Profile Vishakha Bhat Feb 28, 2025 5:00 PM

ಲಖನೌ: ಅತುಲ್‌ ಸುಭಾಷ್‌ ಪ್ರಕರಣ ಮಾಸುವ ಮುನ್ನವೇ ಅಂತಹುದೇ ಮತ್ತೊಂದು ಘಟನೆ ನಡೆದಿದೆ. ಉತ್ತರ ಪ್ರದೇಶದ ಆಗ್ರಾದ ಟೆಕ್ಕಿಯೊಬ್ಬರು ಈ ವಾರದ ಆರಂಭದಲ್ಲಿ ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾರೆ. ಪತ್ನಿ ಕಿರುಕುಳ ಹಾಗೂ ಅಕ್ರಮ ಸಂಬಂಧಕ್ಕೆ ಬೇಸತ್ತ ಪತಿ ಸಾವಿಗೆ ಶರಣಾಗಿದ್ದಾನೆ. ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ನಲ್ಲಿ ಉದ್ಯೋಗಿಯಾಗಿದ್ದ ಮಾನವ್ ಶರ್ಮಾ ಫೆಬ್ರವರಿ 24 ರಂದು ತಮ್ಮ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾವಿಗೂ ಮುನ್ನ ಆತ ಒಂದು ವಿಡಿಯೋ ಮಾಡಿ ಮನವಿ ಮಾಡಿದ್ದು, ಪುರುಷರಿಗೆ ನ್ಯಾಯ ಕೊಡಿಸಿ ಎಂದು ಅವರು ಕೇಳಿಕೊಂಡಿದ್ದಾರೆ.

ಕುತ್ತಿಗೆಗೆ ಕುಣಿಕೆ ಬಿಗಿದುಕೊಂಡು, ರ್ಮಾ ಸುಮಾರು ಏಳು ನಿಮಿಷಗಳ ಕಾಲದ ಒಂದು ವಿಡಿಯೋವನ್ನು ಮಾಡಿದ್ದಾರೆ. ಅದರಲ್ಲಿ ಅವರು ತಮ್ಮ ಪತ್ನಿ ಇನ್ನೊಬ್ಬ ಪುರುಷನೊಂದಿಗೆ ಪ್ರೇಮ ಸಂಬಂಧ ಹೊಂದಿದ್ದಾಳೆಂದು ಆರೋಪಿಸಿದ್ದಾರೆ. ಕಾನೂನು ಪುರುಷರನ್ನು ರಕ್ಷಿಸಬೇಕು, ಇಲ್ಲದಿದ್ದರೆ ದೂಷಿಸಲು ಪುರುಷರೇ ಇಲ್ಲದ ಸಮಯ ಬರುತ್ತದೆ. ನನ್ನ ಹೆಂಡತಿ ಇನ್ನೊಬ್ಬ ಪುರುಷನೊಂದಿಗೆ ಸಂಬಂಧ ಹೊಂದಿದ್ದಳು. ನಾನು ಏನು ಮಾಡಲು ಸಾಧ್ಯ? ನನಗೆ ಸಾಯುವುದರಲ್ಲಿ ಯಾವುದೇ ಸಮಸ್ಯೆ ಇಲ್ಲ. ನಾನು ಹೋಗಬೇಕು. ದಯವಿಟ್ಟು ಪುರುಷರ ಬಗ್ಗೆ ಯೋಚಿಸಿ. ದಯವಿಟ್ಟು ಯಾರಾದರೂ ಪುರುಷರ ಬಗ್ಗೆ ಮಾತನಾಡಬೇಕು. ಅವರು ತುಂಬಾ ಒಂಟಿಯಾಗುತ್ತಾರೆ. ನಾನು ಹೋದ ನಂತರ ಎಲ್ಲವೂ ಸರಿಯಾಗುತ್ತದೆ. ನಾನು ಈ ಹಿಂದೆಯೂ ಆತ್ಮಹತ್ಯೆಗೆ ಪ್ರಯತ್ನಿಸಿದ್ದೇನೆ ಎಂದು ಅವರು ಹೇಳಿದ್ದಾರೆ.

ಕ್ಲಿಪ್ ಬಿಡುಗಡೆಯಾದ ಸ್ವಲ್ಪ ಸಮಯದ ನಂತರ, ಶರ್ಮಾ ಪತ್ನಿ ನಿಕಿತಾ ತನ್ನ ಮೇಲಿನ ಆರೋಪವನ್ನು ನಿರಾಕರಿಸಿದ್ದು, ತಮ್ಮ ಪತಿ ತನ್ನನ್ನು ಹೊಡೆದಿದ್ದಾರೆಂದು ಆರೋಪಿಸಿದ್ದಾಳೆ. ಅವರು ಆತ್ಮಹತ್ಯೆ ಮಾಡಿಕೊಂಡ ದಿನ, ನನ್ನನ್ನು ನನ್ನ ತಾಯಿ ಮನೆಗೆ ಮನೆಗೆ ಬಿಟ್ಟಿದ್ದರು. ಅವರು ನನ್ನ ಬಗ್ಗೆ ಹೇಳಿದ್ದು, ಮದುವೆಗೂ ಮುನ್ನ ನಡೆದಿದ್ದನ್ನು ಅವರು ಹೇಳಿದ್ದಾರೆ. ಮದುವೆಯಾದ ನಾನು ಸರಿಯಾಗಿಯೇ ಇದ್ದೇನೆ. ಅವರು ಈ ಹಿಂದೆ ಹಲವು ಬಾರಿ ತನಗೆ ತಾನೇ ಹಾನಿ ಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ. ನಾನು ಅವರನ್ನು ಕನಿಷ್ಠ ಮೂರು ಬಾರಿ ತಡೆದಿದ್ದೇನೆ. ಅವರು ಕುಡಿದು ನನ್ನನ್ನು ಹೊಡೆಯುತ್ತಿದ್ದರು ಎಂದು ಆಕೆ ಆರೋಪಿಸಿದ್ದಾಳೆ.

ನಾನು ಅವರ ಹೆತ್ತವರಿಗೆ ಎಲ್ಲವನ್ನೂ ಹೇಳಿದ್ದೆ, ಆದರೆ ಅವರು ಗಂಡ ಹೆಂಡತಿಯ ನಡುವಿನ ಸಮಸ್ಯೆ ಎಂದು ಹೇಳಿದರು. ಅವರು ಎರಡು ದಿನಗಳ ಕಾಲ ಬಂದು ಹೊರಟುಹೋದರು. ನಾನು ಅವನ ಸಹೋದರಿಗೂ ಕರೆ ಮಾಡಿ ಅವನು ಆತ್ಮಹತ್ಯೆಗೆ ಯತ್ನಿಸುತ್ತಿದ್ದಾನೆ ಎಂದು ತಿಳಿಸಿದ್ದೆ. ಇದಕ್ಕೆ ಅವಳು ನನ್ನನ್ನು ಮಲಗಲು ಹೇಳಿದಳು ಮತ್ತು ಅವನು ಏನನ್ನೂ ಮಾಡುವುದಿಲ್ಲ ಎಂದು ಹೇಳಿದ್ದಳು.

ಈ ಸುದ್ದಿಯನ್ನೂ ಓದಿ: Kerala Horror: ವರದಕ್ಷಿಣೆ ಕಿರುಕುಳ-ವೈವಾಹಿಕ ದೌರ್ಜನ್ಯ; ಯುವತಿ ಆತ್ಮಹತ್ಯೆ!

ಸದ್ಯ ವಿಡಿಯೋವನ್ನು ಆಧಾರಿಸಿ ನಿಕಿತಾ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾನವ್ ಶರ್ಮಾ ಅವರ ಮೃತದೇಹವನ್ನು ಸೇನಾ ಆಸ್ಪತ್ರೆಗೆ ಕೊಂಡೊಯ್ದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ನಾವು ಹೆಚ್ಚಿನ ತನಿಖೆ ನಡೆಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.