IND vs PAK: ಪಾಕ್ ಪಂದ್ಯಕ್ಕೂ ಮುನ್ನ ಕೊಹ್ಲಿಗೆ ಗಾಯ
ಕೊಹ್ಲಿ(virat kohli injury) ಶನಿವಾರದಂದು ನೆಟ್‌ನಲ್ಲಿ ಸ್ಪಿನ್ನರ್‌ಗಳನ್ನು ಎದುರಿಸಲು ಸುಮಾರು 2-3 ಗಂಟೆಗಳ ಮುಂಚಿತವಾಗಿ ಆಗಮಿಸಿ ಆಭ್ಯಾಸ ನಡೆಸಿದ್ದರು. ಯುಎಇನಲ್ಲಿರುವ ಉತ್ಕೃಷ್ಟ ಬೌಲರ್‌ಗಳನ್ನು ಆಯ್ದುಕೊಂಡು ಹೆಚ್ಚಾಗಿ ಡ್ರೈವ್ ಹೊಡೆತಗಳನ್ನು ಕೇಂದ್ರೀಕರಿಸಿ ಬ್ಯಾಟಿಂಗ್ ಅಭ್ಯಾಸ ನಡೆಸಿದ್ದರು.


ದುಬೈ: ಇಂದು ನಡೆಯುವ ಭಾರತ ಮತ್ತು ಪಾಕಿಸ್ತಾನ ನಡುವಣ ಚಾಂಪಿಯನ್ಸ್ ಟ್ರೋಫಿಯ ಪಂದ್ಯವನ್ನು ಕಣ್ತುಂಬಿಕೊಳ್ಳು ಇಡೀ ವಿಶ್ವವೇ ಕಾದು ಕುಳಿತಿದೆ. ಅದರಲ್ಲೂ ಉಭಯ ದೇಶಗಳ ಅಭಿಮಾನಿಗಳು ಚಾತಕ ಪಕ್ಷಿಯಂತೆ ತುದಿಗಾಲಲ್ಲಿ ನಿಂತು ಕಾದು ಕುಳಿತಿದ್ದಾರೆ. ಆದರೆ ಪಂದ್ಯ ಆರಂಭಕ್ಕೂ ಮುನ್ನವೇ ಭಾರತೀಯ ಅಭಿಮಾನಿಗಳಿಗೆ ಆತಂಕವೊಂದು ಶುರುವಾಗಿದೆ. ಇದಕ್ಕೆ ಕಾರಣ ವಿರಾಟ್ ಕೊಹ್ಲಿ ಗಾಯಕ್ಕೆ ತುತ್ತಾಗಿರುವುದು. ರಿಷಭ್ ಪಂತ್ ವೈರಲ್ ಜ್ವರದಿಂದ ಬಳಲುತ್ತಿದ್ದರೆ, ಕೊಹ್ಲಿ ಅಭ್ಯಾಸದ ವೇಳೆ ಮೊಣಕಾಲಿನ ನೋವಿಗೆ ತುತ್ತಾಗಿದ್ದಾರೆ ಎನ್ನಲಾಗಿದೆ. ಕೊಹ್ಲಿ ತಮ್ಮ ಕಾಲಿಗೆ ಐಸ್ ಪ್ಯಾಕ್ ಕಟ್ಟಿರುವ ಫೋಟೊಗಳು ಇದೀಗ ವೈರಲ್ ಆಗಿದ್ದು, ಪಾಕ್ ವಿರುದ್ಧ ಅವರು ಆಡಲಿದ್ದಾರಾ ಎಂಬ ಅನುಮಾನ ಹುಟ್ಟಿಕೊಂಡಿವೆ. ಸದ್ಯ ಬಿಸಿಸಿಐ ಕೊಹ್ಲಿ ಗಾಯದ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಹೀಗಾಗಿ ಅವರು ಆಡುವ ಸಾಧ್ಯತೆ ಇದೆ.
ಕೊಹ್ಲಿ ಶನಿವಾರದಂದು ನೆಟ್‌ನಲ್ಲಿ ಸ್ಪಿನ್ನರ್‌ಗಳನ್ನು ಎದುರಿಸಲು ಸುಮಾರು 2-3 ಗಂಟೆಗಳ ಮುಂಚಿತವಾಗಿ ಆಗಮಿಸಿ ಆಭ್ಯಾಸ ನಡೆಸಿದ್ದರು. ಯುಎಇನಲ್ಲಿರುವ ಉತ್ಕೃಷ್ಟ ಬೌಲರ್‌ಗಳನ್ನು ಆಯ್ದುಕೊಂಡು ಹೆಚ್ಚಾಗಿ ಡ್ರೈವ್ ಹೊಡೆತಗಳನ್ನು ಕೇಂದ್ರೀಕರಿಸಿ ಬ್ಯಾಟಿಂಗ್ ಅಭ್ಯಾಸ ನಡೆಸಿದ್ದರು.
Virat Kohli seen with an ice pack on his ankle after his batting stint at the nets on the eve of #INDvPAK clash tomorrow. 😳
— ASHER. (@ASHUTOSHAB10731) February 22, 2025
Virat kohli had grown up his Ankle sore on leg.
Virat Kohli is out of tomorrow's game against Pakistan due to injury. pic.twitter.com/hThC0n9A1d
ಕೊಹ್ಲಿ ಮೈದಾನದಲ್ಲಿದ್ದರೆ ಪಾಕ್‌ಗೆ ಎಲ್ಲಿಲ್ಲದ ಭಯ. ಪಾಕ್ ವಿರುದ್ಧ ಕೊಹ್ಲಿ ಉತ್ತಮ ದಾಖಲೆಯನ್ನು ಕೂಡ ಹೊಂದಿದ್ದಾರೆ. 2022ರಲ್ಲಿ ಮೆಲ್ಬರ್ನ್‌ನಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ನ ಲೀಗ್ ಪಂದ್ಯದಲ್ಲಿ ಪಾಕ್ ವಿರುದ್ಧ ಕೊಹ್ಲಿ ಏಕಾಂಗಿಯಾಗಿ ಹೋರಾಟ ನಡೆಸಿ ಭಾರತಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟಿದ್ದರು. ಕೊನೆಯ ತನಕ ಬ್ಯಾಟಿಂಗ್ ನಡೆಸಿ ಅಜೇಯ 82 ರನ್ ಬಾರಿಸಿದ್ದರು. ಒಂದೊಮ್ಮೆ ಕೊಹ್ಲಿ ಇಂದು ಆಡದೇ ಹೋದರೆ ಪಾಕ್‌ಗಳ ಆತ್ಮವಿಶ್ವಾಸ ಹೆಚ್ಚಾಗಿ ಪಂದ್ಯ ಗೆಲ್ಲುವ ಸಾಧ್ಯತೆಯೂ ಇದೆ. ಆದರೆ ಕೊಹ್ಲಿ ಗುಣಮುಖರಾಗಿ ಆಡಲಿ ಎನ್ನುವುದು ಭಾರತೀಯ ಆಶಯ ಮತ್ತು ಹಾರೈಕೆ.
ಇದನ್ನೂ ಓದಿ IND vs PAK: ಇಂದು ಇಂಡೋ-ಪಾಕ್ ಹೈವೋಲ್ಟೇಜ್ ಕದನ: ದೇಶಾದ್ಯಂತ ವಿಶೇಷ ಪೂಜೆ
ಕೊಹ್ಲಿ(Virat Kohli)ಗೆ ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಲ್ಲಿ(Champions Trophy) ವಿಶೇಷ ಮೈಲುಗಲ್ಲು ನಿರ್ಮಿಸುವ ಅವಕಾಶವಿದೆ. ಅವರು ಒಟ್ಟಾರೆ 241 ಕಲೆ ಹಾಕಿದರೆ, ಚಾಂಪಿಯನ್ಸ್ ಟ್ರೋಫಿಯಲ್ಲಿ ಅತ್ಯಧಿಕ ರನ್ ಗಳಿಸಿದ ವಿಶ್ವದ ಮೊದಲ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ. ಸದ್ಯ ದಾಖಲೆ ವಿಂಡೀಸ್‌ನ ಮಾಜಿ ಆಟಗಾರ ಕ್ರಿಸ್ ಗೇಲ್ ಹೆಸರಿನಲ್ಲಿದೆ.
ಗೇಲ್ 2002-2013ರ ಅವಧಿಯಲ್ಲಿ 17 ಪಂದ್ಯಗಳನ್ನಾಡಿ 791 ರನ್ ಬಾರಿಸಿ ಅಗ್ರಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ 14 ಪಂದ್ಯಗಳಿಂದ 551* ರನ್ ಬಾರಿಸಿ ಸದ್ಯ 11ನೇ ಸ್ಥಾನದಲ್ಲಿದ್ದಾರೆ. ಭಾರತೀಯ ದಾಖಲೆ ಸದ್ಯ ಮಾಜಿ ಬ್ಯಾಟರ್ ಶಿಖರ್ ಧವನ್ ಹೆಸರಿನಲ್ಲಿದೆ. ಧವನ್ 10 ಪಂದ್ಯಗಳಿಂದ 701 ಗಳಿಸಿದ್ದಾರೆ. ಕೊಹ್ಲಿ 2017ರ ಆವೃತ್ತಿಯ ಟೂರ್ನಿಯಲ್ಲಿ ಬಾಂಗ್ಲಾದೇಶ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಅಜೇಯ 96 ರನ್ ಬಾರಿಸಿದ್ದರು.