IPL Most Wickets: ಐಪಿಎಲ್ನಲ್ಲಿ ಅತಿ ಹೆಚ್ಚು ವಿಕೆಟ್ ಕಿತ್ತ ಬೌಲರ್ ಯಾರು?
IPL 2025: ಹಣದ ಹೊಳೆಯನ್ನೇ ಹರಿಸುವ, ರೋಮಾಂಚಕತೆ, ತೀವ್ರ ಕೌತುಕತೆಗಳಿಗೆಲ್ಲ ಸಾಕ್ಷಿಯಾಗುವ ಐಪಿಎಲ್ಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಮಾ.22ರಂದು ಆರಂಭವಾಗಿ ಮೇ 25 ರಂದು ಮುಕ್ತಾಯ ಕಾಣಲಿದೆ. ಈ ಬಾರಿಯಾದರೂ ನೂತನ ತಂಡವೊಂದು ಚೊಚ್ಚಲ ಬಾರಿಗೆ ಟ್ರೋಫಿ ಗೆದ್ದು ಹಲವು ವರ್ಷಗಳ ಟ್ರೋಫಿ ಬರ ನೀಗಿಸಿಕೊಳ್ಳುವುದೇ ಎಂಬ ಕುತೂಹಲವಿದೆ.


ಬೆಂಗಳೂರು: ಐಪಿಎಲ್(IPL 2025) 18ನೇ ಆವೃತ್ತಿ ಶನಿವಾರದಿಂದ ಕೋಲ್ಕತಾದ ಈಡನ್ ಗಾರ್ಡನ್ಸ್ನಲ್ಲಿ ಆರಂಭವಾಗಲಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ವಿಶ್ವಕಪ್ಗಿರುವಷ್ಟೇ ಪ್ರಾಮುಖ್ಯತೆ, ಲೀಗ್ ಮಾದರಿಯಲ್ಲಿ ಐಪಿಎಲ್ಗಿದೆ. ಹಣದ ಹೊಳೆಯನ್ನೇ ಹರಿಸುವ, ರೋಮಾಂಚಕತೆ, ತೀವ್ರ ಕೌತುಕತೆಗಳಿಗೆಲ್ಲ ಸಾಕ್ಷಿಯಾಗುವ ಐಪಿಎಲ್ಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇದಕ್ಕೂ ಮುನ್ನ ಟೂರ್ನಿಯ ಇದುವರೆಗಿನ ಇತಿಹಾಸದಲ್ಲಿ ಅತ್ಯಧಿಕ ವಿಕೆಟ್ ಕಿತ್ತ ಬೌಲರ್ಗಳು(IPL Most Wickets) ಯಾರೆಂಬ ಮಾಹಿತಿ ಇಲ್ಲಿದೆ.
ಯಜುವೇಂದ್ರ ಚಹಲ್
ಅನುಭವಿ ಸ್ಪಿನ್ ಬೌಲರ್ ಯುಜವೇಂದ್ರ ಚಹಲ್ ಅವರು ಸದ್ಯ ಐಪಿಎಲ್ನಲ್ಲಿ ಅತ್ಯಧಿಕ ವಿಕೆಟ್ ಕಿತ್ತ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ. ಹಲವು ಫ್ರಾಂಚೈಸಿಗಳ ಪರ ಆಡಿರುವ ಅವರು ಇದುವರೆಗೆ 205 ವಿಕೆಟ್ ಕಿತ್ತು ಮಿಂಚಿದ್ದಾರೆ. ಕಳೆದ ಮೆಗಾ ಹರಾಜಿನಲ್ಲಿ 18 ಕೋಟಿ ರೂ. ಪಡೆದು ಪಂಜಾಬ್ ಕಿಂಗ್ಸ್ ಸೇರಿರುವ ಅವರು ಈ ಬಾರಿಯೂ ಹಲವು ವಿಕೆಟ್ ಬೇಟೆಯಾಡುವ ವಿಶ್ವಾಸದಲ್ಲಿದ್ದಾರೆ. ಐಪಿಎಲ್ನಲ್ಲಿ ಒಂದು ಬಾರಿ ಹ್ಯಾಟ್ರಿಕ್ ವಿಕೆಟ್ ಕೂಡ ಪಡೆದಿದ್ದಾರೆ.
ಪಿಯೂಷ್ ಚಾವ್ಲಾ
ಹಿರಿಯ ಸ್ಪಿನ್ನರ್ ಪಿಯೂಷ್ ಚಾವ್ಲಾ ಅವರು ಅತ್ಯಧಿಕ ವಿಕೆಟ್ ಕಿತ್ತ ಬೌಲರ್ಗಳ ಯಾದಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಅವರು ಇದುವರೆಗೆ 192 ಐಪಿಎಲ್ ಪಂದ್ಯಗಳನ್ನಾಡಿ 192 ವಿಕೆಟ್ ಕೆಡವಿದ್ದಾರೆ. ಕಳೆದ ಮೆಗಾ ಹರಾಜಿನಲ್ಲಿ ಅನ್ಸೋಲ್ಡ್ ಆದ ಕಾರಣ ಅವರಿಗೆ ಈ ಬಾರಿಯ ಆವೃತ್ತಿಯಲ್ಲಿ ಆಡುವ ಅವಕಾಶ ಸಿಕ್ಕಿಲ್ಲ.
ಡ್ವೇನ್ ಬ್ರಾವೊ
ವೆಸ್ಟ್ ಇಂಡೀಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಮಾಜಿ ಆಟಗಾರ ಡ್ವೇನ್ ಬ್ರಾವೊ ಅವರು 183 ವಿಕೆಟ್ ಕಿತ್ತು ಮೂರನೇ ಸ್ಥಾನದಲ್ಲಿದ್ದಾರೆ. ನಿವೃತ್ತಿ ಹೊಂದಿರುವ ಅವರು ಈ ಬಾರಿ ಕೆಕೆಆರ್ ತಂಡದ ಮೆಂಟರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.
Spin Wizards 🤝 Swing and Pace Merchants
— IndianPremierLeague (@IPL) March 8, 2025
Will a new entrant join Yuzvendra Chahal in the 200 club this season? \|/ 🤔 #TATAIPL | @yuzi_chahal pic.twitter.com/u4H1NNcjWa
ಭುವನೇಶ್ವರ್ ಕುಮಾರ್
ಈ ಬಾರಿಯ ಆವೃತ್ತಿಯಲ್ಲಿ ಕನ್ನಡಿಗರ ನೆಚ್ಚಿನ ತಂಡವಾದ ಆರ್ಸಿಬಿ ಪರ ಆಡಲಿರುವ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಸದ್ಯ ಅತ್ಯಧಿಕ ವಿಕೆಟ್ ಕಿತ್ತ ಬೌಲರ್ಗಳ ಯಾದಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅವರು 181* ವಿಕೆಟ್ ಪಡೆದಿದ್ದಾರೆ. ಈ ಬಾರಿ 12 ವಿಕೆಟ್ ಪಡೆದರೆ ಡ್ವೇನ್ ಬ್ರಾವೊ ಮತ್ತು ಪಿಯೂಷ್ ಚಾವ್ಲಾ ಹಿಂದಿಕ್ಕಿ ದ್ವಿತೀಯ ಸ್ಥಾನಕ್ಕೇರುವ ಅವಕಾಶವಿದೆ. ಜತೆಗೆ ಅಗ್ರಸ್ಥಾನಿ ಚಹಲ್ಗೂ ಪೈಪೋಟಿ ನೀಡಬಹುದು.
ಇದನ್ನೂ ಓದಿ IPL 2025: ಅತಿ ಹೆಚ್ಚು ಕ್ಯಾಚ್ ಪಡೆದ ಟಾಪ್-5 ಆಟಗಾರರು
ಸುನೀಲ್ ನಾರಾಯಣ್
ಕೆಕೆಆರ್ ತಂಡದ ಅತ್ಯಂತ ಯಶಸ್ವಿ ಸ್ಪಿನ್ ಆಲ್ರೌಂಡರ್ ಸುನೀಲ್ ನಾರಾಯಣ್ ಅವರು 180* ವಿಕೆಟ್ ಕಿತ್ತು ಸದ್ಯ ಐದನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಾರಿಯ ಆವೃತ್ತಿಯಲ್ಲೂ ಆಡುತ್ತೊರುವ ಕಾರಣ ಅವರಿಗೂ ಅಗ್ರ 2ನೇ ಸ್ಥಾನಕ್ಕೇರುವ ಅವಕಾಶವಿದೆ.