ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Pradeep Eshwar: ಎದೆ ತಟ್ಟಿ ಹೇಳುತ್ತೇನೆ ಸಿಎಂ ಪ್ರಾಮಾಣಿಕರು: ಪ್ರದೀಪ್‌ ಈಶ್ವರ್

Pradeep Eshwar: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯಗೆ ಕ್ಲೀನ್ ಚಿಟ್ ಸಿಕ್ಕಿರುವ ವಿಚಾರದ ಬಗ್ಗೆ ಶಾಸಕ ಪ್ರದೀಕ್‌ ಈಶ್ವರ್‌ ಪ್ರತಿಕ್ರಿಯಿಸಿದ್ದಾರೆ. ಜನಪ್ರಿಯ ಮುಖ್ಯಮಂತ್ರಿ ಸಿದ್ದರಾಮಯ್ಯ 16 ನೇ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಈ ಹೊತ್ತಿನಲ್ಲಿ ಅವರಿಗೆ ಕ್ಲೀನ್ ಚಿಟ್ ಕೊಟ್ಟಿರುವುದು ನಮಗೆ ಸಂತೋಷ ತಂದಿದೆ ಎಂದು ತಿಳಿಸಿದ್ದಾರೆ.

ಎದೆ ತಟ್ಟಿ ಹೇಳುತ್ತೇನೆ ಸಿಎಂ ಪ್ರಾಮಾಣಿಕರು: ಪ್ರದೀಪ್‌ ಈಶ್ವರ್

Profile Prabhakara R Feb 20, 2025 5:58 PM

ಚಿಕ್ಕಬಳ್ಳಾಪುರ: ಸಿಎಂ ಸಿದ್ದರಾಮಯ್ಯ ಯಾವುದೇ ತಪ್ಪು ಮಾಡಿಲ್ಲ ಎಂದು ನನಗೆ ಗೊತ್ತು. ಎದೆ ಮುಟ್ಟಿ, ಎದೆ ತಟ್ಟಿ ಹೇಳುತ್ತೇನೆ ಸಿಎಂ ಪ್ರಾಮಾಣಿಕರು. ಲೋಕಾಯುಕ್ತ ಕ್ಲೀನ್ ಚಿಟ್ ಕೊಟ್ಟಿರುವುದರಲ್ಲಿ ರಾಜಕೀಯ ಇಲ್ಲ. ಅವರು ಯಾವುದೇ ತಪ್ಪು ಮಾಡಿಲ್ಲ ಎಂದು ಶಾಸಕ ಪ್ರದೀಪ್‌ ಈಶ್ವರ್ ಹೇಳಿದರು. ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯಗೆ ಕ್ಲೀನ್ ಚಿಟ್ ಸಿಕ್ಕಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಸಿಎಂ ತಪ್ಪು ಮಾಡಿರುವ ಬಗ್ಗೆ ಯಾವುದೇ ದಾಖಲೆಗಳು ಇಲ್ಲ, ಅದಕ್ಕಾಗಿಯೇ ಲೋಕಾಯುಕ್ತ ಕ್ಲೀನ್ ಚಿಟ್ ಕೊಟ್ಟಿದೆ. ಸಿಎಂ ಮೇಲೆ ಯಾವುದೇ ಕಳಂಕ ಇಲ್ಲ ಎಂದು ತಿಳಿಸಿದರು.

ಜನಪ್ರಿಯ ಮುಖ್ಯಮಂತ್ರಿ ಸಿದ್ದರಾಮಯ್ಯ 16 ನೇ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಈ ಹೊತ್ತಿನಲ್ಲಿ ಅವರಿಗೆ ಕ್ಲೀನ್ ಚಿಟ್ ಕೊಟ್ಟಿರುವುದು ನಮಗೆ ಸಂತೋಷ ತಂದಿದೆ ಎಂದು ಕಾಂಗ್ರೆಸ್ ಶಾಸಕ ತಿಳಿಸಿದರು.

ಈ ಸುದ್ದಿಯನ್ನೂ ಓದಿ | Vishwavani Editorial: ಖಾತಾ ಗೊಂದಲಕ್ಕೆ ತೆರೆ ಬೀಳಲಿ

ದಲ್ಲಾಳಿಗಳಿಗೆ ಪುರಸ್ಕಾರ, ಕರ್ತವ್ಯಲೋಪ, ಭ್ರಷ್ಟಾಚಾರ ಕಂಡುಬಂದಲ್ಲಿ ತಲೆದಂಡ ಖಚಿತ

ಚಿಕ್ಕಬಳ್ಳಾಪುರ: ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಅನಧಿಕೃತ, ರೆವಿ ನ್ಯೂ ಬಡಾವಣೆಗಳಿಗೆ ಬಿ ಖಾತಾ ಅಭಿಯಾನ ಯಶಸ್ವಿಯಾಗುವಲ್ಲಿ ನಗರಸಭೆ ಆಯುಕ್ತರು ಮತ್ತು ಸಿಬ್ಬಂದಿಯ ಪಾತ್ರ ಪ್ರಮುಖವಾಗಿದೆ.ಬಡವರ ಬದುಕಿಗೆ ಆಸರೆ ಯಾಗುವ ಈ ಅಭಿ ಯಾನವನ್ನು ಯಜ್ಞದ ರೀತಿ ಭಾವಿಸಿ ಪ್ರಾಮಾಣಿಕತೆ ಮತ್ತು ದಕ್ಷತೆಯಿಂದ ಮಾಡಬೇಕಿದೆ ಎಂದು ಶಾಸಕ ಪ್ರದೀಪ್ ಈಶ್ವರ್ ನಗರಸಭೆ ಸಿಬ್ಬಂದಿಗೆ ಉತ್ತೇಜನ ನೀಡಿದರು. ಜಿಲ್ಲಾಡಳಿತ ಭವನದ ಜಿಲ್ಲಾಪಂಚಾಯಿತಿ ಸರ್.ಎಂ.ವಿ. ಸಭಾಂಗಣದಲ್ಲಿ ಮಂಗಳವಾರ ಬಿ.ಖಾತಾ ಸಂಬಂಧ ಏರ್ಪಡಿಸಿದ್ದ ನಗರಸಭೆ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತ ನಾಡಿದರು.

90 ದಿನಗಳ ಗಡುವು
90 ದಿನಗಳ ಕಾಲ ನಡೆಯುವ ಬಿ.ಖಾತಾ ಅಭಿಯಾನವನ್ನು ಬಹಳ ಯಶಸ್ವಿಯಾಗಿ ಮುಗಿ ಸುವ ಗುರುತರ ಜವಾಬ್ದಾರಿ ಶಾಸಕನಾಗಿ ನನ್ನನ್ನೂ ಸೇರಿದಂತೆ ನಗರಾಡಳಿತ, ಆಯುಕ್ತರು, ಈ ಕಾರ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿ ಮೇಲಿದೆ. ನಾವೆಲ್ಲಾ ನಮ್ಮ ನಮ್ಮ ಕೆಲಸವನ್ನು ಬದ್ಧತೆಯಿಂದ ಮಾಡಿದಲ್ಲಿ ಬಡವರ ಮನೆಯಲ್ಲಿ ನಂದಾದೀಪ ಬೆಳಗಲಿದೆ. ಅದರ ಶ್ರೇಯ ನಮಗೂ ಸಲ್ಲಲ್ಲಿದೆ ಎಂದರು.

ಕರ್ತವ್ಯಲೋಪ ಸಹಿಸಲ್ಲ!!
ಫೆ.21,22,23 ರಂದು ನಗರದ ಎಲ್ಲಾ 31 ಬಡಾವಣೆಗಳಲ್ಲಿ ಬೆಳಗ್ಗೆ 8ರಿಂದ ಸಂಜೆ 4.30 ರವರೆಗೆ ಏಕಕಾಲಕ್ಕೆ ನಡೆಯುವ ಬಿ ಖಾತಾ ಅಭಿಯಾನದ ಸಿಬ್ಬಂದಿಗೆ ಬೇಕಾದ ಊಟ ತಿಂಡಿಯ ವ್ಯವಸ್ಥೆಯನ್ನು ಅಚ್ಚಕಟ್ಟಾಗಿ ಮಾಡಲಾಗುವುದು.ಈ ಅವಧಿಯಲ್ಲಿ ಪ್ರತಿ ಯೊಬ್ಬ ಸಿಬ್ಬಂದಿಯೂ ನಿಮಗೆ ಗೊತ್ತುಪಡಿಸಿದ ಸ್ಥಳದಲ್ಲಿಯೇ ಇದ್ದು ನಿಮ್ಮಲ್ಲಿ ಬರುವ ನಿವಾಸಿಗಳಿಂದ ಸರಕಾರ ನಿಗದಿಪಡಿಸಿರುವ ಸೀಮಿತ ದಾಖಲಾತಿಗಳನ್ನು ಪಡೆದು ಕೆಲಸ ಮಾಡಬೇಕು.ಅವರಿಂದ ಸರಕಾರಿ ತೆರಿಗೆ ಬಿಟ್ಟು ಬೇರೇನೂ ಪಡೆಯಯುವಂತಿಲ್ಲ,ಖಾತೆ ಬಯಸಿ ಬರುವ ನಿವಾಸಿಗಳಿಗೆ ಅನಗತ್ಯ ಕಿರುಕುಳ ನೀಡುವುದು, ದಲ್ಲಾಳಿಗಳಿಗೆ ಪುರಸ್ಕಾರ ನೀಡುವುದು,ಕರ್ತವ್ಯಲೋಪ ಎಸಗಿ ಭ್ರಷ್ಟಾಚಾರದಲ್ಲಿ ತೊಡಗಿರುವುದು ಕಂಡು ಬಂದಲ್ಲಿ ಕಾನೂನು ಪ್ರಕಾರ ತಲೆದಂಡವಾಗಲಿದೆ ಎಂದು ಎಚ್ಚರಿಸಿದರು.  
ಅಧಿಕಾರಿಗಳಿಗೆ ಮನ್ನಣೆ
ಬಿ.ಖಾತಾ ಅಭಿಯಾನದಲ್ಲಿ ಭಾಗಿಯಾಗಿರುವ ಸಿಬ್ಬಂದಿ ಯಾವುದೇ ದೂರುಗಳಿಗೆ ಆಸ್ಪದ ನೀಡದೆ ದಕ್ಷತೆ ಕಾಪಾಡಿಕೊಳ್ಳುವುದು ಮುಖ್ಯ.ಮೂರು ದಿನಗಳ ಅವಧಿಯಲಿ ಹೆಚ್ಚಿನ ಪ್ರಮಾಣದಲ್ಲಿ ಖಾತೆ ಮಾಡಿಕೊಡಲು ನೆರವಾದ ಸಿಬ್ಬಂದಿಗೆ ಶಾಸಕರು ಸನ್ಮಾನ ಮಾಡಿ ಪ್ರಶಂಸಾ ಪತ್ರ ನೀಡಲಾಗುವುದು.ನಗರಸಭೆ ಸಿಬ್ಬಂದಿ ಮೇಲೆ ಅಪಾರವಾದ ನಂಬಿಕೆಯಿದೆ. ನಿಮ್ಮ ಬಳಿ ಬರುವ ನಾಗರೀಕರ ಬಳಿ ನಯವಾಗಿ ಮಾತನಾಡಿ ಖಾತೆದಾರರಲ್ಲದ ಮೂರನೇ ವ್ಯಕ್ತಿ ತರುವ ಅರ್ಜಿಗಳನ್ನು ಸ್ವೀಕರಿಸಲೇ ಬೇಡಿ.ಖುದ್ಧಾಗಿ ಬರುವವರ ಕೆಲಸ ವಿಳಂಭವಿಲ್ಲದೆ ಮಾಡಿಕೊಡಿ,ಅಭಿಯಾನದ  ಬಗ್ಗೆ ಹಗುರವಾಗಿ ಮಾತನಾಡುವುದನ್ನು ಬಿಡಿ ಎಂದು ತಾಕೀತು ಮಾಡಿದರು.

ಒನ್ ಟೈಮ್ ಸಲ್ಯೂಷನ್
ಒನ್ ಟೈಮ್ ಸಲ್ಯೂಷನ್ ಅಡಿಯಲ್ಲಿ 90 ದಿನಗಳ ಒಳಗೆ ಬಿ ಖಾತಾ ಮಾಡಿಕೊಳ್ಳಲು ರಾಜ್ಯ ಸರಕಾರ ಅವಕಾಶ ಮಾಡಿಕೊಟ್ಟಿದೆ.ಈ ಅವಧಿ ಹೊರತುಪಡಿಸಿದರೆ ಮತ್ತೆ ಎಂದೂ ಕೂಡ ಅನಧಿಕೃತ ಬಡಾವಣೆಗಳಿಗೆ ಖಾತೆ ಮಾಡಿಕೊಳ್ಳಲು ಅನುಮತಿ ನೀಡುವುದಿಲ್ಲ. ಹೀಗಾಗಿಯೇ ಈ ಸುವರ್ಣಾವಕಾಶವನ್ನು ತಪ್ಪಿಸಿಕೊಳ್ಳದಂತೆ ಮಾಡಲು ಪರಿಶ್ರಮ ವಿದ್ಯಾ ರ್ಥಿಗಳನ್ನು ಕೂಡ ಬಳಸಿಕೊಂಡು ಮನೆಮನೆಗೆ ಬಿ ಖಾತಾ ಅಂದೋಲನದ ಕರಪತ್ರ ಗಳನ್ನು ಚಿಕ್ಕಬಳ್ಳಾಪುರ ನಗರದ ಪ್ರತಿಯೊಂದು ಮನೆಗೂ ತಲುಪಿಸುವ ಕೆಲಸ ಮಾಡು ತ್ತಿದ್ದೇನೆ ಎಂದರು.

14 ಸಾವಿರ ಖಾತೆದಾರರಿಗೆ ಅನುಕೂಲ
ನಗರಸಭೆ ವ್ಯಾಪ್ತಿಯಲ್ಲಿ 22771 ಒಟ್ಟು ಖಾತೆಗಳಿದ್ದು ,ಅದರಲ್ಲಿ 22937 ಡಿಜಿಟಲ್‌ಗೆ ಬಂದಿವೆ. 8062ಕ್ಕೆ  ಇ ಖಾತೆಗಳಾಗಿವೆ.ಈದಿನದವರೆಗೆ 81 ಪ್ರಗತಿಯಲಿವೆ. ಬಾಕಿಯಿರುವ ಖಾತೆಗಳು 14648 ಇವೆ.ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಶೇ 36ರಷ್ಟು ಖಾತೆ ಆಗಲು ಬಾಕಿಯಿದೆ ಎಂದರು.

ಬಿ ಖಾತೆಗೆ ಬೇಕಾದ ದಾಖಲೆಗಳು
ಬಿ-ಖಾತೆ ಮಾಡಲು ಬೇಕಾದ ದಾಖಲಾತಿಗಳು ಹೀಗಿವೆ. ೧.ಆಸ್ತಿಗೆ ಸಂಬAಧಿಸಿದ ಸ್ವತ್ತಿನ ಮಾಲಿಕತ್ವ ಸಾಬೀತು ಪಡಿಸುವ ದಾಖಲಾತಿಗಳು ದಿನಾಂಕ ೧೦/೦೯/೨೦೨೪ರ ಪೂರ್ವದಲ್ಲಿ ನೋಂದಾಯಿತವಾದ ದಾನ ಪತ್ರ,ಮಾರಾಟ ಪತ್ರ,ವಿಭಾಗಪತ್ರ, ಹಕ್ಕು ಖುಲಾಸೆ ಪತ್ರಗಳು,೨.ಪ್ರಸಕ್ತ ಸಾಲಿನ ಋಣಭಾರ ಪತ್ರ. ೩.ಚಾಲ್ತಿ ಸಾಲಿನ ಆಸ್ತಿ ತೆರಿಗೆ ಪಾವತಿ ರಸೀತಿ, ೪.ಮಾಲಿಕರ ಪೋಟೋ. ಸ್ವತ್ತಿನ ಪೋಟೋ ಜಿಪಿಎಸ್‌ನಲ್ಲಿ ಹಾಕಬೇಕು.೫.ಮಾಲಿಕರ ಗುರುತಿನ ದಾಖಲೆ ಪ್ರತಿ ಕೊಟ್ಟು ಸರಕಾರ ನಿಧಿ ಮಾಡಿದ ತೆರಿಗೆ ಪಾವತಿಸಿ ಬಿ-ಖಾತೆ ಪಡೆಯಬಹುದು.೧೦ ವರ್ಷದಿಂದ ತೆರಿಗೆ ಪಾವತಿ ಮಾಡದಿದ್ದರೂ ಪರವಾಗಿಲ್ಲ,ಈವರ್ಷದ ತೆರಿಗೆಯ ಡಬಲ್ ಪಾವತಿ ಮಾಡಿದರೆ ಸಾಕು ಅವರಿಗೆ ಬಿ-ಖಾತೆ ಕೊಡುತ್ತೇವೆ ಎಂದರು.

ಸಹಾಯವಾಣಿಗೆ ಕರೆ ಮಾಡಿ
ಬಿ ಖಾತೆ ಸಂಬಂಧ ನಗರ ವಾಸಿಗಳಿಗೆ ಎದುರಾಗುವ ಯಾವುದೇ ಸಮಸ್ಯೆ ಇದ್ದಲ್ಲಿ ಟೋಲ್‌ಫ್ರೀನಂಬರ್ ೦೮೧೫೬-೨೭೫೫೫, ಅಥವಾ ವಾಟ್ಸಪ್ ನಂಬರ್- ೯೭೩೯೬೯೪೫೨೩ ಕರೆ ಮಾಡಿ ಮಾಹಿತಿ ಪಡೆಯಬಹುದು ಎಂದು ಶಾಸಕರು ತಿಳಿಸಿದರು. ಈ ವೇಳೆ ೩೧ ವಾರ್ಡ್ಗ ಳಲ್ಲಿ ಬಿ ಖಾತಾ ಆಂದೋಲನಕ್ಕೆ ನೇಮಕವಾಗಿರುವ ಅಧಿಕಾರಿಗಳು, ನಗರಸಭೆ ಆಯುಕ್ತ ಮನ್ಸೂರ್ ಅಲಿ ಇದ್ದರು.