IBPS Exam Calendar: ಬ್ಯಾಂಕ್ ಪರೀಕ್ಷೆಯ ವೇಳಾಪಟ್ಟಿ ಪ್ರಕಟ; ಇಲ್ಲಿದೆ ಟೈಮ್ ಟೇಬಲ್
IBPS Exam Calendar: ಪ್ರಾದೇಶಿಕ ಗ್ರಾಮೀಣ ಬ್ಯಾಂಕ್, ಪಬ್ಲಿಕ್ ಸೆಕ್ಟರ್ ಬ್ಯಾಂಕ್‌ಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಪರೀಕ್ಷಾ ವೇಳಾಪಟ್ಟಿಯನ್ನು ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆ ಪ್ರಕಟಿಸಿದೆ. ಆನ್‌ಲೈನ್ ಮೂಲಕ ನೋಂದಣಿ ನಡೆಯಲಿದೆ. ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗೆ ಏಕಕಾಲಕ್ಕೆ ನೋಂದಣಿ ನಡೆಸಬೇಕು.

ಸಾಂದರ್ಭಿಕ ಚಿತ್ರ

ಬೆಂಗಳೂರು, ಜ. 16, 2025: ದೇಶದ ಬ್ಯಾಂಕ್‌ಗಳಿಗೆ ಪ್ರತಿವರ್ಷವು ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆ (IBPS) ವಿವಿಧ ಆಫೀಸರ್ ಸ್ಕೇಲ್ I, II, III ಹುದ್ದೆಗಳಿಗೆ ನೇಮಕಾತಿ ನಡೆಸುತ್ತದೆ. ಇದೀಗ ಐಬಿಪಿಎಸ್ 2025-26ನೇ ಸಾಲಿನ ಆರ್‌ಆರ್‌ಬಿ (Regional Rural Banks), ಪಿಎಸ್‌ಬಿ (Public Sector Bank) ಬ್ಯಾಂಕ್‌ಗಳ ಆಫೀಸರ್ ಸ್ಕೇಲ್ ಹುದ್ದೆಗಳ ಪರೀಕ್ಷೆ ವೇಳಾಪಟ್ಟಿ ಬಿಡುಗಡೆ ಮಾಡಿದೆ (IBPS Exam Calendar).
ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಲ್ಲಿ ಖಾಲಿ ಇರುವ ಹುದ್ದೆಗಳು, ಪರೀಕ್ಷೆಯ ದಿನಾಂಕ
ಪೂರ್ವಭಾವಿ ಪರೀಕ್ಷೆ-ಆಫೀಸರ್ ಸ್ಕೇಲ್-I (27/07/25, 02/08/25, 03/08/25)-ಆಫೀಸರ್ ಸ್ಕೇಲ್-II ಮತ್ತು ಆಫೀಸರ್ ಸ್ಕೇಲ್-III (ದಿನಾಂಕ ನಿಗಧಿಯಾಗಿಲ್ಲ)- ಆಫೀಸ್ ಅಸಿಸ್ಟಂಟ್ (30/08/25, 06/09/25, 07/09/25).
ಮುಖ್ಯ ಪರೀಕ್ಷೆ/ಸಿಂಗಲ್ ಎಕ್ಸಾಮ್- ಆಫೀಸರ್ ಸ್ಕೇಲ್-I (13/09/25)-ಆಫೀಸರ್ ಸ್ಕೇಲ್-II ಮತ್ತು ಆಫೀಸರ್ ಸ್ಕೇಲ್-III (13/09/25)-ಆಫೀಸ್ ಅಸಿಸ್ಟಂಟ್ (09/11/25).
ಪಬ್ಲಿಕ್ ಸೆಕ್ಟರ್ ಬ್ಯಾಂಕ್‌ಗಳಲ್ಲಿ ಖಾಲಿ ಇರುವ ಹುದ್ದೆಗಳು, ಪರೀಕ್ಷೆಯ ದಿನಾಂಕ
ಪೂರ್ವಭಾವಿ ಪರೀಕ್ಷೆ-ಪ್ರೊಬೆಷನರಿ ಆಫೀಸರ್‌ಗಳು / ಮ್ಯಾನೇಜ್‌ಮೆಂಟ್ ಟ್ರೈನಿಗಳು (04/10/25, 05/10/25, 11/10/25)-ಸ್ಪೆಷಲಿಸ್ಟ್ ಆಫೀಸರ್‌ಗಳು (ಎಸ್‌ಪಿಎಲ್) (22/11/25 / 23/11/25)-ಕಸ್ಟಮರ್ ಸರ್ವೀಸ್ ಅಸೋಸಿಯೇಟ್ಸ್ (ಸಿಎಸ್‌ಎ) (06/12/25, 07/12/25, 13/12/25, 14/12/25)
ಮುಖ್ಯ ಪರೀಕ್ಷೆ-ಪ್ರೊಬೆಷನರಿ ಆಫೀಸರ್‌ಗಳು / ಮ್ಯಾನೇಜ್‌ಮೆಂಟ್ ಟ್ರೈನಿಗಳು (29/11/25)-ಸ್ಪೆಷಲಿಸ್ಟ್ ಆಫೀಸರ್‌ಗಳು(ಎಸ್‌ಪಿಎಲ್) (04/01/26)-ಕಸ್ಟಮರ್ ಸರ್ವೀಸ್ ಅಸೋಸಿಯೇಟ್ಸ್ (ಸಿಎಸ್‌ಎ) (01/02/26).
ನೋಂದಣಿ ವಿಧಾನ
ಆನ್‌ಲೈನ್ ಮೂಲಕ ನೋಂದಣಿ ನಡೆಯಲಿದೆ. ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗೆ ಏಕಕಾಲಕ್ಕೆ ನೋಂದಣಿ ನಡೆಯಲಿದೆ.
ನೋಂದಣಿ ವೇಳೆ ಅಭ್ಯರ್ಥಿಗಳು ಈ ಕೆಳಗಿನ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು. ಭಾವಚಿತ್ರ / ಸಹಿ / ಥಂಬ್ ಇಂಪ್ರೆಶನ್ ಸ್ಕ್ಯಾನ್ ಕಾಪಿಗಳನ್ನು 20kp to 50 ಮೀರದಂತೆ ಅಪ್‌ಲೋಡ್ ಮಾಡಬೇಕು. ಜತೆಗೆ ಕೆಲವು ಶೈಕ್ಷಣಿಕ ದಾಖಲೆಗಳನ್ನು ಸಹ ಅಪ್‌ಲೋಡ್ ಮಾಡಬೇಕಾಗುತ್ತದೆ.
ಈ ಸುದ್ದಿಯನ್ನೂ ಓದಿ: KAS Prelims: ಕೆಎಎಸ್ ಪೂರ್ವಭಾವಿ ಮರು ಪರೀಕ್ಷೆಯ ಕೀ ಉತ್ತರ ಪ್ರಕಟ
ಹೆಚ್ಚಿನ ವಿವರಗಳಿಗೆ ವೆಬ್‌ಸೈಟ್ ವಿಳಾಸ: https://www.ibps.in/ಗೆ ಭೇಟಿ ನೀಡಿ.