IND vs AUS: ಭಾರತ-ಆಸೀಸ್ ಐಸಿಸಿ ನಾಕೌಟ್ ಮುಖಾಮುಖಿಯ ದಾಖಲೆ ಹೇಗಿದೆ?
India vs Australia semi-final: ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಟಿ20 ವಿಶ್ವಕಪ್, ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಹಲವು ಬಾರಿ ಮುಖಾಮುಖಿಯಾಗಿದ್ದರೂ ಚಾಂಪಿಯನ್ಸ್ ಟ್ರೋಫಿಯಲ್ಲಿ ಇತ್ತಂಡಗಳು ಎದುರಾಗುತ್ತಿರುವುದು 2009ರ ಬಳಿಕ. ಈ ವರೆಗೂ ಉಭಯ ತಂಡಗಳ ನಡುವೆ ಚಾಂಪಿಯನ್ಸ್ ಟ್ರೋಫಿಯಲ್ಲಿ 4 ಪಂದ್ಯಗಳು ನಡೆದಿದ್ದು, 2ರಲ್ಲಿ ಭಾರತ, 1ರಲ್ಲಿ ಆಸೀಸ್ ಗೆದ್ದಿದೆ. 2009ರ ಪಂದ್ಯ ಮಳೆಯಿಂದ ರದ್ದಾಗಿತ್ತು.


ದುಬೈ: ಬಲಿಷ್ಠ ತಂಡಗಳಾದ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಇಂದು ದುಬೈ ಅಂಗಳದಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಕಾದಾಟ ನಡೆಸಲಿದೆ. ಗೆದ್ದ ತಂಡ ಮಾರ್ಚ್ 9 ರಂದು ಫೈನಲ್ ಆಡಲಿದೆ. ಸೆಮಿ ಪಂದ್ಯಕ್ಕೂ ಮುನ್ನ ಉಭಯ ತಂಡಗಳ ಇದುವರೆಗಿನ ಐಸಿಸಿ ಟೂರ್ನಿಯ ನಾಕೌಟ್ ಮುಖಾಮುಖಿಯ ಸಾಧನೆಯ ಇಣುಕು ನೋಟ ಇಲ್ಲಿದೆ.
ಐಸಿಸಿ ಟೂರ್ನಿಗಳ ನಾಕೌಟ್ ಪಂದ್ಯಗಳಲ್ಲಿ ಭಾರತಕ್ಕೆ 2011ರ ಬಳಿಕ ಆಸ್ಟ್ರೇಲಿಯಾ ವಿರುದ್ಧ ಗೆಲ್ಲಲು ಸಾಧ್ಯವಾಗಿಲ್ಲ. 2011ರ ಏಕದಿನ ವಿಶ್ವಕಪ್ ಕ್ವಾರ್ಟರ್ ಫೈನಲ್‌ನಲ್ಲಿ ಗೆದ್ದಿದ್ದೇ ಕೊನೆ. ಆ ಬಳಿಕ 2015ರ ಏಕದಿನ ವಿಶ್ವಕಪ್‌ನ ಸೆಮಿಫೈನಲ್, 2023ರ ಏಕದಿನ ವಿಶ್ವಕಪ್‌ನ ಫೈನಲ್, 2023ರ ಟೆಸ್ಟ್ ವಿಶ್ವ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಸೀಸ್ ವಿರುದ್ಧ ಭಾರತ ಸೋತಿದೆ. ಈ ಎಲ್ಲ ಸೋಲಿಗೆ ಭಾರತ ಈ ಬಾರಿ ಸೇಡು ತೀರಿಸಿಕೊಳ್ಳಬೇಕಿದೆ. ಇದು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಆಶಯವೂ ಆಗಿದೆ. ಆಸ್ಟ್ರೇಲಿಯಾವನ್ನು ಕ್ವಾರ್ಟರ್ ಫೈನಲ್ ಅಥವಾ ಸೆಮಿಫೈನಲ್‌ನಲ್ಲಿ ಯಾರು ಸೋಲಿಸುತ್ತಾರೋ ಅವರಿಗೆ ಕಪ್ ನಿಶ್ಚಿತ ಎನ್ನಬಹುದು. ಆಸೀಸ್ ಫೈನಲ್ ಪ್ರವೇಶಿಸಿದರೆ ಕಪ್ ಗೆಲ್ಲದೆ ಬಿಡುವುದಿಲ್ಲಿ. ಫೈನಲ್‌ನಲ್ಲಿ ಆಸೀಸ್‌ನದ್ದು ಡಿಫರೆಂಡ್ ಗೇಮ್.
A #ChampionsTrophy match-up for the ages awaits in Dubai 😲
— ICC (@ICC) March 4, 2025
More 👉 https://t.co/zQncODM01X pic.twitter.com/K8riIb5qS1
2009ರ ಬಳಿಕ ಮೊದಲ ಮುಖಾಮುಖಿ
ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಟಿ20 ವಿಶ್ವಕಪ್, ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಹಲವು ಬಾರಿ ಮುಖಾಮುಖಿಯಾಗಿದ್ದರೂ ಚಾಂಪಿಯನ್ಸ್ ಟ್ರೋಫಿಯಲ್ಲಿ ಇತ್ತಂಡಗಳು ಎದುರಾಗುತ್ತಿರುವುದು 2009ರ ಬಳಿಕ ಮೊದಲ ಬಾರಿಗೆ. ಈ ವರೆಗೂ ಉಭಯ ತಂಡಗಳ ನಡುವೆ ಚಾಂಪಿಯನ್ಸ್ ಟ್ರೋಫಿಯಲ್ಲಿ 4 ಪಂದ್ಯಗಳು ನಡೆದಿದ್ದು, 2ರಲ್ಲಿ ಭಾರತ, 1ರಲ್ಲಿ ಆಸೀಸ್ ಗೆದ್ದಿದೆ. 2009ರ ಪಂದ್ಯ ಮಳೆಯಿಂದ ರದ್ದಾಗಿತ್ತು.
ಒಟ್ಟು ಮುಖಾಮುಖಿ
ಇಂಡೋ-ಆಸೀಸ್ ತಂಡಗಳು ಇದುವರೆಗೆ ಏಕದಿನದಲ್ಲಿ 151 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ ಭಾರತ 57 ಪಂದ್ಯ ಗೆದ್ದರೆ, ಆಸ್ಟ್ರೇಲಿಯಾ 84 ಪಂದ್ಯಗಳಲ್ಲಿ ಗೆದ್ದಿದೆ. 10 ಪಂದ್ಯಗಳು ಫಲಿತಾಂಶ ಕಂಡಿಲ್ಲ.
ಇದನ್ನೂ ಓದಿ IND vs AUS: ಏಕದಿನ ವಿಶ್ವಕಪ್ ಸೋಲಿಗೆ ಸೇಡು ತೀರಿಸಲು ಭಾರತ ಸಜ್ಜು
ಸಂಭಾವ್ಯ ತಂಡಗಳು
ಭಾರತ: ರೋಹಿತ್ ಶರ್ಮ (ನಾಯಕ), ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್, ಅಕ್ಷರ್ ಪಟೇಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ.
ಆಸ್ಟ್ರೇಲಿಯಾ: ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಸ್ಟೀವನ್ ಸ್ಮಿತ್ (ನಾಯಕ), ಮಾರ್ನಸ್ ಲಬುಶೇನ್, ಕೂಪರ್, ಕೇರಿ, ಮ್ಯಾಕ್ಸ್‌ವೆಲ್, ಡ್ವಾರ್ಶಿಯಸ್, ಎಲ್ಲೀಸ್, ಜಾನ್ಸನ್, ಜಂಪಾ.
ಪಂದ್ಯ ಆರಂಭ: ಮಧ್ಯಾಹ್ನ 2.30ಕ್ಕೆ, ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್