Team India: ಕಪ್ಪು ಪಟ್ಟಿ ಧರಿಸಿ ಭಾರತೀಯ ಕ್ರಿಕೆಟಿಗರಿಂದ ಶಿವಾಲ್ಕರ್‌ಗೆ ಗೌರವ
IND vs AUS: "ದಿವಂಗತ ಶ್ರೀ ಪದ್ಮಾಕರ್ ಶಿವಾಳ್ಕರ್ ಅವರ ಗೌರವಾರ್ಥವಾಗಿ, ಟೀಮ್ ಇಂಡಿಯಾ ಇಂದು ಕಪ್ಪು ಪಟ್ಟಿಯನ್ನು ಧರಿಸಿದೆ" ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸಾಮಾಜಿಕ ಮಾಧ್ಯಮ ಟ್ವಿಟರ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ. ಪದ್ಮಾಕರ್ ಶಿವಾಲ್ಕರ್ ಸೋಮವಾರ ನಿಧನ ಹೊಂದಿದ್ದರು.


ದುಬೈ: ಭಾರತೀಯ ದೇಶಿ ಕ್ರಿಕೆಟ್ ಕಂಡ ಮಹಾನ್ ಸ್ಪಿನ್ನರ್, ಮುಂಬಯಿಯ ಪದ್ಮಾಕರ್ ಶಿವಾಲ್ಕರ್ (84) ಅವರ ಸಾವಿಗೆ ಸಂತಾಪ ಸೂಚಿಸಿ ಭಾರತೀಯ ಕ್ರಿಕೆಟ್ ತಂಡದ ಆಟಗಾರರು ಆಸ್ಟ್ರೇಲಿಯಾ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಕಪ್ಪು ಪಟ್ಟಿ ಧರಿಸಿ ಮೈದಾನಕ್ಕೆ ಆಡಲಿಳಿದರು. ಪದ್ಮಾಕರ್ ಶಿವಾಲ್ಕರ್ ಸೋಮವಾರ ನಿಧನ ಹೊಂದಿದ್ದರು. ಸೆಮಿ ಪಂದ್ಯದಲ್ಲಿ ಟಾಸ್ ಸೋತ ಭಾರತ ಬೌಲಿಂಗ್ ಆಹ್ವಾನ ಪಡೆದಿದೆ.
"ದಿವಂಗತ ಶ್ರೀ ಪದ್ಮಾಕರ್ ಶಿವಾಳ್ಕರ್ ಅವರ ಗೌರವಾರ್ಥವಾಗಿ, ಟೀಮ್ ಇಂಡಿಯಾ ಇಂದು ಕಪ್ಪು ಪಟ್ಟಿಯನ್ನು ಧರಿಸಿದೆ" ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸಾಮಾಜಿಕ ಮಾಧ್ಯಮ ಟ್ವಿಟರ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
ಮುಂಬೈನ ಪದ್ಮಾಕರ್ 124 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದರು. ಅದರಲ್ಲಿ 19.69ರ ಸರಾಸರಿಯಲ್ಲಿ 589 ವಿಕೆಟ್‌ಗಳನ್ನು ಗಳಿಸಿದ್ದರು. 1961–62 ರಿಂದ 1987–8ರ ಅವಧಿಯಲ್ಲಿ ಅವರು ಆಡಿದ್ದರು. ಎಡಗೈ ಸ್ಪಿನ್ನರ್ ಆಗಿದ್ದ ಪದ್ಮಾಕರ್ ತಮ್ಮ 22ನೇ ವಯಸ್ಸಿನಲ್ಲಿಯೇ ರಣಜಿ ಟ್ರೋಫಿ ಟೂರ್ನಿಯಲ್ಲಿ ಪದಾರ್ಪಣೆ ಮಾಡಿದ್ದರು. ಅಲ್ಲಿಂದ 48 ವರ್ಷ ವಯಸ್ಸಿನವರೆಗೂ ಅವರು ಆಡಿದರು.
In honour of the late Shri Padmakar Shivalkar, Team India is wearing black armbands today.
— BCCI (@BCCI) March 4, 2025
ರಣಜಿ ಟ್ರೋಫಿ ಕ್ರಿಕೆಟ್‌ನಲ್ಲಿ ಅವರು 361 ವಿಕೆಟ್‌ಗಳನ್ನು ಗಳಿಸಿದರು. ಅದರಲ್ಲಿ 11 ಬಾರಿ ಒಟ್ಟು ಹತ್ತು ವಿಕೆಟ್‌ಗಳ ಗೊಂಚಲು ಗಳಿಸಿದ್ದರು. 12 ಲಿಸ್ಟ್ ಎ ಪಂದ್ಯಗಳನ್ನು ಆಡಿದ್ದ ಅವರು 16 ವಿಕೆಟ್‌ಗಳನ್ನು ಕಿತ್ತ ಸಾಧನೆ ಮಾಡಿದ್ದರು. ಮುಂಬೈ ತಂಡವು 22 ವರ್ಷಗಳಲ್ಲಿ 20 ಬಾರಿ ರಣಜಿ ಟ್ರೋಫಿ ಚಾಂಪಿಯನ್ ಆಗಿತ್ತು. ಅಷ್ಟು ಬಾರಿಯೂ ಪದ್ಮಾಕರ್ ಅವರು ತಂಡದಲ್ಲಿ ಆಡಿದ್ದರು. ವಿಪರ್ಯಾಸವೆಂದರೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಇಷ್ಟೆಲ್ಲ ಅಮೋಘ ಪ್ರದರ್ಶನ ನೀಡಿಯೂ ಶಿವಾಲ್ಕರ್‌ಗೆ ಕನಿಷ್ಠ ಒಂದು ಪಂದ್ಯದಲ್ಲಾದರೂ ಭಾರತವನ್ನು ಪ್ರತಿನಿಧಿಸುವ ಅವಕಾಶ ಸಿಗದಿರುವುದು.
ಉಭಯ ಆಡುವ ಬಳಗ
ಭಾರತ: ರೋಹಿತ್ ಶರ್ಮ (ನಾಯಕ), ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್, ಅಕ್ಷರ್ ಪಟೇಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ.
ಆಸ್ಟ್ರೇಲಿಯಾ: ಕೂಪರ್ ಕೊನೊಲಿ, ಟ್ರಾವಿಸ್ ಹೆಡ್, ಸ್ಟೀವನ್ ಸ್ಮಿತ್(ನಾಯಕ), ಮಾರ್ನಸ್ ಲ್ಯಾಬುಸ್ಚಾಗ್ನೆ, ಜೋಶ್ ಇಂಗ್ಲಿಸ್(ವಿ.ಕೀ), ಅಲೆಕ್ಸ್ ಕ್ಯಾರಿ, ಗ್ಲೆನ್ ಮ್ಯಾಕ್ಸ್‌ವೆಲ್, ಬೆನ್ ದ್ವಾರಶೂಯಿಸ್, ನಾಥನ್ ಎಲ್ಲಿಸ್, ಆಡಮ್ ಝಂಪಾ, ತನ್ವೀರ್ ಸಂಘ.