#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

IND vs ENG: ಶತಕ ಸಿಡಿಸಿದ ತಮ್ಮ ಬ್ಯಾಟಿಂಗ್‌ ರಣತಂತ್ರವೇನೆಂದು ತಿಳಿಸಿದ ಶುಭಮನ್‌ ಗಿಲ್!

Shubman Gill on his Hundred against England: ಇಂಗ್ಲೆಂಡ್‌ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಭರ್ಜರಿ ಶತಕ ಸಿಡಿಸಿದರು. ಆ ಮೂಲಕ ಟೀಮ್‌ ಇಂಡಿಯಾದ 142 ರನ್‌ಗಳ ಗೆಲುವಿಗೆ ನೆರವಾಗಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಪಂದ್ಯದ ಬಳಿಕ ಶುಭಮನ್‌ ಗಿಲ್‌ ತಮ್ಮ ಬ್ಯಾಟಿಂಗ್‌ ಯಶಸ್ಸಿನ ಬಗ್ಗೆ ಮಾತನಾಡಿದ್ದಾರೆ.

ಶತಕ ಸಿಡಿಸಿದ ತಮ್ಮ ಬ್ಯಾಟಿಂಗ್‌ ಗೇಮ್‌ ಪ್ಯ್ಲಾನ್‌ ತಿಳಿಸಿದ ಗಿಲ್‌!

ಮೂರನೇ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿ ಸಂಭ್ರಮಿಸಿದ ಶುಭಮನ್‌ ಗಿಲ್‌.

Profile Ramesh Kote Feb 13, 2025 11:59 AM

ಅಹಮದಾಬಾದ್‌: ಇಂಗ್ಲೆಂಡ್‌ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ ಶುಭಮನ್‌ ಗಿಲ್‌ ಭಾರತ ತಂಡದ 142 ರನ್‌ಗಳ ಗೆಲುವಿನಲ್ಲಿ ಮಹತ್ತರ ಕೊಡುಗೆಯನ್ನು ನೀಡಿದರು. ಆ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಪಂದ್ಯದ ಬಳಿಕ ಮಾತನಾಡಿದ ಶುಭಮನ್‌ ಗಿಲ್‌, ಅಹಮದಾಬಾದ್‌ ಪಿಚ್‌ನಲ್ಲಿ ತಾವು ಅನುಸರಿಸಿದ ಬ್ಯಾಟಿಂಗ್‌ ಗೇಮ್‌ ಪ್ಲ್ಯಾನ್‌ ಏನೆಂದು ಬಹಿರಂಗಪಡಿಸಿದ್ದಾರೆ. ಅಲ್ಲದೆ ತಮ್ಮ ಬ್ಯಾಟಿಂಗ್‌ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಭಾರತ ತಂಡದ ಪರ ಇನಿಂಗ್ಸ್‌ ಆರಂಭಿಸಿದ ಶುಭಮನ್‌ ಗಿಲ್‌, ಸನ್ನಿವೇಶಕ್ಕೆ ತಕ್ಕಂತೆ ಮನಮೋಹಕ ಬ್ಯಾಟಿಂಗ್‌ ಪ್ರದರ್ಶನ ತೋರಿದರು. ನಾಯಕ ರೋಹಿತ್‌ ಶರ್ಮಾ ಬೇಗ ವಿಕೆಟ್‌ ಒಪ್ಪಿಸಿದರೂ ಒತ್ತಡವಿಲ್ಲದೆ ಆಡಿದ ಗಿಲ್‌ ತಮ್ಮ ವೃತ್ತಿ ಜೀವನದ ಏಳನೇ ಒಡಿಐ ಶತಕವನ್ನು ಪೂರ್ಣಗೊಳಿಸಿದರು. ಆಡಿದ 102 ಎಸೆತಗಳಲ್ಲಿ 3 ಸಿಕ್ಸರ್‌ ಹಾಗೂ 14 ಬೌಂಡರಿಗಳೊಂದಿಗೆ 112 ರನ್‌ಗಳನ್ನು ದಾಖಲಿಸಿದರು. ಆ ಮೂಲಕ ಭಾರತ ತಂಡ 356 ರನ್‌ಗಳನ್ನು ಕಲೆ ಹಾಕುವಲ್ಲಿ ಮಹತ್ವದ ಕೊಡುಗೆಯನ್ನು ನೀಡಿದರು.

IND vs ENG: ಇಂಗ್ಲೆಂಡ್‌ಗೆ ಮುಖಭಂಗ, 3ನೇ ಒಡಿಐ ಗೆದ್ದು ಸರಣಿಯನ್ನು ಕ್ಲೀನ್‌ ಸ್ವೀಪ್‌ ಮಾಡಿಕೊಂಡ ಭಾರತ!

ಶತಕದ ಸಿಡಿಸಿದ ಜೊತೆಗೆ ವಿರಾಟ್‌ ಕೊಹ್ಲಿ ಜೊತೆ ಸೇರಿ ಮುರಿಯದ ಎರಡನೇ ವಿಕೆಟ್‌ಗೆ 116 ರನ್‌ಗಳು ಹಾಗೂ ಶ್ರೇಯಸ್‌ ಅಯ್ಯರ್‌ ಜೊತೆಗೆ ಮುರಿಯದ ಮೂರನೇ ವಿಕೆಟ್‌ಗೆ 104 ರನ್‌ಗಳನ್ನು ಕಲೆ ಹಾಕಿದರು. ಎರಡು ಶತಕಗಳ ಜೊತೆಯಾಟದ ಮೂಲಕ ಶುಭಮನ್‌ ಗಿಲ್‌ ತಮ್ಮ ವೃತ್ತಿ ಜೀವನದ ಶ್ರೇಷ್ಠ ಇನಿಂಗ್ಸ್‌ ಅನ್ನು ಆಡಿದರು. ಬಳಿಕ 357 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಇಂಗ್ಲೆಂಡ್‌ ತಂಡ 214 ರನ್‌ಗಳಿಗೆ ಆಲ್‌ಔಟ್‌ ಆಯಿತು. ಅಂತಿಮವಾಗಿ ಭಾರತ ತಂಡ ಮೂರು ಪಂದ್ಯಗಳ ಏಕದಿನ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಮಾಡಿಕೊಂಡಿತು. ಶುಭಮನ್‌ ಗಿಲ್‌ ಪಂದ್ಯ ಶ್ರೇಷ್ಠ ಪ್ರಶಸ್ತಿ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು.



ತಮ್ಮ ಬ್ಯಾಟಿಂಗ್‌ ಬಗ್ಗೆ ಶುಭಮನ್‌ ಗಿಲ್‌ ಹೇಳಿದ್ದಿದು

ಭಾರತ ತಂಡದ ಗೆಲುವಿನ ಬಳಿಕ ಪೋಸ್ಟ್‌ ಮ್ಯಾಚ್‌ ಪ್ರೆಂಸೆಂಟೇಷನ್‌ನಲ್ಲಿ ಮಾತನಾಡಿದ ಶುಭಮನ್‌ ಗಿಲ್‌, "ನನ್ನ ವೃತ್ತಿ ಜೀವನದ ಅತ್ಯುತ್ತಮ ಇನಿಂಗ್ಸ್‌ಗಳಲ್ಲಿ ಇದೂ ಕೂಡ ಒಂದಾಗಿದೆ. ಇದರಿಂದ ಉತ್ತಮ ಭಾವನೆ ನನ್ನಲ್ಲಿ ಉಂಟಾಗಿದೆ. ಆರಂಭದಲ್ಲಿ ಇಲ್ಲಿನ ಪಿಚ್‌ನಲ್ಲಿ ಫಾಸ್ಟ್‌ ಬೌಲರ್‌ಗಳಿಗೆ ಆಡುವುದು ಸ್ವಲ್ಪ ಕಠಿಣವಾಗಿತ್ತು. ಆದರೆ, ನನ್ನ ಬ್ಯಾಟಿಂಗ್‌ನಿಂದ ನನಗೆ ತೃಪ್ತಿ ಇದೆ. ಸೀಮಿಂಗ್‌ ಇದ್ದ ಕಾರಣ ಪವರ್‌ಪ್ಲೇನಲ್ಲಿ ಸ್ಟ್ರೈಕ್‌ ರೇಟ್‌ ರೊಟೇಟ್‌ ಮಾಡಬೇಕು ಹಾಗೂ ವಿಕೆಟ್‌ ನೀಡಬಾರದು, ಅವಕಾಶ ಸಿಕ್ಕಾಗ ದೊಡ್ಡ ಹೊಡೆತಗಳಿಗೆ ಕೈ ಹಾಕಬೇಕೆಂದು ನಾವು ಮಾತನಾಡಿಕೊಂಡಿದ್ದೆವು. ಜಾಸ್ತಿ ಯೋಚನೆ ಮಾಡದೆ, ಯಾವ ರೀತಿ ಎಸೆತ ಬರುತ್ತದೆ ಅದಕ್ಕೆ ನೀವು ಪ್ರತಿಕ್ರಿಯಿಸಬೇಕೆಂದು ಮನಸಿನಲ್ಲಿ ಅಂದುಕೊಂಡಿದ್ದೆ," ಎಂದು ತಿಳಿಸಿದ್ದಾರೆ.

IND vs ENG: ರೋಹಿತ್‌,ಕೊಹ್ಲಿಯಿಂದ ಸಾಧ್ಯವಾಗದ ಅಪರೂಪದ ದಾಖಲೆ ಬರೆದ ಶುಭಮನ್‌ ಗಿಲ್‌!

259 ರನ್‌ ಕಲೆ ಹಾಕಿದ ಶುಭಮನ್‌ ಗಿಲ್‌

ಇಂಗ್ಲೆಂಡ್‌ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಶುಭಮನ್‌ ಒಂದು ಶತಕ ಹಾಗೂ ಎರಡು ಅರ್ಧಶತಕಗಳು ಸೇರಿದಂತೆ 86.33ರ ಸರಾಸರಿಯಲ್ಲಿ 259 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ಈ ಸರಣಿಯಲ್ಲಿ ವೈಯಕ್ತಿಕ ಗರಿಷ್ಠ ಸ್ಕೋರರ್‌ ಎನಿಸಿಕೊಂಡರು ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇದರೊಂದಿಗೆ ಐಸಿಸಿ ಚಾಂಪಿಯನ್ಸ್‌ ಟ್ರೋಫಿಗೂ ಮುನ್ನ ಶುಭಮನ್‌ ಗಿಲ್‌ ಭರ್ಜರಿ ಫಾರ್ಮ್‌ಗೆ ಮರಳಿದ್ದಾರೆ.