ಭಾರತದ ವಿರುದ್ದ 5 ವಿಕೆಟ್ ಕಿತ್ತು ಶೋಯೆಬ್ ಅಖ್ತರ್ ದಾಖಲೆ ಮುರಿದ ಮ್ಯಾಟ್ ಹೆನ್ರಿ!
Matt Henry took 5 Wickets against India: ಭಾರತದ ವಿರುದ್ದ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಕೊನೆಯ ಲೀಗ್ ಪಂದ್ಯದಲ್ಲಿ ಮಾರಕ ಬೌಲಿಂಗ್ ದಾಳಿ ನಡೆಸಿದ ನ್ಯೂಜಿಲೆಂಡ್ ತಂಡದ ವೇಗಿ ಮ್ಯಾಟ್ ಹೆನ್ರಿ 5 ವಿಕೆಟ್ ಸಾಧನೆ ಮಾಡಿದ್ದಾರೆ. ಆ ಮೂಲಕ ಪಾಕ್ ಮಾಜಿ ವೇಗಿ ಶೋಯೆಬ್ ಅಖ್ತರ್ ಅವರ ಚಾಂಪಿಯನ್ಸ್ ಟ್ರೋಫಿ ದಾಖಲೆಯನ್ನು ಕಿವೀಸ್ ವೇಗಿ ಮುರಿದಿದ್ದಾರೆ.

ಭಾರತದ ವಿರುದ್ಧ 5 ವಿಕೆಟ್ ಸಾಧನೆ ಮಾಡಿದ ಮ್ಯಾಟ್ ಹೆನ್ರಿ.

ದುಬೈ: ಪ್ರಸ್ತುತ ನಡೆಯುತತಿರುವ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ (ICC Champions Trophy 2025) ಟೂರ್ನಿಯಲ್ಲಿ ತಮ್ಮ ಮಾರಕ ಬೌಲಿಂಗ್ ದಾಳಿಯನ್ನು ಮುಂದುವರಿಸಿರುವ ನ್ಯೂಜಿಲೆಂಡ್ ತಂಡದ ವೇಗಿ ಮ್ಯಾಟ್ ಹೆನ್ರಿ (Matt Henry), ಭಾನುವಾರ ಭಾರತದ ವಿರುದ್ಧದ ಪಂದ್ಯದಲ್ಲಿಯೂ ಅದೇ ಲಯವನ್ನು ತೋರಿದ್ದಾರೆ. ಇಲ್ಲಿನ ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಪರಿಣಾಮಕಾರಿಯಾಗಿ ಬೌಲಿಂಗ್ ಪ್ರದರ್ಶನ ತೋರಿದ್ದ ಮ್ಯಾಟ್ ಹೆನ್ರಿ 5 ವಿಕೆಟ್ ಸಾಧನೆಯನ್ನು ಮಾಡಿದ್ದಾರೆ. ಆ ಮೂಲಕ ಭಾರತದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ವಿಶೇಷ ದಾಖಲೆಯನ್ನು ಬರೆದಿದ್ದಾರೆ.
ಈ ಪಂದ್ಯದಲ್ಲಿ ಬೌಲ್ ಮಾಡಿದ 10 ಓವರ್‌ಗಳಲ್ಲಿ ಮ್ಯಾಟ್ ಹೆನ್ರಿ 42 ರನ್ ನೀಡಿ 5 ವಿಕೆಟ್‌ಗಳನ್ನು ಕಬಳಿಸಿದರು. ಭಾರತ ತಂಡದ ಪ್ರಮುಖ ಬ್ಯಾಟ್ಸ್‌ಮನ್‌ಗಳಾದ ಶುಭಮನ್ ಗಿಲ್, ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ, ಹಾರ್ದಿಕ್ ಪಾಂಡ್ಯ ಹಾಗೂ ಮೊಹಮ್ಮದ್ ಶಮಿ ಅವರನ್ನು ಔಟ್ ಮಾಡಿದರು. ಆ ಮೂಲಕ ಭಾರತ ತಂಡ ತನ್ನ ಪಾಲಿನ 50 ಓವರ್‌ಗಳನ್ನು ಪೂರ್ಣಗೊಳಿಸಿದರೂ 9 ವಿಕೆಟ್ ನಷ್ಟಕ್ಕೆ 249 ರನ್‌ಗಳಿಗೆ ಸೀಮಿತವಾಯಿತು. ಆ ಮೂಲಕ ಎದುರಾಳಿ ಕಿವೀಸ್‌ಗೆ 250 ರನ್‌ಗಳ ಗುರಿಯನ್ನು ನೀಡಿತು.
IND vs NZ: ಕೊನೆಯ ಲೀಗ್ ಪಂದ್ಯದಲ್ಲಿ ಟಾಸ್ ಸೋತ ಭಾರತ ಮೊದಲ ಬ್ಯಾಟಿಂಗ್!
ವಿಶೇಷ ದಾಖಲೆ ಬರೆದ ಮ್ಯಾಟ್ ಹೆನ್ರಿ
27 ವರ್ಷಗಳ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಇತಿಹಾಸದಲ್ಲಿಯೇ ಭಾರತದ ಎದುರು 5 ವಿಕೆಟ್ ಸಾಧನೆ ಮಾಡಿದ ವಿಶ್ವದ ಮೊದಲ ಬೌಲರ್ ಎಂಬ ದಾಖಲೆಯನ್ನು ಮ್ಯಾಟ್ ಹೆನ್ರಿ ಬರೆದಿದ್ದಾರೆ. ಇದಕ್ಕೂ ಮುನ್ನ 2004ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತದ ಎದುರು ಪಾಕಿಸ್ತಾನ ತಂಡದ ಮಾಜಿ ವೇಗಿಗಳಾದ ನವೀದ್ ಉಲ್ ಹಸನ್ ಹಾಗೂ ಶೋಯೆಬ್ ಅಖ್ತರ್ ತಲಾ 4 ವಿಕೆಟ್ ಸಾಧನೆ ಮಾಡಿದ್ದರು. ಜಿಂಬಾಬ್ವೆ ಮಾಜಿ ಬೌಲರ್ ಡೌಗ್ಲಾಸ್ ಹೊಂಡೊ ಅವರು 2002ರಲ್ಲಿ ಶ್ರೀಲಂಕಾದ ಕೊಲಂಬೊದಲ್ಲಿ ಭಾರತದ ವಿರುದ್ಧ 4 ವಿಕೆಟ್ ಸಾಧನೆ ಮಾಡಿದ್ದರು.
IND vs NZ: ರವೀಂದ್ರ ಜಡೇಜಾರ ಸ್ಟನಿಂಗ್ ಕ್ಯಾಚ್ ಪಡೆದ ಕೇನ್ ವಿಲಿಯಮ್ಸನ್! ವಿಡಿಯೊ
ಭಾರತದ ವಿರುದ್ದ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಉತ್ತಮ ಬೌಲಿಂಗ್ ಸ್ಪೆಲ್ ಮಾಡಿದವರು
ಮ್ಯಾಟ್ ಹೆನ್ರಿ (ನ್ಯೂಜಿಲೆಂಡ್): 42ಕ್ಕೆ 5, ದುಬೈ 2025
ನವೀದ್ ಉಲ್ ಹಸನ್ (ಪಾಕಿಸ್ತಾನ): 25 ಕ್ಕೆ 4, ಬರ್ಮಿಂಗ್‌ಹ್ಯಾಮ್ 2004
ಶೋಯೆಬ್ ಅಖ್ತರ್ (ಪಾಕಿಸ್ತಾನ): 36 ಕ್ಕೆ 4, ಬರ್ಮಿಂಗ್‌ಹ್ಯಾಮ್ 2004
ಡೌಗ್ಲಸ್ ಹೊಂಡೊ (ಜಿಂಬಾಬ್ವೆ): 62ಕ್ಕೆ 4, ಕೊಲಂಬೊ 2002
ಬ್ರಿಯಾನ್ ಮೆಕೆಂಜಿ ದಾಖಲೆ ಮುರಿದ ಮ್ಯಾಟ್ ಹೆನ್ರಿ
ಭಾರತದ ವಿರುದ್ಧದ ಐಸಿಸಿ ವಿಶ್ವಕಪ್ ಹಾಗೂ ಚಾಂಪಿಯನ್ಸ್ ಟ್ರೋಫಿ ಸೇರಿದಂತೆ ವೈಟ್‌ಬಾಲ್ ಟೂರ್ನಿಗಳಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ ಬೌಲರ್‌ಗಳ ಪಟ್ಟಿಯಲ್ಲಿ ಬ್ರಿಯಾನ್ ಮೆಕೆಂಜಿ ಅವರನ್ನು ಮ್ಯಾಟ್ ಹೆನ್ರಿ ಹಿಂದಿಕ್ಕಿದ್ದಾರೆ. ಬ್ರಿಯಾನ್ ಮೆಕೆಂಜಿ ಭಾರತದ ವಿರುದ್ಧ ಐಸಿಸಿ ವೈಟ್‌ಬಾಲ್ ಟೂರ್ನಿಗಳಲ್ಲಿ 6 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆದರೆ, ಭಾರತದ ವಿರುದ್ಧ ಮ್ಯಾಟ್ ಹೆನ್ರಿ ಆಡಿದ ಮೂರು ಪಂದ್ಯಗಳಿಂದ 9 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
2019ರ ಐಸಿಸಿ ಏಕದಿನ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಮ್ಯಾಟ್ ಹೆನ್ರಿ ಅವರು ಮೂರು ವಿಕೆಟ್‌ಗಳನ್ನು ಕಬಳಿಸಿದ್ದರು. ಆ ಮೂಲಕ ಕಿವೀಸ್ ಗೆಲುವಿನಲ್ಲಿ ಮಹತ್ತರ ಪಾತ್ರವನ್ನು ವಹಿಸಿದ್ದರು.
Matt Henry's sizzling 5️⃣-wicket haul rattled India in Dubai 💪#ChampionsTrophy #NZvIND ✍️: https://t.co/F2UBD2cv49 pic.twitter.com/eMIj0OBzyb
— ICC (@ICC) March 2, 2025
ಸೆಮಿಫೈನಲ್‌ಗೆ ಅರ್ಹತೆ ಪಡೆದಿರುವ ಕಿವೀಸ್
ಟೂರ್ನಿಯ ಲೀಗ್ ಹಂತದಲ್ಲಿ ಆಡಿದ್ದ ಆರಂಭಿಕ ಎರಡೂ ಪಂದ್ಯಗಳಲ್ಲಿ ಗೆಲುವು ಪಡೆಯುವ ಮೂಲಕ ನ್ಯೂಜಿಲೆಂಡ್ ತಂಡ ಸೆಮಿಫೈನಲ್‌ಗೆ ಪ್ರವೇಶ ಮಾಡಿತ್ತು. ಇದೀಗ ಭಾರತದ ವಿರುದ್ಧ ಗೆದ್ದರೂ ಅಥವಾ ಸೋತರೂ ಕಿವೀಸ್‌ಗೆ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ, ಈ ಪಂದ್ಯದಲ್ಲಿ ಗೆದ್ದರೆ ಅಂತಿಮ ನಾಲ್ಕರ ಘಟ್ಟದಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲಿದೆ, ಒಂದು ವೇಳೆ ಸೋತರೆ ದಕ್ಷಿಣ ಆಫ್ರಿಕಾ ಎದುರು ಆಡಲಿದೆ.