ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Luka Modric: ರಿಯಲ್ ಮ್ಯಾಡ್ರಿಡ್‌ಗೆ ಭಾವನಾತ್ಮಕ ವಿದಾಯ ಹೇಳಿದ ಲೂಕಾ ಮಾಡ್ರಿಕ್‌

Real Madrid: "ರಿಯಲ್ ಮ್ಯಾಡ್ರಿಡ್‌ನ ಮೌಲ್ಯಗಳನ್ನು ಯಾವಾಗಲೂ ಸಾಕಾರಗೊಳಿಸಿರುವ ಅನನ್ಯ ಮತ್ತು ಅನುಕರಣೀಯ ಫುಟ್ಬಾಲ್ ಆಟಗಾರನಾಗಿ ಲೂಕಾ ಮಾಡ್ರಿಕ್ ಎಲ್ಲಾ ಮ್ಯಾಡ್ರಿಡಿಸ್ಟ್‌ಗಳ ಹೃದಯದಲ್ಲಿ ಶಾಶ್ವತವಾಗಿ ಉಳಿಯುತ್ತಾರೆ" ಎಂದು ಕ್ಲಬ್ ಅಧ್ಯಕ್ಷ ಫ್ಲೋರೆಂಟಿನೊ ಪೆರೆಜ್ ಹೇಳಿದರು.

ರಿಯಲ್ ಮ್ಯಾಡ್ರಿಡ್‌ಗೆ ಲೂಕಾ ಮಾಡ್ರಿಕ್‌ ಭಾವನಾತ್ಮಕ ವಿದಾಯ

Profile Abhilash BC Jul 10, 2025 2:50 PM

ಲಂಡನ್‌: ಕ್ಲಬ್ ವಿಶ್ವಕಪ್(Club World Cup 2025) ಪಂದ್ಯಾವಳಿಯ ಸೆಮಿಫೈನಲ್‌ ಪಂದ್ಯದಲ್ಲಿ ಪ್ಯಾರೀಸ್ ಸೈಂಟ್-ಜರ್ಮೈನ್ (PSG) ವಿರುದ್ಧ ರಿಯಲ್ ಮ್ಯಾಡ್ರಿಡ್(Real Madrid) ತಂಡ 4-0 ಗೋಲುಗಳಿಂದ ಸೋಲು ಕಂಡಿತ್ತು. ಸೋಲಿನ ಬೆನ್ನಲ್ಲೇ ತಂಡದ ಸ್ಟಾರ್‌ ಆಟಗಾರನಾಗಿದ್ದ 39 ವರ್ಷ ವಯಸ್ಸಿನ ಲೂಕಾ ಮಾಡ್ರಿಕ್‌(Luka Modric) ಅವರು ತಂಡಕ್ಕೆ ಭಾವನಾತ್ಮಕ ವಿದಾಯ ಹೇಳಿದ್ದಾರೆ. ಕ್ರೊಯೇಷಿಯಾ ನಾಯಕ ರಿಯಲ್ ಮ್ಯಾಡ್ರಿಡ್‌ನೊಂದಿಗೆ ಕಳೆದ 13 ವರ್ಷಗಳ ಕಾಲ ಪ್ರತಿನಿಧಿಸಿದ್ದರು. ಈ ವೇಳೆ ತಂಡ 28 ಟ್ರೋಫಿ ಗೆದ್ದಿತ್ತು.

ಮಾಡ್ರಿಕ್‌ ಅವರು ರಿಯಲ್ ಮ್ಯಾಡ್ರಿಡ್ ಪರ 13 ವರ್ಷಗಳಲ್ಲಿ 597 ಪಂದ್ಯಗಳನ್ನು ಆಡಿದ್ದು, ಆರು ಚಾಂಪಿಯನ್ಸ್ ಲೀಗ್‌ಗಳು ಮತ್ತು ನಾಲ್ಕು ದೇಶೀಯ ಪ್ರಶಸ್ತಿಗಳನ್ನು ಒಳಗೊಂಡಂತೆ 28 ಟ್ರೋಫಿಗಳನ್ನು ಗೆದ್ದಿದ್ದರು. 2018 ರ ಬ್ಯಾಲನ್ ಡಿ'ಓರ್ ವಿಜೇತ ಮಾಡ್ರಿಕ್ ಮುಂದಿನ ಋತುವಿನಲ್ಲಿ ಎಸಿ ಮಿಲನ್ ಪರ ಆಡಲಿದ್ದಾರೆ ಎಂದು ತಿಳಿದುಬಂದಿದೆ.

"ಮಾಡ್ರಿಕ್ ಅವರಿಗೆ ಕಹಿಯಾದ ಅಂತ್ಯ. ಆದರೆ ಅವರು ಫುಟ್ಬಾಲ್‌ನ ದಂತಕಥೆ ಮತ್ತು ರಿಯಲ್ ಮ್ಯಾಡ್ರಿಡ್ ಅವರನ್ನು ಶಾಶ್ವತವಾಗಿ ನೆನಪಿಸಿಕೊಳ್ಳುತ್ತದೆ" ಎಂದು ರಿಯಲ್ ಮ್ಯಾಡ್ರಿಡ್ ವ್ಯವಸ್ಥಾಪಕ ಕ್ಸಾಬಿ ಅಲೋನ್ಸೊ ಹೇಳಿದರು.

"ರಿಯಲ್ ಮ್ಯಾಡ್ರಿಡ್ ಪರ ಆಡುವುದು ಒಬ್ಬ ಫುಟ್ಬಾಲ್ ಆಟಗಾರನಾಗಿ ಮತ್ತು ವ್ಯಕ್ತಿಯಾಗಿ ನನ್ನ ಜೀವನವನ್ನು ಬದಲಾಯಿಸಿತು" ಎಂದು ಮಾಡ್ರಿಕ್ ತಮ್ಮ ನಿರ್ಗಮನದ ಬಳಿಕ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದಿದ್ದಾರೆ.



"ಆ ಕ್ಷಣ ಬಂದಿದೆ. ನಾನು ಎಂದಿಗೂ ಬರಲು ಬಯಸದ ಕ್ಷಣ, ಆದರೆ ಅದು ಫುಟ್ಬಾಲ್, ಮತ್ತು ಜೀವನದಲ್ಲಿ ಪ್ರತಿಯೊಂದಕ್ಕೂ ಒಂದು ಆರಂಭ ಮತ್ತು ಅಂತ್ಯವಿದೆ. ನಾನು 2012 ರಲ್ಲಿ ವಿಶ್ವದ ಅತ್ಯುತ್ತಮ ತಂಡದ ಜೆರ್ಸಿಯನ್ನು ಧರಿಸುವ ಭರವಸೆ ಮತ್ತು ಉತ್ತಮ ಕೆಲಸಗಳನ್ನು ಮಾಡುವ ಮಹತ್ವಾಕಾಂಕ್ಷೆಯೊಂದಿಗೆ ಬಂದಿದ್ದೇನೆ, ಆದರೆ ಮುಂದೆ ಏನಾಗುತ್ತದೆ ಎಂದು ನಾನು ಊಹಿಸಲು ಸಾಧ್ಯವಾಗಲಿಲ್ಲ. ಇತಿಹಾಸದಲ್ಲಿ ಅತ್ಯುತ್ತಮ ಕ್ಲಬ್‌ನ ಅತ್ಯಂತ ಯಶಸ್ವಿ ಯುಗಗಳಲ್ಲಿ ಒಂದರ ಭಾಗವಾಗಿರುವುದಕ್ಕೆ ನನಗೆ ಹೆಮ್ಮೆ ಇದೆ" ಎಂದರು.

"ರಿಯಲ್ ಮ್ಯಾಡ್ರಿಡ್‌ನ ಮೌಲ್ಯಗಳನ್ನು ಯಾವಾಗಲೂ ಸಾಕಾರಗೊಳಿಸಿರುವ ಅನನ್ಯ ಮತ್ತು ಅನುಕರಣೀಯ ಫುಟ್ಬಾಲ್ ಆಟಗಾರನಾಗಿ ಮಾಡ್ರಿಕ್ ಎಲ್ಲಾ ಮ್ಯಾಡ್ರಿಡಿಸ್ಟ್‌ಗಳ ಹೃದಯದಲ್ಲಿ ಶಾಶ್ವತವಾಗಿ ಉಳಿಯುತ್ತಾರೆ" ಎಂದು ಕ್ಲಬ್ ಅಧ್ಯಕ್ಷ ಫ್ಲೋರೆಂಟಿನೊ ಪೆರೆಜ್ ಹೇಳಿದರು.