#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Mylaralingeshwara Karnikotsava: ಮುತ್ತಿನ ರಾಶಿಗೆ ಮಂಜು ಮುಸುಕಿತಲೆ ಪರಾಕ್; ಮೈಲಾರಲಿಂಗೇಶ್ವರ ಕಾರ್ಣಿಕ ವಾಣಿಯ ಅರ್ಥವೇನು?

Mylaralingeshwara Karnikotsava: ವಿಜಯನಗರ ಜಿಲ್ಲೆ ಹರಪನಹಳ್ಳಿ ಪಟ್ಟಣದ ಹೊರವಲಯದಲ್ಲಿರುವ ಮೈಲಾರಲಿಂಗೇಶ್ವರ ದೇವಸ್ಥಾನದ ಬಳಿ ಭರತ ಹುಣ್ಣಿಮೆ ಹಿನ್ನೆಲೆಯಲ್ಲಿ ಮೈಲಾರ ಲಿಂಗೇಶ್ವರ ಕಾರ್ಣಿಕೋತ್ಸವ ಬುಧವಾರ ಸಂಜೆ ನಡೆಯಿತು. ಈ ವರ್ಷದ ಮಳೆ-ಬೆಳೆಯ ಬಗ್ಗೆ ಕಾರ್ಣಿಕ ಭವಿಷ್ಯ ಹೇಳಲಾಗಿದೆ.

ಮುತ್ತಿನ ರಾಶಿಗೆ ಮಂಜು ಮುಸುಕಿತಲೆ ಪರಾಕ್: ಕಾರ್ಣಿಕ ನುಡಿ

Profile Prabhakara R Feb 13, 2025 4:31 PM

ಹರಪನಹಳ್ಳಿ: ಹರಪನಹಳ್ಳಿ ಪಟ್ಟಣದ ಹೊರವಲಯದಲ್ಲಿರುವ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ (Mylaralingeshwara Karnikotsava) ಭರತ ಹುಣ್ಣಿಮೆ ಹಿನ್ನೆಲೆಯಲ್ಲಿ ಬುಧವಾರ ಸಂಜೆ ಅದ್ಧೂರಿಯಾಗಿ ಮೈಲಾರ ಕಾರ್ಣಿಕೋತ್ಸವ ನಡೆಯಿತು. ಸಾವಿರಾರು ಭಕ್ತರ ಸಮ್ಮುಖದಲ್ಲಿ ಗೊರವಪ್ಪ ಕೋಟೆಪ್ಪ ಬಿಲ್ಲನ್ನು ಏರಿ, "ಮುತ್ತಿನ ರಾಶಿಗೆ ಮಂಜು ಮುಸುಕೀತಲೆ ಪರಾಕ್" ಎಂದು ಕಾರ್ಣಿಕ ಭವಿಷ್ಯವಾಣಿ ನುಡಿದಿದ್ದಾರೆ. ಗೊರವಪ್ಪ ಕೋಟೆಪ್ಪ ಬಿಲ್ಲನ್ನು ಏರಿ ಸದ್ದಲೇ ಎಂದ ಕೂಡಲೇ ಇಲ್ಲಿ ಸೇರಿದ್ದ ಸಹಸ್ರಾರು ಭಕ್ತರು ಮೌನಕ್ಕೆ ಶರಣಾದರು. ಆಗ ಗೊರವಪ್ಪ ಆಕಾಶವನ್ನೊಮ್ಮೆ ಸುತ್ತಲು ನೋಡಿ ಕಾರ್ಣಿಕ ನುಡಿದು ಕೆಳಕ್ಕೆ ಬೀಳುತ್ತಿದ್ದಂತೆ, ಉಳಿದ ಗೊರವರು ಅವರನ್ನು ನೆಲಕ್ಕೆ ಬೀಳದಂತೆ ಎತ್ತಿ ಹಿಡಿದರು.

ಈ ಕಾರ್ಣಿಕದ ನುಡಿಯ ರೈತರಿಗೆ ಆಪತ್ತಿನ ಮುನ್ಸೂಚನೆ ನೀಡಿದೆ. ಇದು ರಾಜ್ಯದ ಹೊಟ್ಟೆ ತುಂಬಿಸುವ ರೈತರ ಕುರಿತಾಗಿದ್ದು, ಈ ವರ್ಷದ ಮಳೆ-ಬೆಳೆಯ ಭವಿಷ್ಯ ಹೇಳಲಾಗಿದೆ. ರಾಜ್ಯದಲ್ಲಿ ರೈತರು ಮಳೆಗಾಲದಲ್ಲಿ ಬೆಳೆದ ಬೆಳೆಗಳು ಕೊಯ್ಲಿನ ಹಂತದಲ್ಲಿರುವಾಗ ಅನ್ನದಾತರಿಗೆ ಬಾಯಿಗೆ ಬಂದ ತುತ್ತು ಕೈಗೆ ಬಾರದಂತಾಗಬಹುದು ಎಂದು ವಿಶ್ಲೇಷಿಸಲಾಗಿದೆ.



ಈ ವೇಳೆ ಧರ್ಮಕರ್ತ ನಿಚ್ಚವ್ವನಹಳ್ಳಿ ದತ್ತಾತ್ರೇಯ, ಮುಖಂಡರಾದ ನಾಗೇಶ್ವರರಾವ್, ಮಾರ್ತಾಂಡೇಶ್ವರ ರಾವ್, ವಿಶ್ವನಾಥರಾವ್, ಪುರಸಭಾ ಸದಸ್ಯ ಕಿರಣ್ ಶಾನ್ ಬಾಗ್, ಅಗಡಿ ವಿಶ್ವನಾಥ ಚಕ್ರವರ್ತಿ, ಆನಂದವನ ಸೇರಿದಂತೆ ಸಹಸ್ರಾರು ಭಕ್ತರು ಕಾರ್ಣಿಕೋತ್ಸವವನ್ನು ಕುಣ್ತುಂಬಿಕೊಂಡರು.

ಈ ಸುದ್ದಿಯನ್ನೂ ಓದಿ | Murder Case: ನಿಧಿಯಾಸೆಗೆ ಅಮಾಯಕ ವ್ಯಕ್ತಿಯನ್ನು ಕರೆದೊಯ್ದು ನರಬಲಿ

ನೀರಿನ ಕೊಡ ಉರಡತಲೇ, ತುಪ್ಪದ ಕೊಡ ಉಕ್ಕಿತಲೇ ಪರಾಕ್!

mylara karnika

ಹಾವೇರಿ: ಹಾವೇರಿ (Haveri News) ಜಿಲ್ಲೆಯ ಹಾನಗಲ್ ತಾಲೂಕಿನ ಆಡೂರು ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ಬಿಲ್ಲೇರಿದ ಗೊರವಯ್ಯ ರಾಜ್ಯ ಸಂಭ್ರಮಪಡುವಂಥ ಕಾರ್ಣಿಕ (Mylara Karnika) ನುಡಿದಿದ್ದಾರೆ. ಜಾತ್ರೆ ಸಂಭ್ರಮದಿಂದ ನಡೆದಿದ್ದು, ಸಾವಿರಾರು ಸಂಖ್ಯೆಯ ಭಕ್ತರು ಪಾಲ್ಗೊಂಡು ಸಂಭ್ರಮಿಸಿದರು. 12 ಅಡಿ ಎತ್ತರದ ಬಿಲ್ಲೇರಿದ ಗೊರವಯ್ಯ ಹನುಮಗೌಡ ಗುರೇಗೌಡರು ದೈವವಾಣಿ ನುಡಿದಿದ್ದು, 'ನೀರಿನ ಕೊಡ ಉರಡತಲೇ, ತುಪ್ಪದ ಕೊಡ ಉಕ್ಕತಲೇ ಪರಾಕ್' ಎಂದು ನುಡಿದಿದ್ದಾರೆ.

ಮೈಲಾರ ಕಾರ್ಣಿಕ ಶುಭ ಸೂಚನೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಈ ಬಾರಿ ರಾಜ್ಯದಲ್ಲಿ ಉತ್ತಮ ಮಳೆ ಬೆಳೆಯಾಗಲಿದೆ ಎಂದು ವಿಶ್ಲೇಷಣೆ ಮಾಡಿದ್ದಾರೆ. ಈ ಸಲ ಉತ್ತಮ ಮಳೆ ನಿರೀಕ್ಷೆ ಇದೆ. ಕಳೆದ ಬಾರಿ ಮುಂಗಾರು ಮತ್ತು ಹಿಂಗಾರು ಉತ್ತಮವಾಗಿದ್ದ ಕಾರಣ ರಾಜ್ಯದಲ್ಲಿ ನೀರಿನ ಸಮಸ್ಯೆ ಇರಲಿಲ್ಲ. ಮುಖ್ಯವಾಗಿ ಎಲ್ಲಾ ಜಲಾಶಯಗಳು ಭರ್ತಿಯಾಗಿದ್ದು ಬೇಸಿಗೆಯಲ್ಲೂ ನೀರಿಗೆ ಸಮಸ್ಯೆ ಇರುವುದಿಲ್ಲ ಎಂದು ನಿರೀಕ್ಷೆ ಮಾಡಲಾಗಿದೆ.

ಇನ್ನು ಈ ವರ್ಷ ಕೂಡ ಉತ್ತಮ ಮಳೆಯಾದರೆ ರಾಜ್ಯದ ಕೆರೆ ಕಟ್ಟೆಗಳು ಭರ್ತಿಯಾಗಲಿದ್ದು ರೈತರ ಮುಖದಲ್ಲಿ ಮಂದಹಾಸ ಮೂಡಲಿದೆ. ಎಲ್‌ ನಿನೋ ಪರಿಣಾಮದಿಂದಾಗಿ ರಾಜ್ಯದಲ್ಲಿ ಸರಿಯಾಗಿ ಮಳೆಯಾಗಿರಲಿಲ್ಲ. ಈ ವರ್ಷ ಮುಂಗಾರು ವೇಳೆಗೆ ಲಾ ನಿನಾ ಉಂಟಾಗಲಿದ್ದು ಇದು ವ್ಯಾಪಕ ಮಳೆಯನ್ನು ತರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಕಳೆದ ಹಿಂಗಾರು ವೇಳೆಗೆ ಲಾ ನಿನಾ ಉಂಟಾಗಬೇಕಿತ್ತಾದರೂ, ಹವಾಮಾನ ವೈಪರಿತ್ಯದಿಂದ ಈ ವರ್ಷದ ಮುಂಗಾರಿನಲ್ಲಿ ಉಂಟಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: CM Siddaramaiah: ಸಿಎಂ ಕಾಲಿಗೆ ಏನಾಯ್ತು? ವ್ಹೀಲ್‌ ಚೇರ್‌ನಲ್ಲೇ ʼಇನ್ವೆಸ್ಟ್‌ ಕರ್ನಾಟಕʼ ವೇದಿಕೆಗೆ ಬಂದ ಸಿದ್ದರಾಮಯ್ಯ!

ಕಳೆದ ವರ್ಷ ನುಡಿದಿದ್ದ ಕಾರ್ಣಿಕ ನಿಜವಾಗಿತ್ತು ಎನ್ನಲಾಗುತ್ತದೆ. ಕಳೆದ ವರ್ಷ ಹೂವಿನಹಡಗಲಿ ತಾಲೂಕಿನ ಮೈಲಾರದ ಐತಿಹಾಸಿಕ ಮೈಲಾರಲಿಂಗ ʼಸಂಪಾಯಿತಲೇ ಪರಾಕ್ʼ ಎಂದು ನುಡಿದಿದ್ದ ಕಾರ್ಣಿಕ ನಿಜವಾಗಿತ್ತು. ದೈವವಾಣಿಯಂತೆ ರಾಜ್ಯದಲ್ಲಿ ಮಳೆ ಉತ್ತಮವಾಗಿತ್ತು. 2023ರಲ್ಲಿ ಬರಗಾಲದಿಂದ ತತ್ತರಿಸಿದ್ದ ಕರ್ನಾಟಕ ರಾಜ್ಯಕ್ಕೆ ಈ ಕಾರ್ಣಿಕ ನಿಟ್ಟುಸಿರು ಬಿಡುವಂತೆ ಮಾಡಿತ್ತು. ನಂಬಿಕೆಯಂತೆ ರಾಜ್ಯಾದ್ಯಂತ ಭರ್ಜರಿ ಮಳೆಯಾಗಿದ್ದು, ಎಲ್ಲಾ ಜಲಾಶಯಗಳು ತುಂಬಿ ಹರಿದಿವೆ.