Chikkaballapur News: ಸಮರ್ಪಕ ಶಿಕ್ಷಣದಿಂದ ಮಾತ್ರ ಸರ್ವತೋಮುಖ ಸುಧಾರಣೆ ಸಾಧ್ಯ: ಸದ್ಗುರು ಶ್ರೀ ಮಧುಸೂಧನ ಸಾಯಿ
ತಾಲೂ ಕಿನ ಮುದ್ದೇನಹಳ್ಳಿ ಸತ್ಯ ಸಾಯಿಗ್ರಾಮದ ಶ್ರೀ ಸತ್ಯಸಾಯಿ ಪ್ರೇಮಾಮೃತಂ ಸಭಾ ಭವನ ದಲ್ಲಿ ಸೋಮವಾರ ಆಯೋಜಿಸಿದ್ದ ಅಖಿಲ ಭಾರತ ಕುಲಪತಿಗಳ ಸಮ್ಮೇಳನದಲ್ಲಿ ಸಾನಿಧ್ಯ ಉಪನ್ಯಾಸ ನೀಡುತ್ತಾ ಮಾತನಾಡಿದರು. ಜೊತೆಯಾಗಿ ಸಾಗಬೇಕು ಸಮಾನವಾಗಿ ಅಭ್ಯುದಯ ಸಾಧಿಸಬೇಕು ಎಂಬುದು ಭಾರತೀಯ ಶಿಕ್ಷಣ ಪದ್ಧತಿ ಮತ್ತು ಪರಂಪರೆಯ ಜೀವಾಳ.

ಸಮರ್ಪಕ ಶಿಕ್ಷಣವನ್ನು ನೀಡಿದರೆ ಮಾತ್ರ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ದೊರೆಯುತ್ತದೆ. ಅಂತಹ ಗುಣಾತ್ಮಕ ಶಿಕ್ಷಣ ಪಡೆಯುವುದು ಪ್ರತಿಯೊಬ್ಬರ ಹಕ್ಕು ಆಗಬೇಕು ಎಂದು ಸದ್ಗುರು ಶ್ರೀಮಧುಸೂದನ ಸಾಯಿ ಅವರು ತಿಳಿಸಿದರು.

ಚಿಕ್ಕಬಳ್ಳಾಪುರ : ಸಮರ್ಪಕ ಶಿಕ್ಷಣವನ್ನು ನೀಡಿದರೆ ಮಾತ್ರ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ದೊರೆಯುತ್ತದೆ. ಅಂತಹ ಗುಣಾತ್ಮಕ ಶಿಕ್ಷಣ ಪಡೆಯುವುದು ಪ್ರತಿಯೊಬ್ಬರ ಹಕ್ಕು ಆಗಬೇಕು ಎಂದು ಸದ್ಗುರು ಶ್ರೀಮಧುಸೂದನ ಸಾಯಿ ಅವರು ತಿಳಿಸಿದರು. ತಾಲೂ ಕಿನ ಮುದ್ದೇನಹಳ್ಳಿ ಸತ್ಯ ಸಾಯಿಗ್ರಾಮದ ಶ್ರೀ ಸತ್ಯಸಾಯಿ ಪ್ರೇಮಾಮೃತಂ ಸಭಾ ಭವನ ದಲ್ಲಿ ಸೋಮವಾರ ಆಯೋಜಿಸಿದ್ದ ಅಖಿಲ ಭಾರತ ಕುಲಪತಿಗಳ ಸಮ್ಮೇಳನದಲ್ಲಿ ಸಾನಿಧ್ಯ ಉಪನ್ಯಾಸ ನೀಡುತ್ತಾ ಮಾತನಾಡಿದರು. ಜೊತೆಯಾಗಿ ಸಾಗಬೇಕು ಸಮಾನವಾಗಿ ಅಭ್ಯುದಯ ಸಾಧಿಸಬೇಕು ಎಂಬುದು ಭಾರತೀಯ ಶಿಕ್ಷಣ ಪದ್ಧತಿ ಮತ್ತು ಪರಂಪರೆಯ ಜೀವಾಳ. ಅಂತೆಯೇ ಗುರು ಶಿಷ್ಯ ಪರಂಪರೆ ಭಾರ ತೀಯ ಶಿಕ್ಷಣ ಪದ್ಧತಿಯ ಬೆನ್ನೆಲುಬು. ಸದಾಚಾರ ಪರಿಪಾಲನೆ, ವಿವೇಚನೆಯ ಪ್ರಾಪ್ತಿ ಮತ್ತು ಸಮಾಜದ ಸೇವೆ ಭಾರತೀಯ ಶಿಕ್ಷಣದ ದೃಷ್ಟಿಕೋನ.ಬದಲಾದ ಶಿಕ್ಷಣ ವ್ಯವಸ್ಥೆ ಯಿಂದಾಗಿ ಸಮಾಜದಲ್ಲಿ ವೈಪರೀತ್ಯ ಗಳು ತಲೆದೋರುವಂತಾಯಿತು ಎಂದರು.
ಇದನ್ನೂ ಓದಿ: Chikkaballapur Crime: ಎರಡು ದೇವಸ್ಥಾನಗಳ ಹುಂಡಿ ಒಡೆದು ಹಣ ಕಳ್ಳತನ
ನಮ್ಮ ವೈಭವದ ಪರಂಪರೆಯನ್ನು ಮರು ಸ್ಥಾಪಿಸಿ ಪ್ರಾಚೀನ ಕಾಲದಲ್ಲಿದ್ದ ವಿವೇಕಯುಕ್ತ ಶಿಕ್ಷಣವನ್ನು ಮರಳಿ ಸಮಾಜಕ್ಕೆ ಒದಗಿಸುವ ಕಲ್ಪನೆ ಶಿಕ್ಷಣ ಪದ್ಧತಿಯ ಗುರಿಯಾಗಬೇಕು. ಶಿಕ್ಷಣದಲ್ಲಿ ಮೌಲ್ಯ ಅತ್ಯಗತ್ಯ. ಪಾಶ್ಚಾತ್ಯ ಶಿಕ್ಷಣ ಪದ್ಧತಿಗೆ ಮಾರುಹೋದ ಕಾರಣ ಇಂದು ಶಿಕ್ಷಣವು ಸಹ ವಾಣಿಜ್ಯದ ಸರಕಾಗಿ ಹೋಗಿದೆ. ಭಾರತೀಯ ಶಿಕ್ಷಣ ಪುರಾತನ ವೃಕ್ಷವಿದ್ದಂತೆ. ಅದರಲ್ಲಿ ವಿವೇಕ ತುಂಬಿದ ಹೊಸ ಚಿಗುರು ಮೂಡಬೇಕಾಗಿದೆ. ಆ ನಿಟ್ಟಿನಲ್ಲಿ ಕಾರ್ಯ ಸಾಧನೆ ಸಾಧ್ಯವಾದರೆ ನಮ್ಮ ಪ್ರಯತ್ನ ಸಾರ್ಥಕವಾಗುವುದು. ಸರಿಯಾದ ಶಿಕ್ಷಣ ವ್ಯವಸ್ಥೆ ಇಲ್ಲದ ಕಾರಣ ಅಪರಾಧಗಳು ಹೆಚ್ಚುವಂತಾಗಿದೆ. ಸಮರ್ಪಕ ಶಿಕ್ಷಣವನ್ನು ನೀಡಿದರೆ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ. ಅಂತಹ ಶಿಕ್ಷಣ ಪ್ರತಿಯೊಬ್ಬರ ಹಕ್ಕು ಆಗ ಬೇಕು, ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ತಿಳಿಸಿದರು.

ಒಟ್ಟು ಎರಡು ಅವಧಿಯಲ್ಲಿ ನಡೆದ ಸಂವಾದ ಮತ್ತು ವಿಚಾರ ಸಂಕಿರಣ ಶಿಕ್ಷಣದಲ್ಲಿ ಮಾನವೀಯ ಮೌಲ್ಯಗಳ ಅಳವಡಿಕೆಯ ಕುರಿತು ಪ್ರಾಯೋಗಿಕ ಅನುಷ್ಠಾನದ ಬಗೆಗೆ ಚರ್ಚಿಸಲಾಯಿತು. ಈ ಗೋಷ್ಠಿಯಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಹಂತದಲ್ಲಿ ಮೌಲ್ಯಗಳ ಅಳವಡಿಕೆ, ಶಿಕ್ಷಣ ಕ್ರಮ, ಶೈಕ್ಷಣಿಕ ಸಂಶೋಧನೆ, ಶಿಕ್ಷಣದಲ್ಲಿ ಸಾಮಾಜಿಕ ಬದ್ಧತೆ, ಮಾನವೀಯ ಮೌಲ್ಯಗಳ ಪ್ರಾಯೋಗಿಕ ಅನುಷ್ಠಾನ, ಶಿಕ್ಷಣದ ಯಶಸ್ಸಿನಲ್ಲಿ ಪೋಷಕರ ಪಾತ್ರ ಮುಂತಾದ ವಿಚಾರಗಳ ಬಗೆಗೆ ಚರ್ಚಿಸಿ ಮೌಲ್ಯಾಧಾರಿತ ಸಮಗ್ರ ಶಿಕ್ಷಣ ವನ್ನು ರೂಪಿಸಲು ಒಮ್ಮತಕ್ಕೆ ಬರಲಾಯಿತು.
ಈ ಗೋಷ್ಠಿಯಲ್ಲಿ ದೇಶದ ಹದಿನೆಂಟು ರಾಜ್ಯಗಳ 47 ವಿಶ್ವವಿದ್ಯಾಲಯಗಳ ಕುಲಪತಿಗಳು ಭಾಗವಹಿಸಿದ್ದರು. ಶ್ರೀ ಸತ್ಯಸಾಯಿ ವಿಶ್ವವಿದ್ಯಾಲಯದ ಕುಲಾಧಿಪತಿ ಬಿ ಎನ್ ನರಸಿಂಹ ಮೂರ್ತಿ, ಜಾರ್ಖಂಡ್ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊಫೆಸರ್ ಜೈ ಪ್ರಕಾಶ್ ಲಾಲ್, ಗುಜರಾತಿನ ಆತ್ಮೀಯ ವಿಶ್ವವಿದ್ಯಾಲಯದ ಪ್ರೊ.ಚಾನ್ಸಲರ್ ಡಾ ಶೀಲಾ ರಾಮಚಂದ್ರನ್, ಡಾ ಜೆ ಶಶಿಧರ ಪ್ರಸಾದ್ ವಿಚಾರ ಸಂಕಿರಣ ಮತ್ತು ಸಂವಾದದ ನೇತೃತ್ವ ವಹಿಸಿದ್ದರು.
ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಸಂಸ್ಕೃತ ವಿಶ್ವವಿದ್ಯಾಲಯದ ಪ್ರೊಫೆ ಸರ್ ಅಹಲ್ಯಾ ಮಾತನಾಡಿ ಶಿಕ್ಷಣದಲ್ಲಿ ಮೌಲ್ಯಗಳ ಅಳವಡಿಕೆಯ ರೂಪು ರೇಷೆಗಳನ್ನು ತಿಳಿಸಿದರು.
ಜಾರ್ಖಂಡ್ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ ಜಯಪ್ರಕಾಶ್ ಲಾಲ್ ಮಾತನಾಡಿ ಆಧ್ಯಾತ್ಮಿಕ ವಿವೇಕ ಮತ್ತು ಪ್ರಾಯೋಗಿಕ ಜ್ಞಾನ ರಹಿತವಾದ ಶಿಕ್ಷಣ ನಿರ ರ್ಥಕ. ಮೌಲ್ಯಗಳ ಲೇಪನ ಇಲ್ಲದ ಶಿಕ್ಷಣದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಇವೆ ರಡು ಮಿಳಿತವಾದ ಪ್ರಾಯೋಗಿಕ ಶಿಕ್ಷಣ ಇಂದಿನ ಅಗತ್ಯವಾಗಿದೆ, ಎಂದು ಅಭಿಪ್ರಾಯ ಪಟ್ಟರು.
ಸಮಾರೋಪ ಸಮಾರಂಭದಲ್ಲಿ ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯ ದ ಕುಲಾಧಿಪತಿಗಳಾದ ಬಿ ಎನ್ ನರಸಿಂಹಮೂರ್ತಿ ಮಾತನಾಡಿ, ಶಿಕ್ಷಣದಲ್ಲಿ ಮೌಲ್ಯಗಳ ಅಗತ್ಯವನ್ನು ಪ್ರಾಚೀನ ದಾರ್ಶನಿಕರ ಸೂಕ್ತಿ ಮತ್ತು ಅನುಭವಗಳ ಆಧಾರ ದಲ್ಲಿ ಪ್ರತಿ ಪಾದಿಸಿದರು. ಶಿಕ್ಷಣದಲ್ಲಿ ಅಪಾರ ಪ್ರೇಮವನ್ನು ಪೋಷಿಸಿ, ಸರ್ವ ಕಾರ್ಯಗಳಲ್ಲೂ ಸಹಾ ನುಭೂತಿ ಎದ್ದು ತೋರುವ ಪ್ರಾಯೋಗಿಕ ಶಿಕ್ಷಣದ ಮಹತ್ವವನ್ನು ಒತ್ತಿ ಹೇಳಿದರು.
ದೇಶದ ಮೂಲೆ ಮೂಲೆಗಳಿಂದ ಬಂದು ಸಮಾವೇಶಗೊಂಡಿದ್ದ ಬಹುಪಾಲು ಶಿಕ್ಷಣ ತಜ್ಞರನ್ನು ಒಳಗೊಂಡ ಸಮಾರಂಭಕ್ಕೆ ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾ ಲಯದ ಕುಲಪತಿ ಡಾ ಶ್ರೀಕಂಠಮೂರ್ತಿ ಸ್ವಾಗತಿಸಿದರು ಮತ್ತು ಕುಲಸಚಿವರಾದ ಡಾ ಹನುಮಂತ ರಾವ್ ನಾಯುಡು ಆಭಾರಮನ್ನಣೆಯನ್ನು ಸಲ್ಲಿಸಿದರು.
ಸಮಾರೋಪ ಸಮಾರಂಭದ ನಂತರ ಶ್ರೀ ಸತ್ಯಸಾಯಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ನಾದೋಪಾಸನ ಸಂಗೀತ ರಸಮಂಜರಿ ಕಾರ್ಯಕ್ರಮ ನೆರವೇರಿತು.