ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

2ಎ ಮೀಸಲಾತಿ ದೊರಕಿಸಿಕೊಡಲು ಅಗತ್ಯ ಕ್ರಮ: ಶಾಸಕ ಪ್ರದೀಪ್ ಈಶ್ವರ್ ಭರವಸೆ

ಬಲಿಜ ಸಮುದಾಯಕ್ಕೆ ಜನಸಂಖ್ಯೆ ಆಧಾರದಲ್ಲಿ 2ಎ ಮೀಸಲಾತಿ ನೀಡುವುದು ನ್ಯಾಯ ವಾಗಿ ದೆ. ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಪಟ್ಟು ಮೀಸಲಾತಿಯನ್ನು ದೊರಕಿಸಿಕೊಡಲು ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತೇನೆ. ಈ ಸಂಬಂಧ ಈಗಾಗಲೇ ಮುಖ್ಯಮಂತ್ರಿ ಗಳ ಗಮನಕ್ಕೂ ಸಹ ತಂದಿದ್ದೇನೆ.ಭರವಸೆಯಿಡಿ ಮೀಸಲಾತಿ ಸಿಗುವ ಎಲ್ಲಾ ಸಾಧ್ಯತೆಗಳಿವೆ

ಜಿಲ್ಲಾಡಳಿತದಿಂದ ನಡೆದ ಶ್ರೀ ಯೋಗಿ ನಾರೇಯಣ ಯತೀಂದ್ರ ಜಯಂತಿಯಲ್ಲಿ ಹೇಳಿಕೆ

ಚಿಕ್ಕಬಳ್ಳಾಪುರ ನಗರದಲ್ಲಿ ನಡೆದ ಕೈವಾರ ತಾತಯಗಯ ಜಯಂತಿಯಲ್ಲಿ ಶಾಸಕ ಪ್ರದೀಪ್ ಈಶ್ವರ್ ಮಾತನಾಡಿದರು.

Profile Ashok Nayak Mar 15, 2025 12:20 PM

ಚಿಕ್ಕಬಳ್ಳಾಪುರ: ಬಲಿಜ ಸಮುದಾಯಕ್ಕೆ ಉದ್ಯೋಗದಲ್ಲಿ 2ಎ ಮೀಸಲಾತಿ ದೊರಕಿಸಿ ಕೊಡುವ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಕ್ರಮವಹಿಸುವಂತಾಗಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಾಗುವುದು.ನಮ್ಮ ಸರಕಾರದ ಅವಧಿಯಲ್ಲಿಯೇ ಇದನ್ನು ಸಾಕಾರಗೊಳಿಸಲಾಗುವುದು ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು. ನಗರದ ಶ್ರೀ ಯೋಗಿ ನಾರೇಯಣ ದೇವಾಲಯದ ಆವರಣದಲ್ಲಿ ಜಿಲ್ಲಾಡಳಿತ ಹಾಗೂ ಬಲಿಜ ಸಮು ದಾಯದ ವತಿಯಿಂದ ಆಯೋಜಿಸಿದ್ದ "ಶ್ರೀ ಯೋಗಿ ನಾರೇಯಣ ಯತೀಂದ್ರರ 299ನೇ ಜಯಂತಿ"ಯ (ಕೈವಾರ ತಾತಯ್ಯನವರ) ಕಾರ್ಯಕ್ರಮದಲ್ಲಿ ಮಾತನಾಡಿದರು.

ಇದನ್ನೂ ಓದಿ: Chikkaballapur Crime: ಬಸ್ ಮತ್ತು ಬೈಕ್ ನಡುವೆ ಭೀಕರ ಅಪಘಾತ: ಬೈಕ್ ಸವಾರ ಸಾವು

ಬಲಿಜ ಸಮುದಾಯಕ್ಕೆ ಜನಸಂಖ್ಯೆ ಆಧಾರದಲ್ಲಿ 2ಎ ಮೀಸಲಾತಿ ನೀಡುವುದು ನ್ಯಾಯ ವಾಗಿದೆ. ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಪಟ್ಟು ಮೀಸಲಾತಿಯನ್ನು ದೊರಕಿಸಿ ಕೊಡಲು ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತೇನೆ. ಈ ಸಂಬ ಧ ಈಗಾಗಲೇ ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೂ ಸಹ ತಂದಿದ್ದೇನೆ.ಭರವಸೆಯಿಡಿ ಮೀಸಲಾತಿ ಸಿಗುವ ಎಲ್ಲಾ ಸಾಧ್ಯತೆಗಳಿವೆ ಎಂದು ಭರವಸೆ ನೀಡಿದರು.

ಎರಡು ವರ್ಷದ ಹಿಂದೆ ವೇದಿಕೆ ಮೇಲೆ ನನಗೊಂದು ಕುರ್ಚಿ ಇರಲಿಲ್ಲ.ಇವತ್ತು ವೇದಿಕೆಯ ಮೇಲೆ ಪ್ರಧಾನವಾದ ಕುರ್ಚಿಯಲ್ಲಿ ಸ್ಥಾನವಿದೆ. ಇದು ತಾತಯ್ಯ ಬರೆದ ಕಾಲಜ್ಞಾನ.ನಿಮ್ಮ ಸಮುದಾಯದ ಹುಡುನಿಗೆ ನೀವು ಗೆಲ್ಲಿಸಲಿಲ್ಲ ಎಂದರೆ ಅಭಿಮಾನ ತೋರಲಿಲ್ಲ ಎಂದಿ ದ್ದರೆ ನಾನು ಎಂ.ಎಲ್.ಎ ಆಗಲಿ ಆಗುತ್ತಿರಲಿಲ್ಲ. ನೀವು ಬೆಳೆಸಿದ ಹುಡುಗ ಇಂದು ಎಲ್ಲಾ ಸಮುದಾಯದ ಹುಡುಗನಾಗಿ ಆಸ್ತಿಯಾಗಿ ಬೆಳೆದಿದ್ದಾನೆ. ಬಲಿಜ ಸಮುದಾಯದ ಹುಡುಗ ಒಂದಲ್ಲ ಒಂದು ದಿನ ಈ ರಾಜ್ಯವನ್ನು ಆಳಿಯೇ ಆಳುತ್ತಾನೆ. ಪವನ್ ಕಲ್ಯಾಣ್ ಡಿಸಿಎಂ ಆಗುತ್ತಾರೆಂದು ಯಾರಾದರೂ ಊಹೆ ಮಾಡಿದ್ದರಾ? ಹೇಳಿ ಎಂದರು.

2 ಲಕ್ಷ 12 ಸಾವಿರ ಜನರ ನಾವಿಕ ನಾನು.ಈ ಕ್ಷೇತ್ರದ ಹಡುಗನ್ನು ಮುನ್ನಡೆಸುವ ಜವಾ ಬ್ದಾರಿ ನನ್ನ ಮೇಲಿದೆ. ಚುನಾವಣೆಗೂ ಮುನ್ನ ನನ್ನ ಸಮುದಾಯದ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಿದ್ದೆ.ಗೆದ್ದ ನಂತರ ಎಲ್ಲಾ ಸಮುದಾಯದ ವಿದ್ಯಾರ್ಥಿಗಳಿಗೆ ಇದನ್ನು ವಿಸ್ತರಿಸಿ ಕೊಟ್ಟಿದ್ದೇವೆ.ನಾನು ಚುನಾವಣೆಯಲ್ಲಿ ಸಮುದಾಯದ ಮಕ್ಕಳಿಗಾಗಿ ವಿದ್ಯಾರ್ಥಿನಿಲಯ ಕಟ್ಟಿಸುವ ವಾಗ್ದಾನ ನೀಡಿ ಗೆದ್ದಿಲ್ಲ.ಈಗ ಹೇಳುತ್ತಿದ್ದೇನೆ, ಯಾರಿಂದಲೂ ಒಂದು ಪೈಸೆ ಅನುದಾಯ ಪಡೆಯದೆ ನಾನೊಬ್ಬನೇ ಈ ಕೆಲಸ ಮಾಡಿಕೊಡುತ್ತೇವೆ ಎಂದು ಹೇಳಿದರು.

ಸಮುದಾಯದ ಅಭಿವೃದ್ಧಿಗಾಗಿ ಜಿಲ್ಲಾ ಕೇಂದ್ರದಲ್ಲಿ ಸಮುದಾಯ ಭವನ ನಿರ್ಮಿಸಲು ಸರ್ಕಾರ ಜಾಗನೀಡಿದೆ. ಸಮುದಾಯದವರ ಸಹಕಾರ ಮತ್ತು ಸರ್ಕಾರದ ಅನುದಾನ ಪಡೆದು ಸಮುದಾಯ ಭವನವನ್ನು ಶೀಘ್ರವೇ ನಿರ್ಮಿಸಲಾಗುವುದು. ಇದರಂತೆ ಸಮು ದಾಯದವರೂ ಕೂಡ ರಾಜಕೀಯವಾಗಿ ಮತ್ತು ಶೈಕ್ಷಣಿಕವಾಗಿ  ಮುಂದೆ ಬರಲು ಪ್ರಯತ್ನಿ ಸಬೇಕು. ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡುವಂತಹ ಆಸ್ತಿಯಾಗಿ ಎಲ್ಲರೂ ಬೆಳೆಯಬೇಕು ಎಂದು ಸಲಹೆ ನೀಡಿದರು.

2.ಎ ಮೀಸಲಾತಿ ಇಲ್ಲದಿದ್ದರೆ ನಮ್ಮ ಸಮುದಾಯದ ವಿದ್ಯಾರ್ಥಿಗಳಿಗೆ ಎಷ್ಟು ಕಷ್ಟ ಆಗಲಿದೆ ಎಂಬ ಅರಿವು ನನಗಿದೆ.ಯಾವತ್ತೂ ಕೂಡ 2ಎ ತರುತ್ತೇನೆ ಎಂದು ಸಮುದಾಯದ ಮುಂದೆ ಬಂದು ಓಟು ಹಾಕಿಸಿಕೊಂಡಿಲ್ಲ.ನಾನು ಗೆದ್ದ ಮೇಲೆ 2ಎ ತರುತ್ತೇನೆ ಎಂದು ಮಾತು ಕೊಡುತ್ತಿದ್ದೇನೆ.ನನ್ನ ಸಮುದಾಯಕ್ಕೆ ಚಿಕ್ಕಬಳ್ಳಾಪುರದಲ್ಲಿ ಹಾಸ್ಟೆಲ್ ಕಟ್ಟಿಸಿ ಕೊಡುತ್ತೇನೆ. ದೇವರು ನನ್ನ ಚೆನ್ನಾಗಿ ಇಟ್ಟಿದ್ದಾರೆ. ಹಾಗೆ ಮೀಸಲಾತಿ ಕೂಡ ತಂದೇ ತರುತ್ತೇನೆ. ನನ್ನ ಮೇಲೆ ವಿಶ್ವಸವಿಡಿ ಎಂದರು.

ರಾಜಕಾರಣದಲ್ಲಿ ಯಾರು ಎಲ್ಲಿ ಬೇಕಾದರೂ ಬೆಳೆಯಿರಿ,ಅವರವರ ಆದರ್ಶ.ಸಮುದಾಯ ಅಂತ ಬಂದಾಗ, ೨ಎ ಮೀಸಲಾತಿ ವಿಚಾರ ಬಂದಾಗ ಒಂದಾಗಬೇಕಿದೆ.ತಾಲೂಕಿನಲ್ಲಿ ೪೧ಸಾವಿರ ಬಲಿಜ ಸಮುದಾಯದ ಜನಸಂಖ್ಯೆಯಿದೆ.ರಾಜ್ಯದಲ್ಲಿ 45-50ಲಕ್ಷ ಇದೆ.ದಕ್ಷಿಣ ಭಾರತದಲ್ಲಿ ತೆಲಂಗಾಣ, ಆಂದ್ರದಲ್ಲಿ ಬಹುಸಂಖ್ಯಾತ ಸಮುದಾಯ ನಮ್ಮದು.ಇದರ ಅರಿವು ನಿಮಗಿರಲಿ.ನೀವೆಲ್ಲಾದರೂ ಇರಿ 87 ಸಾವಿರ ಮತಗಳನ್ನು ಪಡೆದು ವಿಧಾನಸೌಧಕ್ಕೆ ಹೋಗಿರುವ ಹಿಂದೆ ನೀವಿದ್ದೀರಿ.ಹೀಗಾಗಿ ಈ ಸಮುದಾಯದ ರಕ್ತ ನಾನು. ನನಗೆ ಸ್ವಾರ್ಥ ವಿಲ್ಲ. ಅಮ್ಮ ಆಂಬುಲೆನ್ಸ್ನಲ್ಲಿ ಈವರೆಗೆ 5300 ಜನರನ್ನು ಆಸ್ಪತ್ರೆಗೆ ಸಾಗಿಸಿ ಕಾಪಾಡಿದ್ದೇನೆ. ಆಂಬುಲೆನ್ಸ್ನಲ್ಲಿ ಯಾರನ್ನೂ ಜಾತಿ ಕೇಳಿಲ್ಲ, ಈವರೆಗೆ 4150 ಎಸ್‌ಸಿಎಸ್‌ಟಿ ಜನರನ್ನು ಬೆಂಗಳೂರು ಆಸ್ಪತ್ರೆಗೆ ಸಾಗಿಸಿದ್ದೇವೆ. ಇದು ನಿಮ್ಮ ಸಮುದಾಯದ ಹುಡುಗನ ಕೊಡುಗೆ ಎಂದರು.

ಸಮುದಾಯ ಭವನಕ್ಕೆ ಜಿಲ್ಲಾಡಳಿತ ಭೂಮಿ ನೀಡಿದೆ. ಇದಕ್ಕಾಗಿ ಸರಕಾರ 50 ಲಕ್ಷ ಅನುದಾನ ನೀಡಿದೆ.ಇದು ಸಾಲುವುದಿಲ್ಲ,ಎರಡು ಮೂರು ಕೋಟಿ ಸರಕಾರದಿಂದ ತಂದು ಸುಸಜ್ಜಿತವಾದ ಭವನ ನಿರ್ಮಿಸೋಣ ಎಂದರು.

50 ವರ್ಷದ ನಂತರ ಸಮುದಾಯಕ್ಕೆ ಎಂಎಲ್‌ಎ ಆಗುವ ಅವಕಾಶ ಸಿಕ್ಕಿದೆ. ನಿಮ್ಮೆಲ್ಲರ ಬೆಂಬಲ ನನಗೆ ಬೇಕಿದೆ.ನಾನು ಕನಸು ಮನಸಿನಲ್ಲಿಯೂ ಸಿ.ವಿ.ವೆಂಕಟರಾಯಪ್ಪ ಅವರ ಕುಟುಂಬಕ್ಕೆ ಚೆನ್ನಾಗಿರಲಿ ಎಂದು ಬಯಸುವ ಹುಡುಗ ನಾನು. ನಾನು ದ್ರೋಹ ಮಾಡು ವುದಿಲ್ಲ. ಸರಕಾರಿ ಪದವಿ ಕಾಲೇಜಿನಲ್ಲಿ ನೂತನ ಗ್ರಂಥಾಲಯ ನಿರ್ಮಾಣ ಆಗುತ್ತಿದ್ದು ಇದಕ್ಕೆ ಸಿವಿವಿ ಗ್ರಂಥಾಲಯ ಎಂದು ನಾಮಕರಣ ಮಾಡುತ್ತೇನೆ. ಮುನ್ಸಿಪಲ್ ಕಾಲೇಜು ನೋಡಿದಾಗಲೆಲ್ಲಾ ಸಿವಿವಿ ನೆನಪಾಗುತ್ತಾರೆ.ನಗರದ ಒಂದು ರಸ್ತೆಗೂ ಕೂಡ ಇವರ ಹೆಸರು ನಾಮಕರಣ ಮಾಡುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ವಕೀಲರಾದ ಎನ್.ಅಶ್ವಥ್ ನಾರಾಯಣ ಅವರು ಕೈವಾರ ತಾತಯ್ಯನವರ ಜೀವನ ಚರಿತ್ರೆ ಹಾಗೂ ಅವರ ವಿಚಾರಧಾರೆಗಳ ಕುರಿತು ತಿಳಿಸಿಕೊಟ್ಟರು.

ಕಾರ್ಯಕ್ರಮಕ್ಕೂ ಮುನ್ನ ನಗರದಲ್ಲಿ ಕೈವಾರ ತಾತಯ್ಯನವರ ಹೂವಿನ ಪಲ್ಲಕ್ಕಿ ಗಳೊಂದಿಗೆ ಅದ್ದೂರಿ ಮೆರವಣಿಗೆಯನ್ನು ನಡೆಸಲಾಯಿತು.

ಮೆರವಣಿಗೆಯು ವಾಪಸಂದ್ರದ ಶ್ರೀ ರಂಗನಾಥ ಸ್ವಾಮಿ ದೇವಾಲಯದಿಂದ ಚಾಲನೆ ಗೊಂಡು ಬಿಬಿ ರಸ್ತೆಯ ಮೂಲಕ ಶ್ರೀ ಯೋಗಿ ನಾರೇಯಣ ಯತೀಂದ್ರರ ದೇವಾಲಯ ದವರೆಗೆ ಮೆರವಣಿಗೆ ಸಾಗಿತು. ಜಾನಪದ ಕಲಾತಂಡಗಳು ಮೆರವಣಿಗೆಗೆ ವಿಶೇಷ ಮೆರುಗು ನೀಡಿದವು.

ಕಾರ್ಯಕ್ರಮದಲ್ಲಿ   ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ, ಅಪರ ಜಿಲ್ಲಾಧಿಕಾರಿ ಡಾ. ಎನ್ ಭಾಸ್ಕರ್,ನಗರಸಭೆ ಉಪಾಧ್ಯಕ್ಷ ಎನ್ ನಾಗರಾಜ್, ಜಿಲ್ಲಾ ಪಂಚಾಯತ್ ಕಾರ್ಯದರ್ಶಿ ಅತಿಕ್ ಪಾಷಾ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ್,  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ರವಿಕುಮಾರ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ನಗರ ಸಭೆ ಸದಸ್ಯ ನರಸಿಂಹಮೂರ್ತಿ, ಸಮುದಾ ಯದ ಮುಖಂಡರಾದ ಪಿ ಮಂಜುನಾಥ್, ಗಡ್ಡಂ ನಾಗರಾಜು, ಮುಸ್ಟೂರು ಶಶಿ, ನಾಗಭೂ ಷಣ್, ಜಿ. ವಿ ಮಂಜುನಾಥ್, ಎಸ್ ಎನ್ ಅಶ್ವಥ್ ನಾರಾಯಣ್ ಸಮುದಾಯದ ಸದಸ್ಯರು, ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.