ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

RCB vs MI: ಮುಂಬೈ ಇಂಡಿಯನ್ಸ್‌ ಎದುರು ಆರ್‌ಸಿಬಿಗೆ ಸಿಕ್ಕ ಟರ್ನಿಂಗ್‌ ಪಾಯಿಂಟ್‌ ಯಾವುದು?

RCB vs MI: ವಾಂಖೆಡೆ ಕ್ರೀಡಾಂಗಣದಲ್ಲಿ ಸೋಮವಾರ ನಡೆದಿದ್ದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂಬೈ ಇಂಡಿಯನ್ಸ್ ತಂಡವನ್ನು 12 ರನ್‌ಗಳಿಂದ ಸೋಲಿಸಿತು. ವಿರಾಟ್ ಕೊಹ್ಲಿ ಮತ್ತು ರಜತ್ ಪಾಟಿದಾರ್ ಅರ್ಧಶತಕ ಗಳಿಸಿದರು. ಆರ್‌ಸಿಬಿ ಮುಂಬೈ ಇಂಡಿಯನ್ಸ್‌ಗೆ 222 ರನ್‌ಗಳ ಗುರಿ ನೀಡಿತ್ತು. ಆದರೆ ಮುಂಬೈ ತಂಡ 20 ಓವರ್‌ಗಳಲ್ಲಿ ಕೇವಲ 209 ರನ್ ಗಳಿಸಲು ಶಕ್ತವಾಯಿತು. ತಿಲಕ್ ವರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಸ್ಪೋಟಕ ಬ್ಯಾಟ್‌ ಮಾಡಿದ್ದರು. ಆದರೆ, ಅವರಿಂದ ತನ್ನ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ.

ಮುಂಬೈ ಪಂದ್ಯದಲ್ಲಿ ಆರ್‌ಸಿಬಿಗೆ ಟರ್ನಿಂಗ್‌ ಪಾಯಿಂಟ್‌ ಸಿಕ್ಕಿದ್ದು ಎಲ್ಲಿ?

ಹಾರ್ದಿಕ್‌ ಪಾಂಡ್ಯ ವಿಕೆಟ್‌ ಕಿತ್ತಿದ್ದ ಜಾಶ್‌ ಹೇಝಲ್‌ವುಡ್‌.

Profile Ramesh Kote Apr 8, 2025 9:19 AM

ಮುಂಬೈ: ಮುಂಬೈನ ಐತಿಹಾಸಿಕ ವಾಂಖೆಡೆ ಕ್ರೀಡಾಂಗಣದಲ್ಲಿ ಆತಿಥೇಯ ಮುಂಬೈ ಇಂಡಿಯನ್ಸ್‌ ಎದುರಿನ ಪಂದ್ಯದಲ್ಲಿ (RCB vs MI) ರಾಯಲ್ ಚಾಲೆಂಜರ್ಸ್ ಬೆಂಗಳೂರು 12 ರನ್‌ಗಳಿಂದ ರೋಚಕ ಗೆಲುವು ಸಾಧಿಸಿತು. ಎರಡೂ ತಂಡಗಳು ಅದ್ಭುತವಾಗಿ ಬ್ಯಾಟಿಂಗ್ ನಡೆಸಿದ್ದವು. ಆದರೆ ಆರ್‌ಸಿಬಿ (Royal Challengers Bengaluru) ಉತ್ತಮ ಪ್ರದರ್ಶನ ನೀಡಿ ಪಂದ್ಯವನ್ನು ಗೆದ್ದುಕೊಂಡಿತು. ಹತ್ತು ವರ್ಷಗಳ ನಂತರ ಆರ್‌ಸಿಬಿ ತಂಡವು ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ತಂಡವನ್ನು ಸೋಲಿಸಿದೆ. ಆದರೆ, ಮುಂಬೈ ಇಂಡಿಯನ್ಸ್ ಗೆಲುವಿನ ಸಮೀಪಕ್ಕೆ ಬಂದಿತ್ತು. ನಾಯಕ ಹಾರ್ದಿಕ್ ಪಾಂಡ್ಯ ಮತ್ತು ತಿಲಕ್ ವರ್ಮಾ ಒಟ್ಟಾಗಿ ಬೌಂಡರಿ ಮತ್ತು ಸಿಕ್ಸರ್‌ಗಳನ್ನು ಬಾರಿಸಿ ತಂಡವನ್ನು ಗೆಲ್ಲಿಸುವ ಹಾದಿಯಲ್ಲಿದ್ದರು. ಆದರೆ ಇವರು ಅಂತಿಮ ಹಂತದಲ್ಲಿ ತಮ್ಮ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಈ ಜೋಡಿ ವಿಫಲವಾಗಿತ್ತು. ಅಂದ ಹಾಗೆ ಈ ಪಂದ್ಯಕ್ಕೆ ಟರ್ನಿಂಗ್‌ ಪಾಯಿಂಟ್‌ ಯಾವುದೆಂದು ಇಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ.

ಈ ಪಂದ್ಯದಲ್ಲಿ ಆರ್‌ಸಿಬಿ ನೀಡಿದ್ದ 222 ರನ್‌ಗಳ ಗುರಿಯನ್ನು ಹಿಂಬಾಲಿಸಿದ್ದ ಮುಂಬೈ ಇಂಡಿಯನ್ಸ್ ಪರ ಅಗ್ರ ನಾಲ್ವರು ಬ್ಯಾಟ್ಸ್‌ಮನ್‌ಗಳು ವಿಫಲರಾಗುತ್ತಾರೆ. ಆದರೆ, ತಿಲಕ್‌ ವರ್ಮಾ ಹಾಗೂ ಹಾರ್ದಿಕ್‌ ಪಾಂಡ್ಯ 34 ಎಸೆತಗಳಲ್ಲಿ88 ರನ್‌ಗಳ ಜೊತೆಯಾಟವನ್ನು ಆಡುವ ಮೂಲಕ ಮುಂಬೈ ಇಂಡಿಯನ್ಸ್‌ ತಂಡದ ಗೆಲುವಿನ ಹಾದಿಯನ್ನು ಸುಗಮಗೊಳಿಸಿದ್ದರು. ತಿಲಕ್‌ 29 ಎಸೆತಗಳಲ್ಲಿ 56 ರನ್‌ ಗಳಿಸಿದ್ದರೆ, ಹಾರ್ದಿಕ್‌ ಪಾಂಡ್ಯ 15 ಎಸೆತಗಳಲ್ಲಿ 42 ರನ್‌ಗಳನ್ನು ಚಚ್ಚಿದ್ದರು. ಈ ವೇಳೆ ಮುಂಬೈ ಇಂಡಿಯನ್ಸ್‌ ಗೆಲ್ಲುವುದು ಬಹುತೇಕ ಖಚಿತ ಎಂದು ಎಲ್ಲರೂ ಭಾವಿಸಿದ್ದರು. ಆದರೆ, 18ನೇ ಓವರ್‌ನಲ್ಲಿ ತಿಲಕ್‌ ವರ್ಮಾ ಅವರನ್ನು ಔಟ್‌ ಮಾಡುವಲ್ಲಿ ಭುವನೇಶ್ವರ್‌ ಕುಮಾರ್‌ ಯೋಜನೆ ಯಶಸ್ವಿಯಾಯಿತು. ಆದರೂ ಮತ್ತೊಂದು ತುದಿಯಲ್ಲಿ ಹಾರ್ದಿಕ್‌ ಪಾಂಡ್ಯ ಕ್ರೀಸ್‌ನಲ್ಲಿದ್ದ ಕಾರಣ ಆರ್‌ಸಿಬಿಗೆ ಗೆಲುವು ಕಷ್ಟವಿತ್ತು.

RCB vs MI: 10 ವರ್ಷಗಳ ಬಳಿಕ ವಾಂಖೆಡೆಯಲ್ಲಿ ಮುಂಬೈಗೆ ಸೋಲುಣಿಸಿದ ಆರ್‌ಸಿಬಿ!

ಆರ್‌ಸಿಬಿ ಪಾಲಿಗೆ ಟರ್ನಿಂಗ್‌ ಪಾಯಿಂಟ್‌ ಯಾವುದು?

ಪಂದ್ಯದ 19ನೇ ಓವರ್ ಬೌಲ್‌ ಮಾಡಲು ಆರ್‌ಸಿಬಿ ಪರವಾಗಿ ಜಾಶ ಹೇಝಲ್‌ವುಡ್ ಆಗಮಿಸುತ್ತಾರೆ. ಆ ಓವರ್‌ನ ಮೊದಲ ಎಸೆತದಲ್ಲೇ ಹಾರ್ದಿಕ್ ಪಾಂಡ್ಯ ಸ್ಟ್ರೈಕ್‌ನಲ್ಲಿದ್ದರು. ಈ ವೇಳೆ ಕೊನೆಯ ಎರಡು ಓವರ್‌ಗಳಲ್ಲಿ ಮುಂಬೈಗೆ 28 ರನ್‌ ಅಗತ್ಯವಿತ್ತು. ಅದರಂತೆ ಪಾಂಡ್ಯ ಮೊದಲ ಎಸೆತದಲ್ಲೇ ಸಿಕ್ಸರ್ ಹೊಡೆಯಲು ಪ್ರಯತ್ನಿಸಿದ್ದರು. ಆದರೆ, ಅವರು ಚೆಂಡಿಗೆ ಸರಿಯಾಗಿ ಟೈಮ್‌ ಮಾಡುವಲ್ಲಿ ವಿಫಲರಾಗಿ ಡೀಪ್ ಮಿಡ್-ವಿಕೆಟ್‌ನಲ್ಲಿ ಲಿಯಾಮ್ ಲಿವಿಂಗ್‌ಸ್ಟೋನ್‌ಗೆ ಕ್ಯಾಚ್ ಕೊಟ್ಟರು. ಹಾರ್ದಿಕ್ ಪಾಂಡ್ಯ ವಿಕೆಟ್ ಉರುಳಿಸಿದ ನಂತರ ಇಡೀ ಪಂದ್ಯದ ಚಿತ್ರಣ ಸಂಪೂರ್ಣ ಬದಲಾಯಿತು. 19ನೇ ಓವರ್‌ನಲ್ಲಿ ಹೇಝಲ್‌ವುಡ್ ಕೇವಲ 9 ರನ್‌ಗಳನ್ನು ನೀಡಿದರು.



221 ರನ್‌ಗಳನ್ನು ಕಲೆ ಹಾಕಿದ್ದ ಆರ್‌ಸಿಬಿ

ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿತು. ಬಹುಶಃ ಅವರು ಆರ್‌ಸಿಬಿಯನ್ನು ಕಡಿಮೆ ಸ್ಕೋರ್‌ಗೆ ಕಟ್ಟಿ ಹಾಕಲು ಬಯಸಿದ್ದರು. ಆದರೆ ಆರ್‌ಸಿಬಿ ಪ್ಲ್ಯಾನ್‌ ಬೇರೆ ಇತ್ತು. ವಿರಾಟ್ ಕೊಹ್ಲಿ ಮತ್ತು ರಜತ್ ಪಾಟಿದಾರ್ ಸ್ಪೋಟಕ ಬ್ಯಾಟ್‌ ಮಾಡಿದ್ದರು. ಇಬ್ಬರೂ ಅರ್ಧಶತಕ ಸಿಡಿಸಿದರು. ಕೊಹ್ಲಿ 42 ಎಸೆತಗಳಲ್ಲಿ 8 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ 67 ರನ್ ಗಳಿಸಿದ್ದರು. ಪಾಟಿದಾರ್ ಕೂಡ ಬೇಗನೆ ರನ್ ಗಳಿಸಿದರು. ಅವರು 32 ಎಸೆತಗಳಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್‌ಗಳೊಂದಿಗೆ 64 ರನ್ ಗಳಿಸಿದರು. ಜಿತೇಶ್ ಶರ್ಮಾ ಕೂಡ 19 ಎಸೆತಗಳಲ್ಲಿ 40 ರನ್ ಗಳಿಸಿ ಅಜೇಯರಾಗಿ ಉಳಿದರು. ಆ ಮೂಲಕ ಆರ್‌ಸಿಬಿ 5 ವಿಕೆಟ್‌ಗೆ 221 ರನ್ ಗಳಿಸಿತ್ತು. ಹಾರ್ದಿಕ್ ಪಾಂಡ್ಯ ಮತ್ತು ಟ್ರೆಂಟ್ ಬೌಲ್ಟ್ ತಲಾ ಎರಡು ವಿಕೆಟ್ ಪಡೆದರು.

RCB vs MI: ತಮಗೆ ಸಿಕ್ಕ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಬೌಲರ್‌ಗಳಿಗೆ ಸಮರ್ಪಿಸಿ ಹೃದಯವಂತಿಕೆ ಮೆರೆದ ರಜತ್‌ ಪಾಟಿದಾರ್‌!

209 ರನ್‌ಗಳಿಗೆ ಸೀಮಿತವಾದ ಮುಂಬೈ

222 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್‌ಗೆ ನಿರೀಕ್ಷಿತ ಆರಂಭ ಸಿಗಲಿಲ್ಲ. ರೋಹಿತ್‌ ಶರ್ಮಾ ಹಾಗೂ ರಿಯಾನ್‌ ರಿಕೆಲ್ಟನ್‌ ತಲಾ 17 ರನ್‌ಗಳನ್ನು ಗಳಿಸಿ ವಿಕೆಟ್‌ ಒಪ್ಪಿಸಿದರು. ಸೂರ್ಯಕುಮಾರ್‌ ಯಾದವ್‌ ಹಾಗೂ ವಿಲ್‌ ಜ್ಯಾಕ್ಸ್‌ ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಆದರೆ, ತಿಲಕ್ ವರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದರು. ತಿಲಕ್‌ 29 ಎಸೆತಗಳಲ್ಲಿ 56 ರನ್ ಗಳಿಸಿದ್ದರೆ, ಹಾರ್ದಿಕ್‌ 280 ಸ್ಟ್ರೈಕ್ ರೇಟ್‌ನಲ್ಲಿ ರನ್ ಸಿಡಿಸಿದ್ದರು. ಇವರ ಪ್ರಯತ್ನದಿಂದಾಗಿ ಮುಂಬೈ ಗೆಲುವಿನ ಹಾದಿಯಲ್ಲಿತ್ತು. ಆದರೆ, ಇವರಿಬ್ಬರ ಪ್ರಯತ್ನದ ಹೊರತಾಗಿಯೂ, ಮುಂಬೈ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 209 ರನ್‌ಗಳಿಗೆ ಸೀಮಿತವಾಯಿತು. ಆ ಮೂಲಕ ಐದು ಬಾರಿ ಚಾಂಪಿಯನ್ಸ್‌ 12 ರನ್‌ಗಳಿಂದ ಸೋಲು ಅನುಭವಿಸಿತು. ಆರ್‌ಸಿಬಿ ಪರ ಕೃಣಾಲ್ ಪಾಂಡ್ಯ ಗರಿಷ್ಠ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದರು. ಇದಲ್ಲದೆ, ಯಶ್ ದಯಾಳ್ ಮತ್ತು ಜಾಶ್ ಹೇಝಲ್‌ವುಡ್ ತಲಾ ಎರಡು ವಿಕೆಟ್ ಪಡೆದರು.