ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Champions Trophy 2025: ಇಂಗ್ಲೆಂಡ್‌ ವಿರುದ್ಧ ಗೆದ್ದು ಸೆಮೀಸ್‌ ತಲುಪಿದ ದಕ್ಷಿಣ ಆಫ್ರಿಕಾ!

SA vs ENG Match Highlights: 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ 11ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಅನ್ನು 7 ವಿಕೆಟ್‌ಗಳಿಂದ ಸೋಲಿಸಿತು. ಈ ಪಂದ್ಯದ ಗೆಲುವಿನೊಂದಿಗೆ ದಕ್ಷಿಣ ಆಫ್ರಿಕಾ ತಂಡ, ಸೆಮಿಫೈನಲ್‌ಗೆ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಆದರೆ ಇಂಗ್ಲೆಂಡ್ ತಂಡವು ಒಂದೂ ಪಂದ್ಯವನ್ನೂ ಗೆಲ್ಲದೆ ತನ್ನ ಟೂರ್ನಿಯ ಅಭಿಯಾನವನ್ನು ಮುಗಿಸಿದೆ.

ಇಂಗ್ಲೆಂಡ್‌ಗೆ ಮತ್ತೊಂದು ಮುಖಭಂಗ, ಸೆಮಿಫೈನಲ್‌ಗೇರಿದ ದಕ್ಷಿಣ ಆಫ್ರಿಕಾ!

ಇಂಗ್ಲೆಂಡ್‌ ವಿರುದ್ಧ ದಕ್ಷಿಣ ಆಫ್ರಿಕಾ ತಂಡಕ್ಕೆ 7 ವಿಕೆಟ್‌ ಜಯ.

Profile Ramesh Kote Mar 1, 2025 9:23 PM

ಕರಾಚಿ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ 11ನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ದಕ್ಷಿಣ ಆಫ್ರಿಕಾ 7 ವಿಕೆಟ್‌ಗಳಿಂದ ಭರ್ಜರಿ ಗೆಲುವು ಪಡೆದಿದೆ. ಈ ಗೆಲುವಿನೊಂದಿಗೆ ದಕ್ಷಿಣ ಆಫ್ರಿಕಾ ತಂಡ ಸೆಮಿಫೈನಲ್‌ಗೆ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಅಷ್ಟೇ ಅಲ್ಲ, ದಕ್ಷಿಣ ಆಫ್ರಿಕಾ ತಂಡವು ಉತ್ತಮ ರನ್‌ರೇಟ್‌ನೊಂದಿಗೆ ಗ್ರೂಪ್ ಬಿ ನಲ್ಲಿ ಅಗ್ರಸ್ಥಾನವನ್ನು ಅಲಂಕರಿಸಿದೆ. ಆದರೆ ಜೋಸ್‌ ಬಟ್ಲರ್‌ ನಾಯಕತ್ವದ ಇಂಗ್ಲೆಂಡ್‌ ತಂಡ, ಒಂದೂ ಪಂದ್ಯವನ್ನು ಗೆಲ್ಲದೆ ಟೂರ್ನಿಯಲ್ಲಿ ತನ್ನ ಅಭಿಯಾನವನ್ನು ಮುಗಿಸಿದೆ.

ಶನಿವಾರ ಇಲ್ಲಿನ ನ್ಯಾಷನಲ್‌ ಸ್ಟೇಡಿಯಂನಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡ ಮೊದಲು ಬ್ಯಾಟ್‌ ಮಾಡಿ 179 ರನ್‌ಗಳಿಗೆ ಆಲ್‌ಔಟ್‌ ಆಗಿತ್ತು. ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿತು. ಇದಕ್ಕೆ ಪ್ರತಿಯಾಗಿ ದಕ್ಷಿಣ ಆಫ್ರಿಕಾ ತಂಡ 29.1 ಓವರ್‌ಗಳಲ್ಲಿ ಕೇವಲ 3 ವಿಕೆಟ್‌ಗಳನ್ನು ಕಳೆದುಕೊಂಡು ಗುರಿ ತಲುಪಿತು. ಆ ಮೂಲಕ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತು. ಚಾಂಪಿಯನ್ಸ್ ಟ್ರೋಫಿ ಟೂರ್ನಿಯು ಕೊನೆಯ ಲೀಗ್ ಪಂದ್ಯ ಮಾರ್ಚ್ 2 ರಂದು ದುಬೈನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯಲಿದೆ.

IND vs NZ: ಭಾರತ-ಕಿವೀಸ್‌ ಪಂದ್ಯದ ಪಿಚ್‌ ರಿಪೋರ್ಟ್‌, ಸಂಭಾವ್ಯ ತಂಡ ಹೇಗಿದೆ?

ಡುಸೆನ್‌, ಕ್ಲಾಸೆನ್ ಅರ್ಧಶತಕ

ಇಂಗ್ಲೆಂಡ್ ನೀಡಿದ್ದ ಅಲ್ಪ ಮೊತ್ತದ ಗುರಿಯನ್ನು ಹಿಂಬಾಲಿಸಿದ್ದ ದಕ್ಷಿಣ ಆಫ್ರಿಕಾ ತಂಡ ಆರಂಭ ಉತ್ತಮವಾಗಿರಲಿಲ್ಲ. ಆಫ್ರಿಕಾ ತಂಡ 11 ರನ್‌ಗಳಿಗೆ ಮೊದಲ ವಿಕೆಟ್ ಅನ್ನು ಕಳೆದುಕೊಂಡಿತು. ಮೊದಲ ವಿಕೆಟ್‌ ಪತನದ ನಂತರ ದಕ್ಷಿಣ ಆಫ್ರಿಕಾ ತಂಡ, ಸ್ವಲ್ಪ ಸಮಯದವರೆಗೆ ಒತ್ತಡಕ್ಕೆ ಒಳಗಾಯಿತು, ಆದರೆ ಅದರ ನಂತರ ಹೆನ್ರಿ ಕ್ಲಾಸೆನ್ ಮತ್ತು ರಾಸಿ ವ್ಯಾನ್ ಡೆರ್ ಡುಸೆನ್ ಜವಾಬ್ದಾರಿಯುತವಾಗಿ ಬ್ಯಾಟ್‌ ಮಾಡಿ ದಕ್ಷಿಣ ಆಫ್ರಿಕಾ ತಂಡವನ್ನು ಗೆಲುವಿನ ದಡವನ್ನು ಸೇರಿಸಿದರು. 56 ಎಸೆತಗಳಲ್ಲಿ 64 ರನ್ ಗಳಿಸಿದ ಹೆನ್ರಿಕ್‌ ಕ್ಲಾಸೆನ್‌ ಕೊನೆಯ ಹಂತದಲ್ಲಿ ವಿಕೆಟ್‌ ಒಪ್ಪಿಸಿದರು.



ರಾಸಿ ವ್ಯಾನ್‌ ಡುಸೆನ್ ದಕ್ಷಿಣ ಆಫ್ರಿಕಾ ಪರ 87 ಎಸೆತಗಳಲ್ಲಿ 72 ರನ್ ಗಳಿಸಿದರು. ತಮ್ಮ ಇನಿಂಗ್ಸ್‌ನಲ್ಲಿ ಡುಸನ್ 6 ಬೌಂಡರಿ ಮತ್ತು 3 ಸಿಕ್ಸರ್‌ಗಳನ್ನು ಬಾರಿಸಿದರು. ರಯಾನ್ ರಿಕಲ್ಟನ್ ತಂಡಕ್ಕೆ 27 ರನ್ ಕೊಡುಗೆ ನೀಡಿದರು. ಆದರೆ ಚಾಂಪಿಯನ್ಸ್ ಟ್ರೋಫಿಯಲ್ಲಿ ತಮ್ಮ ಮೊದಲ ಪಂದ್ಯವನ್ನು ಆಡಿದ ಟ್ರಿಸ್ಟನ್ ಸ್ಟಬ್ಸ್ ಖಾತೆ ತೆರೆಯದೆ ಪೆವಿಲಿಯನ್‌ಗೆ ಮರಳಿದರು. ಆದಾಗ್ಯೂ, ಇಂಗ್ಲೆಂಡ್ ಬೌಲರ್‌ಗಳು ದಕ್ಷಿಣ ಆಫ್ರಿಕಾದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ಗೆ ಹೆಚ್ಚು ತೊಂದರೆ ನೀಡಲಿಲ್ಲ, ಇದರಿಂದಾಗಿ ತಂಡವು ಪಂದ್ಯವನ್ನು ಸುಲಭವಾಗಿ ಗೆದ್ದುಕೊಂಡಿತು.



ಮಾರಕ ಬೌಲಿಂಗ್‌ ದಾಳಿ ನಡೆಸಿದ್ದ ದಕ್ಷಿಣ ಆಫ್ರಿಕಾ

ದಕ್ಷಿಣ ಆಫ್ರಿಕಾದ ಎಡಗೈ ವೇಗಿ ಮಾರ್ಕೊ ಯೆನ್ಸನ್‌ (39 ರನ್‌ಗಳಿಗೆ ಮೂರು ವಿಕೆಟ್‌ಗಳು) ಹೊಸ ಚೆಂಡಿನಲ್ಲಿ ಮೂರು ಪ್ರಮುಖ ವಿಕೆಟ್‌ಗಳನ್ನು ಪಡೆಯುವ ಮೂಲಕ ಇಂಗ್ಲೆಂಡ್‌ ತಂಡಕ್ಕೆ ಆರಂಭಿಕ ಆಘಾತ ನೀಡಿದ್ದರು. ಮಧ್ಯದ ಓವರ್‌ಗಳಲ್ಲಿ ವಿಯಾನ್ ಮುಲ್ಡರ್ (3-25) ಮತ್ತು ಕೇಶವ್ ಮಹಾರಾಜ್ (2-35) ಒತ್ತಡ ಹೇರಿದ್ದರು. ಆ ಮೂಲಕ ಇಂಗ್ಲೆಂಡ್‌ ತಂಡ ಅಲ್ಪ ಮೊತ್ತಕ್ಕೆ ಕುಸಿಯಲು ಕಾರಣವಾಯಿತು.

ಮಾರಕ ಬೌಲಿಂಗ್‌ ದಾಳಿ ನಡೆಸಿದ್ದ ದಕ್ಷಿಣ ಆಫ್ರಿಕಾ

ದಕ್ಷಿಣ ಆಫ್ರಿಕಾದ ಎಡಗೈ ವೇಗಿ ಮಾರ್ಕೊ ಯೆನ್ಸನ್‌ (39 ರನ್‌ಗಳಿಗೆ ಮೂರು ವಿಕೆಟ್‌ಗಳು) ಹೊಸ ಚೆಂಡಿನಲ್ಲಿ ಮೂರು ಪ್ರಮುಖ ವಿಕೆಟ್‌ಗಳನ್ನು ಪಡೆಯುವ ಮೂಲಕ ಇಂಗ್ಲೆಂಡ್‌ ತಂಡಕ್ಕೆ ಆರಂಭಿಕ ಆಘಾತ ನೀಡಿದ್ದರು. ಮಧ್ಯದ ಓವರ್‌ಗಳಲ್ಲಿ ವಿಯಾನ್ ಮುಲ್ಡರ್ (3-25) ಮತ್ತು ಕೇಶವ್ ಮಹಾರಾಜ್ (2-35) ಒತ್ತಡ ಹೇರಿದ್ದರು. ಆ ಮೂಲಕ ಇಂಗ್ಲೆಂಡ್‌ ತಂಡ ಅಲ್ಪ ಮೊತ್ತಕ್ಕೆ ಕುಸಿಯಲು ಕಾರಣವಾಯಿತು. ಇಂಗ್ಲೆಂಡ್‌ ತಂಡದ ಪರ ಮಾಜಿ ನಾಯಕ ಜೋ ರೂಟ್‌ 37 ರನ್‌ ಗಳಿಸಿ ವೈಯಕ್ತಿಕ ಗರಿಷ್ಠ ಸ್ಕೋರರ್‌ ಎನಿಸಿಕೊಂಡರು. ಜೋ ರೂಟ್‌ ಬಿಟ್ಟರೆ ಬೆನ್‌ ಡಕೆಟ್‌ (24), ಜೋಸ್‌ ಬಟ್ಲರ್‌ (21) ಹಾಗೂ ಜೋಫ್ರಾ ಆರ್ಚರ್‌ (25) ಅವರು ವೈಯಕ್ತಿಕ 20 ರನ್‌ ಗಡಿ ದಾಟಿದ್ದು, ಬಿಟ್ಟರೆ ಇನ್ನುಳಿದ ಸ್ಟಾರ್‌ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಅನುಭವಿಸಿದರು.

IND vs NZ: ನೆಟ್‌ ಬೌಲರ್‌ಗೆ ವಿಶೇಷ ಉಡುಗೊರೆ ನೀಡಿ ಹೃದಯವಂತಿಕೆ ಮೆರೆದ ಶ್ರೇಯಸ್‌ ಅಯ್ಯರ್‌!

ಸ್ಕೋರ್‌ ವಿವರ

ಇಂಗ್ಲೆಂಡ್‌: 38.2 ಓವರ್‌ಗಳಿಗೆ 179-10 (ಜೋ ರೂಟ್‌ 37, ಜೋಫ್ರಾ ಆರ್ಚರ್‌ 25, ಬೆನ್‌ ಡಕೆಟ್‌ 24,ಜೋಸ್‌ ಬಟ್ಲರ್‌ 21; ಮಾರ್ಕೊ ಯೆನ್ಸನ್‌ 39ಕ್ಕೆ 3, ವಿಯಾನ್‌ ಮುಲ್ಡರ್‌ 25ಕ್ಕೆ 3, ಕೇಶವ್‌ ಮಹಾರಾಜ್‌ 35 ಕ್ಕೆ 2)

ದಕ್ಷಿಣ ಆಫ್ರಿಕಾ: 29.1 ಓವರ್‌ಗಳಿಗೆ 181-3 (ರಾಸಿ ವ್ಯಾನ್‌ ಡೆರ್‌ ಡುಸೆನ್‌ 72, ಹೆನ್ರಿಚ್‌ ಕ್ಲಾಸೆನ್‌ 64; ಜೋಫ್ರಾ ಆರ್ಚರ್‌ 55 ಕ್ಕೆ 2)

ಪಂದ್ಯ ಶ್ರೇಷ್ಠ ಪ್ರಶಸ್ತಿ: ಮಾರ್ಕೊ ಯೆನ್ಸನ್‌