ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Viral Video: ಬೆಂಗಳೂರಿನ ಟ್ರಾಫಿಕ್ ನಡುವೆ ವಿಚಿತ್ರ ದೃಶ್ಯ: ಹೆಲ್ಮೆಟ್ ಇಲ್ಲದೆ ಗಿಳಿಯೊಂದಿಗೆ ಸವಾರಿ ಮಾಡಿದ ಮಹಿಳೆ

ಬೆಂಗಳೂರಿನಲ್ಲಿ ಪ್ರತಿನಿತ್ಯ ಗಂಟೆಗಟ್ಟಲೆ ಟ್ರಾಫಿಕ್‌ ಜಾಮ್‌ನಲ್ಲಿ ಸವಾರರು ಹೆಣಗಾಡುವುದು ಹೊಸತೇನಲ್ಲ. ಇದೀಗ ಈ ಟ್ರಾಫಿಕ್ ನಡುವೆಯೂ ಮಹಿಳೆಯೊಬ್ಬಳು ಹೆಗಲ ಮೇಲೆ ಗಿಳಿಯನ್ನು ಕೂರಿಸಿಕೊಂಡು ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಹೆಲ್ಮೆಟ್ ರಹಿತವಾಗಿ ಗಿಳಿಯೊಂದಿಗೆ ಸವಾರಿ ಮಾಡಿದ ಮಹಿಳೆ

women rides helmet less

Profile Pushpa Kumari Mar 1, 2025 9:02 PM

ಬೆಂಗಳೂರು: ಬೆಂಗಳೂರಿನ ಸಂಚಾರ ದಟ್ಟಣೆಯ ವಿಚಾರ ಆಗಾಗ ಚರ್ಚೆಗೆ ಬರುತ್ತಲೇ ಇರುತ್ತದೆ. ಸದಾ ವಾಹನ ದಟ್ಟಣೆ, ಟ್ರಾಫಿಕ್ ಜಂಜಾಟದ ಮೂಲಕ ಸಿಟಿ ಜನರನ್ನ ಕಂಗಾಲಾಗಿಸಿರುವ ಬೆಂಗಳೂರಿನಲ್ಲಿ ಪ್ರತಿನಿತ್ಯ ಗಂಟೆಗಟ್ಟಲೆ ಟ್ರಾಫಿಕ್‌ ಜಾಮ್‌ನಲ್ಲಿ ಹೆಣಗಾಡುವುದು ಹೊಸತೇನಲ್ಲ. ಇದೀಗ ಈ ಟ್ರಾಫಿಕ್ ನಡುವೆಯು ಯುವತಿಯೊಬ್ಬಳು ಹೆಗಲ ಮೇಲೆ ಗಿಳಿ ಕೂರಿಸಿಕೊಂಡು ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗುತ್ತಿದೆ. ಈ ವಿಡಿಯೊ ನೋಡಿ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಈ ವಿಡಿಯೊವನ್ನು ರಾಹುಲ್ ಜಾಧವ್ ಎಂಬುವವರು ಎಕ್ಸ್‌ ಖಾತೆಯಲ್ಲಿ ‌ ಹಂಚಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಎಂದಿಗೂ ನೀರಸವಾದ ಕ್ಷಣಗಳಿಲ್ಲ ಎಂಬ ಶೀರ್ಷಿಕೆಯೊಂದಿಗೆ ವಿಡಿಯೊ ಹಂಚಿಕೊಂಡಿದ್ದಾರೆ. ಇದಕ್ಕೂ ಮೊದಲು ಬೆಂಗಳೂರಿನ ಟ್ರಾಫಿಕ್ ಮಧ್ಯೆಯೂ ವಾಹನ ಚಲಾಯಿಸುತ್ತಿರು ವಾಗ ಯುವತಿಯೊಬ್ಬಳು ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಿರುವ ದೃಶ್ಯ ವೈರಲ್ ಆಗಿತ್ತು. ಇನ್ನೊಂದರಲ್ಲಿ ಹೆಲ್ಮೆಟ್ ಧರಿಸದೆ ಸವಾರನೊಬ್ಬ, ಸರಿಯಾಗಿ ಕುಳಿತುಕೊಳ್ಳುವ ಬದಲು ಆತನಿಗೆ ಮುಖಾಮುಖಿಯಾಗಿ ಅಸುರಕ್ಷಿತ ಭಂಗಿಯಲ್ಲಿ ಕುಳಿತಿರುವ ವಿಡಿಯೊ ಹರಿದಾಡಿತ್ತು.



ಇದೀಗ ಮಹಿಳೆಯೊಬ್ಬಳು ಹೆಲ್ಮೆಟ್ ಇಲ್ಲದೆ ಬಣ್ಣಬಣ್ಣದ ಗಿಳಿಯನ್ನು ಹೆಗಲ ಮೇಲೆ ಇಟ್ಟುಕೊಂಡು ದ್ವಿಚಕ್ರ ವಾಹನ ಚಲಾಯಿಸುತ್ತಿರುವ ಜತೆಗೆ ಹಿಂಭಾಗದಲ್ಲಿ ಇನ್ನೊಬ್ಬ ಯುವತಿಯನ್ನು ಕೂರಿಸಿಕೊಂಡು ಪ್ರಯಾಣ ಮಾಡಿದ್ದಾಳೆ. ಟ್ರಾಫಿಕ್ ನಿಯಮ ಉಲ್ಲಂಘನೆ ಬಗ್ಗೆ ಟ್ರಾಫಿಕ್ ಪೊಲೀಸರು ಪದೇ ಪದೆ ಎಚ್ಚರಿಕೆ ನೀಡಿದರೂ, ಇಂತಹ ನಿರ್ಲಕ್ಷ್ಯದ ಘಟನೆಗಳು ಪ್ರತಿದಿನ ನಡೆಯುತ್ತಿದೆ. ನಿಯಮ ಉಲ್ಲಂಘನೆ ಬಗ್ಗೆ ಕೆಲವರು ಪ್ರಶ್ನೆ ಮಾಡಿದ್ದಾರೆ.

ಇದನ್ನು ಓದಿ: Viral Video: ಬೈಕ್‍ನ ಪೆಟ್ರೋಲ್ ಟ್ಯಾಂಕ್ ಮೇಲೆ ಗೆಳತಿಯನ್ನು ಕೂರಿಸಿ ನಡುರಸ್ತೆಯಲ್ಲಿ ರೊಮ್ಯಾನ್ಸ್‌ ಮಾಡಿದಾತನ ಕೊಬ್ಬು ಇಳಿಸಿದ ಪೊಲೀಸರು

ಸದ್ಯ ಈ ವಿಡಿಯೊ ನೋಡಿ ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡುತಿದ್ದಾರೆ. ಬಳಕೆದಾರ ರೊಬ್ಬರು ಇದು ಬೆಂಗಳೂರಿನ ದೈನಂದಿನ ಜೀವನದ ಆಶ್ಚರ್ಯಕರ ದೃಶ್ಯ ಎಂದು ಹೇಳಿದ್ದಾರೆ. ಮೊತ್ತೊಬ್ಬರು ಬೆಂಗಳೂರಿನ‌ ಈ ಟ್ರಾಫಿಕ್ ಮಧ್ಯೆಯು ಈ ದೃಶ್ಯ ಎಂದಿಗೂ ಕಾಣಸಿಗದ್ದು‌ ಎಂದು ತಿಳಿಸಿದ್ದಾರೆ. ಇನ್ನೊಬ್ಬ ಬಳಕೆದಾರರು ಟ್ರಾಫಿಕ್ ಪೋಲೀಸರ ಎಚ್ಚರಿಕೆಗಳ ಹೊರತಾಗಿಯೂ ಇಂತಹ ಅಜಾಗರೂಕ ಘಟನೆಗಳು ಪ್ರತಿದಿನ ಸಂಭವಿಸುತ್ತಿವೆ ಎಂದಿದ್ದಾರೆ.