Chikkaballapur News: ಕ್ಷೇತ್ರದ ಕಟ್ಟಕಡೆಯ ಗ್ರಾಮಕ್ಕೂ ಮೂಲಸೌಕರ್ಯ ಕಲ್ಪಿಸುವುದೇ ನನ್ನ ಗುರಿ : ಶಾಸಕ ಪ್ರದೀಪ್ ಈಶ್ವರ್ ಭರವಸೆ
ಕ್ಷೇತ್ರದಲ್ಲಿ ದೊಡ್ಡ ದೊಡ್ಡ ಗ್ರಾಮಗಳಿರುವಂತೆ ಕೇವಲ 50 ರಿಂದ 100 ಮನೆಗಳಿರುವ ಗ್ರಾಮ ಗಳೂ ಇವೆ.ಇಲ್ಲೆಲ್ಲಾ ಕಡಿಮೆ ಮತದಾರರಿದ್ದಾರೆ ಎಂದು ಯಾವ ಗ್ರಾಮವನ್ನೂ ಉಪೇಕ್ಷೆ ಮಾಡಬಾರದು.ನಾನು ಆ ರೀತಿಯ ಲೆಕ್ಕಾಚಾರದ ಶಾಸಕ ಅಲ್ಲ. ನನ್ನ ಅವಧಿ ಯಲ್ಲಿ ಕ್ಷೇತ್ರದ ಎಲ್ಲಾ ಗ್ರಾಮಗಳಿಗೂ ಶಾಸಕರು ಭೇಟಿ ನೀಡಿದ್ದಾರೆ

ತಾಲ್ಲೂಕಿನ ಸುದ್ದಹಳ್ಳಿ ಗ್ರಾಮದಲ್ಲಿ ಗ್ರಾಮದ ಸೇತುವೆ ಅಭಿವೃದ್ದಿ ಕಾಮಗಾರಿಗೆ ಶಾಸಕ ಪ್ರದೀಪ್ ಈಶ್ವರ್ ಗುದ್ದಲಿ ಪೂಜೆ ನೆರವೇರಿಸಿದರು.

ಚಿಕ್ಕಬಳ್ಳಾಪುರ: ನನ್ನನ್ನು ಶಾಸಕನನ್ನಾಗಿ ಆರಿಸಿರುವ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಕಟ್ಟಕಡೆಯ ಗ್ರಾಮ ಮತ್ತು ವ್ಯಕ್ತಿಗೆ ಅಗತ್ಯವಿರುವ ಮೂಲಭೂತ ಸೌಕರ್ಯ ಕಲ್ಪಿಸಿ ಕೊಡುವ ಗುರಿಯನ್ನು ಹೊಂದಿದ್ದೇನೆ ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿ ದರು. ತಾಲ್ಲೂಕಿನ ಮುದ್ದೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊರ್ಲಹಳ್ಳಿ, ಸುಬ್ಬ ರಾಯನ ಹಳ್ಳಿ, ಸುದ್ದಹಳ್ಳಿ, ಮತ್ತು ದಿನ್ನೂರು ಗ್ರಾಮಗಳಲ್ಲಿ ಶನಿವಾರ 4 ಕೋಟಿ 15 ಲಕ್ಷ ರೂಗಳ ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕ್ಷೇತ್ರದಲ್ಲಿ ದೊಡ್ಡ ದೊಡ್ಡ ಗ್ರಾಮಗಳಿರುವಂತೆ ಕೇವಲ 50 ರಿಂದ 100 ಮನೆಗಳಿರುವ ಗ್ರಾಮಗಳೂ ಇವೆ.ಇಲ್ಲೆಲ್ಲಾ ಕಡಿಮೆ ಮತದಾರರಿದ್ದಾರೆ ಎಂದು ಯಾವ ಗ್ರಾಮವನ್ನೂ ಉಪೇಕ್ಷೆ ಮಾಡಬಾರದು.ನಾನು ಆ ರೀತಿಯ ಲೆಕ್ಕಾಚಾರದ ಶಾಸಕ ಅಲ್ಲ. ನನ್ನ ಅವಧಿ ಯಲ್ಲಿ ಕ್ಷೇತ್ರದ ಎಲ್ಲಾ ಗ್ರಾಮಗಳಿಗೂ ಶಾಸಕರು ಭೇಟಿ ನೀಡಿದ್ದಾರೆ ಎಂದು ಜನ ನೆನೆಪಿಸಿ ಕೊಳ್ಳಬೇಕು ಹಾಗೆ ಕೆಲಸ ಮಾಡುತ್ತೇನೆ ಎಂದರು.
ಗ್ರಾಮೀಣ ಜನತೆ ಶಾಸಕರು ನಮ್ಮೂರಿಗೆ ರಸ್ತೆ, ಕುಡಿಯುವ ನೀರು, ವಿದ್ಯುತ್, ಚರಂಡಿ ಹಾಕಿಸಿಕೊಟ್ಟಿದ್ದಾರೆ.ಸರಕಾರಿ ಶಾಲೆ ಕಟ್ಟಿಸಿದ್ದಾರೆ.ಪಿಂಚಣಿ ಕೊಡಿಸಿದ್ದಾರೆ.ವೃದ್ಧಾಪ್ಯ ವೇತನ ಕೊಡಿಸಿದ್ದಾರೆ.ನಮ್ಮ ಆರೋಗ್ಯ ಕಾಪಾಡಿಕೊಳ್ಳಲು, ಬದುಕು Pಕಟ್ಟಿಕೊಳ್ಳಲು ನೆರವಾಗಿದ್ದಾರೆ ಎಂದು ಜನ ಮಾತಾಡಿಕೊಳ್ಳುವಂತೆ ಕೆಲಸ ಮಾಡಿ ತೋರಿಸುತ್ತೇನೆ. ಮತ ಹಾಕುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ ಎಂದು ಹೇಳಿದರು.
ರಸ್ತೆ ಸಂಪರ್ಕ
ಬಹಳ ಮುಖ್ಯವಾಗಿ ಸಂಪರ್ಕಕ್ರಾAತಿಗೆ ಮುನ್ನುಡಿ ಬರೆಯಬೇಕಿದೆ.ಏಕೆಂದರೆ ಸರಿಯಾದ ರಸ್ತೆ ಇಲ್ಲ ಎಂದರೆ ಅನಾರೋಗ್ಯ ಆದಾಗ ಅವರನ್ನು ಆಸ್ಪತ್ರೆಗೆ ಸೇರಿಸಲು ವಾಹನ ಓಡಾಡಬೇಕಲ್ಲ.ರೈತರು ಬೆಳೆದ ಬೆಳೆಗಳನ್ನು ಮಾರುಕಟ್ಟೆ ತೆಗೆದುಕೊಂಡು ಹೋಗಲೋ, ಬೇಸಾಯವನ್ನೋ ಮೇವನ್ನೋ ನಿಶ್ಚಿಂತೆಯಿAದ ಮನೆಗೆ ತರಲು ಮುಖ್ಯರಸ್ತೆಗೆ ಹೋಗಲು ಹಳ್ಳಿಯಿಂದ ಅಲ್ಲಿಗೆ ರಸ್ತೆ ಬೇಕಲ್ಲ.ಅದೇ ರೀತಿ ತಮ್ಮ ಹೊಲ, ತೋಟ,ಗದ್ದೆಗಳಿಗೆ ತೆರಳಲು ಸಹಾ ಉತ್ತಮ ರಸ್ತೆ, ಸೇತುವೆಗಳು ಸಹಾ ಮುಖ್ಯವಾಗುತ್ತದೆ. ಅದಕ್ಕಾಗಿಯೇ ಕೋಟಿಗಳ ವೆಚ್ಚದಲ್ಲಿ ರಸ್ತೆ ಸೇತುವೆಗಳನ್ನು ನಿರ್ಮಿಸಿ ಕಟ್ಟ ಕಡೆಯ ಗ್ರಾಮಗಳಿಗೆ ಅನುಕೂಲ ಮಾಡಲು ನಿರ್ಧರಿಸಿ ಅನುದಾನ ತಂದು ಕಾಮಗಾರಿ ಪ್ರಾರಂಭಿಸಿದ್ದೇನೆ ಎಂದರು.
ಗ್ರಾಮಗಳ ಉದ್ದಾರ!!
ನಾನು ತಂದಿರುವ ಕೋಟ್ಯಾಂತರ ಅನುದಾನವನ್ನು ಯಾವುದಾದರೂ ಒಂದು ಕಟ್ಟಡ ಕಾಮಗಾರಿಗೆ ಹಾಕಿ ನನ್ನ ಹೆಸರನ್ನು ದೊಡ್ಡ,ದೊಡ್ಡ ಅಕ್ಷರಗಳಲ್ಲಿ ಹಾಕಿಸಿಕೊಂಡಿದ್ದರೆ ಯಾರೂ ಕೂಡ ಪ್ರಶ್ನಿಸುವುದಿಲ್ಲ. ಆದರೆ ಮಹಾತ್ಮ ಗಾಂಧಿ ಅವರ ಕನಸಾದ ಗ್ರಾಮೀಣ ಪ್ರದೇಶದ ಅಭಿವೃದ್ದಿಗೆ ಹೆಚ್ಚು ಒತ್ತು ನೀಡುವುದು ನನ್ನ ಉದ್ದೇಶವಾಗಿದೆ ಎಂದರು.
ಸೇತುವೆ ನಿರ್ಮಾಣ
ಕ್ಷೇತ್ರದ ಕೊರ್ಲಹಳ್ಳಿ ಗ್ರಾಮದ ಬಳಿ ಉತ್ತರ ಪಿನಾಕಿನಿ ನದಿಗೆ ಸೇತುವೆ ನಿರ್ಮಿಸಿ ರಸ್ತೆ ಅಭಿವೃದ್ದಿ ಕಾಮಗಾರಿಗೆ ೮೦ ಲಕ್ಷರೂ ಹಾಕಿದ್ದೇನೆ.ಸ್ವಾತಂತ್ರö್ಯ ಬಂದಾಗಿAದಲೂ ಯಾರೂ ಈ ಕೆಲಸ ಮಾಡಿರಲಿಲ್ಲ.ಅದೇ ರೀತಿ ಸುಬ್ಬರಾಯನಹಳ್ಳಿ, ಘಟ್ಟಿಗಾನಹಳ್ಳಿ ಮತ್ತು ದೊಡ್ಡರಾಯಪನಹಳ್ಳಿ ಸಂಪರ್ಕ ರಸ್ತೆ ಮತ್ತು ಸೇತುವೆ ಕಾಮಗಾರಿಗೆ ೨ ಕೋಟಿ ೭೫ ಲಕ್ಷ ರೂ, ಸುದ್ದಹಳ್ಳಿ ಗ್ರಾಮದ ಸೇತುವೆ ಅಭಿವೃದ್ದಿ ಕಾಮಗಾರಿಗೆ ೨೦ ಲಕ್ಷ ರೂ ಮತ್ತು ದಿನ್ನೂ ರು ಗ್ರಾಮದ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ೮೦ ಲಕ್ಷ ರೂಗಳನ್ನು ನೀಡಿದ್ದೇನೆ. ಈ ಕಾಮಗಾರಿಗಳು ಎರಡು ತಿಂಗಳಲ್ಲಿ ಪೂರ್ಣಗೊಳ್ಳಲಿವೆ ಎಂದರು.
ಶುಭಕೋರಿದ ಶಾಸಕ
ದ್ವಿತೀಯ ಪಿಯುಸಿ ಪರೀಕ್ಷೆಗಳು ಶನಿವಾರದಿಂದ ಪ್ರಾರಂಭವಾಗುತ್ತಿದ್ದು ಎಲ್ಲಾ ವಿದ್ಯಾ ರ್ಥಿಗಳಿಗೂ ಆಲ್ ದ ಬೆಸ್ಟ್ ಹೇಳುತ್ತೇನೆ. ವಿದ್ಯಾರ್ಥಿಗಳು ಶ್ರದ್ಧೆಯಿಂದ ಪರೀಕ್ಷೆಯನ್ನು ಎದುರಿಸಿ ಉತ್ತಮ ಫಲಿತಾಂಶ ಪಡೆಯುವಂತಾಗಲಿ, ಅವರ ಶ್ರಮ ಅವರನ್ನು ಕಾಪಾಡಲಿ ಭಗವಂತನಲ್ಲಿ ಬೇಡುತ್ತೇನೆ ಎಂದು ಶಾಸಕ ಪ್ರದೀಪ್ ಈಶ್ವರ್ ಶುಭ ಹಾರೈಸಿದರು.
ಉಚಿತ ನೀಟ್ ಕೋಚಿಂಗ್
ನನ್ನ ವಿಧಾನ ಸಭಾ ಕ್ಷೇತ್ರದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುತ್ತಿರುವ ಎಲ್ಲಾ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಪರಿಶ್ರಮ ಅಕಾಡೆಮಿಯಿಂದ ಉಚಿತವಾಗಿ ನೀಟ್ ಮತ್ತು ಸಿಇಟಿ ತರಬೇತಿಯನ್ನು ನುರಿತ ಅಧ್ಯಾಪಕರಿಂದ ಚಿಕ್ಕಬಳ್ಳಾಪುರದಲ್ಲೇ ನೀಡು ತ್ತಿದ್ದೇನೆ. ಖಾಸಗಿಯಾಗಿ ನೀಟ್ ಮತ್ತು ಸಿಇಟಿ ತರಬೇತಿ ಪಡೆಯಲು ಒಬ್ಬರಿಗೆ ೫೦ ರಿಂದ ೬೦ ಸಾವಿರ ರೂ ಖರ್ಚಾಗುತ್ತದೆ.ಆದರೆ ನಾನು ಎಲ್ಲರಿಗೂ ಉಚಿತವಾಗಿ ನೀಡುತ್ತಿದ್ದೇನೆ. ಎಲ್ಲಾ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಈ ವೇಳೆ ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ಯಲುವಹಳ್ಳಿ ರಮೇಶ್, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರಾದ ಕೆ.ಸಿ.ರಾಜಾಕಾಂತ್, ಮುನೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಜಯರಾಮ್, ಗ್ರಾ.ಪಂ.ಮಾಜಿ ಅಧ್ಯಕ್ಷ ನಾರಾಯಣಪ್ಪ, ಮುಖಂಡರಾದ ಅವುಲರೆಡ್ಡಿ, ಅರವಿಂದ್, ಜೆಸಿಬಿ ಮಂಜುನಾಥ್, ಮುರಳಿ, ಭಾಗ್ಯಮ್ಮ,ಸುಧಾ ವೆಂಕಟೇಶ್, ರಾಜಣ್ಣ, ನಂದಿ ರಮೇಶ್, ರಾಮಕೃಷ್ಣಪ್ಪ,ಅಧಿಕಾರಿಗಳು, ಮತ್ತಿತರರು ಇದ್ದರು.
*
ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಕಾಣಿಸಿಕೊಂಡಿರುವ ಹಕ್ಕಿಜ್ವರ ನಿರ್ಮೂಲನೆಗೆ ಈಗಾಗಲೇ ಜಿಲ್ಲಾಡಳಿತ ಸಮರೋಪಾದಿಯಲ್ಲಿ ಕ್ರಮವಹಿಸಿರುವುದು ನನ್ನ ಗಮನಕ್ಕೆ ಬಂದಿದೆ. ತಾಲೂಕು ಆಡಳಿತವೂ ಕೂಡ ಇದರಲ್ಲಿ ಭಾಗಿಯಾಗಿದೆ. ಪಶು ಸಂಗೋಪನಾ ಇಲಾಖೆ, ಆರೋಗ್ಯ ಇಲಾಖೆಯ ಅಧಿಕಾರಿಗಳು ಕೂಡ ನಿಗಾವಹಿಸಿದ್ದು, ಜನತೆಗೆ ದೈರ್ಯ ತುಂಬುವ ಕೆಲಸ ಮಾಡಿದ್ದಾರೆ.ಈರೋಗ ಕಾಣಿಸಿಕೊಂಡಿರುವ ವರದಹಳ್ಳಿ ಗ್ರಾಮದಲ್ಲಿ ಈಗಾಗಲೇ ನಾಕಾಬಂದಿ ಹಾಕಲಾಗಿದ್ದು,ಬ್ಲೀಚಿಂಗ್ ಸ್ನಾನಿಟೈಸೇಷನ್ ಇತ್ಯಾದಿ ಶುಚಿತ್ವಕ್ಕೆ ಒತ್ತು ನೀಡಿದ್ದಾರೆ. ಶುಕ್ರವಾರ ಮನೆಮನೆಗೂ ಭೇಟಿ ನೀಡಿ ರೈತರಿಂದ ಕೋಳಿಗಳನ್ನು ಪಡೆದು ಮಾರಣಹೋಮ ಮಾಡಲಾಗಿದೆ.ಕ್ಷೇತ್ರದಲ್ಲಿ ಒಬ್ಬ ಶಾಸಕನಾಗಿ ಹಕ್ಕಿಜ್ವರ ನಿಯಂತ್ರಣಕ್ಕೆ ಸಂಬAಧಿಸಿದAತೆ ಅಧಿಕಾರಿಗಳೊಟ್ಟಿಗೆ ಸಮಾಲೋಚನೆ ಮಾಡಿದ್ದು ಈ ಸಂಬಂಧ ಜಿಲ್ಲಾಡಳಿತ ತಾಲೂಕು ಆಡಳಿತದ ಅಧಿಕಾರಿಳೊಟ್ಟಿಗೆ ನಿರಂತರ ಸಂಪರ್ಕದಲ್ಲಿದ್ದೇನೆ.
ಪ್ರದೀಪ್ ಈಶ್ವರ್ ಐಯ್ಯರ್ ಶಾಸಕರು ಚಿಕ್ಕಬಳ್ಳಾಪುರ