ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

ಜಿಲ್ಲೆಯ 23 ಪರೀಕ್ಷಾ ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಯಶಸ್ವಿ ಪ್ರಾರಂಭ

ಇದೇ ಮೊದಲ ಬಾರಿಗೆ ಪಿಯುಸಿ ವಿದ್ಯಾರ್ಥಿಗಳು ವೆಬ್ ಕ್ಯಾಮೆರಾ ಕಣ್ಗಾವಲಿನಲ್ಲಿ ಪರೀಕ್ಷೆ ಬರೆದಿದ್ದಾರೆ. ಶನಿವಾರ ನಡೆದ ಕನ್ನಡ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದ ೧೨೦೪೪ ವಿದ್ಯಾರ್ಥಿಗಳ ಪೈಕಿ  ಹಾಜರಾಗಿ ಪರೀಕ್ಷೆ ಬರೆದವರು ೧೧೬೦೧ ವಿದ್ಯಾರ್ಥಿಗಳು ಮಾತ್ರ. ಮೊದಲ ದಿನವೇ ೪೪೨ ವಿದ್ಯಾರ್ಥಿಗಳು ಗೈರು ಹಾಜರಾಗುವ ಮೂಲಕ ಪರೀಕ್ಷೆಯಿಂದ ಹೊರಗುಳಿದಿದ್ದಾರೆ ಎಂದು ಇಲಾಖೆ ಮಾಹಿತಿ ನೀಡಿದೆ.

ವೆಬ್ ಕ್ಯಾಮೆರಾ ಕಣ್ಗಾವಲಿನಲ್ಲಿ ಪರೀಕ್ಷೆ ಬರೆದಿದ ಪಿಯು ವಿದ್ಯಾರ್ಥಿಗಳು

ಪರೀಕ್ಷಾ ಕೇಂದ್ರವೊಂದರಿಂದ ಹೊರಬರುತ್ತಿರುವ ವಿದ್ಯಾರ್ಥಿಗಳ ಚಿತ್ರ

Profile Ashok Nayak Mar 1, 2025 10:53 PM

ಮೊದಲ ದಿನದ ಪರೀಕ್ಷೆಗೆ ನೋಂದಣಿ ೧೨೦೪೪, ಹಾಜರಿ-೧೧೬೦೧, ಗೈರುಹಾಜರಿ-೪೪೨ ಮಂದಿ

ಚಿಕ್ಕಬಳ್ಳಾಪುರ : ಜಿಲ್ಲೆಯ ೬ ತಾಲೂಕಿನ ೨೩ ಪರೀಕ್ಷಾ ಕೇಂದ್ರಗಳಲ್ಲಿ ಪ್ರಾರಂಭವಾದ ದ್ವಿತೀಯ ಪಿಯುಸಿ ಪರೀಕ್ಷೆಯು ಯಾವುದೇ ಅಹಿತಕರ ಘಟನೆಗಳಿಗೆ ಸಾಕ್ಷಿಯಾಗದಂತೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆ ತೆಗೆದುಕೊಂಡ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಅತ್ಯಂತ ಯಶಸ್ವಿಯಾಗಿ ನಡೆಯಿತು. ಇದೇ ಮೊದಲ ಬಾರಿಗೆ ಪಿಯುಸಿ ವಿದ್ಯಾರ್ಥಿಗಳು ವೆಬ್ ಕ್ಯಾಮೆರಾ ಕಣ್ಗಾವಲಿನಲ್ಲಿ ಪರೀಕ್ಷೆ ಬರೆದಿದ್ದಾರೆ. ಶನಿವಾರ ನಡೆದ ಕನ್ನಡ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದ ೧೨೦೪೪ ವಿದ್ಯಾರ್ಥಿಗಳ ಪೈಕಿ  ಹಾಜರಾಗಿ ಪರೀಕ್ಷೆ ಬರೆದವರು ೧೧೬೦೧ ವಿದ್ಯಾರ್ಥಿಗಳು ಮಾತ್ರ. ಮೊದಲ ದಿನವೇ ೪೪೨ ವಿದ್ಯಾರ್ಥಿ ಗಳು ಗೈರು ಹಾಜರಾಗುವ ಮೂಲಕ ಪರೀಕ್ಷೆಯಿಂದ ಹೊರಗುಳಿದಿದ್ದಾರೆ ಎಂದು ಇಲಾಖೆ ಮಾಹಿತಿ ನೀಡಿದೆ.

ಇದನ್ನೂ ಓದಿ: chikkaballapur News: ರಾಜ್ಯದ ಗ್ಯಾರಂಟಿ ಯೋಜನೆಗಳು ಮಾದರಿಯಾಗುವ ಮೂಲಕ ದೇಶದ ಇತರ ರಾಜ್ಯಗಳಲ್ಲೂ ವಿಸ್ತರಿಸುತ್ತಿವೆ : ಸೂರಜ್ ಎ.ಎನ್.ಹೆಗ್ಗಡೆ

ಎಂದಿನಂತೆ ಎಲ್ಲಾ ಪರೀಕ್ಷಾ ಕೇಂದ್ರಗಳ ಸುತ್ತ ೨೦೦ ಮೀ ವ್ಯಾಪ್ತಿಯಲ್ಲಿ ನಿಷೇದಾಜ್ಞೆ ಜಾರಿ ಮಾಡಿದ್ದು ವಿದ್ಯಾರ್ಥಿಗಳನ್ನು ಹೊರತುಪಡಿಸಿ ಬೇರೆ ಯಾರಿಗೂ ಕೂಡ ಪರೀಕ್ಷಾ ಕೇಂದ್ರದ ಒಳಗೆ ಪ್ರವೇಶ ನೀಡದಂತೆ ಕಟ್ಟುನಿಟ್ಟಿನ ಕ್ರಮವಹಿಸಲಾಗಿತ್ತು.

ವಿದ್ಯಾರ್ಥಿಗಳು ಕೂಡ ಇಲಾಖೆ ಮಾರ್ಗಸೂಚಿಗಳಂತೆ ಅರ್ಧಗಂಟೆ ಮುಂದಿತವಾಗಿಯೇ ಪರೀಕ್ಷಾ ಕೇಂದ್ರಗಳಿಗೆ ಬಂದು ನೋಟೀಸ್ ಬೋರ್ಡಿನಲ್ಲಿ ತಮ್ಮ ನೋಂದಣಿ ಸಂಖ್ಯೆ ಪರಿಶೀಲಿಸಿಕೊಂಡು ಕೊಠಡಿ ಯಾವುದೆಂದು ತಿಳಿದುಕೊಳ್ಳುತ್ತಿದ್ದ ದೃಶ್ಯಗಳು ಸಾಮಾನ್ಯ ವಾಗಿದ್ದವು. ಮಕ್ಕಳನ್ನು ಪರೀಕ್ಷೆಗೆ ಕರೆದುಕೊಂಡು ಬಂದಿದ್ದ ಪೋಷಕರು ೨೦೦ ಮೀ.ಆಚೆ ನಿಂತು ತಮ್ಮ ಮಕ್ಕಳ ಬರುವಿಕೆಗಾಗಿ ಕಾಯುತ್ತಿದ್ದರು.

ಜಿಲ್ಲಾಧಿಕಾರಿಗಳು ಮತ್ತು ಪದವಿಪೂರ್ವ ಶಿಕ್ಷಣ ಇಲಾಕೆ ಉಪ ನಿರ್ದೇಶಕರು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರೀಕ್ಷೆಗಳು ಸುಗಮವಾಗಿ ನಡೆಯುತ್ತಿವೆಯೋ ಇಲ್ಲವೋ ಎಂಬ ಬಗ್ಗೆ ಪರಿಶೀಲನೆ ನಡೆಸಿದರು.ಇದೇ ವೇಳೆ ನಕಲಿಗೆ ಅವಕಾಶ ನೀಡದಂತೆ ಇಲಾಖೆಯ ಸುತ್ತೋಲೆಯಂತೆ ಕಟ್ಟುನಿಟ್ಟಾಗಿ ಪರೀಕ್ಷೆ ನಡೆಸಬೇಕೆಂದು ಸೂಚನೆ ನೀಡಿದರು.

ಪರೀಕ್ಷಾ ಕೇಂದ್ರಗಳ ಸಂಖ್ಯೆ ಹೆಸರು ನೋಂದಣಿ ಮಾಡಿದ ವಿದ್ಯಾರ್ಥಿಗಳು ಹಾಜರಾದ ವಿದ್ಯಾರ್ಥಿಗಳು ಗೈರುಹಾಜರಾದ ವಿದ್ಯಾರ್ಥಿಗಳ ಪಟ್ಟಿ
ಚಿಕ್ಕಬಳ್ಳಾಪುರ ಪರೀಕ್ಷಾ ಕೇಂದ್ರಗಳ ಸಂಖ್ಯೆ-೦೫

ಪಂಚಗಿರಿ ಪದವಿಪೂರ್ವ ಕಾಲೇಜು ನೋಂದಣಿ-೪೧೫, ಹಾಜರಾಗಿ-೩೯೯,  ಗೈರು ಹಾಜರಿ ೧೬ ಮಂದಿ,  ಸರಕಾರಿ ಪದವಿ ಪೂರ್ವ ಕಾಲೇಜು ಬಿಬಿ ರಸ್ತೆ ನೋಂದಣಿ-೧೧೫೫, ಹಾಜರಿ- ೧೧೩೩,ಗೈರುಹಾಜರಿ-೨೨, ಬಿಜಿಎಸ್ ಪದವಿಪೂರ್ವ ಕಾಲೇಜು ಅಗಲಗುರ್ಕಿ ನೋಂದಣಿ- ೯೧೬. ಹಾಜರಿ-೮೬೨, ಗೈರುಹಾಜರಿ-೫೪, ಸರ್.ಎಂ.ವಿ.ಮೆಮೋರಿಯಲ್ ಪದವಿಪೂರ್ವ ಕಾಲೇಜು ನೋಂದಣಿ-೪೪೨, ಹಾಜರಿ-೪೩೬, ಗೈರುಹಾಜರಿ-೦೬, ಸೆಂಟ್ ಜೋಸೆಫ್ ಬಾಲಕಿ ಯರ ಪದವಿ ಪೂರ್ವ ಕಾಲೇಜು ನೋಂದಣಿ-೫೯೧, ಹಾಜರಿ-೫೭೨, ೧೯ ಮಂದಿ ಗೈರು ಹಾಜರಾಗಿದ್ದಾರೆ.

ಗುಡಿಬಂಡೆ ಪರೀಕ್ಷಾ ಕೇಂದ್ರಗಳ ಸಂಖ್ಯೆ-೦೧

ಸರಕಾರಿ ಪದವಿ ಪೂರ್ವ ಕಾಲೇಜು ನೋಂದಣಿ-೮೬, ಹಾಜರಿ-೮೩, ಗೈರುಹಾಜರಿ-೦೩.

ಬಾಗೇಪಲ್ಲಿ ಪರೀಕ್ಷಾ ಕೇಂದ್ರಗಳ ಸಂಖ್ಯೆ-೦೩.

ನ್ಯಾಷನಲ್ ಪದವಿ ಪೂರ್ವ ಕಾಲೇಜು ನೋಂದಣಿ-೭೨೨, ಹಾಜರಿ-೭೦೦, ಗೈರುಹಾಜರಿ-೨೨,
ಸರಕಾರಿ ಪದವಿ ಪೂರ್ವ ಕಾಲೇಜು ನೋಂದಣಿ-೩೩೨ ಹಾಜರಿ-೩೩೨, ಗೈರು ಹಾಜರಿ ಇಲ್ಲ.,
ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ನೋಂದಣಿ-೪೧೭,ಹಾಜರಿ- ೩೮೮, ಗೈರು ಹಾಜರಿ-೨೯.

ಗೌರಿಬಿದನೂರು ಪರೀಕ್ಷಾ ಕೇಂದ್ರಗಳ ಸಂಖ್ಯೆ-೦೫

ಎಇಎಸ್ ನ್ಯಾಷನಲ್ ಪದವಿಪೂರ್ವ ಕಾಲೇಜು ನೋಂದಣಿ-೫೪೩ ಹಾಜರಿ-೫೧೮, ಗೈರುಹಾಜರಿ-೨೫, ಎಸ್‌ಎಸ್‌ಇಎ ಸರಕಾರಿ ಪದವಿ ಪೂರ್ವ ಕಾಲೇಜು ನೋಂದಣಿ-೭೯, ,ಹಾಜರಿ-೬೯, ಗೈರುಹಾಜರಿ-೧೦, ಆಚಾರ್ಯ ಪದವಿಪೂರ್ವ ಕಾಲೇಜು ನೋಂದಣಿ-೩೭೬, ಹಾಜರಿ-೩೬೫, ಗೈರುಹಾಜರಿ-೧೧, ಲೀರ‍್ಸ್ ಪದವಿಪೂರ್ವ ಕಾಲೇಜು ನೋಂದಣಿ-೨೫೨ ಹಾಜರಿ-೨೩೦, ಗೈರುಹಾಜರಿ-೨೨, ಬಿಜಿಎಸ್ ಪದವಿ ಪೂರ್ವ ಕಾಲೇಜು ಗೌರಿಬಿದನೂರು ನೋಂದಣಿ-೮೮೮, ಹಾಜರಿ-೮೭೮, ಗೈರುಹಾಜರಿ-೧೦, ಶಿಡ್ಲಘಟ್ಟ ಪರೀಕ್ಷಾ ಕೇಂದ್ರಗಳ ಸಂಖ್ಯೆ-೦೩

ಸರಕಾರಿ ಪದವಿ ಪೂರ್ವ ಕಾಲೇಜು ಶಿಡ್ಲಘಟ್ಟ ನೋಂದಣಿ-೭೮೪, ಹಾಜರಿ-೭೩೩,ಗೈರು ಹಾಜರಿ-೫೧,  ಸ್ವಾಮಿವಿವೇಕಾನಂದ ಪದವಿಪೂರ್ವ ಕಾಲೇಜು ಮಳ್ಳೂರು ನೋಂದಣಿ -೬೬೬, ಹಾಜರಿ-೬೫೫, ಗೈರುಹಾಜರಿ-೧೧ ಬಿಜಿಎಸ್ ಪದವಿ ಪೂರ್ವ ಕಾಲೇಜು ಹನುಮಂತಪುರ ನೋಂದಣಿ-೪೦೦, ಹಾಜರಿ-೩೮೬, ಗೈರುಹಾಜರಿ-೧೪

ಚಿಂತಾಮಣಿ ಪರೀಕ್ಷಾ ಕೇಂದ್ರಗಳ ಸಂಖ್ಯೆ-೦೬

ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು,ನೋಂದಣಿ-೭೦೨, ಹಾಜರಿ-೬೯೨, ಗೈರು ಹಾಜರಿ-೧೦ ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜು,ನೋಂದಣಿ-೪೩೨, ಹಾಜರಿ-
೪೧೭, ಗೈರುಹಾಜರಿ-೧೫
ರಾಯಲ್ ಪದವಿ ಪೂರ್ವ ಕಾಲೇಜು ನೋಂದಣಿ-೩೬೨, ಹಾಜರಿ-೩೧೮, ಗೈರುಹಾಜರಿ-೪೪,
ವೆಂಕಟಾದ್ರಿ ಸ್ವತಂತ್ರ ಪದವಿಪೂರ್ವ ಕಾಲೇಜು ನೋಂದಣಿ-೨೫೨, ಹಾಜರಿ-೨೩೨, ಗೈರುಹಾಜರಿ-೨೦,
ಪ್ರಗತಿ ಸ್ವತಂತ್ರ ಪದವಿಪೂರ್ವ ಕಾಲೇಜು ಚಿಂತಾಮಣಿ ನೋಂದಣಿ-೫೬೮. ಹಾಜರಿ-೫೪೭, ಗೈರು ಹಾಜರಿ-೨೧, ವಿಕ್ರಮ್ ಪದವಿ ಪೂರ್ವ ಕಾಲೇಜು ನೋಂದಣಿ-೬೬೪, ಹಾಜರಿ- ೬೫೬,ಗೈರು ಹಾಜರಿ-೦೮

ಒಟ್ಟಾರೆ ಶನಿವಾರ ಪ್ರಾರಂಭವಾದ ದ್ವಿತೀಯ ಪಿಯುಸಿ ಪರೀಕ್ಷೆಯ ಮೊದಲ ದಿವಸ ನಡೆದ ಕನ್ನಡ ಭಾಷಾ ಪರೀಕ್ಷೆಗೆ ನೋಂದಣಿ ಮಾಡಿಸಿಕೊಂಡ ೧೨೦೪೪ ವಿದ್ಯಾರ್ಥಿಗಳ ಪೈಕಿ ೧೧೬೦೧ ವಿದ್ಯಾರ್ಥಿಗಳು ಹಾಜರಾಗಿ ಪರೀಕ್ಷೆ ಬರೆದಿದ್ದರೆ ೪೪೨ ವಿದ್ಯಾರ್ಥಿಗಳು ಗೈರುಹಾಜರಿ ಆಗಿದ್ದಾರೆ.