Serial Killer: ದಿಲ್ಲಿ ಪೊಲೀಸರ ರೋಚಕ ಕಾರ್ಯಾಚರಣೆ; 24 ವರ್ಷಗಳ ಬಳಿಕ ಸೀರಿಯಲ್ ಕಿಲ್ಲರ್ ಅರೆಸ್ಟ್
Crime News: ಬರೋಬ್ಬರಿ 2 ದಶಕಗಳಿಂದ ತಲೆಮರೆಸಿಕೊಂಡಿದ್ದ ಸೀರಿಯಲ್ ಕಿಲ್ಲರ್‌ನನ್ನು ದಿಲ್ಲಿ ಪೊಲೀಸರು ಬಂಧಿಸುವಲ್ಲಿ ಯಸಸ್ವಿಯಾಗಿದಾರೆ. 48 ವರ್ಷದ ಅಜಯ್ ಲಂಬಾ ಬಂಧಿತ. ಈ ನಾಲವರು ಕ್ಯಾಬ್ ಚಾಲಕರ ಕೊಲೆ ಪ್ರಕರಣದ ಪ್ರಮುಖ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.


ಹೊಸದಿಲ್ಲಿ: ಮಹತ್ವದ ಕಾರ್ಯಾಚರಣೆಯೊಂದರಲ್ಲಿ ದಿಲ್ಲಿ ಪೊಲೀಸರು ಬರೋಬ್ಬರಿ 24 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಸೀರಿಯಲ್ ಕಿಲ್ಲರ್‌ನನ್ನು (Serial Killer) ಬಂಧಿಸಿದ್ದಾರೆ. ಬಂಧಿತನನ್ನು ಅಜಯ್ ಲಂಬಾ (Ajay Lamba) ಎಂದು ಗುರುತಿಸಲಾಗಿದ್ದು, ಈತ ಕ್ಯಾಬ್ ಚಾಲಕರನ್ನೇ ಗುರುಯಾಗಿಸಿಕೊಂಡು ಅವರ ಮೇಲೆ ದಾಳಿ ನಡೆಸಿ ಕೊಲೆ ಮಾಡಿ, ಗಾಡಿಗಳನ್ನು ಮಾರಾಟ ಮಾಡುತ್ತಿದ್ದ. 4 ಕೊಲೆ ಪ್ರಕರಣದ ಆರೋಪಿಯಾಗಿದ್ದ ಈತ ಸುಮಾರು 2 ದಶಕಗಳಿಂದ ತಲೆ ಮರೆಸಿಕೊಂಡು ಓಡಾಡುತ್ತಿದ್ದ. ಇದೀಗ ದಿಲ್ಲಿ ಪೊಲೀಸ್‌ನ ಕ್ರೈಂ ಬ್ರ್ಯಾಂಚ್ ಆತನ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದೆ.
ಲಂಬಾ ಮತ್ತು ಆತನ ಸಹಚರರು ಟ್ಯಾಕ್ಸಿ ಬಾಡಿಗೆಗೆ ಪಡೆದು ಉತ್ತರಾಖಂಡಕ್ಕೆ ಪ್ರಯಾಣಿಸುತ್ತಿದ್ದರು. ನಂತರ ಚಾಲಕನನ್ನು ಉಸಿರುಗಟ್ಟಿಸಿ ಕೊಂದು, ಶವವನ್ನು ಬೆಟ್ಟಗಳಲ್ಲಿ, ನಿರ್ಜನ ಪ್ರದೇಶಗಳಲ್ಲಿ ಎಸೆದುಬಿಡುತ್ತಿದ್ದರು. ಬಳಿಕ ಕ್ಯಾಬನ್ನು ಕಳ್ಳ ಸಾಗಣೆ ಮಾಡಿ ನೇಪಾಳದಲ್ಲಿ ಮಾರಾಟ ಮಾಡುತ್ತಿದ್ದರು.
ಈ ಬಗ್ಗೆ ಡಿಸಿಪಿ ಆದಿತ್ಯ ಗೌತಮ್ ಮಾತನಾಡಿ, "ಆರೋಪಿ ಅಜಯ್ ಲಂಬಾ ಕುಖ್ಯಾತ ದರೋಡೆಕೋರ ಮತ್ತು ಕೊಲೆಗಾರನಾಗಿದ್ದು, 2001ರಲ್ಲಿ ದಿಲ್ಲಿ, ಉತ್ತರ ಪ್ರದೇಶ ಮತ್ತು ಉತ್ತರಾಖಂಡದಾದ್ಯಂತ ಕ್ಯಾಬ್ ಚಾಲಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿ ನಾಲ್ವರನ್ನು ಕೊಲೆ ಮಾಡಿದ್ದಾನೆ. ಆತ ತನ್ನ ಸಹಚರರೊಂದಿಗೆ ಟ್ಯಾಕ್ಸಿಗಳನ್ನು ಬಾಡಿಗೆಗೆ ಪಡೆದು, ಚಾಲಕರನ್ನು ಕೊಲೆ ಮಾಡಿ, ವಾಹನಗಳನ್ನು ದರೋಡೆ ಮಾಡಿ, ಶವಗಳನ್ನು ಪರ್ವತ ಪ್ರದೇಶಗಳಲ್ಲಿ ವಿಲೇವಾರಿ ಮಾಡುತ್ತಿದ್ದ" ಎಂದು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Nagpur Gangster Drama: ಗ್ಯಾಂಗ್ ಲೀಡರ್ ಹೆಂಡ್ತಿ ಜೊತೆಗೇ ಲವ್ವಿ-ಡವ್ವಿ; ಈತನಿಗಾಗಿ 40ಜನ ಗ್ಯಾಂಗ್‌ಸ್ಟರ್‌ಗಳಿಂದ ಸರ್ಚಿಂಗ್
ʼʼಅಜಯ್ ಲಂಬಾ ಮತ್ತು ಆತನ ಸಹಚರರು ಇನ್ನೂ ಅಧಿಕ ಕೊಲೆ ಮಾಡಿರುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ತನಿಖೆ ನಡೆಸುತ್ತಿದ್ದೇವೆ. ನಾಲ್ವರು ಸಂತ್ರಸ್ತರ ಪೈಕಿ ಕೇವಲ ಒಬ್ಬರ ಮೃತದೇಹ ಮಾತ್ರ ಪತ್ತೆ ಹಚ್ಚಾಗಿದೆ. ಈ ಹಿಂದೆಯೇ ಲಂಬಾ ಗ್ಯಾಂಗ್‌ನ ಇಬ್ಬರು ಸಹಚರರನ್ನು ಅರೆಸ್ಟ್ ಮಾಡಲಾಗಿತ್ತು. ಸದ್ಯ ಘಟನೆ ಬಗ್ಗೆ ತನಿಖೆ ಚುಉರುಕುಗೊಳಿಸಲಾಗಿದೆʼʼ ಎಂದು ಹೇಳಿದ್ದಾರೆ.
ಕಳವು ಪ್ರಕರಣವೂ ದಾಖಲು
ದಿಲ್ಲಿ ಮೂಲದ 48 ವರ್ಷದ ಲಂಬಾ 6ನೇ ತರಗತಿ ತನಕ ಓದಿದ್ದಾನೆ. ಬಳಿಕ ಉತ್ತರ ಪ್ರದೇಶದ ಬರೇಲಿಗೆ ತನ್ನ ವಾಸಸ್ಥಾನವನ್ನು ಬದಲಾಯಿಸಿದ್ದ. ಕ್ಯಾಬ್ ಚಾಲಕರ ಕೊಲೆ ಪ್ರಕರಣದಲ್ಲಿ ಈತನಿಗೆ ಧೀರೇಂದ್ರ ಮತ್ತು ದಿಲೀಪ್ ನೇಗಿ ನೆರವಾಗಿದ್ದರು. ಲಂಬಾ ವಿರುದ್ದ ಕಳವು ಪ್ರಕರಣವೂ ದಾಖಲಾಗಿದೆ.
ಕ್ರೈಂ ಬ್ರ್ಯಾಂಚ್ ತಂಡವು ಹಲವು ವರ್ಷಗಳಿಂದ ಅಜಯ್ ಲಂಬಾನ ಜಾಡು ಪತ್ತೆ ಹಚ್ಚಲು ಶ್ರಮಿಸುತ್ತಲೇ ಇತ್ತು. ಆತ 2008ರಿಂದ 2018ರವರೆಗೆ ನೇಪಾಳದಲ್ಲಿ ವಾಸಿಸುತ್ತಿದ್ದ. ಬಳಿಕ ಕುಟುಂಬದೊಂದಿಗೆ ಡೆಹ್ರಾಡೂನ್‌ಗೆ ಸ್ಥಳಾಂತರಗೊಂಡಿದ್ದ ಎನ್ನುವುದು ಕೆಲವು ದಿನಗಳ ಹಿಂದೆ ಪೊಲೀಸರಿಗೆ ಗೊತ್ತಾಗಿತ್ತು. "2020ರಲ್ಲಿ ಆತ ಒಡಿಶಾದಿಂದ ದಿಲ್ಲಿ ಸೇರಿದಂತೆ ಭಾರತದ ಇತರ ಭಾಗಗಳಿಗೆ ಗಾಂಜಾ ಪೂರೈಕೆ ಸರಪಳಿಯ ಭಾಗವಾಗಿದ್ದʼʼ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಆತ ನಡೆಸಿರಬಹುದಾದ ಇತರ ಅಪರಾಧ ಕೃತ್ಯಗಳ ಬಗ್ಗೆ ತನಿಖೆ ನಡೆಯುತ್ತಿದೆ.