ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Toyota: "ಸಂತೋಷದ ಹಾದಿಯಲ್ಲಿ ಒಟ್ಟಾಗಿ ಸಾಗೋಣ" ಜಾಹೀರಾತು ಅಭಿಯಾನ ಅನಾವರಣ ಗೊಳಿಸಿದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್

Toyota: "ಸಂತೋಷದ ಹಾದಿಯಲ್ಲಿ ಒಟ್ಟಾಗಿ ಸಾಗೋಣ" ಜಾಹೀರಾತು ಅಭಿಯಾನ ಅನಾವರಣ ಗೊಳಿಸಿದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್

Profile Ashok Nayak Dec 26, 2024 10:29 PM
ಬೆಂಗಳೂರು: ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ತನ್ನ ಹೊಸ "ಹ್ಯಾಪಿಯರ್ ಪಾತ್ಸ್ ಟುಗೆದರ್" ("ಸಂತೋಷದ ಹಾದಿಯಲ್ಲಿ ಒಟ್ಟಾಗಿ ಸಾಗೋಣ") ಎಂಬ ಜಾಹೀರಾತು ಅಭಿಯಾನವನ್ನು ಅನಾವರಣ ಮಾಡಿದೆ. ಸುಸ್ಥಿರ ಪ್ರಗತಿ, ಸಾಮಾಜ ಸುಧಾರಣೆ ಮತ್ತು ಅತ್ಯಾಧುನಿಕ ಸಾರಿಗೆ ಉತ್ಪನ್ನಗಳನ್ನು ಒದಗಿಸುವ ಕಂಪನಿಯ ಬದ್ಧತೆಯನ್ನು ಈ ಜಾಹೀರಾತು ಸಾರುತ್ತದೆ. ಪರಿಣಾಮಕಾರಿ ಸಂವಹನದ ಮೂಲಕ ಮತ್ತು ಅರ್ಥಪೂರ್ಣ ಗ್ರಾಹಕ ಕೇಂದ್ರಿತ ಕಾರ್ಯಕ್ರಮಗಳ ಮೂಲಕ ಮುಂದೆ ಸಾಗುವ ಟಿಕೆಎಂನ ಕಾರ್ಯತಂತ್ರದ ಆಧಾರದಲ್ಲಿ ಈ ಹೊಸ ಅಭಿಯಾನವು ರೂಪುಗೊಂಡಿದೆ.
"ಸಂತೋಷದ ಹಾದಿಯಲ್ಲಿ ಒಟ್ಟಾಗಿ ಸಾಗೋಣ" ಅಭಿಯಾನದ ಸಾರ:
ಸರ್ವರಿಗೂ ಸಂತೋಷ ಎಂಬ ತತ್ವದ ಆಧಾರದಲ್ಲಿ ಸಿದ್ಧವಾಗಿರುವ "ಹ್ಯಾಪಿಯರ್ ಪಾತ್ಸ್ ಟುಗೆದರ್" ("ಸಂತೋಷ ದ ಹಾದಿಯಲ್ಲಿ ಒಟ್ಟಾಗಿ ಸಾಗೋಣ") ಅಭಿಯಾನವು ಹಸಿರು ಪರಿಸರ, ಹೆಚ್ಚು ಒಳಗೊಳ್ಳುವ ನಾಳೆಯನ್ನು ಒದಗಿಸುವ ಟಿಕೆಎಂನ ಬದ್ಧತೆಗೆ ಪೂರಕವಾಗಿದೆ. ಕಂಪನಿಯ ಉತ್ಪನ್ನ ಕಾರ್ಯತಂತ್ರವನ್ನು ಮೀರಿದ ಅಭಿಯಾನ ವಾಗಿದ್ದು, ಬಹು ಮಾರ್ಗ ವಿಧಾನದೊಂದಿಗೆ ಸುಸ್ಥಿರ ಬೆಳವಣಿಗೆಯನ್ನು ಸಾಧಿಸುವ ಮತ್ತು ಸಾಮಾಜಿಕ ಯೋಗ ಕ್ಷೇಮದ ಕಡೆಗೆ ಗಮನ ಹರಿಸುತ್ತದೆ.
ಈ ಅಭಿಯಾನ ಪ್ರಸ್ತಾಪಿಸುವ ಮೂರು ಪ್ರಮುಖ ವಿಷಯಗಳು:
ಬಹು ಮಾರ್ಗ ತಂತ್ರಜ್ಞಾನ: ಗ್ರಾಹಕರ ವಿವಿಧ ರೀತಿಯ ಅಗತ್ಯಗಳನ್ನು ಪೂರೈಸಲು ವಿವಿಧ ವಾಹನ ಪವರ್‌ ಟ್ರೇನ್ ತಂತ್ರಜ್ಞಾನಗಳ ಆಯ್ಕೆಯನ್ನು ಗ್ರಾಹಕರಿಗೆ ನೀಡುತ್ತಿದೆ.
ಕಾರ್ಬನ್ ತಟಸ್ಥತೆ: ಪರಿಸರದ ಮೇಲೆ ಉಂಟಾಗುವ ಪರಿಣಾಮವನ್ನು ಕಡಿಮೆ ಮಾಡಲು ಮೌಲ್ಯ ಸರಪಳಿಯಲ್ಲಿ ಹೊಸತನ ಸ್ಥಾಪನೆ.
ತರಬೇತಿ ಮತ್ತು ಸಾಮಾಜಿಕ ಕಾರ್ಯಕ್ರಮಗಳು: ಕೌಶಲ್ಯ ಅಭಿವೃದ್ಧಿ ಮತ್ತು ಸಮಾಜ ಸುಧಾರಣೆ ಕಾರ್ಯಕ್ರಮಗಳ ಮೂಲಕ ಜನರ ಸಬಲೀಕರಣ.
ಬಹು ವಾರ್ಷಿಕ ಯೋಜನೆಯಾಗಿ ವಿನ್ಯಾಸಗೊಳಿಸಲಾಗಿರುವ "ಹ್ಯಾಪಿಯರ್ ಪಾತ್ಸ್ ಟುಗೆದರ್" ಅಭಿಯಾನವು ಟಿಕೆಎಂನ ಕಾರ್ಯಾಚರಣೆಗಳಲ್ಲಿ ಈ ಮೂರು ಅಂಶಗಳನ್ನು ಸಂಯೋಜಿಸುವುದನ್ನು ತಿಳಿಸುತ್ತದೆ. ಈ ಮೂಲಕ ನಾವೀನ್ಯತೆ, ಸುಸ್ಥಿರತೆ ಮತ್ತು ಸಮುದಾಯದ ಸಬಲೀಕರಣಕ್ಕೆ ಸಂಸ್ಥೆಯ ಅಚಲ ಬದ್ಧತೆಯನ್ನು ಸಾರುತ್ತದೆ.
ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ ಪೋ 2025 ರಲ್ಲಿ ದೂರದೃಷ್ಟಿ ಹಂಚಿಕೆ:
2025 ಜನವರಿ 17 ರಿಂದ 22ನೇ ನವದೆಹಲಿಯ ಭಾರತ್ ಮಂಟಪದಲ್ಲಿ ನಡೆಯಲಿರುವ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ ಪೋ (ಬಿಎಂಜಿಇ) ದಲ್ಲಿ ಈ ಅಭಿಯಾನದ ಆಧಾರದ ಮೇಲೆ ಟಿಕೆಎಂ ತನ್ನ ದೂರದೃಷ್ಟಿಯನ್ನು ಪ್ರಸ್ತುತ ಪಡಿಸಲಿದೆ. "ಹ್ಯಾಪಿಯರ್ ಪಾತ್ಸ್ ಟುಗೆದರ್" ಅಭಿಯಾನವು ಸಂಸ್ಥೆಯ ಉದ್ದೇಶವನ್ನು ಸಾರುತ್ತಿದ್ದು, ಬಿಎಂಜಿಇ 2025 ತನ್ನ ಪ್ರಾಯೋಗಿಕ ಅಪ್ಲಿಕೇಶನ್‌ ಗಳನ್ನು ಅದ್ಭುತ ಸಾರಿಗೆ ಉತ್ಪನ್ನಗಳು ಮತ್ತು ಸಮುದಾಯ-ಚಾಲಿತ ಯೋಜನೆಗಳ ಮೂಲಕ ಪ್ರದರ್ಶಿಸಲು ಪರಿಪೂರ್ಣ ವೇದಿಕೆಯನ್ನು ಒದಗಿಸುತ್ತದೆ.
ಕಾರ್ಯಕ್ರದಲ್ಲಿ ಟೊಯೋಟಾ ಹಲವಾರು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಪ್ರದರ್ಶಿಸುವ ನಿರೀಕ್ಷೆಯಿದೆ, ಇದರಲ್ಲಿ ಸೆಲ್ಫ್ ಚಾರ್ಜಿಂಗ್ ಹೈಬ್ರಿಡ್ ಎಲೆಕ್ಟ್ರಿಕ್ ವೆಹಿಕಲ್ಸ್ (ಎಸ್ಎಚ್ಇವಿಗಳು), ಪ್ಲಗ್-ಇನ್ ಹೈಬ್ರಿಡ್ ಎಲೆಕ್ಟ್ರಿಕ್ ವೆಹಿಕಲ್ಸ್ (ಪಿಎಚ್ಇವಿಗಳು), ಬ್ಯಾಟರಿ ಎಲೆಕ್ಟ್ರಿಕ್ ವೆಹಿಕಲ್ಸ್ (ಬಿಇವಿಗಳು), ಫ್ಯೂಲ್ ಸೆಲ್ ಎಲೆಕ್ಟ್ರಿಕ್ ವೆಹಿಕಲ್ಸ್ (ಎಫ್ಸಿಇವಿಗಳು) ಮತ್ತು ಫ್ಲೆಕ್ಸಿ- ಫ್ಯುಯಲ್ ಸೆಲ್ಫ್ ಚಾರ್ಜಿಂಗ್ ಹೈಬ್ರಿಡ್ ಎಲೆಕ್ಟ್ರಿಕ್ ವಾಹನಗಳು (ಎಫ್ಎಫ್ ವಿ- ಎಸ್ಎಚ್ಇವಿ) ಇರಲಿವೆ. ಈ ಉತ್ಪನ್ನಗಳ ಮೂಲಕ ವಿವಿಧ ರೀತಿಯ ಗ್ರಾಹಕರ ವಿವಿಧ ಅಗತ್ಯಗಳನ್ನು ಪೂರೈಸುವ ವಿವಿಧ ಆಯ್ಕೆಗಳನ್ನು ಕಂಪನಿಯು ಒದಗಿಸುತ್ತಿದೆ.
ಈ ಹೊಸ ಜಾಹೀರಾತು ಅಭಿಯಾನವನ್ನು ಅನಾವರಣಗೊಳಿಸಿ ಬಿಎಂಜಿಇ 2025ರಲ್ಲಿ ಭಾಗವಹಿಸುವಿಕೆಯ ಕುರಿತು ಮಾತನಾಡಿದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ನ ಸೇಲ್ಸ್ ಸರ್ವೀಸ್ ಯೂಸ್ಡ್ ಕಾರ್ ಬಿಸಿನೆಸ್ ನ ಉಪಾ ಧ್ಯಕ್ಷರಾದ ಶ್ರೀ. ಶಬರಿ ಮನೋಹರ್ ಅವರು, "ನಮ್ಮ ಹೊಸ ಕಾರ್ಪೊರೇಟ್ ಅಭಿಯಾನದ "ಹ್ಯಾಪಿಯರ್ ಪಾತ್ಸ್ ಟುಗೆದರ್" ಅನ್ನು ಅನಾವರಣಗೊಳಿಸಲು ಸಂತೋಷ ಹೊಂದಿದ್ದೇವೆ. ಈ ಅಭಿಯಾನದ ಅಡಿಯಲ್ಲಿರುವ ಪ್ರತಿಯೊಂದು ಯೋಜನೆಗಳು ಕೂಡ ಸರ್ವರಿಗೂ ಸಂತೋಷ ಒದಗಿಸುವ ನಮ್ಮ ಉದ್ದೇಶಕ್ಕೆ ಪೂರಕವಾಗಿವೆ" ಎಂದು ಹೇಳಿದರು.
ಮಾತು ಮುಂದುವರಿಸಿದ ಅವರು, "ಸಾರಿಗೆ ಕಂಪನಿಯಾಗುವತ್ತ ಸಾಗುವ ನಮ್ಮ ಪ್ರಯಾಣವನ್ನು ಮತ್ತಷ್ಟು ತೀವ್ರಗೊಳಿಸಿರುವ ನಾವು ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025ರಲ್ಲಿ ಭಾಗವಹಿಸುತ್ತಿದ್ದು, ಭಾರತದಲ್ಲಿನ ಟೊಯೋಟಾದ ದೂರದೃಷ್ಟಿಯನ್ನು ಹಂಚಿಕೊಳ್ಳಲಿದ್ದೇವೆ. ನಮ್ಮ ಉತ್ಪಾದನಾ ಪ್ರಕ್ರಿಯೆಗಳು, ಪೂರೈಕೆ ಸರಪಳಿ ಕಾರ್ಯಾಚರಣೆಗಳು ಮತ್ತು ಡೀಲರ್ ನೆಟ್‌ವರ್ಕ್‌ ಗಳಾದ್ಯಂತ ಸುಸ್ಥಿರ ಪದ್ಥತಿಗಳನ್ನು ಅಳವಡಿಸಿಕೊಳ್ಳಲು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸುವ ನಮ್ಮ ಕಾರ್ಯಾಚರಣೆಯನ್ನು ಪ್ರಚುರಪಡಿಸಲಾಗುತ್ತದೆ. "ಸಂತೋಷದ ಹಾದಿಯಲ್ಲಿ ಒಟ್ಟಿಗೆ ಸಾಗೋಣ" ಅಭಿಯಾನದಲ್ಲಿ ನಮ್ಮೊಂದಿಗೆ ಜೊತೆಯಾಗಿ ಮತ್ತು ಬಿಎಂಜಿಇ 2025ರಲ್ಲಿ ಟೊಯೋಟಾದ ಉತ್ಪನ್ನಗಳನ್ನು, ಪ್ರಯಾಣವನ್ನು ಕಣ್ತುಂಬಿಕೊಳ್ಳಿ. ನಮ್ಮ ಪೆವಿಲಿಯನ್‌ ನಲ್ಲಿ ನಿಮ್ಮೆಲ್ಲರನ್ನೂ ಸ್ವಾಗತಿಸಲು ನಾವು ಎದುರುನೋಡುತ್ತೇವೆ” ಎಂದು ಹೇಳಿದರು.