viral news: ಲಾಂಗ್ ಝಳಪಿಸುತ್ತಾ ರೀಲ್ಸ್; ಬಿಗ್ ಬಾಸ್ ಖ್ಯಾತಿಯ ವಿನಯ್ ಗೌಡ, ರಜತ್ ಮೇಲೆ ಕೇಸ್
Viral News: ಬಿಗ್ ಬಾಸ್ ಸ್ಪರ್ಧಿಗಳಾದ ವಿನಯ್ ಗೌಡ ಹಾಗೂ ರಜತ್ ರೀಲ್ಸ್ ಮಾಡುವ ಭರಾಟೆಯಲ್ಲಿ ಲಾಂಗ್ ಹಿಡಿದು ಝಳಪಿಸುತ್ತ ರಸ್ತೆಯಲ್ಲಿ ಓಡಾಡಿದ್ದರು. ಆ ರೀಲ್ಸ್ ಅನ್ನು ರಜತ್ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದರು. ಬಸವೇಶ್ವರ ನಗರ ಪೊಲೀಸರು ಈ ಕುರಿತು ದೂರನ್ನು ದಾಖಲು ಮಾಡಿದ್ದಾರೆ.

ಲಾಂಗ್‌ನೊಂದಿಗೆ ರೀಲ್ಸ್ ಮಾಡಿದ ವಿನಯ್ ಗೌಡ, ರಂಜಿತ್

ಬೆಂಗಳೂರು: ಲಾಂಗ್ (long) ಝಳಪಿಸುತ್ತಾ ರೀಲ್ಸ್ (reels) ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದ ಬಿಗ್ ಬಾಸ್ (bigg boss) ಖ್ಯಾತಿಯ ವಿನಯ್ ಗೌಡ (vinay gowda) ಹಾಗೂ ರಜತ್ (rajath) ಮೇಲೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಬಿಗ್ ಬಾಸ್ 10ರ ಸ್ಪರ್ಧಿ ವಿನಯ್ ಗೌಡ ಹಾಗೂ ಬಿಗ್ ಬಾಸ್ 11ರ ಸ್ಪರ್ಧಿ ರಜತ್ ವಿರುದ್ಧ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆಯಡಿ ಎಫ್‌ಐಆರ್ ಅನ್ನು ದಾಖಲು ಮಾಡಿಕೊಳ್ಳಲಾಗಿದೆ. ಕೆಲವು ದಿನಗಳ ಹಿಂದೆ ಲಾಂಗ್ ಹಿಡಿದು ಇಬ್ಬರೂ ರೀಲ್ಸ್ ಮಾಡಿದ್ದರು. ಅದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ (viral news) ಆಗಿತ್ತು.
ಇತ್ತೀಚೆಗೆ ಬಿಗ್ ಬಾಸ್ ಖ್ಯಾತಿಯ ಸೆಲೆಬ್ರಿಟಿಗಳು ಇನ್ನಷ್ಟು ಖ್ಯಾತಿಗಾಗಿ ಹುಚ್ಚುಚ್ಚಾಗಿ ರೀಲ್ಸ್ ಮಾಡುತ್ತಿರುವುದು ಹೆಚ್ಚಾಗಿದೆ. ಬಿಗ್ ಬಾಸ್ ಖ್ಯಾತಿ ಡ್ರೋನ್ ಪ್ರತಾಪ್ ಕೃಷಿ ಹೊಂಡದಲ್ಲಿ ಸ್ಪೋಟ ಮಾಡಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದರು. ಈಗ ಇನ್ನಿಬ್ಬರು ಬಿಗ್ ಬಾಸ್ ಸ್ಪರ್ಧಿಗಳು ಹೀಗೆ ರೀಲ್ಸ್ ಮಾಡುವುದಕ್ಕೆ ಹೋಗಿ ಪೇಚಿಗೆ ಸಿಕ್ಕಿಕೊಂಡಿದ್ದಾರೆ. ವಿನಯ್ ಗೌಡ ಹಾಗೂ ರಜತ್ ಇಬ್ಬರೂ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬಿಗ್ ಬಾಸ್ ಸ್ಪರ್ಧಿಗಳಾದ ವಿನಯ್ ಗೌಡ ಹಾಗೂ ರಜತ್ ರೀಲ್ಸ್ ಮಾಡುವ ಭರಾಟೆಯಲ್ಲಿ ಲಾಂಗ್ ಹಿಡಿದು ಝಳಪಿಸುತ್ತ ರಸ್ತೆಯಲ್ಲಿ ಓಡಾಡಿದ್ದರು. ವಿನಯ್ ಗೌಡ ಹಾಗೂ ರಜತ್ ಇಬ್ಬರೂ ಹೆಚ್ಚು ಕಡಿಮೆ ಒಂದೇ ಕಾಸ್ಟ್ಯೂಮ್‌ನಲ್ಲಿ ಕೈಯಲ್ಲಿ ನಕಲಿ ಲಾಂಗ್ ಹಿಡಿದು ರೀಲ್ಸ್ ಮಾಡಿದ್ದರು. ಆ ರೀಲ್ಸ್ ಅನ್ನು ರಜತ್ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದರು. ಹೀಗೆ ಲಾಂಗ್ ಹಿಡಿದು ವಿಡಿಯೋ ಮಾಡುವುದು, ರೀಲ್ಸ್ ಮಾಡುವುದು ಕಾನೂನು ಬಾಹಿರ ಆಗಿದೆ. ಇದರಿಂದ ಸಾರ್ವಜನಿಕರಲ್ಲಿ ಭಯದ ವಾತಾವಾರಣ ಸೃಷ್ಟಿಯಾಗಿದೆ ಎಂದು ಆರೋಪ ಮಾಡಿದ ಬೆನ್ನಲ್ಲೇ ಬಸವೇಶ್ವರ ನಗರ ಪೊಲೀಸರು ದೂರನ್ನು ದಾಖಲು ಮಾಡಿದ್ದಾರೆ.
ಸೋಶಿಯಲ್ ಮೀಡಿಯಾಗಳಲ್ಲಿ ಲಾಂಗ್, ಮಚ್ಚು, ಗನ್, ಬಂದೂಕು ಇಂತಹವು ಅಸಲಿ ಅಥವಾ ನಕಲಿ ಆಗಿರಲಿ ಹಿಡಿದು ಪೋಸ್ ಕೊಡುವುದು, ರೀಲ್ಸ್ ಮಾಡುವುದು ಮಾಡುವಂತಿಲ್ಲ. ಬೆಂಗಳೂರಿನಲ್ಲಿ ಇತ್ತೀಚೆಗೆ ಲಾಂಗ್ ಹಿಡಿದು ವೀಲ್ಹಿಂಗ್ ಮಾಡುತ್ತಿರುವ ಪುಂಡರನ್ನು ಕೂಡ ಪೊಲೀಸರು ಹಿಡಿದು ಕೇಸ್ ದಾಖಲು ಮಾಡುತ್ತಿದ್ದಾರೆ. ಇಂಥವರ ವಿರುದ್ಧ ಸಾರ್ವಜನಿಕರ ಆಕ್ರೋಶ ಹೆಚ್ಚುತ್ತಿದ್ದು, ಸಾರ್ವಜನಿಕ ಶಾಂತಿಭಂಗದ ಹಿನ್ನೆಲೆಯಲ್ಲಿ ಕೇಸು ಹಾಕಲಾಗುತ್ತಿದೆ. ಬೆಂಗಳೂರಿನ ಟ್ರಾಫಿಕ್ ಪೊಲೀಸರು ಹಾಗೂ ಸೈಬರ್ ಸೆಕ್ಯುರಿಟಿ ವಿಂಗ್ ಸೋಶಿಯಲ್ ಮೀಡಿಯಾಗಳಲ್ಲಿ ಹೀಗೆ ಆತಂಕ ಹುಟ್ಟಿಸುವಂತಹ ರೀಲ್ಸ್ ಮಾಡುವವರ ಮೇಲೆ ಕಣ್ಣಿಟ್ಟಿದೆ.
ಇದನ್ನೂ ಓದಿ: Murder Case: ಮಾರಕಾಸ್ತ್ರಗಳಿಂದ ಕೊಚ್ಚಿ ರಿಯಲ್ ಎಸ್ಟೇಟ್ ಉದ್ಯಮಿಯ ಕೊಲೆ, ಕೊಲೆ ಹಿಂದೆ ಲವ್ ಸ್ಟೋರಿ