ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Yogi Adityanath: "ಹಿಂದೂಗಳು ಸುರಕ್ಷಿತವಾಗಿದ್ದರೆ, ಮುಸ್ಲಿಮರು ಸುರಕ್ಷಿತರೂ" ; ಯೋಗಿ ಆದಿತ್ಯನಾಥ್‌

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಯೋಗಿ ತಮ್ಮ ರಾಜ್ಯದ ಕುರಿತು ಮಾತನಾಡಿದ್ದು, ಉತ್ತರ ಪ್ರದೇಶದಲ್ಲಿ ಎಲ್ಲಾ ಧರ್ಮದ ಜನರು ಸುರಕ್ಷಿತವಾಗಿದ್ದಾರೆ ಎಂದು ಹೇಳಿದ್ದಾರೆ. ಹಿಂದೂಗಳು ಸುರಕ್ಷಿತವಾಗಿದ್ದರೆ, ಮುಸ್ಲಿಮರೂ ಸುರಕ್ಷಿತರು ಎಂದು ಅವರು ಹೇಳಿದರು.

ಉತ್ತರ ಪ್ರದೇಶದ ಅಲ್ಪಸಂಖ್ಯಾತರ ಕುರಿತು ಯೋಗಿ ಆದಿತ್ಯನಾಥ್ ಹೇಳಿದ್ದೇನು?

Profile Vishakha Bhat Mar 26, 2025 11:33 AM

ಲಖನೌ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಯೋಗಿ (Yogi Adityanath) ತಮ್ಮ ರಾಜ್ಯದ ಕುರಿತು ಮಾತನಾಡಿದ್ದು, ಉತ್ತರ ಪ್ರದೇಶದಲ್ಲಿ ಎಲ್ಲಾ ಧರ್ಮದ ಜನರು ಸುರಕ್ಷಿತವಾಗಿದ್ದಾರೆ ಎಂದು ಹೇಳಿದ್ದಾರೆ. ಹಿಂದೂಗಳು ಸುರಕ್ಷಿತವಾಗಿದ್ದರೆ, ಮುಸ್ಲಿಮರೂ ಸುರಕ್ಷಿತರು ಎಂದು ಅವರು ಹೇಳಿದರು. ಖಾಸಗಿ ಚಾನಲ್‌ನ ಸಂದರ್ಶನದಲ್ಲಿ ಮಾತನಾಡಿದ ಅವರು ಹಿಂದೂಗಳ ಧಾರ್ಮಿಕ ಸಹಿಷ್ಣುತೆ ಕುರಿತು ಮಾತನಾಡಿ 100 ಹಿಂದೂ ಕುಟುಂಬಗಳ ಮಧ್ಯದಲ್ಲಿರುವು ಒಂದು ಮುಸ್ಲಿಂ ಕುಟುಂಬ ಸಂತೋಷಗವಾಗಿದೆ. ಅವರಿಗೆ ಎಲ್ಲಾ ಧಾರ್ಮಿಕ ಪದ್ಧತಿಗಳನ್ನು ಪಾಲಿಸುವ ಸ್ವಾತಂತ್ರ್ಯವಿರುತ್ತದೆ. ಆದರೆ 100 ಮುಸ್ಲಿಂ ಕುಟುಂಬಗಳಲ್ಲಿ 50 ಹಿಂದೂಗಳು ಸುರಕ್ಷಿತವಾಗಿರಲು ಸಾಧ್ಯವೇ? ಇಲ್ಲ. ಎಂದು ಹೇಳಿದ್ದಾರೆ.

ಈ ಕುರಿತು ಬಾಂಗ್ಲಾದೇಶದ ಉದಾಹರಣೆಯನ್ನು ತೆಗೆದುಕೊಂಡ ಅವರು ಬಾಂಗ್ಲಾದೇಶದಲ್ಲಿ ಏನಾಗುತ್ತಿದೆ ಎಂಬುದು ಕಾಣಿಸುತ್ತಿದೆ ಎಂದರು. ಉತ್ತರ ಪ್ರದೇಶದಲ್ಲಿ ಮುಸ್ಲಿಮರು ಅತ್ಯಂತ ಸುರಕ್ಷಿತರು ಎಂದು ಸಿಎಂ ಯೋಗಿ ಪುನರುಚ್ಚರಿಸಿದರು, 2017 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಕೋಮು ಗಲಭೆಗಳು ನಿಂತಿವೆ. ಉತ್ತರ ಪ್ರದೇಶದಲ್ಲಿ, ಮುಸ್ಲಿಮರು ಅತ್ಯಂತ ಸುರಕ್ಷಿತರು. ಹಿಂದೂಗಳು ಸುರಕ್ಷಿತವಾಗಿದ್ದರೆ, ಅವರು ಸಹ ಸುರಕ್ಷಿತವಾಗಿರುತ್ತಾರೆ. 2017 ಕ್ಕಿಂತ ಮೊದಲು ಯುಪಿಯಲ್ಲಿ ಗಲಭೆಗಳಾಗಿದ್ದರೆ, ಹಿಂದೂ ಅಂಗಡಿಗಳು ಉರಿಯುತ್ತಿದ್ದರೆ, ಮುಸ್ಲಿಂ ಅಂಗಡಿಗಳು ಸಹ ಉರಿಯುತ್ತಿದ್ದವು. ಹಿಂದೂ ಮನೆಗಳು ಉರಿಯುತ್ತಿದ್ದರೆ, ಮುಸ್ಲಿಂ ಮನೆಗಳು ಸಹ ಉರಿಯುತ್ತಿದ್ದವು. ಮತ್ತು 2017 ರ ನಂತರ, ಗಲಭೆಗಳು ನಿಂತುಹೋದವು" ಎಂದು ಅವರು ಹೇಳಿದರು. ನನಗೆ ರಾಜ್ಯದ ಅಭಿವೃದ್ದಿಯಲ್ಲಿ ನನಗೆ ನಂಬಿಕೆ ಇದೆ ಎಂದು ಅವರು ಹೇಳಿದರು.



ಸನಾತನ ಧರ್ಮದ ಕುರಿತು ಮಾತು

ಮುಖ್ಯಮಂತ್ರಿ, ಸನಾತನ ಧರ್ಮವು ವಿಶ್ವದ ಅತ್ಯಂತ ಪ್ರಾಚೀನ ಧರ್ಮ ಮತ್ತು ಸಂಸ್ಕೃತಿ ಎಂದು ಬಣ್ಣಿಸಿದರು. ಸನಾತನ ಧರ್ಮದ ಅನುಯಾಯಿಗಳು ಎಂದಿಗೂ ಇತರರನ್ನು ನಂಬಿಸಿ ಮತಾಂತರ ಮಾಡಿಲ್ಲ. ಆದರೆ ಪ್ರತಿಯಾಗಿ ಅವರು ಏನು ಪಡೆದರು? ಪ್ರತಿಯಾಗಿ ಅವರು ಏನು ಗಳಿಸಿದರು? ಹಿಂದೂ ಆಡಳಿತಗಾರರು ತಮ್ಮ ಸ್ವಂತ ಶಕ್ತಿಯನ್ನು ಬಳಸಿಕೊಂಡು ಇತರರ ಮೇಲೆ ಪ್ರಭುತ್ವ ಸ್ಥಾಪಿಸಿದ ಉದಾಹರಣೆ ಜಗತ್ತಿನಲ್ಲಿ ಎಲ್ಲಿಯೂ ಇಲ್ಲ. ಅಂತಹ ನಿದರ್ಶನಗಳು ಅಸ್ತಿತ್ವದಲ್ಲಿಲ್ಲ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ: Sambhal Temple: 45 ವರ್ಷಗಳ ಬಳಿಕ ತೆರೆದ ಸಂಭಾಲ್‌ ದೇವಾಲಯ-ದೇವರ ವಿಗ್ರಹಗಳು ಪತ್ತೆ; ಉತ್ಖನನ ಕಾರ್ಯ ಇನ್ನಷ್ಟು ಚುರುಕು

ಇತ್ತೀಚೆಗೆ ನಡೆದ ಸಂಭಾಲ್‌ ಕುರಿತು ಪ್ರತಿಕ್ರಿಯೆ ನೀಡಿದ ಯೋಗಿ, ಸಂಭಾಲ್‌ನಲ್ಲಿ ಏನು ನಡೆದಿದೆ ಎನ್ನುವುದು ಎಲ್ಲರಿಗೂ ತಿಳಿದಿರುವುದು. ಶಾಹಿ ಜಾಮಾ ಮಸೀದಿಯನ್ನು ಪ್ರಾಚೀನ ದೇವಾಲಯದ ಅವಶೇಷಗಳ ಮೇಲೆ ನಿರ್ಮಿಸಲಾಗಿದೆ. ಹಿಂದೂ ದೇವಾಲಯಗಳನ್ನು ನಾಶಮಾಡಿದ ನಂತರ ನಿರ್ಮಿಸಲಾದ ಪೂಜಾ ಸ್ಥಳಗಳನ್ನು ದೇವರು ಸ್ವೀಕರಿಸುವುದಿಲ್ಲ ಎಂದು ಇಸ್ಲಾಂ ಹೇಳುತ್ತದೆ. ಹಾಗಾದರೆ ಅವುಗಳನ್ನು ಏಕೆ ನಿರ್ಮಿಸಲಾಯಿತು? ನ್ಯಾಯಾಲದ ತೀರ್ಪು ಬಂದ ನಂತರ ಅಲ್ಲಿ ದೇವಾಲಯ ನಿರ್ಮಾಣ ಕಾರ್ಯ ಪ್ರಾರಂಭಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.