RR vs KKR: ಇಂದಿನ ರಾಜಸ್ಥಾನ್-ಕೆಕೆಆರ್ ಪಂದ್ಯದ ಪಿಚ್ ರಿಪೋರ್ಟ್, ಹವಾಮಾನ ವರದಿ ಹೇಗಿದೆ?
ರಾಜಸ್ಥಾನ್ ರಾಯಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಇದುವರೆಗೆ ಐಪಿಎಲ್‌ನಲ್ಲಿ ಒಟ್ಟು 30 ಪಂದ್ಯಗಳಲ್ಲಿ ಮುಖಾಮಖಿಯಾಗಿವೆ. ಉಭಯ ತಂಡಗಳು ಕೂಡ 14 ಪಂದ್ಯಗಳನ್ನು ಗೆದ್ದು ಸಮಾನ ದಾಖಲೆ ಹೊಂದಿದೆ. 2 ಪಂದ್ಯ ರದ್ದುಗೊಂಡಿದೆ.


ಗುವಾಹಟಿ: ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್(RR vs KKR) ತಂಡಗಳು ಮಾರ್ಚ್ 26 ರ ಬುಧವಾರದಂದು ಐಪಿಎಲ್‌ನ(IPL 2025) ಈ ಋತುವಿನ ತಮ್ಮ ಎರಡನೇ ಪಂದ್ಯವನ್ನು ಆಡಲು ಸಜ್ಜಾಗಿವೆ. ಆಡಿದ ಮೊದಲ ಪಂದ್ಯದಲ್ಲಿ ಉಭಯ ತಂಡಗಳು ಸೋಲು ಕಂಡಿತ್ತು. ಕೋಲ್ಕತ್ತಾ ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸೋಲಿಸಿದರೆ, ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನವನ್ನು ಹೈದರಾಬಾದ್ ತಂಡ ಸೋಲಿಸಿತ್ತು. ಇದೀಗ ಮೊದಲ ಗೆಲುವಿಗಾಗಿ ಇಂದು ಸೆಣಸಾಟ ನಡೆಸಲಿವೆ. ಈ ಪಂದ್ಯದ ಹವಾಮಾನ(Guwahati weather forecast) ಮತ್ತು ಪಿಚ್ ರಿಪೋರ್ಟ್(RR vs KKR pitch report) ಮಾಹಿತಿ ಇಲ್ಲಿದೆ.
ಪಿಚ್ ರಿಪೋರ್ಟ್
ಗುವಾಹಟಿಯ ಬರ್ಸಾಪರ ಕ್ರಿಕೆಟ್ ಕ್ರೀಡಾಂಗಣವು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡಕ್ಕೂ ಸಮಾನವಾಗಿ ಸಹಾಯ ಮಾಡುತ್ತದೆ. ಮೊದಲ ಇನ್ನಿಂಗ್ಸ್‌ನ ಸರಾಸರಿ ಮೊತ್ತ 98. ಇಲ್ಲಿ ಇದುವರೆಗೂ ನಾಲ್ಕು ಐಪಿಎಲ್ ಪಂದ್ಯಗಳು ನಡೆದಿದ್ದು 2 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ತಂಡ ಗೆದ್ದರೆ, ಒಂದು ಬಾರಿ ಚೇಸಿಂಗ್ ತಂಡ ಗೆದ್ದಿದೆ. ಒಂದು ಪಂದ್ಯ ರದ್ದುಗೊಂಡಿದೆ.
ಹವಾಮಾನ ವರದಿ
ಗುವಾಹಟಿಯಲ್ಲಿ ಯಾವುದೇ ಮಳೆ ಬರುವ ಸಾಧ್ಯತೆ ಇಲ್ಲವಾದರೂ ಕೂಡ ರಾತ್ರಿಯ ವೇಳೆ ಇಬ್ಬನಿ ಕಾಟ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹಗಲಿನ ಸಮಯದಲ್ಲಿ ತಾಪಮಾನವು ಸುಮಾರು 25-30 ಡಿಗ್ರಿ ಸೆಲ್ಸಿಯಸ್ ಇದ್ದರೂ ರಾತ್ರಿ ವೇಳೆ ಚಳಿಯ ವಾತಾವರಣ ಇರಲಿದೆ. ಹೀಗಾಗಿ ಟಾಸ್ ಪಂದ್ಯದ ನಿರ್ಣಾಯಕವಾಗಿದೆ. ಇತ್ತಂಡಗಳು ಇದುವರೆಗೆ ಐಪಿಎಲ್‌ನಲ್ಲಿ ಒಟ್ಟು 30 ಪಂದ್ಯಗಳಲ್ಲಿ ಮುಖಾಮಖಿಯಾಗಿವೆ. ಉಭಯ ತಂಡಗಳು ಕೂಡ 14 ಪಂದ್ಯಗಳನ್ನು ಗೆದ್ದು ಸಮಾನ ದಾಖಲೆ ಹೊಂದಿದೆ. 2 ಪಂದ್ಯ ರದ್ದುಗೊಂಡಿದೆ.
ಇದನ್ನೂ ಓದಿ IPL 2025: ರೋಹಿತ್ ಶರ್ಮ ಹಿಂದಿಕ್ಕಿ ಅನಗತ್ಯ ದಾಖಲೆ ಬರೆದ ಮ್ಯಾಕ್ಸ್‌ವೆಲ್
ಸಂಭಾವ್ಯ ತಂಡಗಳು
ರಾಜಸ್ಥಾನ್ ರಾಯಲ್ಸ್: ಯಶಸ್ವಿ ಜೈಸ್ವಾಲ್, ಶುಭಂ ದುಬೆ, ನಿತೀಶ್ ರಾಣಾ, ರಿಯಾನ್ ಪರಾಗ್ (ನಾಯಕ), ಧ್ರುವ್ ಜುರೆಲ್ (ವಿ.ಕೀ.), ಶಿಮ್ರಾನ್ ಹೆಟ್ಮೆಯರ್, ಜೋಫ್ರಾ ಆರ್ಚರ್, ಮಹೇಶ್ ತೀಕ್ಷಣ, ತುಷಾರ್ ದೇಶಪಾಂಡೆ, ಸಂದೀಪ್ ಶರ್ಮಾ, ಫಜಲ್ಹಕ್ ಫಾರೂಕಿ, ಇಂಪ್ಯಾಕ್ಟ್ ಆಟಗಾರ: ಸಂಜು ಸ್ಯಾಮ್ಸನ್
ಕೋಲ್ಕತಾ ನೈಟ್ ರೈಡರ್ಸ್: ಕ್ವಿಂಟನ್ ಡಿ ಕಾಕ್ (ವಿ,ಕೀ.), ವೆಂಕಟೇಶ್ ಅಯ್ಯರ್, ಅಜಿಂಕ್ಯ ರಹಾನೆ (ನಾಯಕ), ರಿಂಕು ಸಿಂಗ್, ಅಂಗ್‌ಕ್ರಿಶ್ ರಘುವಂಶಿ, ಸುನಿಲ್ ನಾರಾಯಣ್, ಆಂಡ್ರೆ ರಸೆಲ್, ರಮಣದೀಪ್ ಸಿಂಗ್, ಸ್ಪೆನ್ಸರ್ ಜಾನ್ಸನ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ.