Tri-Nation ODI series: ಮಹಿಳಾ ತ್ರಿಕೋನ ಸರಣಿ ವೇಳಾಪಟ್ಟಿಯಲ್ಲಿ ಬದಲಾವಣೆ
ಭಾರತ ಮತ್ತು ದಕ್ಷಿಣ ಆಫ್ರಿಕಾ ಮಹಿಳಾ ತಂಡ ಮೇ 6 ರಂದು ಎರಡನೇ ಏಕದಿನ ಪಂದ್ಯ ಆಡಬೇಕಿತ್ತು. ಆದರೆ ಅದೇ ದಿನ ಕೊಲಂಬೊದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ನಿಗದಿಯಾಗಿದೆ. ಹೀಗಾಗಿ ಮೇ 6ರ ಪಂದ್ಯವನ್ನು ಒಂದು ದಿನ ಮುಂದೂಡಿದ್ದು, ಮೇ 7 ರಂದು ನಡೆಸಲು ನಿರ್ಧರಿಸಲಾಗಿದೆ.


ಕೊಲಂಬೊ: ಸ್ಥಳೀಯ ಚುನಾವಣೆಗಳ ಶ್ರೀಲಂಕಾ(Sri Lanka Cricket)ದಲ್ಲಿ ಎಪ್ರಿಲ್ 27 ರಿಂದ ನಿಗದಿಯಾಗಿದ್ದ ಭಾರತ, ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ಮಹಿಳಾ ತಂಡಗಳ ಏಕದಿನ ತ್ರಿಕೋನ(Tri-Nation Women’s ODI series) ಸರಣಿಯ(Tri-Nation ODI series) ವೇಳಾಪಟ್ಟಿ ಪರಿಷ್ಕರಿಸಲಾಗಿದೆ. ಹಳೆ ವೇಳಾಪಟ್ಟಿ ಪ್ರಕಾರ ಮೇ 1, 4, 6, 8ಕ್ಕೆ ಪಂದ್ಯಗಳು ನಿಗದಿಯಾಗಿತ್ತು. ಇದೀಗ ಹೊಸ ವೇಳಾಪಟ್ಟಿಯಲ್ಲಿ ಮೇ 2,4, 7, ಮತ್ತು 9ಕ್ಕೆ ಪಂದ್ಯಗಳು ನಡೆಯಲಿವೆ.
ಭಾರತ ಮತ್ತು ದಕ್ಷಿಣ ಆಫ್ರಿಕಾ ಮೇ 6 ರಂದು ಎರಡನೇ ಏಕದಿನ ಪಂದ್ಯ ಆಡಬೇಕಿತ್ತು. ಆದರೆ ಅದೇ ದಿನ ಕೊಲಂಬೊದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ನಿಗದಿಯಾಗಿದೆ. ಹೀಗಾಗಿ ಮೇ 6ರ ಪಂದ್ಯವನ್ನು ಒಂದು ದಿನ ಮುಂದೂಡಿದ್ದು, ಮೇ 7 ರಂದು ನಡೆಸಲು ನಿರ್ಧರಿಸಲಾಗಿದೆ. ಎಲ್ಲ ಪಂದ್ಯಗಳು ಹಗಲು ಹೊತ್ತಿನಲ್ಲಿ ನಡೆಯಲಿದ್ದು, ಪ್ರೇಮದಾಸ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಿಗದಿಯಾಗಿವೆ.
ಪರಿಷ್ಕೃತ ವೇಳಾಪಟ್ಟಿ
ಶ್ರೀಲಂಕಾ vs ಭಾರತ - ಏಪ್ರಿಲ್ 27
ಭಾರತ vs ದಕ್ಷಿಣ ಆಫ್ರಿಕಾ - ಏಪ್ರಿಲ್ 29
ಶ್ರೀಲಂಕಾ vs ದಕ್ಷಿಣ ಆಫ್ರಿಕಾ - ಮೇ 2
ಶ್ರೀಲಂಕಾ vs ಭಾರತ - ಮೇ 4
ದಕ್ಷಿಣ ಆಫ್ರಿಕಾ vs ಭಾರತ - ಮೇ 7
ಶ್ರೀಲಂಕಾ vs ದಕ್ಷಿಣ ಆಫ್ರಿಕಾ - ಮೇ 9
ಫೈನಲ್ - ಮೇ 11
ಇದನ್ನೂ ಓದಿ IPL 2025: ರೋಹಿತ್ ಶರ್ಮ ಹಿಂದಿಕ್ಕಿ ಅನಗತ್ಯ ದಾಖಲೆ ಬರೆದ ಮ್ಯಾಕ್ಸ್‌ವೆಲ್
ಭಾರತ ಎ ತಂಡದಲ್ಲಿ ಕರುಣ್ ನಾಯರ್?
ಮೇ, ಜೂನ್ ನಲ್ಲಿ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಲಿರುವ ಭಾರತ 'ಎ' ತಂಡಕ್ಕೆ ಕರ್ನಾಟಕದ ಕರುಣ್ ನಾಯರ್ ಆಯ್ಕೆಯಾಗುವ ಸಾಧ್ಯತೆ ಇದೆ. ಭಾರತ 'ಎ' ತಂಡವು ಇಂಗ್ಲೆಂಡ್ ಲಯನ್ಸ್ ವಿರುದ್ಧ ಎರಡು ಚತುರ್ದಿನ ಪಂದ್ಯಗಳನ್ನು ಆಡಲಿದೆ. ಇದಾದ ಬಳಿಕ ಇಂಗ್ಲೆಂಡ್ ಮತ್ತು ಭಾರತ ಸೀನಿಯರ್ ತಂಡಗಳ ಐದು ಟೆಸ್ಟ್‌ಗಳ ಸರಣಿ ನಡೆಯಲಿದೆ.
ನಾಲ್ಕು ದಿನಗಳ ಅವಧಿಯ ಮೊದಲ ಪಂದ್ಯವು ಮೇ 30ರಿಂದ ಕ್ಯಾಂಟರ್‌ಬರಿಯಲ್ಲಿರುವ ಸೇಂಟ್ ಲಾರೆನ್ಸ್‌ನ ಸ್ಪಿಟ್‌ಫೈರ್ ಮೈದಾನದಲ್ಲಿ ನಡೆಯಲಿದೆ. ಎರಡನೇ ಪಂದ್ಯವು ಜೂನ್ 6ರಿಂದ ನಾರ್ಥಂಪ್ಟನ್ ಕೌಂಟಿ ಕ್ರೀಡಾಂಗಣದಲ್ಲಿ ನಡೆಯಲಿದೆ.
2024–25ರ ದೇಶಿ ಕ್ರಿಕೆಟ್ ಋತುವಿನಲ್ಲಿ ಕರುಣ್ ನಾಯರ್ ಅವರು ಅಮೋಘ ಆಟವಾಡಿದ್ದಾರೆ. ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಆಗಿದ್ದಾರೆ. ರಣಜಿ ಟ್ರೋಫಿ ಟೂರ್ನಿಯಲ್ಲಿಯೂ ಅವರು ಒಟ್ಟು 863 ರನ್ ಗಳಿಸಿದ್ದರು. ಅದರಲ್ಲಿ ಅವರು ನಾಲ್ಕು ಶತಕ ಮತ್ತು ಎರಡು ಅರ್ಧಶತಕ ಗಳಿಸಿದ್ದರು.