ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MS Dhoni: ಇಂಪ್ಯಾಕ್ಟ್‌ ಪ್ಲೇಯರ್‌ ನಿಯಮ ಟಿ20 ಕ್ರಿಕೆಟ್‌ ಬೆಳವಣಿಯ ಭಾಗ ಎಂದ ಧೋನಿ

Impact Player IPL Rule: 'ಹೆಚ್ಚುವರಿ ಬ್ಯಾಟರ್‌ನಿಂದ ಹೆಚ್ಚು ರನ್‌ ಬರುತ್ತದೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ನಾನು ನಂಬುವುದಿಲ್ಲ. ಅದು ಆಟಗಾರನ ಮನಸ್ಥಿತಿ ಮೇಲೆ ಅವಲಂಬಿತವಾಗಿರುತ್ತದೆ. ಈ ನಿಯಮದಿಂದ ಎಲ್ಲ ತಂಡಗಳಿಗೆ ನಿರ್ಣಾಯಕ ಸಂದರ್ಭದಲ್ಲಿ ಹೆಚ್ಚುವರಿ ಬ್ಯಾಟರ್‌ ಮತ್ತು ಬೌಲರ್‌ ಹೊಂದುವ ಅನುಕೂಲ ಸಿಗುತ್ತದೆ' ಎಂದು ಧೋನಿ ಹೇಳಿದರು.

ಇಂಪ್ಯಾಕ್ಟ್‌ ಪ್ಲೇಯರ್‌ ನಿಯಮಕ್ಕೆ ಬೆಂಬಲ ಸೂಚಿಸಿದ ಧೋನಿ

Profile Abhilash BC Mar 26, 2025 10:57 AM

ಚೆನ್ನೈ: ಐಪಿಎಲ್‌ನಲ್ಲಿ ಜಾರಿಯಲ್ಲಿರುವ ಇಂಪ್ಯಾಕ್ಟ್‌ ಪ್ಲೇಯರ್‌ ನಿಯಮ(Impact Player IPL Rule)ವನ್ನು ಭಾರತ ತಂಡದ ನಾಯಕ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ ಮತ್ತು ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಸೇರಿದಂತೆ ಅನೇಕರು ಈ ಹಿಂದೆ ಟೀಕಿಸಿದ್ದರು. ಇದು ಆಲ್‌ರೌಂಡರ್‌ಗಳ ಬೆಳವಣಿಗೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದಿದ್ದರು. ಆದರೆ ಮಹೇಂದ್ರ ಸಿಂಗ್‌ ಧೋನಿ(MS Dhoni) ಅವರು ಈ ನಿಯಮ ಟಿ20 ಕ್ರಿಕೆಟ್‌ ಬೆಳವಣಿಗೆಯ ಭಾಗ ಎಂದು ಹೇಳಿದ್ದಾರೆ.

ಜಿಯೋ ಹಾಟ್‌ಸ್ಟಾರ್‌ ಸಂದರ್ಶನದಲ್ಲಿ ಮಾತನಾಡಿದ ಧೋನಿ, ಮೊದಲ ಬಾರಿ ಇಂಪ್ಯಾಕ್ಟ್‌ ಪ್ಲೇಯರ್‌ ನಿಯಮ ಪರಿಚಯಿಸಿದಾಗ ಇದರ ಅಗತ್ಯ ಮನವರಿಕೆಯಾಗಿರಲಿಲ್ಲ. ಆದರೆ ಇದೀಗ ಈ ನಿಯಮವು ಟಿ20 ಕ್ರಿಕೆಟ್‌ ವಿಕಸನದ ಭಾಗವೆಂಬುದು ಅರಿತಿದ್ದೇನೆ ಎಂದರು. ಇದೇ ವೇಳೆ ತಂಡಕ್ಕೆ ಮೊದಲ ಆಯ್ಕೆಯ ವಿಕೆಟ್‌ ಕೀಪರ್ ಆಗಿರುವ ಕಾರಣ ತಮ್ಮನ್ನು ಇಂಪ್ಯಾಕ್ಟ್‌ ಆಟಗಾರ ಎಂದು ಪರಿಗಣಿಸುವುದಿಲ್ಲ ಎಂದರು.

ಇದನ್ನೂ ಓದಿ IPL 2025: ರೋಹಿತ್‌ ಶರ್ಮ ಹಿಂದಿಕ್ಕಿ ಅನಗತ್ಯ ದಾಖಲೆ ಬರೆದ ಮ್ಯಾಕ್ಸ್‌ವೆಲ್‌

'ಹೆಚ್ಚುವರಿ ಬ್ಯಾಟರ್‌ನಿಂದ ಹೆಚ್ಚು ರನ್‌ ಬರುತ್ತದೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ನಾನು ನಂಬುವುದಿಲ್ಲ. ಅದು ಆಟಗಾರನ ಮನಸ್ಥಿತಿ ಮೇಲೆ ಅವಲಂಬಿತವಾಗಿರುತ್ತದೆ. ಈ ನಿಯಮದಿಂದ ಎಲ್ಲ ತಂಡಗಳಿಗೆ ನಿರ್ಣಾಯಕ ಸಂದರ್ಭದಲ್ಲಿ ಹೆಚ್ಚುವರಿ ಬ್ಯಾಟರ್‌ ಮತ್ತು ಬೌಲರ್‌ ಹೊಂದುವ ಅನುಕೂಲ ಸಿಗುತ್ತದೆ' ಎಂದು ಧೋನಿ ಹೇಳಿದರು.

ಇದನ್ನೂ ಓದಿ IPL 2025: ಅಜೇಯ 97 ರನ್‌ ಗಳಿಸಿ ಟಿ20 ಕ್ರಿಕೆಟ್‌ನಲ್ಲಿ ವಿಶೇಷ ದಾಖಲೆ ಬರೆದ ಶ್ರೇಯಸ್‌ ಅಯ್ಯರ್‌!

ಮಂಡಿ ನೋವಿನಿಂದ ಬಳಲುತ್ತಿರುವ 43 ವರ್ಷದ ಧೋನಿ ಈ ಬಾರಿ ಇಂಪ್ಯಾಕ್ಟ್‌ ಆಟಗಾರನಾಗಿ ಆಡಲಿದ್ದಾರೆ ಎನ್ನಲಾಗಿತ್ತು. ಆದರೆ ಧೋನಿ ಪೂರ್ಣ ಪ್ರಮಾಣದ ಆಟಗಾರನಾಗಿ ಆಡುತ್ತಿದ್ದಾರೆ. ಕಳೆದ ಭಾನುವಾರ ನಡೆದಿದ್ದ ಮುಂಬೈ ಇಂಡಿಯನ್ಸ್‌ ವಿರುದ್ಧದ ಪಂದ್ಯದಲ್ಲಿ ಧೋನಿ ಸೂರ್ಯಕುಮಾರ್‌ ಯಾದವ್‌(Suryakumar Yadav ) ಅವರನ್ನು ಕೇಲವ 0.12ಸೆಕೆಂಡ್ ಗಳಲ್ಲಿ ಕಣ್ಣು ಮಿಟುಕಿಸುವಷ್ಟರಲ್ಲಿ ಸ್ಟಂಪಿಂಗ್‌(MS Dhoni's stumping) ಮಾಡಿ ಎಲ್ಲರನ್ನು ನಿಬ್ಬೆರಗಾಗುವಂತೆ ಮಾಡಿದ್ದರು.