ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Suhasini: "ನನಗೆ ಟಿಬಿ ಕಾಯಿಲೆ ಇದೆ; ಮುಜಗರದಿಂದಾಗಿ ನಾನು ಈ ವರೆಗೆ ಹೇಳಿಕೊಂಡಿರಲಿಲ್ಲ ಎಂದ ನಟಿ!

90 ರ ದಶಕದಲ್ಲಿ ದಕ್ಷಿಣ ಭಾರತದ ಸ್ಟಾರ್‌ ನಟಿಯಾಗಿದ್ದ, ಹಿರಿಯ ನಟಿ ಸುಹಾಸಿನಿ ತಾವು ಕ್ಷಯ ರೋಗದ ವಿರುದ್ಧ ಹೋರಾಡಿರುವುದನ್ನು ಬಹಿರಂಗ ಪಡಿಸಿದ್ದಾರೆ. ಸಂದರ್ಶನವೊಂದರಲ್ಲಿ ತಮ್ಮ ವಯಕ್ತಿಕ ಜೀವನ ಹಾಗೂ ವೃತ್ತಿಯ ಬಗ್ಗೆ ಮಾತನಾಡಿರುವ ಅವರು ತಮ್ಮ ಆರೋಗ್ಯದ ಬಗ್ಗೆಯೂ ಮಾತನಾಡಿದ್ದಾರೆ.

ನನಗೆ ಟಿಬಿ ಕಾಯಿಲೆ ಇದೆ ಎಂದ ನಟಿ ಸುಹಾಸಿನಿ

Profile Vishakha Bhat Mar 26, 2025 10:42 AM

ಹೈದರಾಬಾದ್‌: 90 ರ ದಶಕದಲ್ಲಿ ದಕ್ಷಿಣ ಭಾರತದ ಸ್ಟಾರ್‌ ನಟಿಯಾಗಿದ್ದ, ಹಿರಿಯ ನಟಿ ಸುಹಾಸಿನಿ (Suhasini) ತಾವು ಕ್ಷಯ ರೋಗದ ವಿರುದ್ಧ ಹೋರಾಡಿರುವುದನ್ನು ಬಹಿರಂಗ ಪಡಿಸಿದ್ದಾರೆ. ಸಂದರ್ಶನವೊಂದರಲ್ಲಿ ತಮ್ಮ ವಯಕ್ತಿಕ ಜೀವನ ಹಾಗೂ ವೃತ್ತಿಯ ಬಗ್ಗೆ ಮಾತನಾಡಿರುವ ಅವರು ತಮ್ಮ ಆರೋಗ್ಯದ ಬಗ್ಗೆಯೂ ಮಾತನಾಡಿದ್ದಾರೆ. ತನಗೆ ಕ್ಷಯ ರೋಗವಿದೆ, ಸತತ ಆರು ತಿಂಗಳು ಇದರ ವಿರುದ್ಧ ಹೋರಾಡಿದ್ದೇನೆ. ಇದು ಯರೋಗದ ಬಗ್ಗೆ ಜಾಗೃತಿ ಮೂಡಿಸಲು ತಮ್ಮನ್ನು ಪ್ರೇರೇಪಿಸಿತು ಎಂದು ಅವರು ಹೇಳಿದ್ದಾರೆ. ನಟಿಗೆ ಕ್ಷಯ ರೋಗ ಇರುವುದನ್ನು ಕೇಳಿ ಅವರ ಅಭಿಮಾನಿಗಳು ಬೇಸರ ವ್ಯಕ್ತ ಪಡಿಸಿದ್ದಾರೆ.

ಮೊದಲು ಈ ಬಗ್ಗೆ ಹೇಳುವುದಕ್ಕೆ ನನಗೆ ಮೊದಲು ಮುಜುಗರವಿತ್ತು. ರೋಗದ ಬಗ್ಗೆ ಯಾರಿಗೂ ಹೇಳಿರಲಿಲ್ಲ, ರಹಸ್ಯವಾಗಿಟ್ಟಿದ್ದೆ. ನಾನು ಇದರ ಬಗ್ಗೆ ಮುಕ್ತವಾಗಿ ಹೇಳಿದರೆ ನನ್ನ ವೃತ್ತಿ ಜೀವನ ಹಾಗೂ ಖ್ಯಾತಿ ಮೇಲೆ ಪರಿಣಾವ ಬೀರುತ್ತದೆ ಎಂದು ಭಾವಿಸಿದ್ದೆ. ಆರು ತಿಂಗಳ ಕಾಲ ಔಷಧಿಗಳನ್ನು ತೆಗೆದುಕೊಂಡೆ. ಆದರೆ ನಂತರ ಇದರ ಬಗ್ಗೆ ಮುಕ್ತವಾಗಿ ಮಾತನಾಡಲು ಪ್ರಾರಂಭಿಸಿದೆ. ಈ ರೋಗ ಲಕ್ಷಣ ಇರುವವರನ್ನು ಭೇಟಿ ಮಾಡಿ, ಜಾಗೃತಿ ಮೂಡಿಸಲು ಪ್ರಯತ್ನ ಮಾಡುತ್ತಿದ್ದೇನೆ. ಟಿಬಿ ಬಗ್ಗೆ ಎಲ್ಲರೂ ಮುಕ್ತವಾಗಿ ಮಾತನಾಡ ಬೇಕು, ಪರಿಹಾರ ಕಂಡುಕೊಳ್ಳ ಬೇಕು ಎಂದು ಅವರು ಹೇಳಿದ್ದಾರೆ.

ಮೊದಲು ಆರು ವರ್ಷವಿದ್ದಾಗ ಟಿಬಿ ಕಾಣಿಸಿಕೊಂಡಿತ್ತು. ನಂತರ 36 ನೇ ವಯಸ್ಸಿನಲ್ಲಿ ಕ್ಷಯರೋಗ ಇರುವುದು ಪತ್ತೆಯಾಯಿತು. , ಇದು ತೀವ್ರ ತೂಕ ನಷ್ಟಕ್ಕೆ ಕಾರಣವಾಯಿತು - ಅವರ ತೂಕ 75 ಕೆಜಿಯಿಂದ ಕೇವಲ 35 ಕೆಜಿಗೆ ಇಳಿಯಿತು. ಅಷ್ಟೇ ಅಲ್ಲದೆ ಶ್ರವಣ ಸಮಸ್ಯೆ ಕೂಡ ಕಾಣಿಸಿಕೊಂಡಿತು. ಕೆಲವೊಮ್ಮೆ ತನಗೆ ತೀವೃ ಭಯವಾಗುತ್ತಿತ್ತು ಎಂದು ನಟಿ ಹೇಳಿದ್ದಾರೆ. 2020 ರಲ್ಲಿ, ಅವರು ಕ್ಷಯರೋಗ ಪೀಡಿತ ಜನರಿಗೆ ಸಹಾಯ ಮಾಡಲು ಮೀಸಲಾಗಿರುವ REACH ಇಂಡಿಯಾ ಸಂಸ್ಥೆಯನ್ನು ಸೇರಿದರು. ಅವರು ತಮಿಳು ನಾಡಿನಲ್ಲಿ , 2,800 ಕ್ಕೂ ಹೆಚ್ಚು ಕ್ಷಯರೋಗ ಪೀಡಿತರ ನೋವನ್ನು ನಿವಾರಿಸಲು ಮತ್ತು ರೋಗದ ಬಗ್ಗೆ ಜಾಗೃತಿ ಮೂಡಿಸಲು ಶ್ರಮಿಸುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ: Yash Ramayana: ಟಾಕ್ಸಿಕ್ ಚಿತ್ರದ ನಡುವೆ ಮತ್ತೊಂದು ಮೆಗಾ ಚಿತ್ರಕ್ಕೆ ಯಶ್ ಸಜ್ಜು: ರಾಕಿಂಗ್ ಸ್ಟಾರ್ ಫ್ಯಾನ್ಸ್ಗೆ ಭರ್ಜರಿ ಸುದ್ದಿ

ಸುಹಾಸಿನಿ 1980 ರಲ್ಲಿ ನಾಯಕಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. 1988 ರಲ್ಲಿ ನಿರ್ದೇಶಕ ಮಣಿರತ್ನಂ ಅವರನ್ನು ಮದುವೆಯಾದರು. ಕನ್ನಡ ಅನೇಕ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.