Young Adults Unhappy: ಎಲ್ಲಾ ಇದ್ರೂ ನೆಮ್ಮದಿ, ಖುಷಿ ಇಲ್ಲ...ಇದು ಇಂದಿನ ಯುವಜನರನ್ನು ಕಾಡುತ್ತಿರುವ ವಿಚಿತ್ರ ಸಮಸ್ಯೆ!
ಅಸ್ಟ್ರೇಲಿಯಾ, ಇಂಗ್ಲೆಂಡ್, ಯುನೈಟೆಡ್ ಸ್ಟೇಟ್ಸ್, ನ್ಯೂಜಿಲ್ಯಾಂಡ್, ಐರ್ಲೆಂಡ್, ಕೆನಡಾ ದೇಶದಲ್ಲಿ ಮಕ್ಕಳು ಯೌವನಕ್ಕೆ ಬರುತ್ತಲೇ ಅವರಲ್ಲಿ ಅಡಕವಾಗಿದ್ದ ಖುಷಿಯ ಮಟ್ಟ ಕುಸಿಯುತ್ತಿದೆ. ಯೌವನದಿಂದ ಮಧ್ಯವಯಸ್ಸಿಗೆ ಈ ಸಂತೋಷದ ಮಟ್ಟ ಮತ್ತಷ್ಟು ಕ್ಷೀಣಿಸಿದ್ದ ಯುವಜನರಿಗೆ ಆರೋಗ್ಯ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ ಎಂಬ ಆಘಾತಕಾರಿ ಮಾಹಿತಿ ತಿಳಿದು ಬಂದಿದೆ.


ನವದೆಹಲಿ: ಬದಲಾಗುತ್ತಿರುವ ಜೀವನ ಶೈಲಿಯಿಂದ ಯುವ ಜನಾಂಗ ನಿತ್ಯ ಅನೇಕ ಸಂಕಷ್ಟಗಳಿಗೆ ಗುರಿಯಾಗುತ್ತಲೇ ಇದೆ(Young Adults Unhappy). ಅದರಲ್ಲೂ ಯಾವುದೇ ಆರ್ಥಿಕ ಸಮಸ್ಯೆ ಇಲ್ಲದೆ ಇದ್ದರೂ ಕೂಡ ಯುವ ಮನಸ್ಸುಗಳು ಖುಷಿಯಿಂದ ಜೀವಿಸುತ್ತಿಲ್ಲ. ಮನಸ್ಸಿನ ಖುಷಿ, ನೆಮ್ಮದಿ ವಿವಿಧ ವಯಸ್ಸಿನಲ್ಲಿ ಹೇಗೆ ಬದಲಾವಣೆ ಹಂತವನ್ನು ತಲುಪುತ್ತದೆ ಎಂದು ರಾಷ್ಟ್ರೀಯ ಆರ್ಥಿಕ ಸಂಶೋಧನ ಸಂಸ್ಥೆಯು ಅಧ್ಯಯನ ಮಾಡಿದ್ದು ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಅತೃಪ್ತ ಜೀವನ ನಡೆಸುತ್ತಿದ್ದಾರೆ ಎಂಬ ಅಘಾತಕಾರಿ ಅಂಶ ಹೊರಬಿದ್ದಿದೆ. ಹಾಗಾದರೆ ಯುವ ಜನಾಂಗಕ್ಕೆ ಯಾವ ಸಮಸ್ಯೆ ಕಾಡುತ್ತಿದೆ? ಮಾನಾಸಿಕ ಅಶಾಂತಿಯಿಂದ ಯುವಜನತೆ ಬದುಕಿನ ಮೇಲೆ ಯಾವೆಲ್ಲ ಪರಿಣಾಮ ಬೀರುತ್ತಿದೆ ಎನ್ನುವ ಮಾಹಿತಿ ಇಲ್ಲಿದೆ.
ಅಸ್ಟ್ರೇಲಿಯಾ, ಇಂಗ್ಲೆಂಡ್, ಅಮೆರಿಕ, ನ್ಯೂಜಿಲ್ಯಾಂಡ್, ಐರ್ಲೆಂಡ್, ಕೆನಡಾ ದೇಶದಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಮಕ್ಕಳು ಯೌವನಕ್ಕೆ ಬರುತ್ತಲೆ ಅವರಲ್ಲಿ ಅಡಕವಾಗಿದ್ದ ಖುಷಿಯ ಮಟ್ಟ ಕುಸಿಯುತ್ತಿದೆ. ಯೌವನದಿಂದ ಮಧ್ಯವಯಸ್ಸಿಗೆ ಈ ಸಂತೋಷದ ಮಟ್ಟ ಮತ್ತಷ್ಟು ಕ್ಷೀಣಿಸಿದ್ದು, ಯುವ ಜನರಿಗೆ ಆರೋಗ್ಯ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ ಎಂಬ ಆಘಾತಕಾರಿ ಮಾಹಿತಿ ತಿಳಿದು ಬಂದಿದೆ.
ಮಾನಸಿಕ ಆರೋಗ್ಯದ ಮೇಲೆ ಪರಿಣಾಮ
ಯುವ ಜನತೆಯಲ್ಲಿ ಮಾನಸಿಕ ಆರೋಗ್ಯದ ಸಮಸ್ಯೆ ಅತಿಯಾಗಿ ಕಾಡುತ್ತಿರುವುದು ಈ ಸಂಶೋಧನಾ ಅಧ್ಯಯನದಿಂದ ತಿಳಿದುಬಂದಿದೆ. ಬರೀ ಆಸ್ಟ್ರೇಲಿಯಾದಲ್ಲಿ ಕೇವಲ ಒಂದು ದಶಕದಲ್ಲಿ ಯುವಕರಲ್ಲಿ 40% ಮತ್ತು ಯುವತಿಯರಲ್ಲಿ 60% ಮಾನಸಿಕ ಸಮಸ್ಯೆ ಹೆಚ್ಚಾಗಿರುವುದು ತಿಳಿದುಬಂದಿದೆ. 2007ರಲ್ಲಿ ಅಧ್ಯಯನದಲ್ಲಿ ಆಸ್ಟ್ರೇಲಿಯಾದ 16-24 ವಯಸ್ಸಿನ ಮಹಿಳೆಯರಲ್ಲಿ ಮಾನಸಿಕ ಅಸ್ವಸ್ಥತೆ ಪ್ರಮಾಣ 30% ಇದ್ದದ್ದು 2022 ರಲ್ಲಿ ಈ ಮಟ್ಟವು 46% ಏರಿಕೆಯಾಗಿದೆ. ಹೀಗೆ ಯುನೈಟೆಡ್ ಕಿಂಗ್ಡಮ್, ಯುನೈಟೆಡ್ ಸ್ಟೇಟ್ಸ್, ನ್ಯೂಜಿಲ್ಯಾಂಡ್, ಐರ್ಲೆಂಡ್, ಕೆನಡಾದಲ್ಲಿಯು ಈ ಸಂಖ್ಯೆ ಮಿತಿ ಮೀರಿದೆ.
ಕಾರಣ ಏನು?
ಗ್ಯಾಜೆಟ್ ಬಳಕೆ: ಯುವ ಜನಾಂಗವು ಸ್ಮಾರ್ಟ್ ಫೋನ್ ,ಟ್ಯಾಬ್ ಸೇರಿದಂತೆ ಇತರ ಗ್ಯಾಜೇಟ್ ಬಳಕೆ ಮಾಡುವ ಪ್ರಮಾಣ ನಿರಂತರವಾಗಿ ಹೆಚ್ಚಾಗುತ್ತಿದ್ದು ಇದು ಮಾನಸಿಕ ಸಮಸ್ಯೆಗಳಾದ ಆತಂಕ , ಕಿನ್ನತೆಗೆ ಕೂಡ ಮೂಲ ಕಾರಣವಾಗುತ್ತಿದೆ ಎಂದು ತಿಳಿದು ಬಂದಿದೆ.
ಆರ್ಥಿಕ ಅಸ್ಥಿರತೆ: ಯುವ ಜನರಿಗೆ ಆರ್ಥಿಕ ಅಸ್ಥಿರತೆ ಸಮಸ್ಯೆ ಕಾಡುತ್ತಿದ್ದು ಇದು ಅವರ ಮಾನಸಿಕ ನೆಮ್ಮದಿಗೂ ತೊಡಕಾಗಿದೆ ಎಂದು ತಿಳಿದುಬಂದಿದೆ. ಎಜುಕೇಶನ್ ಲೋನ್, ಉದ್ಯೋಗ ಇತ್ಯಾದಿ ಸಮಸ್ಯೆಯು ಯುವಕರಲ್ಲಿ ಹೆಚ್ಚುತ್ತಿದೆ.
ಜಾಗತಿಕ ಅಡೆತಡೆಗಳು: ಹಣದುಬ್ಬರ, ಕೋವಿಡ್ ಸಾಂಕ್ರಾಮಿಕ ರೋಗಗಳು, ಆರ್ಥಿಕ ಹಿಂಜರಿತ ಇತ್ಯಾದಿ ಜಾಗತಿಕ ಮಟ್ಟದ ಸಮಸ್ಯೆಗಳಿಂದ ಯುವಕರು ಸಂಕಷ್ಟದ ಪರಿಸ್ಥಿತಿ ಎದುರಿಸುವಂತಾಗಿದೆ.
ಸಮುದಾಯ ಪಾಲ್ಗೊಳ್ಳುವಿಕೆ ಸಮಸ್ಯೆ: ಹಿಂದಿನ ತಲೆಮಾರಿಗೆ ಹೋಲಿಸಿದರೆ ಯುವ ಜನಾಂಗವು ಜನರೊಂದಿಗೆ ಪಾಲ್ಗೊಳ್ಳುವಿಕೆ ಮಟ್ಟ ಬಹಳ ಕಡಿಮೆ ಇದೆ ಎನ್ನಬಹುದು. ಕೌಟುಂಬಿಕವಾಗಿ ಅಥವಾ ಹೊರ ಜಗತ್ತಿನ ಜೊತೆ ಹೆಚ್ಚು ಬೆರೆಯದೆ ತಮ್ಮದೆ ಆದ ಲೋಕದಲ್ಲಿ ಯುವಜನಾಂಗವಿದ್ದು ಇದು ಮಾನಸಿಕ ಸಮಸ್ಯೆಗೂ ಕಾರಣವಾಗುತ್ತಿದೆ.
ಇದನ್ನು ಓದಿ: Health Tips: ಗಂಟೆಗಟ್ಟಲೇ ಕೂತಲ್ಲೇ ಕೆಲ್ಸ ಮಾಡಿ ಬೆನ್ನು ನೋವೇ? ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ
ಏನು ಮಾಡಬೇಕು?
- ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಲು ಮಕ್ಕಳಿಗೆ ಪ್ರೋತ್ಸಾಹ ನೀಡುವುದು. ಉದಾಹರಣೆಗೆ ಓದುವುದು, ಜೀವನ ಕೌಶಲ್ಯಗಳ ಕಲಿಕೆಗೆ ಪೂರಕವಾದ ವಾತಾವರಣ ಕಲ್ಪಿಸಬೇಕು.
- ಡಿಜಿಟಲ್ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳ ಬಳಕೆಯ ಕುರಿತು ಅರಿವು ಮೂಡಿಸಿ ಆರೋಗ್ಯಕರ ತಂತ್ರಜ್ಞಾನ ಬಳಕೆ ಉತ್ತೇಜಿಸುವುದರ ಮೂಲಕ ಪರಿಸ್ಥಿತಿ ಸುಧಾರಿಸಬಹುದು.
- ಯುವಕರ ಮಾನಸಿಕ ಆರೋಗ್ಯ ಬಲಪಡಿಸುವ ಕ್ರಿಯಾಶೀಲ ಚಟುವಟಿಕೆಗೆ ಅಧಿಕ ಬೆಂಬಲ ನೀಡಬೇಕು.
- ಯುವ ಜನರಿಗೆ ಹೊರೆಯಾಗುತ್ತಿರುವ ಆರ್ಥಿಕ ಬಿಕ್ಕಟ್ಟು ಪರಿಹರಿಸಲು ವಿವಿಧ ಉದ್ಯೋಗ ಅವಕಾಶ ಕಲ್ಪಿಸುವುದು, ಸ್ವ ಉದ್ಯೋಗಕ್ಕೆ ಆದ್ಯತೆ ನೀಡುವ ಮೂಲಕ ಪರಿಸ್ಥಿತಿ ಸುಧಾರಿಸಿ ಅತೃಪ್ತ ಜೀವನ ವಿಧಾನ ಬದಲಾಯಿಸಬಹುದಾಗಿದೆ.
- ಯುವ ಜನರು ಸಮುದಾಯವಾಗಿ ಪಾಲ್ಗೊಳ್ಳಲು ಬೆಂಬಲಿಸುವುದು. ಸ್ವಯಂ ಸೇವೆ ಮಾಡುವುದು, ಉತ್ತಮ ಹವ್ಯಾಸಗಳ ಕಲಿಕೆಗೆ ಬೆಂಬ ಲಿಸಿದಾಗ ಇತರರ ಜೊತೆಗೆ ಬೆರೆತು ಮಾನಸಿಕ ಸಮಸ್ಯೆಯಿಂದ ಹೊರಬರಲು ಪ್ರೋತ್ಸಾಹ ಸಿಕ್ಕಂತಾಗಲಿದೆ ಎನ್ನಬಹುದು.