ಐಪಿಎಲ್​ ಸುನಿತಾ ವಿಲಿಯಮ್ಸ್​ ವಿದೇಶ ಫ್ಯಾಷನ್​ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

India's First Night Safari: ಈ ರಾಜ್ಯದಲ್ಲಿ ನಿರ್ಮಾಣವಾಗಲಿದೆ ದೇಶ ಪ್ರಪ್ರಥಮ ನೈಟ್‌ ಸಫಾರಿ; ಏನಿದರ ವೈಶಿಷ್ಟ್ಯ?

India's First Night Safari: ಉತ್ತರ ಪ್ರದೇಶ ಸರ್ಕಾರವು ಲಕ್ನೋದಲ್ಲಿ ಮಹತ್ವಾಕಾಂಕ್ಷೆಯ 'ಕುಕ್ರೈಲ್ ನೈಟ್ ಸಫಾರಿ ಮತ್ತು ಸಾಹಸ ಉದ್ಯಾನವನ' ನಿರ್ಮಾಣ ಮಾಡಲು ಮುಂದಾಗಿದ್ದು, ಮುಂದಿನ ತಿಂಗಳಿನಿಂದ ಇದರ ಕಾಮಗಾರಿ ಪ್ರಾರಂಭವಾಗಲಿದೆ. ಪ್ರವಾಸೋದ್ಯಮ ಮತ್ತು ವನ್ಯಜೀವಿ ಸಂರಕ್ಷಣೆಯ ಗುರಿಯನ್ನು ಹೊಂದಿರುವ ಈ ಯೋಜನೆಯನ್ನು ಒಟ್ಟು 1,500 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ.

ನೀವು ಎಂದಾದರೂ ನೈಟ್ ಸಫಾರಿ ಮಾಡಿದ್ದೀರಾ...?

ಲಕ್ನೋದ ನೈಟ್ ಸಫಾರಿ

Profile Sushmitha Jain Mar 25, 2025 3:13 PM

ಲಖನೌ: ವನ್ಯಜೀವಿ ತಾಣಗಳಿಗೆ ಭೇಟಿ ನೀಡುವುದು ಹಲವು ಪ್ರವಾಸಿಗರ ಅಚ್ಚುಮೆಚ್ಚಿನ ಸಂಗತಿಯಾಗಿರುತ್ತದೆ. ಆದರೆ, ಭಾರತದ ಎಲ್ಲ ವನ್ಯಜೀವಿ ಸಫಾರಿಗಳು ಬೆಳಗಿನಿಂದ ಸಂಜೆ ವರೆಗೆ ಮಾತ್ರ ಪ್ರವಾಸಿಗರ ಪ್ರವೇಶಕ್ಕೆ ಅನುಮತಿ ನೀಡುತ್ತವೆ. ಆದರೆ, ರಾತ್ರಿ ಹೊತ್ತಲ್ಲಿ ಕಾಡಿನ ಅನುಭವ ಪಡೆಯುವ ಅವಕಾಶ ಈಗಲೂ ಪ್ರವಾಸಿಗರಿಗೆ ಸಿಕ್ಕಿಲ್ಲ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡ ಉತ್ತರ ಪ್ರದೇಶ ಸರ್ಕಾರ(Uttar Pradesh Government)ವು ಲಕ್ನೋ(Lucknow)ದಲ್ಲಿ ಮಹತ್ವಾಕಾಂಕ್ಷೆಯ 'ಕುಕ್ರೈಲ್ ನೈಟ್ ಸಫಾರಿ ಮತ್ತು ಸಾಹಸ ಉದ್ಯಾನವನ' (Kukrail Night Safari and Adventure Park) ನಿರ್ಮಾಣವನ್ನು ಮುಂದಿನ ತಿಂಗಳಿನಿಂದ ಪ್ರಾರಂಭಿಸಲಿದೆ. ಪ್ರವಾಸೋದ್ಯಮ ಮತ್ತು ವನ್ಯಜೀವಿ ಸಂರಕ್ಷಣೆ(Tourism and Wildlife Conservation)ಯ ಗುರಿಯನ್ನು ಹೊಂದಿರುವ ಈ ಯೋಜನೆಯನ್ನು ಒಟ್ಟು 1,500 ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚದಲ್ಲಿ ಎರಡು ಹಂತಗಳಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ.

ಪ್ರವಾಸಿ ಆಕರ್ಷಣೆಯಾಗಿ ಕುಕ್ರೈಲ್ ಅಭಿವೃದ್ಧಿಯು ವನ್ಯಜೀವಿ ಸಂರಕ್ಷಣಾ ಸ್ಥಳವನ್ನು ಉತ್ತೇಜಿಸುವುದು, ಮರ-ಗಿಡಗಳ ಬೆಳವಣಿಗೆ ಹೆಚ್ಚಿಸುವುದು ಮತ್ತು ಸುಸ್ಥಿರ ವಿರಾಮ ತಾಣವನ್ನು ಒದಗಿಸುವುದು ಮತ್ತು ಇದರ ಮೂಲಕ ಲಕ್ನೋವನ್ನು ಪ್ರಮುಖ ಪರಿಸರ ಪ್ರವಾಸೋದ್ಯಮ ಕೇಂದ್ರವಾಗಿ ಮಾಡುವುದು ಉತ್ತರ ಪ್ರದೇಶ ಸರ್ಕಾರದ ಗುರಿ.

ಅಧಿಕೃತ ಹೇಳಿಕೆಯ ಪ್ರಕಾರ, ಅಂದಾಜು 631 ಕೋಟಿ ರೂ. ವೆಚ್ಚದ ಮೊದಲ ಹಂತದ ಕಾಮಗಾರಿಯು ಏಪ್ರಿಲ್‌ನಲ್ಲಿ ಪ್ರಾರಂಭವಾಗಲಿದ್ದು, 24 ತಿಂಗಳೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಈ ಹಂತದಲ್ಲಿ ರಾತ್ರಿ ಸಫಾರಿ ಮತ್ತು ಸಾಹಸ ಉದ್ಯಾನವನದ ಸುಗಮ ಉದ್ಘಾಟನೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯ ಮೂಲಸೌಕರ್ಯಗಳ ನಿರ್ಮಾಣವನ್ನು ಒಳಗೊಂಡಿರುತ್ತದೆ.

ಈ ಸುದ್ದಿಯನ್ನು ಓದಿ: Viral Video: ಇದೇನು ಮನಾಲಿ, ಕಾಶ್ಮೀರನಾ? ಇಲ್ಲ.... ಬೆಂಗಳೂರಿನ ರಸ್ತೆಯೇ? ಏನಿದು ವೈರಲ್ ವಿಡಿಯೊ?

ರಾತ್ರಿ ಸಫಾರಿಯ ವೈಶಿಷ್ಟ್ಯಗಳೇನು?

ಕುಕ್ರೈಲ್ ನೈಟ್ ಸಫಾರಿ ಭಾರತದಲ್ಲಿಯೇ ಮೊತ್ತ ಮೊದಲ ನೈಟ್‌ ಸಫಾರಿ ಯೋಜನೆಯಾಗಿದೆ. ಇದು ಪ್ರವಾಸಿಗರಿಗೆ ನಿಯಂತ್ರಿತ ಮತ್ತು ನೈಸರ್ಗಿಕ ಆವಾಸಸ್ಥಾನದಲ್ಲಿ ರಾತ್ರಿ ವೇಳೆ ವನ್ಯಜೀವಿಗಳನ್ನು ವೀಕ್ಷಿಸುವ ವಿಶಿಷ್ಟ ಅನುಭವವನ್ನು ನೀಡುತ್ತದೆ. ಪ್ರಸಿದ್ಧ ಸಿಂಗಾಪುರ್ ನೈಟ್ ಸಫಾರಿಯಿಂದ ಪ್ರೇರಿತವಾದ ಈ ಉದ್ಯಾನವನವು, ರಾತ್ರಿಯ ಸಮಯದಲ್ಲಿ ಪ್ರಾಣಿಗಳನ್ನು ವೀಕ್ಷಿಸಲು ಪ್ರವಾಸಿಗರಿಗೆ ಅವಕಾಶ ಒದಗಿಸುತ್ತದೆ. ಲಕ್ನೋದ ಕುಕ್ರೈಲ್ ರಿಸರ್ವ್ ಫಾರೆಸ್ಟ್ ಬಳಿಯ ವಿಶಾಲವಾದ ಭೂಮಿಯಲ್ಲಿ ಸಫಾರಿ ಮತ್ತು ಸಾಹಸ ಉದ್ಯಾನವನವನ್ನು ಅಭಿವೃದ್ಧಿಪಡಿಸಲಾಗುತ್ತದೆ. ಹಾಗಿದ್ದರೆ ಇದರ ವೈಶಿಷ್ಟ್ಯಗಳೇನು?

ವಿವಿಧ ಪ್ರಾಣಿಗಳಿಗೆ ಮೀಸಲು ಸ್ಥಳ: ಸಿಂಹಗಳು, ಹುಲಿಗಳು, ಚಿರತೆಗಳು, ಜಿಂಕೆಗಳು ಮತ್ತು ಇತರ ಪ್ರಾಣಿಗಳಿಗೆ ಪ್ರತ್ಯೇಕವಾದ ಆವರಣಗಳು ಇಲ್ಲಿರಲಿದೆ.

ಕೃತಕ ಚಂದ್ರನ ಬೆಳಕಿನ ದಾರಿ: ನೈಸರ್ಗಿಕ ರಾತ್ರಿಯ ವಾತಾವರಣವನ್ನು ಸೃಷ್ಟಿಸಲು ಎಚ್ಚರಿಕೆಯಿಂದ ವಿನ್ಯಾಸಗೊಳಿಸಲಾದ ಬೆಳಕಿನ ವ್ಯವಸ್ಥೆಗಳು, ಚಂದ್ರನ ಬೆಳಕಿನಲ್ಲಿ ನಡೆಯುವ ಅನುಭವವನ್ನು ನೀಡಲಿವೆ. ಇದು ಪ್ರಾಣಿಗಳಿಗೂ ಹೆಚ್ಚು ಸಮಸ್ಯೆ ಉಂಟುಮಾಡುವುದಿಲ್ಲ.

ಪರಿಸರ ಸ್ನೇಹಿ ಸಫಾರಿ ಸವಾರಿಗಳು: ಮಾಲಿನ್ಯ-ಮುಕ್ತ ಅನುಭವವನ್ನು ಖಚಿತಪಡಿಸಿಕೊಳ್ಳಲು ಬ್ಯಾಟರಿ ಚಾಲಿತ ವಾಹನಗಳನ್ನು ಬಳಸಲಾಗುತ್ತದೆ.

ಪಕ್ಷಿ ವೀಕ್ಷಣೆ ಪ್ರದೇಶಗಳು: ರಾತ್ರಿ ವೇಳೆ ಮಾತ್ರ ಕಾಣಿಸಿಕೊಳ್ಳುವ ಅಪರೂಪದ ಪ್ರಭೇದದ ಪಕ್ಷಿಗಳನ್ನು ವೀಕ್ಷಿಸಲು ಪಕ್ಷಿ ಪ್ರಿಯರಿಗೆ ವಿಶೇಷ ವಿಭಾಗಗಳನ್ನು ಇದು ಒಳಗೊಂಡಿದೆ.

ಸಂವಾದಾತ್ಮಕ ಶೈಕ್ಷಣಿಕ ಕೇಂದ್ರಗಳು: ವನ್ಯಜೀವಿ ಸಂರಕ್ಷಣೆಯ ಬಗ್ಗೆ ಸಂದರ್ಶಕರಿಗೆ ಶಿಕ್ಷಣ ನೀಡಲು ಮಾಹಿತಿ ಕೇಂದ್ರಗಳನ್ನು ನಿರ್ಮಿಸಲಾಗುತ್ತದೆ.

ಐಷಾರಾಮಿ ರೆಸಾರ್ಟ್‌ ಮತ್ತು ವಾಸ್ತವ್ಯ ಆಯ್ಕೆ: ಸಂದರ್ಶಕರ ಅನುಭವವನ್ನು ಹೆಚ್ಚಿಸಲು ಸಫಾರಿ-ವಿಷಯದ ವಸತಿ ಕೇಂದ್ರಗಳನ್ನು ಕೂಡಾ ನಿರ್ಮಿಸಲಾಗುತ್ತದೆ.

1,500 ಕೋಟಿ ರೂ.ಗಳಿಗೂ ಹೆಚ್ಚು ಹೂಡಿಕೆಯೊಂದಿಗೆ, ಇದು ಪರಿಸರ ಪ್ರವಾಸೋದ್ಯಮ, ಸಾಹಸ ಕ್ರೀಡೆಗಳು ಮತ್ತು ಜೀವವೈವಿಧ್ಯ ಸಂರಕ್ಷಣೆಯನ್ನು ಉತ್ತೇಜಿಸುವ ಈ ಯೋಜನೆಯು ದೇಶದ ಪ್ರವಾಸೋದ್ಯಮದಲ್ಲಿ ಒಂದು ಮೈಲಿಗಲ್ಲಾಗಿದೆ.