ಬೆಂಗಳೂರಿನಲ್ಲಿ ಒಂದೇ ದಿನದಲ್ಲಿ ಸರಕು ವಿತರಣೆ ಸೇವೆ ಅನಾವರಣಗೊಳಿಸಿದ ಶಿಪ್‌ರಾಕೆಟ್; ದೇಶಿ ಎಂಎಸ್ಎಂಇ-ಗಳಿಗೆ ಇ-ಕಾಮರ್ಸ್ ಬೆಂಬಲ
ಶಿಪ್ ರಾಕೆಟ್ ತನ್ನ ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ವೇದಿಕೆ ಮತ್ತು ಕೊರಿಯರ್ ಪಾಲು ದಾರಿಕೆಗಳನ್ನು ಬಳಸಿಕೊಂಡು ವ್ಯಾಪಕ ಶ್ರೇಣಿಯ ಮಾರಾಟ ಗಾರರಿಗೆ ತ್ವರಿತ ವಾಣಿಜ್ಯ ವಹಿವಾಟಿನ ಸಾಮರ್ಥ್ಯಗಳನ್ನು ಒದಗಿಸುವ ಮೂಲಕ ಈ ಪರಿವರ್ತನೆಯನ್ನು ಮುನ್ನಡೆಸು ತ್ತಿದೆ.

ಇ-ಕಾಮರ್ಸ್ ಸೇವೆ ಒದಗಿಸುವ ದೇಶದ ಪ್ರಮುಖ ವೇದಿಕೆಯಾಗಿರುವ ಶಿಪ್ ರಾಕೆಟ್

ತ್ವರಿತ ವಿತರಣೆಗೆ ಹೆಚ್ಚುತ್ತಿರುವ ಗ್ರಾಹಕರ ಬೇಡಿಕೆ ಪೂರೈಸಲು ವ್ಯಾಪಾರಿಗಳ ಸಬಲೀಕರಣ ಗೊಳಿಸುವ ಗುರಿ
ಬೆಂಗಳೂರು: ಇ-ಕಾಮರ್ಸ್ ಸೇವೆ ಒದಗಿಸುವ ದೇಶದ ಪ್ರಮುಖ ವೇದಿಕೆಯಾಗಿರುವ ಶಿಪ್ ರಾಕೆಟ್ (Shiprocket), ಅದೇ ದಿನ ವಿತರಣೆ (Same Day Delivery-ಎಸ್ಡಿಡಿ) ಮಾಡುವ ಸೇವೆಯನ್ನು ಬೆಂಗಳೂರಿನಲ್ಲಿ ಪ್ರಾರಂಭಿಸಿದೆ. ದೇಶದ ಪ್ರತಿಯೊಬ್ಬ ಮಾರಾಟಗಾರರಿಗೂ ಉದ್ಯಮ-ದರ್ಜೆಯ, ವೇಗದ ವಿತರಣೆ ಸೌಲಭ್ಯವನ್ನು ಶಿಪ್ರಾಕೆಟ್ ಪರಿಚಯಿಸುತ್ತಿದೆ. ಸಾಂಪ್ರದಾಯಿಕವಾಗಿ, ತ್ವರಿತ ವಿತರಣೆಯು ಸದ್ಯಕ್ಕೆ ಪ್ರಮುಖ ಇ-ಕಾಮರ್ಸ್ ಬ್ರ್ಯಾಂಡ್ ಗಳಿಗೆ ಮಾತ್ರ ಲಭ್ಯವಿರುವ ಸೌಲಭ್ಯವಾಗಿದೆ. ಕ್ಷಿಪ್ರವಾಗಿ ವಿತರಿಸುವ, ಎಲ್ಲರಿಗೂ ಸಮಾನ ಅವಕಾಶ ಒದಗಿಸುವ ಮೂಲಕ ಈ ನಂಬಿಕೆಯನ್ನು ಶಿಪ್ ರಾಕೆಟ್ ಬದಲಾಯಿಸುತ್ತಿದೆ. ಸೂಕ್ಷ್ಮ, ಕಿರು ಮತ್ತು ಸಣ್ಣ ಉದ್ದಿಮೆಗಳು (ಎಂಎಸ್ಎಂಇ) ಕೂಡ ತ್ವರಿತ ವಿತರಣೆ ಸೇವೆ ನೀಡಬಹುದು ಮತ್ತು ಸ್ಪರ್ಧಾತ್ಮಕವಾಗಿ ಉಳಿಯಬಹುದು ಎಂಬುದನ್ನು ಇದು ಖಚಿತ ಪಡಿಸುತ್ತದೆ. ಈ ಸೇವೆಯು ಈಗಾಗಲೇ ದೆಹಲಿ ಎನ್ಸಿಆರ್, ಮುಂಬೈ, ಕೋಲ್ಕತ್ತಾ ಮತ್ತು ಹೈದರಾಬಾದ್‌ನಲ್ಲಿ ಲಭ್ಯವಿದೆ.
ಇ-ಕಾಮರ್ಸ್ ವಹಿವಾಟು ಈಗ ವೇಗ-ಆಧಾರಿತ ಗ್ರಾಹಕರ ನಿರೀಕ್ಷೆಗಳ ಕಡೆಗೆ ಬದಲಾಗು ತ್ತಿರುವುದರಿಂದ, ಕ್ಷಿಪ್ರ ವಿತರಣೆ ಸೇವೆ ನೀಡುವ ವ್ಯಾಪಾರಿಗಳು ಹೆಚ್ಚಿನ ಬದಲಾವಣೆ ಮತ್ತು ಹೆಚ್ಚಿನ ಸಂಖ್ಯೆಯ ಗ್ರಾಹಕರ ನಿಷ್ಠೆ ಉಳಿಸಿಕೊಳ್ಳುವಲ್ಲಿ ಸಫಲರಾಗುತ್ತಾರೆ.
ಇದನ್ನೂ ಓದಿ: E-Commerce: ಇ-ಕಾಮರ್ಸ್ ವೇದಿಕೆಗಳು ಎಪಿಎಂಸಿ ಆಡಳಿತಕ್ಕೆ: ವಿಧೇಯಕ ಅಂಗೀಕಾರ
ಮಾರುಕಟ್ಟೆ ದತ್ತಾಂಶ ಮುನ್ಸೂಚನೆ ವರದಿಯ ಪ್ರಕಾರ, ಭಾರತದ ಅದೇ ದಿನದ ವಿತರಣಾ (ಒಂದೇ ದಿನದಲ್ಲಿ ಸರಕು ವಿತರಣೆ) ವಹಿವಾಟಿನ ಮಾರುಕಟ್ಟೆಯು 2028 ರ ವೇಳೆಗೆ ಶೇ 23.6 ರಷ್ಟು ಒಟ್ಟಾರೆ ವಾರ್ಷಿಕ ಬೆಳವಣಿಗೆ ದರದಲ್ಲಿ (ಸಿಎಜಿಆರ್) 10 ಶತಕೋಟಿ ಡಾಲರ್ ಮೀರುವ ನಿರೀಕ್ಷೆಯಿದೆ. ಶಿಪ್ ರಾಕೆಟ್ ತನ್ನ ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ವೇದಿಕೆ ಮತ್ತು ಕೊರಿಯರ್ ಪಾಲುದಾರಿಕೆಗಳನ್ನು ಬಳಸಿಕೊಂಡು ವ್ಯಾಪಕ ಶ್ರೇಣಿಯ ಮಾರಾಟ ಗಾರರಿಗೆ ತ್ವರಿತ ವಾಣಿಜ್ಯ ವಹಿವಾಟಿನ ಸಾಮರ್ಥ್ಯಗಳನ್ನು ಒದಗಿಸುವ ಮೂಲಕ ಈ ಪರಿವರ್ತನೆಯನ್ನು ಮುನ್ನಡೆಸುತ್ತಿದೆ.
ಬೆಂಗಳೂರಿನ ಇ-ಕಾಮರ್ಸ್ ವಹಿವಾಟಿಗೆ ಸ್ಪರ್ಧಾತ್ಮಕ ಪ್ರಯೋಜನ ರೂಪದಲ್ಲಿ ತ್ವರಿತ ವಿತರಣೆಯ ಪ್ರಯೋಜನ ಕಲ್ಪಿಸುವಿಕೆ
ಬೆಂಗಳೂರು ಮಹಾನಗರವು ಅಗಾಧ ಸಾಮರ್ಥ್ಯದ ಇ-ಕಾಮರ್ಸ್ ವಹಿವಾಟಿನ ಕೇಂದ್ರ ವಾಗಿದ್ದು, ಸರಾಸರಿ ಬೇಡಿಕೆ ಮೌಲ್ಯ ₹ 2,000ಗಳದ್ದಾಗಿರುತ್ತದೆ. ನಗರದಲ್ಲಿ ಮುಂಚೂಣಿ ಯಲ್ಲಿ ಇರುವ ಮೂರು ಮಾರಾಟ ವಿಭಾಗಗಳಲ್ಲಿ ಸೌಂದರ್ಯ, ಬಟ್ಟೆ ಹಾಗೂ ಪರಿಕರಗಳು ಮತ್ತು ಆಭರಣಗಳು ಸೇರಿವೆ. ಶಿಪ್‌ರಾಕೆಟ್‌ನ ಅದೇ ದಿನ ವಿತರಣೆಯು ಒಂದು ಉತ್ಪನ್ನ ವಾಗಿ ಈಗಾಗಲೇ ಭಾರಿ ಬದಲಾವಣೆ ತರುವುದರಲ್ಲಿ ಸಾಬೀತಾಗಿದೆ.
ಬಾಟಾ, ಕೆಚ್, ಮಾಮಾಅರ್ಥ್, ಬಿಒಎಟಿ., ಗಿವಾ, ಎನ್‌ಇಕೆ, ಪ್ಲಮ್ ಮತ್ತು ವೈಲ್ಡ್‌ಕ್ರಾಫ್ಟ್ ನಂತಹ ಬ್ರ್ಯಾಂಡ್‌ಗಳು ತಮ್ಮ ವಹಿವಾಟನ್ನು ಗಮನಾರ್ಹವಾಗಿ ಹೆಚ್ಚಿಸಲು ಶಿಪ್ರಾಕೆಟ್ ಅನ್ನು ಬಳಸಿಕೊಳ್ಳುತ್ತಿವೆ. ಗ್ರಾಹಕರ ಸಂತೃಪ್ತಿ ಹೆಚ್ಚಿಸಲು, ಪುನರಾವರ್ತಿತ ಖರೀದಿ ಗಳನ್ನು ಮುನ್ನಡೆಸಿಕೊಂಡು ಹೋಗಲು ಮತ್ತು ವಹಿವಾಟಿನ ಪ್ರಮಾಣ ಹೆಚ್ಚಿಸಲು ʼಅದೇ ದಿನದ ವಿತರಣೆʼಯು ಬೆಂಗಳೂರು ಮೂಲದ ಮಾರಾಟಗಾರರಿಗೆ ಶಕ್ತಿಯುತ ಸಾಧನ ಒದಗಿಸಿದೆ.
ಪ್ರಮುಖ ಕೊಡುಗೆಗಳು:
ಶಿಪ್‌ರಾಕೆಟ್‌ನ ಅದೇ ದಿನದ ವಿತರಣೆಯು ವಿವಿಧ ವಹಿವಾಟು ಮಾದರಿಗಳನ್ನು ಪೂರೈಸ ಲು ವಿನ್ಯಾಸಗೊಳಿಸಲಾದ ಬಹು ಪೂರೈಕೆ ಪರಿಹಾರಗಳನ್ನು ಒದಗಿಸುತ್ತದೆ:
- ಅದೇ ದಿನದ ವಿತರಣೆ: ವ್ಯಾಪಾರಿ ಕಾರ್ಯನಿರ್ವಹಿಸುವ ಸ್ಥಳದಿಂದ ಮಧ್ಯಾಹ್ನ 12 ರಿಂದ ಮಧ್ಯಾಹ್ನ 1 ಗಂಟೆಯ ನಡುವೆ ಪಡೆದ ಸರಕು ಪೂರೈಕೆಯ ಬೇಡಿಕೆಗಳನ್ನು ಗ್ರಾಹಕರಿಗೆ ಅದೇ ದಿನ ತಲುಪಿಸಲಾಗುವುದು.
- ಮಧ್ಯಾಹ್ನ 3 ಗಂಟೆಗೆ ಬೇಡಿಕೆ ಸಲ್ಲಿಸಿದರೆ / ಅರ್ಧ ದಿನದಲ್ಲಿ ವಿತರಣೆ: ಮಧ್ಯಾಹ್ನ 3 ಗಂಟೆ ಒಳಗಿನ ಬೇಡಿಕೆಗಳನ್ನು ಕೊರಿಯರ್ ಪಾಲುದಾರಿಕೆ ಕಂಪನಿಯಾಗಿರುವ ಪಿಐಸಿಒ (PICO) ನೆರವಿನಿಂದ ಅದೇ ದಿನ ತಲುಪಿಸಲಾಗುವುದು.
- ಮಳಿಗೆ / ಮಾಲ್ ಗಳಿಂದ ಸರಕು ಪಡೆಯುವಿಕೆ: ಬಹುಬಗೆಯ ಮಾರಾಟ ವಿಧಾನದ ಬ್ರ್ಯಾಂಡ್‌ಗಳಿಗಾಗಿ ವಿನ್ಯಾಸಗೊಳಿಸಲಾಗಿರುವ ಈ ಸೇವೆಯು ಷಾಪಿಂಗ್ ಮಾಲ್ ಒಳಗಿನ ಮಳಿಗೆಗಳು ಸರಬರಾಜು ಕೇಂದ್ರಗಳಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಮಧ್ಯಾಹ್ನ 2 ರಿಂದ 3 ಗಂಟೆಯ ನಡುವೆ ಪಡೆದ ಸರಕು ಪೂರೈಕೆ ಬೇಡಿಕೆಗಳನ್ನು ಗ್ರಾಹಕ ರಿಗೆ ಅದೇ ದಿನ ತಲುಪಿಸಲಾಗುವುದು. ಸದ್ಯಕ್ಕೆ ಬಾಟಾ ಮತ್ತು ಖಾದಿಮ್ ಈ ಸೇವೆಯನ್ನು ಬೆಂಗಳೂರಿನ ಭಾರತೀಯ ಮಾಲ್, ಬ್ರಿಗೇಡ್ ರೋಡ್, ಫಾಲ್ಕನ್ ಸಿಟಿ ಮಾಲ್, ಫೋರಂ ನೈಬರ್‌ಹುಡ್ ಮಾಲ್, ಗರುಡಾ ಮಾಲ್, ಲುಲು ಮಾಲ್, ಮಾಲ್ ಆಫ್ ಏಷ್ಯಾ, ಮಂತ್ರಿ ಸ್ಕ್ವೇರ್, ನೆಕ್ಸಸ್ ಫೋರಂ ಮಾಲ್, ಓರಾಯನ್ ಮಾಲ್, ಫೀನಿಕ್ಸ್ ಮಾರ್ಕೆಟ್‌ಸಿಟಿಯಲ್ಲಿ ಬಳಸಲಾಗುತ್ತಿದೆ.
ವಾಣಿಜ್ಯದ ಭವಿಷ್ಯ ಬಲಪಡಿಸುವಿಕೆ
ಶಿಪ್‌ರಾಕೆಟ್ ಒಂದು ತಂತ್ರಜ್ಞಾನ ವೇದಿಕೆಯಾಗಿದ್ದು, ಇದು ಸಮಗ್ರ ಸ್ವರೂಪದ ಗರಿಷ್ಠ ವೇಗದ ಸರಕು ವಿತರಣೆ ಸೌಲಭ್ಯ, ಸುಧಾರಿತ ಚೆಕ್‌ಔಟ್ ಪರಿಹಾರಗಳು ಮತ್ತು ಅತ್ಯಾಧು ನಿಕ ಮಾರ್ಕೆಟಿಂಗ್ ಪರಿಕರಗಳೊಂದಿಗೆ ಮಾರಾಟಗಾರರನ್ನು ಸಬಲೀಕರಣಗೊಳಿಸುತ್ತದೆ. ಕೃತಕಬುದ್ಧಿಮತ್ತೆ-ಚಾಲಿತ ರೂಟಿಂಗ್ ಮತ್ತು ಅತ್ಯುತ್ತಮ ವಿತರಣಾ ಜಾಲಗಳ ನೆರವಿನಿಂದ ಶಿಪ್‌ರಾಕೆಟ್ ವ್ಯಾಪಾರಿಗಳ ಅಗತ್ಯಗಳನ್ನು ನಿರೀಕ್ಷಿಸಿ ಮತ್ತು ನಿರಂತರ ಬದಲಾವಣೆ ಆಧ ರಿಸಿದ ಬೆಳವಣಿಗೆಯನ್ನು ಅನಾವರಣ ಮಾಡುವ ಪರಿಹಾರಗಳನ್ನು ನೀಡುತ್ತದೆ. ಪಿಕಂಡೆ ಲ್, ಪಿಐಸಿಒ, ಬ್ಲಿಟ್ಜ್, ಷ್ಯಾಡೊಫ್ಯಾಕ್ಸ್ ಮತ್ತು ಎಕ್ಸ್‌ಪ್ರೆಸ್‌ಬೀಸ್‌ನಂತಹ ಪ್ರಮುಖ ಕೊರಿ ಯರ್ ಸಂಸ್ಥೆಗಳ ಜೊತೆಗೆ ಪಾಲುದಾರಿಕೆ ಮಾಡಿಕೊಳ್ಳುವ ಮೂಲಕ, ವ್ಯಾಪಾರಿಗಳು ಅತ್ಯಂತ ತ್ವರಿತವಾಗಿ ಮತ್ತು ದಕ್ಷ ರೀತಿಯಲ್ಲಿ ಸರಕುಗಳ ಬೇಡಿಕೆಗಳನ್ನು ಗ್ರಾಹಕರಿಗೆ ತಲುಪಿಸಬಹುದು ಎಂಬುದನ್ನು ಖಚಿತಪಡಿಸುತ್ತದೆ.
ನಾವೀನ್ಯತೆಯ ನೆರವಿನಿಂದ ಎಂಎಸ್‌ಎಂಇ ಬೆಳವಣಿಗೆಗೆ ಚಾಲನೆ
ಈ ಸೌಲಭ್ಯಕ್ಕೆ ಚಾಲನೆ ನೀಡಿರುವುದರ ಕುರಿತು ಪ್ರತಿಕ್ರಿಯಿಸಿರುವ ಶಿಪ್‌ರಾಕೆಟ್‌ನ ವ್ಯವ ಸ್ಥಾಪಕ ನಿರ್ದೇಶಕ ಮತ್ತು ಸಿಇಒ ಸಾಹಿಲ್ ಗೋಯೆಲ್ ಅವರು, "ಭಾರತದಾದ್ಯಂತದ ವ್ಯಾಪಾರಿಗಳ ಪಾಲಿಗೆ ವಿಶ್ವಾಸಾರ್ಹ ಬೆಳವಣಿಗೆಯ ಪಾಲುದಾರರಾಗಲು ನಾವು ಶಿಪ್ ರಾಕೆಟ್‌ನಲ್ಲಿ ಬದ್ಧರಾಗಿದ್ದೇವೆ. ಗ್ರಾಹಕರು ಬೇಡಿಕೆ ಸಲ್ಲಿಸಿದ ದಿನವೇ ಸರಕು ವಿತರಿಸುವ ಸೌಲಭ್ಯವನ್ನು ಪರಿಚಯಿಸುವ ಮೂಲಕ, ನಾವು ದೇಶಿ ʼಎಂಎಸ್‌ಎಂಇʼಗಳನ್ನು ಸಬಲೀ ಕರಣಗೊಳಿಸುತ್ತಿದ್ದೇವೆ. ಉದ್ಯಮದಲ್ಲಿನ ಅತ್ಯುತ್ತಮ ಉತ್ಪನ್ನಗಳ ಜೊತೆಗೆ ಸ್ಪರ್ಧಿಸಲು ನೆರವಾಗುತ್ತಿದ್ದೇವೆ. ಗ್ರಾಹಕರ ಅನುಭವವನ್ನು ಹೆಚ್ಚಿಸಲು ಮತ್ತು ಪುನರಾವರ್ತಿತ ವಹಿ ವಾಟು ಹೆಚ್ಚಿಸಲು ವ್ಯಾಪಾರಿಗಳಿಗೆ ಆಧುನಿಕ ಸಾಧನಗಳನ್ನು ಒದಗಿಸುತ್ತಿದ್ದೇವೆ. ವೇಗವು ಇನ್ನು ಮುಂದೆ ಐಷಾರಾಮಿ ಸೌಲಭ್ಯವಾಗಿ ಉಳಿದಿಲ್ಲ. ಈಗ ಅದೊಂದು ಅಗತ್ಯವಾಗಿದೆ. ಪ್ರತಿಯೊಬ್ಬ ಮಾರಾಟಗಾರನು, ವಹಿವಾಟಿನ ಗಾತ್ರವನ್ನು ಪರಿಗಣಿಸದೆ ಅತ್ಯುತ್ತಮ-ದರ್ಜೆ ಯ ಪರಿಹಾರಗಳನ್ನು ಬಳಸಿಕೊಳ್ಳಲಿದ್ದಾನೆ ಎಂಬುದನ್ನು ನಾವು ಖಚಿತಪಡಿಸಿ ಕೊಳ್ಳುತ್ತಿ ದ್ದೇವೆ." ಎಂದು ಹೇಳಿದ್ದಾರೆ.
"ದೇಶದ ಪ್ರತಿಯೊಬ್ಬ ಮಾರಾಟಗಾರನಿಗೂ ಇ-ಕಾಮರ್ಸ್ ತಂತ್ರಜ್ಞಾನವು ಸಮಾನವಾಗಿ ದೊರೆಯುವಂತಹ ನಮ್ಮ ದೂರದೃಷ್ಟಿ ಸಾಕಾರಗೊಳಿಸುವ ನಿಟ್ಟಿನಲ್ಲಿ ಈ ಉಪಕ್ರಮವು ಒಂದು ಮಹತ್ವದ ಹೆಜ್ಜೆಯಾಗಿದೆ. ಅರ್ಥ ವ್ಯವಸ್ಥೆಯ ವ್ಯಾಪಕ ಸ್ವರೂಪದ ಡಿಜಿಟಲ್ ಪರಿವರ್ತನೆಗೆ ಇದು ಗಮನಾರ್ಹ ಕೊಡುಗೆ ನೀಡಲಿದೆ" ಎಂದೂ ಹೇಳಿದ್ದಾರೆ.