ಚಾಂಪಿಯನ್ಸ್ ಟ್ರೋಫಿಯಲ್ಲಿ ಮತ್ತೊಂದು ವಿವಾದ; ಐಸಿಸಿ ವಿರುದ್ಧವೇ ಪಿಸಿಬಿ ಆಕ್ರೋಶ!
Champions Trophy 2025: ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯುತ್ತಿರುವ ಕಾರಣ ಟಿವಿ ಲೋಗೋದಲ್ಲಿ ಪಾಕಿಸ್ತಾನದ ಹೆಸರು ಕಾಣಬೇಕು. ಆದರೆ ಭಾರತ ಮತ್ತು ಬಾಂಗ್ಲಾ ನಡುವಣ ಪಂದ್ಯದ ವೇಳೆ ಪಾಕ್ ಹೆಸರು ಕಾಣಿಸಿಲ್ಲ. ಇದು ಬಿಸಿಸಿಐ ಬೇಕಂತಲೇ ಮಾಡಿದ್ದು ಎಂದು ಪಾಕ್ ಐಸಿಸಿಗೆ ದೂರು ನೀಡಿದೆ. ಜತೆಗೆ ಐಸಿಸಿಯ ಮಲತಾಯಿ ಧೋರಣೆ ಸರಿಯಲ್ಲ ಎಂದು ಹೇಳಿದೆ.


ದುಬೈ: ಈ ಬಾರಿಯ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೂ ಮುನ್ನ ಒಂದಿಲ್ಲೊಂದು ವಿವಾದಗಳು ಕೇಳಿಬರುತ್ತಲೇ ಇತ್ತು. ಇದೀಗ ಟೂರ್ನಿ ಆರಂಭಗೊಂಡು ಮೂರು ಪಂದ್ಯ ಮುಕ್ತಾಯಗೊಂಡರೂ ವಿವಾದಗಳು ನಿಲ್ಲುವಂತೆ ಕಾಣುತ್ತಿಲ್ಲಿ. ಇದೀಗ ಲೋಗೋ ವಿಚಾರವಾಗಿ ಪಾಕ್ ಕ್ರಿಕೆಟ್ ಮಂಡಳಿ ಕ್ಯಾತೆ ತೆಗೆದಿದೆ. ಮಾತ್ರವಲ್ಲದೇ ಈ ಕುರಿತು ಸ್ಪಷ್ಟನೆ ಕೇಳಿ ಐಸಿಸಿಗೆ ಪತ್ರ ಕೂಡ ಬರೆದಿದೆ ಎನ್ನಲಾಗಿದೆ. ಇತ್ತೀಚೆಗೆ ದುಬೈನಲ್ಲಿ ನಡೆದ ಭಾರತ-ಬಾಂಗ್ಲಾದೇಶ ನಡುವಣ ಪಂದ್ಯದ ನೇರ ಪ್ರಸಾರದ ಸಮಯದಲ್ಲಿ ಪಾಕಿಸ್ತಾನದ ಹೆಸರನ್ನು ಟೂರ್ನಮೆಂಟ್ ಲೋಗೋದಿಂದ ತೆಗೆದು ಹಾಕಲಾಗಿದೆ ಎಂದು ಪಾಕ್ ಕ್ರಿಕೆಟ್ ಮಂಡಳಿ ದೂರು ನೀಡಿದೆ.
ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯುತ್ತಿರುವ ಕಾರಣ ಟಿವಿ ಲೋಗೋದಲ್ಲಿ ಪಾಕಿಸ್ತಾನದ ಹೆಸರು ಕಾಣಬೇಕು. ಆದರೆ ಭಾರತ ಮತ್ತು ಬಾಂಗ್ಲಾ ನಡುವಣ ಪಂದ್ಯದ ವೇಳೆ ಪಾಕ್ ಹೆಸರು ಕಾಣಿಸಿಲ್ಲ. ಇದು ಬಿಸಿಸಿಐ ಬೇಕಂತಲೇ ಮಾಡಿದ್ದು ಎಂದು ಪಾಕ್ ಐಸಿಸಿಗೆ ದೂರು ನೀಡಿದೆ. ಜತೆಗೆ ಐಸಿಸಿಯ ಮಲತಾಯಿ ಧೋರಣೆ ಸರಿಯಲ್ಲ ಎಂದು ಹೇಳಿದೆ.
ಇದನ್ನೂ ಓದಿ IND vs PAK: ಇಂಡೋ-ಪಾಕ್ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ, ಹವಾಮಾನ ವರದಿ ಹೇಗಿದೆ?
ಜೆರ್ಸಿ, ರಾಷ್ಟ್ರಧ್ವಜ ಹೀಗೆ ಹಲವು ವಿವಾದಗಳು ಸುಖಾಂತ್ಯ ಕಂಡ ಬೆನ್ನಲ್ಲೇ ಇದೀಗ ಟೂರ್ನಮೆಂಟ್ ಲೋಗೋ ವಿಚಾರವಾಗಿ ಚಾಂಪಿಯನ್ಸ್ ಟ್ರೋಫಿ ಮತ್ತೆ ಹೊಸ ವಿವಾದಕ್ಕೆ ಗುರಿಯಾಗಿದೆ. ಟೂರ್ನಮೆಂಟ್ ಉದ್ಘಾಟನಾ ಪಂದ್ಯದ ಸಮಯದಲ್ಲಿ, ನೇರ ಪ್ರಸಾರದ ಸಮಯದಲ್ಲಿ ಕಾಣಿಸಿಕೊಂಡ ಲೋಗೋದಲ್ಲಿ ಆತಿಥೇಯರ (ಪಾಕಿಸ್ತಾನ) ಹೆಸರು ಕಾಣಿಸಿಕೊಂಡಿತು. ಆದರೆ ಆ ಬಳಿಕ ದುಬೈನಲ್ಲಿ ನಡೆದ ಭಾರತ ಬಾಂಗ್ಲಾದೇಶ ನಡುವಿನ ಎರಡನೇ ಪಂದ್ಯದ ಸಮಯದಲ್ಲಿ, ಪಾಕಿಸ್ತಾನದ ಹೆಸರು ಇರಲಿಲ್ಲ. ಈ ಫೋಟೊವನ್ನು ಪಾಕ್‌ನ ಕೆಲ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಐಸಿಸಿ ಮತ್ತು ಬಿಸಿಸಿಐ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Logo war... Pakistan not mentioned in India vs Bangladesh match ICC logo 😂😂 pic.twitter.com/vpWcSOgVx5
— Virat Kohli- King 👑 (@Peace_950) February 20, 2025
ಸ್ಪಷ್ಟನೆ ನೀಡಿದ ಐಸಿಸಿ
ಪಿಸಿಬಿ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ), ಇದೊಂದು ತಾಂತ್ರಿಕ ದೋಷ. ಗ್ರಾಫಿಕ್ಸ್ ಸಂಬಂಧಿತ ತಾಂತ್ರಿಕ ಸಮಸ್ಯೆಯಿಂದಾಗಿ ಈ ಲೋಪ ಉಂಟಾಗಿದ್ದು, ಇದು ಮುಂದಿನ ಪಂದ್ಯ ವೇಳೆಗೆ ಸರಿಪಡಿಸಲಾಗುವುದು. ಪಂದ್ಯದ ಸಮಯದಲ್ಲಿ ಲೋಗೋವನ್ನು ಬದಲಾಯಿಸಲು ಸಾಧ್ಯವಾಗಲಿಲ್ಲ ಎಂದು ಐಸಿಸಿ ವಕ್ತಾರರು ತಿಳಿಸಿದ್ದಾರೆ. ಆದರೆ ಭಾರತ ವಿರುದ್ಧದ ಪಂದ್ಯದ ವೇಳೆಗೆ ಮಾತ್ರ ಏಕೆ ಈ ಸಮಸ್ಯೆ ಕಂಡು ಬರುತ್ತದೆ ಎಂದು ಪಿಸಿಬಿ, ಐಸಿಸಿಗೆ ಮರು ಪ್ರಶ್ನೆ ಮಾಡಿದೆ.