ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

ಫೆ.24ರ ಸೋಮವಾರ ಜಿಲ್ಲಾಡಳಿತ ಭವನದ ಎದುರು ಬೃಹತ್ ಪ್ರತಿಭಟನೆ: ಟಿ.ಎಸ್.ಬಾಬು ಎಚ್ಚರಿಕೆ

ಬಸ್ ಪ್ರಯಾಣ ಧರ, ಮೆಟ್ರೋ ಪ್ರಯಾಣ ದರ, ಪೆಟ್ರೋಲ್, ಡೀಸೆಲ್ ಬೆಲೆ ಹೀಗೆ ಎಲ್ಲ ಬೆಲೆ ಯನ್ನು ಹೆಚ್ಚಿಸಿರುವ ರಾಜ್ಯಸರ್ಕಾರವು ಇದೀಗ ನೀರಾವರಿ ಪಂಪ್‌ಸೆಟ್ ಹೊಂದಿರುವ ರೈತ ರನ್ನು ಸಂಪೂರ್ಣ ನಾಶ ಮಾಡಲು ಹೊರಟಿದ್ದು, ಅಲ್ಲದೆ ಹೊಸಸಂಪರ್ಕಗಳಿಗೆ ಅಳವಡಿಸುವ ಮೀಟರ್ ಬೆಲೆ 10 ಪಟ್ಟು ಹೆಚ್ಚಿಸಿ ಜನಸಾಮಾನ್ಯರ ಅಧಿಕ ಹೊರೆ ಹಾಕುತ್ತಿದೆ ಎಂದು ದೂರಿದರು

ಮೀಟರ್ ಬೆಲೆ 10 ಪಟ್ಟು ಹೆಚ್ಚಿಸಿ ಜನಸಾಮಾನ್ಯರ ಅಧಿಕ ಹೊರೆ ಹಾಕುತ್ತಿದೆ

ಫೆ.24ರಂದು ಸೋಮವಾರ ಜಿಲ್ಲಾಡಳಿತ ಭವನದ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ವಿದ್ಯುತ್ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಟಿ.ಎಸ್.ಬಾಬು ತಿಳಿಸಿದರು.

Profile Ashok Nayak Feb 22, 2025 9:36 PM

ಚಿಕ್ಕಬಳ್ಳಾಪುರ: ಕೃಷಿ ಪಂಪ್‌ಸೆಟ್‌ಗಳಿಗೆ ಕರೆಂಟ್ ಮತ್ತು ಮೋಟರ್ ಅಳವಡಿಸುವ ವಿಚಾರದಲ್ಲಿ ಭ್ರಷ್ಟ ಅಧಿಕಾರಿಗಳು ಮಾಡಿರುವ ತುಘಲಕ್ ಆದೇಶಗಳನ್ನು ವಾಪಸ್ ಪಡೆದು, ಈ ಹಿಂದಿನ ದರದಂತೆಯೇ ನಿಗಧಿ ಮಾಡಬೇಕು ಎಂದು ಆಗ್ರಹಿಸಿ ಫೆ.24ರ ಸೋಮವಾರ ಜಿಲ್ಲಾಡಳಿತ ಭವನದ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿರುವು ದಾಗಿ ವಿದ್ಯುತ್ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಟಿ.ಎಸ್.ಬಾಬು ತಿಳಿಸಿದರು. ನಗರದ ಪತ್ರಕರ್ತರ ಭವನದಲ್ಲಿ ನಡೆಸಿದ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿ ದರು.

ಬಸ್ ಪ್ರಯಾಣ ಧರ, ಮೆಟ್ರೋ ಪ್ರಯಾಣ ದರ, ಪೆಟ್ರೋಲ್, ಡೀಸೆಲ್ ಬೆಲೆ ಹೀಗೆ ಎಲ್ಲ ಬೆಲೆಯನ್ನು ಹೆಚ್ಚಿಸಿರುವ ರಾಜ್ಯಸರ್ಕಾರವು ಇದೀಗ ನೀರಾವರಿ ಪಂಪ್‌ಸೆಟ್ ಹೊಂದಿರುವ ರೈತರನ್ನು ಸಂಪೂರ್ಣ ನಾಶ ಮಾಡಲು ಹೊರಟಿದ್ದು, ಅಲ್ಲದೆ ಹೊಸಸಂಪರ್ಕಗಳಿಗೆ ಅಳವಡಿಸುವ ಮೀಟರ್ ಬೆಲೆ 10 ಪಟ್ಟು ಹೆಚ್ಚಿಸಿ ಜನಸಾಮಾನ್ಯರ ಅಧಿಕ ಹೊರೆ ಹಾಕು ತ್ತಿದೆ ಎಂದು ದೂರಿದರು.

ಇದನ್ನೂ ಓದಿ: Chikkaballapur News: ಅವ್ಯವಹಾರ ನಡೆದಿರುವುದು ಸಾಬೀತು ಪಡಿಸಿದರೆ ರಾಜಿನಾಮೆ ನೀಡಲು ಸಿದ್ದ: ಸೊಸೈಟಿ ಅಧ್ಯಕ್ಷ ಹೆಚ್.ವಿ.ನಾಗರಾಜ್

ವಿದ್ಯುತ್ ಸರಬರಾಜು ಕಂಪನಿಗಳವರು ಈವರೆಗೆ ವಿಧಿಸುತ್ತಿದ್ದ 1 ಸಾವಿರ ಮೌಲ್ಯದ ಮೀಟರ್‌ಗೆ ಇದೀಗ 5 ಸಾವಿರ ರೂಗಳಿಗೆ ಏರಿಸಿದ್ದಾರೆ. ಈವರೆಗೂ 2500 ಇದ್ದ ಮತ್ತೊಂದು ಮೀಟರ್ ಬೆಲೆಯನ್ನು 9 ಸಾವಿರಕ್ಕೆ ಹೆಚ್ಚಿಸಿದ್ದು, 3500 ಇದ್ದ ಮೀಟರ್ ಬೆಲೆಯನ್ನು ಏಕಾಏಕಿ 28 ಸಾವಿರಕ್ಕೆ ಹೆಚ್ಚಿಸುವ ಮೂಲಕ ಗ್ರಾಹಕರ ರಕ್ತ ಹೀರಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.

ಬಸ್, ಮೆಟ್ರೋ, ಹಾಲು ಸೇರಿದಂತೆ ಎಲ್ಲ ಬೆಲೆ ಹೆಚ್ಚಿಸಿರುವ ರಾಜ್ಯಸರ್ಕಾರ ರೈತರನ್ನು ನರಕದ ಕೂಪಕ್ಕೆ ದೂಡುವ ಕೆಲಸಕ್ಕೆ ಮುಂದಾಗಿದೆ. ಈ ಹಿಂದೆ ಕೊಳವೆ ಬಾವಿ ಕೊರೆಸಿ ಕೊಂಡ ರೈತರು ಅಕ್ರಮ ಸಕ್ರಮದಡಿ ಅರ್ಜಿ ಸಲ್ಲಿಸಿದರೆ 30 ಸಾವಿರದಲ್ಲಿ ಸಕ್ರಮಗೊಳಿಸ ಲಾಗುತ್ತಿತ್ತು. ಆದರೆ ಈಗ ಆ ಬೆಲೆಯನ್ನು ಬರೋಬ್ಬರಿ 2 ಲಕ್ಷದಿಂದ 10 ಲಕ್ಷ ದವರೆಗೆ ರೈತರು ಪಾವತಿಸಬೇಕಿದ್ದು, ಮನೆ ಮಾರಾಟ ಮಾಡಿ ಬೆಸ್ಕಾಂಗೆ ಹಣ ಪಾವತಿಸ ಬೇಕಾದ ದೌರ್ಭಾಗ್ಯ ಸ್ಥಿತಿ ರೈತರಿಗೆ ಎದುರಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಇನ್ನು ರೈತರು ನೀರಾವರಿಗಾಗಿ ಕೊರೆಸಿದ ಕೊಳವೆ ಬಾವಿಗಳ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕಾದರೆ ರೈತರು ಜಮೀನೇ ಮಾರಬೇಕಾದ ಸ್ಥಿತಿ ನಿರ್ಮಾಣವಾಗಲಿದೆ. ಈವರೆಗೆ ಅಕ್ರಮ ಸಕ್ರಮದಡಿ 30 ಸಾವಿರ ಪಾವತಿಸಬೇಕಿದ್ದು, ಈಗ 2 ಲಕ್ಷದಿಂದ 10 ಲಕ್ಷದವರೆಗೂ ವೆಚ್ಚವಾಗಲಿದೆ. ಅತಿಯಾದ ಆಳದ ಕೊಳವೆ ಬಾವಿಗಳನ್ನು ಕೊರೆಸಬೇ ಕಿರುವ ರೈತರು ಮನೆಯಲ್ಲಿರುವ ಚಿನ್ನ ಮಾರಿ ಕೊಳವೆ ಬಾವಿ ಕೊರೆಸಿದರೆ ಬೆಸ್ಕಾಂನವರ ಕಾಟಕ್ಕೆ ಜಮೀನು ಮಾರಾಟ ಮಾಡಬೇಕಾದ ಸ್ಥಿತಿ ಎದುರಾಗಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜನವಿರೋಧಿ ಆದೇಶಗಳನ್ನು ಮಾಡಿರುವ ಅಧಿಕಾರಿ ಈ ಹಿಂದೆ ಲೋಕಾಯುಕ್ತರ ದಾಳಿ ಯಲ್ಲಿ ಸಿಕ್ಕಿ ಅಮಾನತಾಗಿದ್ದು, ಇಂತಹ ಭ್ರಷ್ಟ ಅಧಿಕಾರಿಗಳು ನೀಡುವ ಆದೇಶಗಳಿಂದ ರೈತರು ಮಾತ್ರವಲ್ಲದೆ ಗುತ್ತಿಗೆದಾರರೂ ಸಂಕಷ್ಟ ಎದುರಿಸುವಂತಾಗಿದೆ. ಹಾಗಾಗಿ ರಾಜ್ಯ ಸರ್ಕಾರ ಕೂಡಲೇ ಇತ್ತ ಗಮನ ಹರಿಸಿ, ಭ್ರಷ್ಟ ಅಧಿಕಾರಿಗಳು ಮಾಡಿರುವ ತುಘಲಕ್ ಆದೇಶಗಳನ್ನು ವಾಪಸ್ ಪಡೆದು, ಈ ಹಿಂದಿನ ಧರದಂತೆಯೇ ನಿಗಧಿ ಮಾಡಬೇಕು ಎಂದು ಆಗ್ರಹಿಸಿ ಫೆ.24ರ ಸೋಮವಾರ ಜಿಲ್ಲಾಡಳಿತ ಭವನದ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಹೇಳಿದರು.

ಪ್ರತಿಭಟನೆಯಲ್ಲಿ ರೈತಪರ ಸಂಘಟನೆಗಳು, ಕನ್ನಡಪರ ಸಂಘಟನೆಗಳು ಮತ್ತು ದಲಿತಪರ ಸಂಘಟನೆಗಳು ಭಾಗವಹಿಸಲಿದ್ದು, ನಗರದ ವಾಪಸಂದ್ರದಿಂದ ಬಿಬಿ ರಸ್ತೆ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು ಎಂದರು.

ಸಂಘದ ಮಂಜುನಾಥ್, ಆಂಜಿ, ಎಂ.ಶ್ರೀನಿವಾಸ್, ಮುನಿರಾಜು, ಬಸವರಾಜು, ರೈತಸಂಘದ ಗೋಪಾಲ್ ಇದ್ದರು.