Bharjari Bachelors Season 2: ಝೀ ಕನ್ನಡ ವಾಹಿನಿಯಲ್ಲಿ ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ಆರಂಭಕ್ಕೆ ಕ್ಷಣಗಣನೆ
ಭರ್ಜರಿ ಬ್ಯಾಚುಲರ್ಸ್ ಸೀಸನ್ 1ರ ಯಶಸ್ಸಿನ ಬಳಿಕ ಮತ್ತಷ್ಟು ವಿಭಿನ್ನವಾಗಿ ಬರುತ್ತಿರುವ ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ಪ್ರೇಕ್ಷಕರನ್ನು ಮನರಂಜಿಸಲು ಸಜ್ಜಾಗಿದೆ. ಇದು ಝೀ ಕನ್ನಡ ವಾಹಿನಿಯಲ್ಲಿ ಫೆ. 22ರಿಂದ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ.


ನವದೆಹಲಿ: ಧಾರಾವಾಹಿಗಳು, ರಿಯಾಲಿಟಿ ಶೋಗಳು, ಗೆಮ್ ಶೋಗಳಿಂದ ವೀಕ್ಷಕರ ಮನಗೆದ್ದು ನಂಬರ್ 1 ಸ್ಥಾನದಲ್ಲಿ ಇರುವ ಮನರಂಜನೆಯ ಮಹಾತಾಣ ಝೀ ಕನ್ನಡ ವಾಹಿನಿ. ಡ್ರಾಮಾ ಜೂನಿಯರ್ಸ್, ಸರಿಗಮಪ, ವೀಕೆಂಡ್ ವಿತ್ ರಮೇಶ್, ಕಾಮಿಡಿ ಕಿಲಾಡಿಗಳು, ಡಾನ್ಸ್ ಕರ್ನಾಟಕ ಡಾನ್ಸ್, ಜೋಡಿ ನಂಬರ್ 1 ಮತ್ತು ಸೂಪರ್ ಕ್ವೀನ್‌ನಂತಹ ಅನೇಕ ಜನಮೆಚ್ಚಿದ ರಿಯಾಲಿಟಿ ಶೋಗಳನ್ನು ಜನರ ಮುಂದಿಟ್ಟು ಅದರಲ್ಲಿ ಯಶಸ್ವಿ ಆಗಿರುವ ಕೀರ್ತಿ ಝೀ ಕನ್ನಡ ವಾಹಿನಿಗೆ ಸಲ್ಲುತ್ತದೆ. ಈಗ ಮತ್ತೆ ಅಂತಹದೇ ಪ್ರಯತ್ನಕ್ಕೆ ಕೈ ಹಾಕಿರುವ ಝೀ ಕನ್ನಡ ವಾಹಿನಿಯು 'ಭರ್ಜರಿ ಬ್ಯಾಚುಲರ್ಸ್ ಸೀಸನ್ 2' (Bharjari Bachelors Season 2) ನಿಮ್ಮ ಮುಂದಿಡಲು ಸಜ್ಜಾಗಿದೆ.
ಭರ್ಜರಿ ಬ್ಯಾಚುಲರ್ಸ್ ಸೀಸನ್ 1ರ ಯಶಸ್ಸಿನ ಬಳಿಕ ಮತ್ತಷ್ಟು ವಿಭಿನ್ನ ವಾಗಿ, ಎಂಟರ್‌ಟೈನಿಂಗ್ ಆಗಿ ಬರುತ್ತಿರುವ ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ಪ್ರೇಕ್ಷಕರನ್ನು ಮನರಂಜಿಸಲು ಸಜ್ಜಾಗಿದೆ. ಭರ್ಜರಿಯಾಗಿ ಶೋಗೆ ಬರುವ ಸ್ಪರ್ಧಿಗಳು ಬ್ಯಾಚುಲರ್ಸ್ ಆಗಿಯೇ ಉಳಿಯುತ್ತಾರಾ ಅಥವಾ ಬ್ರಹ್ಮಚಾರಿತ್ವಕ್ಕೆ ಬಾಯ್ ಬಾಯ್ ಹೇಳ್ತಾರಾ ಅನ್ನೋದು ಈ ಬಾರಿಯ ಕಾನ್ಸೆಪ್ಟ್ ಆಗಿದ್ದು ಫನ್‌ಗೆ ಇಲ್ಲಿ ಯಾವುದೇ ಕೊರತೆ ಇರಲ್ಲ. ಬ್ಯಾಚುಲರ್ಸ್‌ಗೆ ಭರ್ಜರಿ ಆಗಿ ಪ್ರೀತಿ ಪಾಠ ಮಾಡಲು ಕನಸುಗಾರ, ಸ್ಯಾಂಡಲ್‌ವುಡ್ ಕ್ರೇಜಿ ಸ್ಟಾರ್ ಡಾ. ವಿ.ರವಿಚಂದ್ರನ್ ಜತೆಗೆ ಡಿಂಪಲ್ ಕ್ವೀನ್ ರಚಿತಾರಾಮ್ ಇರುತ್ತಾರೆ. ತರ್ಲೆ ಮಾತು, ವಿಭಿನ್ನ ಶೈಲಿಯಿಂದ ಕನ್ನಡಿಗರ ಮನಗೆದ್ದ ನಿರಂಜನ್ ದೇಶಪಾಂಡೆ ಕಾರ್ಯಕ್ರಮದ ನಿರೂಪಣಾ ಜವಾಬ್ದಾರಿಯನ್ನು ಹೊರಲಿದ್ದಾರೆ. ಈ ಬಾರಿ ಗಿಲ್ಲಿನಟ, ಡ್ರೋನ್ ಪ್ರತಾಪ್, ಹುಲಿ ಕಾರ್ತಿಕ್, ಪ್ರವೀಣ್ ಜೈನ್, ಭುವನೇಶ್, ಸುನಿಲ್, ದರ್ಶನ್ ನಾರಾಯಣ್, ಪ್ರೇಮ್ ತಾಪ, ಸೂರ್ಯ, ಉಲ್ಲಾಸ್, ರಕ್ಷಕ್ ಬುಲೆಟ್ ಅವರು ಬ್ಯಾಚುಲರ್ಸ್‌ಗಳಾಗಿ ಕಾಣಿಸಿಕೊಳ್ಳಲಿದ್ದು ಅವರ ಮನಸು ಕದಿಯುವ ಏಂಜಲ್‌ಗಳು ಯಾರಾಗಲಿದ್ದಾರೆ ಅನ್ನೋದು ಕಾದು ನೋಡಬೇಕಿದೆ.
ಇದನ್ನು ಓದಿ: Viral News: ಮುಂಜಾನೆ 3 ಗಂಟೆಗೆ ಕೂಗಿದ ಹುಂಜದ ವಿರುದ್ಧ ದೂರು ದಾಖಲಿಸಿದ ವ್ಯಕ್ತಿ; ಅಷ್ಟಕ್ಕೂ ಆಗಿದ್ದೇನು?
ಭರ್ಜರಿ ಬ್ಯಾಚುಲರ್ಸ್ ಸೀಸನ್ 2ರಲ್ಲಿ ರೋಚಕವಾದ ಇನ್ ಡೋರ್ ಮತ್ತು ಔಟ್ ಡೋರ್ ಸುತ್ತುಗಳಿವೆ. ಇಲ್ಲಿ ಫನ್, ಎಮೋಷನಲ್ ಮೂಮೆಂಟ್ಸ್‌ನಿಂದ ಹಿಡಿದು ರೋಮ್ಯಾನ್ಸ್ ತನಕ ಎಲ್ಲ ತರಹದ ಭಾವನೆಗಳು ಕಾಣಸಿಗಲಿವೆ. ಇನ್ನು ಆಡೋ ಬ್ಯಾಚುಲರ್ಸ್‌ಗೆ ಮಾತ್ರವಲ್ಲದೆ ಈ ಟಾಸ್ಕ್ ಗಳನ್ನೂ ನೋಡೋ ನಿಮಗೆ 100% ಮನರಂಜನೆ ಸಿಗೋದಂತು ಗ್ಯಾರಂಟಿ. ಇನ್ನು ಈ ಟಾಸ್ಕ್ ಗಳಲ್ಲಿ ಬ್ಯಾಚುಲರ್‌ಗಳು ಹೇಗೆ ಪರ್ಫಾರ್ಮ್ ಮಾಡ್ತಾರೆ, ಅವ್ರಿಗೆ ಏಂಜಲ್‌ಗಳು ಎಷ್ಟು ಸಾಥ್ ಕೊಡ್ತಾರೆ ಅಂತ ಕಾದು ನೋಡಬೇಕಾಗಿದೆ.
ಬ್ಯಾಚುಲರ್‌ಗಳ ಆಟ ಎಷ್ಟು ಭರ್ಜರಿ ಆಗಿರುತ್ತೆ, ಏಂಜ ಲ್‌ಗಳ ಹೃದಯ ಕದಿಯೋಕೆ ಏನೇನು ಸಾಹಸಕ್ಕೆ ಕೈ ಹಾಕ್ತಾರೆ ಇವೆಲ್ಲದಕ್ಕೂ ಉತ್ತರ ಸಿಗ್ಬೇಕು ಅಂದರೆ ಫೆ. 22ರಿಂದ ರಾತ್ರಿ 9 ಗಂಟೆಗೆ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ವೀಕ್ಷಿಸಬೇಕು.