ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Trivikram: ತ್ರಿವಿಕ್ರಮ್ ಫ್ಯಾನ್ಸ್​ಗೆ ಬಂಪರ್ ಸುದ್ದಿ: ಹೊಸ ಧಾರಾವಾಹಿಯಲ್ಲಿ ಬಿಗ್ ಬಾಸ್ ರನ್ನರ್-ಅಪ್

ಸಿಸಿಎಲ್ ಮಧ್ಯೆಯೆ ಬಿಗ್ ಬಾಸ್ ಕನ್ನಡ ಸೀಸನ್ 11ರ ರನ್ನರ್ ಅಪ್ ತ್ರಿವಿಕ್ರಮ್ ಕಡೆಯಿಂದ ಅಭಿಮಾನಿಗಳು ಬಂಪರ್ ಸುದ್ದಿಯೊಂದು ಬಂದಿದೆ. ತ್ರಿವಿಕ್ರಮ್ ಬಗ್ಗೆ ಹೊಸ ಅಪ್ಡೇಟ್ ಒಂದು ಹೊರಬಿದ್ದಿದೆ. ಹೊಸ ಧಾರಾವಾಹಿ ಮೂಲಕ ತ್ರಿವಿಕ್ರಮ್ ಪುನಃ ವೀಕ್ಷಕರ ಮುಂದೆ ಬರಲಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ.

ಹೊಸ ಧಾರಾವಾಹಿ: ತ್ರಿವಿಕ್ರಮ್ ಫ್ಯಾನ್ಸ್​ಗೆ ಬಂಪರ್ ಸುದ್ದಿ

Trivikram

Profile Vinay Bhat Feb 20, 2025 7:12 AM

ಕನ್ನಡ ಕಿರುತೆರೆಯಲ್ಲಿ ಸಾಮ್ರಾಟ್ ಎಂದೇ ಜನಪ್ರಿಯತೆ ಪಡೆದಿರುವ ಬಿಗ್ ಬಾಸ್ ಕನ್ನಡ ಸೀಸನ್ 11ರ ಫಸ್ಟ್‌ ರನ್ನರ್‌ ರಪ್ ನಟ ತ್ರಿವಿಕ್ರಮ್​ಗೆ ಈಗ ದೊಡ್ಡ ಅಭಿಮಾನಿ ಬಳಗವೇ ಹುಟ್ಟಿಕೊಂಡಿದೆ. ಇವರು ಎಲ್ಲೇ ಕಂಡರು ಅಭಿಮಾನಿಗಳು ಸೆಲ್ಫಿಗೋಸ್ಕರ ಮುಗಿಬೀಳುತ್ತಿದ್ದಾರೆ. ಇವರು ಜೀವನದಲ್ಲಿ ನಡೆದುಕೊಂಡು ಬಂದ ದಾರಿ, ಇವರ ಕ್ರಿಕೆಟ್ ಪ್ರೇಮ, ಇನ್ನೂ ಏನಾದರು ಮಾಡಬೇಕು ಎಂಬ ಛಲ ಕಂಡು ಅನೇಕ ಫ್ಯಾನ್ಸ್ ಇವರನ್ನು ಫಾಲೋ ಮಾಡುತ್ತಿದ್ದಾರೆ. ಸದ್ಯ ಇವರು ಸೆಲೆಬ್ರಿಟಿ ಕ್ರಿಕೆಟ್ ಲೀಗ್​ನಲ್ಲಿ ಬ್ಯುಸಿಯಾಗಿದ್ದಾರೆ.

ಸಿಸಿಎಲ್ ಮಧ್ಯೆಯೆ ತ್ರಿವಿಕ್ರಮ್ ಕಡೆಯಿಂದ ಅಭಿಮಾನಿಗಳು ಬಂಪರ್ ಸುದ್ದಿಯೊಂದು ಬಂದಿದೆ. ಬಿಗ್ ಬಾಸ್ ಮುಗಿದ ಬಳಿಕ ತ್ರಿವಿಕ್ರಮ್ ಹೆಚ್ಚಾಗಿ ಎಲ್ಲೂ ಕಾಣಿಸಿಕೊಂಡಿಲ್ಲ. ಕೆಲ ಸ್ಪರ್ಧಿಗಳು ಬಾಯ್ಸ್ vs ಗರ್ಲ್ಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತಿದ್ದಾರೆ. ಆದರೆ, ತ್ರಿವಿಕ್ರಮ್ ಇದರಲ್ಲೂ ಪಾಲ್ಗೊಂಡಿಲ್ಲ. ಬಹುಶಃ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಇದ್ದ ಕಾರಣ ಈ ಶೋನಿಂದ ಹೊರಗುಳಿದಿರಬಹುದು.

ಬಿಗ್ ಬಾಸ್ ಮುಗಿದ ಆರಂಭದಲ್ಲಿ ಚಾಮುಂಡಿ ಬೆಟ್ಟ, ತುಮಕೂರಿಗೆ ಭೇಟಿ ನೀಡಿದ್ದರು. ಆ ಬಳಿಕ ಕ್ರಿಕೆಟ್​ನಲ್ಲಿ ಬ್ಯುಸಿಯಾದರು. ಇದರ ಮಧ್ಯೆ ಈಗ ತ್ರಿವಿಕ್ರಮ್ ಬಗ್ಗೆ ಹೊಸ ಅಪ್ಡೇಟ್ ಒಂದು ಹೊರಬಿದ್ದಿದೆ. ಹೊಸ ಧಾರಾವಾಹಿ ಮೂಲಕ ತ್ರಿವಿಕ್ರಮ್​ ಪುನಃ ವೀಕ್ಷಕರ ಮುಂದೆ ಬರಲಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ. ಕಲರ್ಸ್​ ಕನ್ನಡದಲ್ಲಿ ಸದ್ಯದಲ್ಲೇ ಹೊಸ ಧಾರಾವಾಹಿ ಒಂದು ಶುರುವಾಗುತ್ತಿದೆಯಂತೆ. ಈ ಸೀರಿಯಲ್​ಗೆ ತ್ರಿವಿಕ್ರಮ್​ ನಾಯಕನಾಗಿ ಆಯ್ಕೆ ಆಗಿದ್ದಾರೆ. ನಾಯಕಿ ಕನ್ನಡ ಮೂಲದ ತೆಲುಗು ನಟಿ ಎಂದು ಹೇಳಲಾಗುತ್ತದೆ.

ಈ ಮೂಲಕ ಪದ್ಮಾವತಿ ನಂತರ ತ್ರಿವಿಕ್ರಮ್​ ಧಾರಾವಾಹಿಗೆ ಮರಳುತ್ತಿರೋದು ಬಹುತೇಕ ಕನ್ಫರ್ಮ್​ ಆಗಿದೆ. ಆದರೆ, ಈ ಧಾರಾವಾಹಿಯ​ ಸ್ಟೋರಿ ಏನು? ಯಾವ ಪ್ರೊಡೋಕ್ಷನ್?, ತ್ರಿವಿಕ್ರಮ್​ ಪಾತ್ರ ಎಂತಹದು ಎಂಬ ಮಾಹಿತಿ ಇನ್ನಷ್ಟೆ ಹೊರಬೀಳಬೇಕಿದೆ. ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಮುಗಿದ ಬಳಿಕ ಸ್ವತಃ ತ್ರಿವಿಕ್ರಮ್ ಅವರೇ ಈ ಕುರಿತು ಅನೌನ್ಸ್ ಮಾಡುವ ಸಾಧ್ಯತೆ ಇದೆ. ಅಲ್ಲಿಯ ವರೆಗೆ ಅಭಿಮಾನಿಗಳು ಕಾಯಬೇಕಷ್ಟೆ.

Chaithra Kundapura: ಬಣ್ಣದ ಲೋಕಕ್ಕೆ ಚೈತ್ರಾ ಕುಂದಾಪುರ: ಬಾಯ್ಸ್ vs ಗರ್ಲ್ಸ್​ನಲ್ಲಿ ಮಿಂಚುತ್ತಿರುವ ಭಾಷಣಗಾರ್ತಿ