Tumkur (Gubbi) News: ಪಕ್ಷದಲ್ಲಿ ಯಾರ ಬಗ್ಗೆಯೂ ನನಗೆ ಭಿನ್ನಾಭಿಪ್ರಾಯವಿಲ್ಲ. ಸಾಮಾಜಿಕ ಜಾಲತಾಣ ಪೋಸ್ಟ್ ವಿಚಾರ ನನಗೆ ತಿಳಿದಿಲ್ಲ
ಇಶಾ ಫೌಂಡೇ ಶನ್ ಧಾರ್ಮಿಕ ಕಾರ್ಯಕ್ರಮದಲ್ಲಿ ಅಮಿತ್ ಷಾ ಹಾಗೂ ಡಿಕೆಶಿ ಒಟ್ಟಿಗೆ ಕಾಣಿಸಿಕೊಂಡ ಬಗ್ಗೆ ರಾಜಕಾರಣ ಲೇಪನ ಬೇಕಿಲ್ಲ. ಕಾರ್ಯಕ್ರಮಗಳಿಗೆ ಆಹ್ವಾನ ನೀಡಿದಾಗ ಎಲ್ಲಾ ಪಕ್ಷದವರು ವೇದಿಕೆ ಹಂಚಿಕೊಳ್ಳುವುದು ಸಾಮಾನ್ಯ. ಈ ಬಗ್ಗೆ ವಿಶೇಷ ಟಿಪ್ಪಣಿ ಬೇಕಿಲ್ಲ ಎಂದು ಪ್ರತಿಕ್ರಿಯೆ ನೀಡಿದರು


ಗುಬ್ಬಿ: ಸಚಿವ ರಾಜಣ್ಣ ರಾಜೀನಾಮೆ ಎಂಬ ಸಾಮಾಜಿಕ ಜಾಲತಾಣಗಳ ಪೋಸ್ಟ್ ಮಾಡು ವುದು ಯಾರು ಎಂಬುದು ಗೊತ್ತಿಲ್ಲ. ನನ್ನದು ಯಾವುದೇ ಅಧಿಕೃತ ಖಾತೆ ಅದರಲ್ಲಿಲ್ಲ. ಯಾರು ಬೇಕಾದರೂ ಫೇಕ್ ಅಕೌಂಟ್ ತೆರೆದು ಟೀಕೆ ಟಿಪ್ಪಣಿ ಹಾಕಬಹುದು. ಡೈರಿ ಚುನಾವಣೆ ಮುಗಿದ ಹಳೆ ವಿಚಾರ. ಈ ಬಗ್ಗೆ ಮಾತನಾಡುವ ಅಗತ್ಯವಿಲ್ಲ. ಪಕ್ಷದಲ್ಲಿ ಯಾರ ಬಗ್ಗೆಯೂ ನನಗೆ ಭಿನ್ನಾಭಿಪ್ರಾಯವಿಲ್ಲ. ಸಾಮಾಜಿಕ ಜಾಲತಾಣ ಪೋಸ್ಟ್ ವಿಚಾರ ನನಗೆ ತಿಳಿದಿಲ್ಲ ಎಂದು ಶಾಸಕ ಹಾಗೂ ಕರ್ನಾಟಕ ಸಾರಿಗೆ ನಿಗಮದ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್ ಮತ್ತೊಮ್ಮೆ ಸ್ಪಷ್ಟಪಡಿಸಿದರು.
ತಾಲ್ಲೂಕಿನ ಚೇಳೂರು ಹೋಬಳಿ ಇರಕಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಟ್ರಾ ವತನಹಳ್ಳಿ ಗ್ರಾಮದಲ್ಲಿ 25 ಲಕ್ಷ ರೂಗಳ ಸಿಸಿ ರಸ್ತೆ ಕಾಮಗಾರಿ ಹಾಗೂ ಅಂಕಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕ ಹೆಡೀಗೆಹಳ್ಳಿ ಗ್ರಾಮದಲ್ಲಿ 1.60 ಕೋಟಿ ರೂಗಳ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು ಇಶಾ ಫೌಂಡೇ ಶನ್ ಧಾರ್ಮಿಕ ಕಾರ್ಯಕ್ರಮದಲ್ಲಿ ಅಮಿತ್ ಷಾ ಹಾಗೂ ಡಿಕೆಶಿ ಒಟ್ಟಿಗೆ ಕಾಣಿಸಿಕೊಂಡ ಬಗ್ಗೆ ರಾಜಕಾರಣ ಲೇಪನ ಬೇಕಿಲ್ಲ. ಕಾರ್ಯಕ್ರಮಗಳಿಗೆ ಆಹ್ವಾನ ನೀಡಿದಾಗ ಎಲ್ಲಾ ಪಕ್ಷದವರು ವೇದಿಕೆ ಹಂಚಿಕೊಳ್ಳುವುದು ಸಾಮಾನ್ಯ. ಈ ಬಗ್ಗೆ ವಿಶೇಷ ಟಿಪ್ಪಣಿ ಬೇಕಿಲ್ಲ ಎಂದು ಪ್ರತಿಕ್ರಿಯೆ ನೀಡಿದರು.
ಇದನ್ನೂ ಓದಿ: Tumkur (Gubbi)News: ಮಕ್ಕಳಲ್ಲಿನ ಸುಪ್ತ ಪ್ರತಿಭೆ ಅನಾವರಣಕ್ಕೆ ಶಾಲೆಯೇ ವೇದಿಕೆ : ಮುಖ್ಯ ಶಿಕ್ಷಕ ಬಿ.ನರಸಿಂಹಮೂರ್ತಿ
ವಿರೋಧ ಪಕ್ಷದ ನಾಯಕ ಆರ್.ಅಶೋಕ್ ನವಂಬರ್ ಭವಿಷ್ಯ ಹೇಳುತ್ತಾರೆ. ಯಾವಾಗ ಜ್ಯೋತಿಷ್ಯ ಹೇಳೋದು ಕಲಿತರು ತಿಳಿದಿಲ್ಲ. ನಾನು ನನ್ನ ಭವಿಷ್ಯ ಬಗ್ಗೆ ಕೇಳಬೇಕಿದೆ ಎಂದು ವ್ಯಂಗ್ಯ ಮಾಡಿದ ಅವರು ವಿರೋಧ ಪಕ್ಷದ ಕೆಲಸ ಇದೇ ಆಗಿದೆ. ಸಲ್ಲದ ಟೀಕೆ ಮಾಡುವುದು. ಅರ್ಥವಿಲ್ಲದ ಹೇಳಿಕೆ ನೀಡುವುದು. ಸುಳ್ಳು ಹೇಳುವುದು ವಿರೋಧ ಲಕ್ಷ ಸರ್ವೇ ಸಾಮಾನ್ಯ ಕೆಲಸ ಎಂದು ಟೀಕಿಸಿದರು.
ಮಹಾರಾಷ್ಟ್ರದಲ್ಲಿ ನಮ್ಮ ರಾಜ್ಯ ಸಾರಿಗೆ ಸಿಬ್ಬಂದಿ ಮೇಲೆ ಹಲ್ಲೆ ಹಾಗೂ ಕನ್ನಡ ಭಾಷೆಯ ಮೇಲಿನ ಪುಂಡಾಟ ಬಗ್ಗೆ ನಮ್ಮ ಬೋರ್ಡ್ ಸಭೆ ಕರೆದು ಮಹಾರಾಷ್ಟ್ರ ರಾಜ್ಯದ ಸಾರಿಗೆ ಸಚಿವರ ಜೊತೆ ಚರ್ಚಿಸಿ ಅಲ್ಲಿನ ಸರ್ಕಾರದ ಜೊತೆ ಮಾತುಕತೆ ನಡೆಸಿ ಬಸ್ಸುಗಳು ಎಂದಿ ನಂತೆ ಸಂಚರಿಸಲು ಅನುವು ಮಾಡಲಾಗಿದೆ. ಸುಳ್ಳು ಫೋಕ್ಸೋ ಕೇಸು ವಾಪಸ್ ಪಡೆ ಯಲು ತಿಳಿಸಿ ಸದ್ಯ ಪರಿಸ್ಥಿತಿ ತಿಳಿಗೊಳಿಸಿ ಸಾರಿಗೆ ಬಸ್ಸುಗಳ ಸಂಚಾರ ನಡೆದಿದೆ ಎಂದರು.
ತಾಲ್ಲೂಕಿನಲ್ಲಿ ಕರೆಂಟ್ ಸಮಸ್ಯೆ ಹೆಚ್ಚಾಗಿದೆ. ರಾತ್ರಿ ವೇಳೆ 10 ವ್ಯಾಮ್ಸ್ ವಿದ್ಯುತ್ ಬರುತ್ತದೆ. ಒಂದು ಕಡೆ ಕಂಡೆನ್ಸರ್ ಹಾಕಿದರೆ ಟ್ರಿಪ್ ಹಾಕುತ್ತದೆ. ಅತೀ ಹೆಚ್ಚು ಪಂಪ್ ಮೋಟಾರ್ ಇರುವ ನಮ್ಮ ತಾಲ್ಲೂಕಿನಲ್ಲಿ ಓವರ್ ಲೋಡ್ ಸಮಸ್ಯೆ ಬೇಸಿಗೆಯಲ್ಲಿ ಹೆಚ್ಚಾಗುತ್ತಿದೆ. ಈಗಾಗಲೇ 4 ಟಿಸಿ ಇರಿಸಲಾಗಿದೆ. ಈ ಸಮಸ್ಯೆ ಬಗೆಹರಿಸಲು ಈಗಾಗಲೇ ಹತ್ತು ಉಪಸ್ಥಾವರ ಆರಂಭಿಸಲಾಗುವುದು. ಗಂಗಾಕ್ಷೇತ್ರ ಹೊರತಾಗಿ ಜಿ.ಹೊಸಹಳ್ಳಿ, ಭೋಗಸಂದ್ರ, ತೊಳೆ ಕೊಪ್ಪ, ತೊರೆಹಳ್ಳಿ, ಎಂಎಂಎ ಕಾವಲ್ ಈ ಭಾಗದಲ್ಲಿ ಕೆಲಸ ನಡೆದಿದೆ. ಶೀಘ್ರದಲ್ಲಿ ಕರೆಂಟ್ ಸಮಸ್ಯೆ ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿ ದ್ದೇವೆ ಎಂದರು.
ಇರಕಸಂದ್ರ ಗ್ರಾಪಂ ಅಧ್ಯಕ್ಷ ಪುಟ್ಟರಾಜು, ಅಂಕಸಂದ್ರ ಗ್ರಾಪಂ ಅಧ್ಯಕ್ಷ ದೊಡ್ಡ ಈರಪ್ಪ, ಸದಸ್ಯರಾದ ಲಿಂಗಪ್ಪ, ಮಂಜುನಾಥ್, ಮಂಜುಳಾ, ಬಸವರಾಜು, ಸಿದ್ದಪ್ಪ, ದೊಡ್ಡಯ್ಯ, ಸಿದ್ದರಾಜು, ಮಹಾಲಕ್ಷ್ಮಿ, ಮಂಜುಳಾ, ಗಂಗಾಧರ್, ಸುನೀತಾ, ವಸಂತ್, ರಮೇಶ್, ಕೊದಂಡಯ್ಯ, ದಯಾನಂದ್, ಸಿದ್ಧಲಿಂಗಪ್ಪ, ಗುರುವಣ್ಣ, ಶಾಂತಾ, ಕಾಂತಣ್ಣ, ಮುಖಂಡ ರಾದ ಶಿವರಾಜಕುಮಾರ್, ಸುರೇಶ್, ಶಿವಣ್ಣ, ಕಾಂತರಾಜು, ಸಣ್ಣರಂಗಯ್ಯ, ರಂಗಧಾ ಮಯ್ಯ, ದೇವರಾಜ್, ಕೆ.ಆರ್.ಗೌಡ, ಪಿಡಿಓ ಶ್ಯಾಮಲ, ಸಣ್ಣ ನೀರಾವರಿ ಇಲಾಖೆಯ ವಿನಯ್, ಗುತ್ತಿಗೆದಾರ ಉಮೇಶ್ ಇತರರು ಇದ್ದರು.