ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 11: ಈ ವಾರ ದೊಡ್ಮನೆಯಿಂದ ಹೊರಹೋಗಲು ಯಾರೆಲ್ಲ ನಾಮಿನೇಟ್?

ಮೋಕ್ಷಿತಾ ಕೂಡ ನಾಮಿನೇಟ್ ಆಗುವ ಸಾಧ್ಯತೆ ಇದೆ. ಉಗ್ರಂ ಮಂಜು ಕಳೆದ ಕೆಲ ವಾರಗಳಿಂದ ಫುಲ್ ಡಲ್ ಆಗಿದ್ದಾರೆ. ಹಿಂದಿನ ರೀತಿ ಕಾಣಿಸಿಕೊಂಡಿಲ್ಲ. ಈ ಕಾರಣಕ್ಕೆ ಇವರು ನಾಮಿನೇಟ್ ಆಗಬಹುದು. ಈ ವಾರದ ಕ್ಯಾಪ್ಟನ್ ಆಗಿರುವ ಭವ್ಯಾ ಯಾರನ್ನು ನೇರ ನಾಮಿನೇಟ್ ಮಾಡುತ್ತಾರೆ ಎಂಬುದು ನೋಡಬೇಕಿದೆ.

Profile Vinay Bhat Dec 24, 2024 8:25 AM
ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಹದಿಮೂರನೇ ವಾರಕ್ಕೆ ಕಾಲಿಟ್ಟಿದೆ. ಟಾಸ್ಕ್​ಗಳ ಕಾವು ಏರುತ್ತಿದ್ದು ಬಿಗ್ ಬಾಸ್ ಕಠಿಣ ಸವಾಲುಗಳನ್ನೇ ಸ್ಪರ್ಧಿಗಳಿಗೆ ನೀಡುತ್ತಿದ್ದಾರೆ. ಸದ್ಯ ಮನೆಯಲ್ಲಿ 10 ಮಂದಿ ಇದ್ದಾರಾಷ್ಟೆ. ಕಳೆದ ವಾರ ಮನೆಯಿಂದ ಯಾರೂ ಎಲಿಮಿನೇಟ್ ಆಗಿರಲಿಲ್ಲ. ಆದರೆ, ತ್ರಿವಿಕ್ರಮ್ ಅವರನ್ನು ಫೇಕ್ ಎಲಿಮಿನೇಟ್ ಮಾಡಿ ಎಚ್ಚರಿಕೆ ನೀಡಿದ್ದರು. ಐಶ್ವರ್ಯಾ ಸಿಂಧೋಗಿ ಡೇಂಜರ್ ಝೋನ್​ನಲ್ಲಿರುವುದನ್ನು ಮತ್ತೊಮ್ಮೆ ಒತ್ತಿ ಹೇಳಿದರು.
ಇದೀಗ ಈ ವಾರ ಮತ್ತೆ ನಾಮಿನೇಷನ್ ಪ್ರಕ್ರಿಯೆ ನಡೆಯಲಿದೆ. ಈ ವಾರ ಯಾರೆಲ್ಲ ನಾಮಿನೇಟ್ ಆಗಬಹುದು ಎಂಬ ಸಂಭಾವ್ಯ ಪಟ್ಟಿಯನ್ನು ನೋಡುವುದಾದರೆ.. ಇದರಲ್ಲಿ ಮೊದಲ ಹೆಸರು ಐಶ್ವರ್ಯಾ ಸಿಂಧೋಗಿ ಇರುವುದು ಖಚಿತ. ಐಶ್ವರ್ಯಾ ಅವರು ಹೆಚ್ಚಾಗಿ ಎಲ್ಲೂ ಕಾಣಿಸುತ್ತಿಲ್ಲ. ಟಾಸ್ಕ್​ಗಳಲ್ಲೂ ಅದ್ಭುತ ಎಂಬಂತಹ ಪ್ರದರ್ಶನ ಬರುತ್ತಿಲ್ಲ.
ನಾಮಿನೇಷನ್ ಲಿಸ್ಟ್​ನಲ್ಲಿ ತ್ರಿವಿಕ್ರಮ್ ಇರುವುದು ಕೂಡ ಖಚಿತ. ಮನೆಯಲ್ಲಿ ಅನೇಕ ಮಂದಿಗೆ ಮುಖ್ಯವಾಗಿ ಮಹಿಳಾ ಸದಸ್ಯರಿಗೆ ತ್ರಿವಿಕ್ರಮ್ ಬಗ್ಗೆ ಒಳ್ಳೆಯ ಅಭಿಪ್ರಾಯವಿಲ್ಲ. ಹೀಗಾಗಿ ಇವರು ನಾಮಿನೇಟ್ ಆಗಬಹುದು. ಜೊತೆಗೆ ರಜತ್ ಕೂಡ ನಾಮಿನೇಟ್ ಆಗಬಹುದು. ಕಳೆದ ವಾರ ರಜತ್ ಟಾಸ್ಕ್ ಚೆನ್ನಾಗಿ ಆಡಿಲ್ಲ. ಜೊತೆಗೆ ಇವರು ಆಡುವ ಮಾತು ಕೆಲವರ ಕೆಂಗಣ್ಣಿಗೆ ಗುರಿಯಾಗುತ್ತಿದೆ.
ಇವರ ಜೊತೆಗೆ ಚೈತ್ರಾ ಕುಂದಾಪುರ ಬಿಗ್ ಬಾಸ್ ಮನೆಯಲ್ಲಿ ಬಹುತೇಕ ಎಲ್ಲರ ವಿರೋಧ ಕಟ್ಟಿಕೊಂಡಿದ್ದಾರೆ. ವಟವಟ ಎಂದು ಮಾತನಾಡುತ್ತಿರುವುದು ಅನೇಕರಿಗೆ ಇಷ್ಟವಾಗುತ್ತಿಲ್ಲ. ಜೊತೆಗೆ ಈಗ ಸುಳ್ಳು ಹೇಳುತ್ತಿದ್ದಾರೆ ಎಂಬ ಆರೋಪ ಕೂಡ ಇವರ ಮೇಲಿದೆ. ಕಳೆದ ವೀಕೆಂಡ್​ನಲ್ಲಿ ಕಸದ ಬುಟ್ಟಿ ಟಾಸ್ಕ್​ನಲ್ಲಿ ಎಲ್ಲರೂ ಇವರ ಹೆಸರನ್ನು ತೆಗೆದುಕೊಂಡಿದ್ದರು. ಹೀಗಾಗಿ ಇವರ ಹೆಸರು ಇರಲಿದೆ.
ಮೋಕ್ಷಿತಾ ಕೂಡ ನಾಮಿನೇಟ್ ಆಗುವ ಸಾಧ್ಯತೆ ಇದೆ. ಉಗ್ರಂ ಮಂಜು ಕಳೆದ ಕೆಲ ವಾರಗಳಿಂದ ಫುಲ್ ಡಲ್ ಆಗಿದ್ದಾರೆ. ಹಿಂದಿನ ರೀತಿ ಕಾಣಿಸಿಕೊಂಡಿಲ್ಲ. ಈ ಕಾರಣಕ್ಕೆ ಇವರು ನಾಮಿನೇಟ್ ಆಗಬಹುದು. ಈ ವಾರದ ಕ್ಯಾಪ್ಟನ್ ಆಗಿರುವ ಭವ್ಯಾ ಯಾರನ್ನು ನೇರ ನಾಮಿನೇಟ್ ಮಾಡುತ್ತಾರೆ ಎಂಬುದು ನೋಡಬೇಕಿದೆ.
BBK 11: ಬಿಗ್ ಬಾಸ್ ಮನೆಯಲ್ಲಿ ಕೂಗಾಡಿ, ರಂಪಾಟ ಮಾಡಿದ ಚೈತ್ರಾ ಕುಂದಾಪುರ: ಕಾರಣವೇನು?